ನೀವು ಬುದ್ಧಿಜೀವಿಗಳಾ? ಹೀಗ್ ಯೋಚಿಸಿದ್ರೆ ಹೌದೇ ಹೌದು!

ಯೋಚನೆ ಮಾಡುವುದರಲ್ಲೂ ಹಲವು ವಿಧ. ಗಾಢ ಚಿಂತನೆ ಹಾಗೂ ಸಿಂಪಲ್ಲಾದ ವಿಚಾರಗಳೆಂದು ವಿಂಗಡಿಸಬಹುದು. ಅಂದ ಹಾಗೆ, ನೀವು ಯಾವ ಕೆಟೆಗರಿಗೆ ಸೇರಿದ್ದೀರಿ? ಸಂಕೀರ್ಣ ವಿಚಾರಧಾರೆ ಹೊಂದಿದ್ದೀರಾ ಅಥವಾ ಸಿಂಪಲ್ಲಾಗಿ ಯೋಚನೆ ಮಾಡುತ್ತೀರಾ?
 

If you are complex thinker you have these signs sum

ಯೋಚನೆ ಮಾಡುವುದು ದೈನಂದಿನ ಅವಿಭಾಜ್ಯ ಅಂಗ. ಯಾವುದಾದರೂ ವಿಚಾರದ ಬಗ್ಗೆ ಚಿಂತನೆ ಮಾಡುವುದು, ಯೋಚಿಸುವುದು, ತಮ್ಮದೇ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು ಎಲ್ಲರಲ್ಲೂ ಕಂಡುಬರುತ್ತದೆ. ತಜ್ಞರ ಪ್ರಕಾರ, ಯೋಚನೆ ಮಾಡುವವರಲ್ಲೂ ಹಲವು ವಿಧಗಳಿವೆ. ಕೆಲವರು ಸಿಂಪಲ್ಲಾಗಿ ಯೋಚನೆ ಮಾಡಿದರೆ, ಮತ್ತೆ ಕೆಲವರು ಗಾಢವಾದ ಯೋಚನಾ ಲಹರಿ ಹೊಂದಿರುತ್ತಾರೆ. ಉನ್ನತ ಮಟ್ಟದ ಚಿಂತನೆ ಉಳ್ಳವರು ಯಾವುದನ್ನಾದರೂ ವಿಮರ್ಶೆ ಮಾಡುತ್ತಾರೆ, ತಮ್ಮದೇ ನ್ಯಾಯದ ಅಳತೆಯಲ್ಲಿ ತೂಗುತ್ತಾರೆ, ಬಳಿಕ ವಿಚಾರಗಳನ್ನು ಕ್ರೋಡೀಕರಿಸಿಕೊಳ್ಳುತ್ತಾರೆ. ಅವರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಯಾರಾದರೂ ಏನಾದರೂ ಹೇಳಿದಾಗ ಮರುಮಾತಿಲ್ಲದೆ ಅನುಸರಿಸುವುದಂತೂ ದೂರವೇ. ಹೆಚ್ಚು ವಿಚಾರ ಮಾಡುವವರು ಹೆಚ್ಚು ಪ್ರಶ್ನೆಗಳನ್ನೂ ಕೇಳುವುದು ಸಹಜ. ಮಕ್ಕಳಲ್ಲಿ ಹೆಚ್ಚು ಕುತೂಹಲ ಇರುವ ಕಾರಣಕ್ಕೇ ಅವರಲ್ಲಿ ಪ್ರಶ್ನೆಗಳ ಸರಮಾಲೆ ಇರುತ್ತದೆ. ಹಾಗೆಯೇ ಇವರು ಸ್ವಲ್ಪ ಹೆಚ್ಚೇ ಮಾತನಾಡುತ್ತಾರೆ. ಏಕೆಂದರೆ, ಇವರಲ್ಲಿ ಅಷ್ಟು ಯೋಚನೆಗಳಿರುತ್ತವೆ. ಸಂಕೀರ್ಣ ಚಿಂತನೆ ಹೊಂದಿರುವವರ ಕೆಲವು ಲಕ್ಷಣಗಳು ಹೀಗಿರುತ್ತವೆ. 

•    ಪ್ರಶ್ನೆಗಳು (Questions) ಸರಳವಾಗಿರೋದಿಲ್ಲ
ನೀವು ಗಾಢವಾಗಿ ಯೋಚನೆ (Complex Thinker) ಮಾಡುವ ಪೈಕಿಯಾಗಿದ್ದರೆ ನಿಮ್ಮ ಪ್ರಶ್ನೆಗಳು ಸರಳವಾಗಿ ಇರುವುದಿಲ್ಲ. ಹಾಗೆಯೇ, ಯಾವುದಾದರೂ ಅನಿಸಿಕೆ (Opinion) ಹೇಳುವಾಗಲೂ ಎಲ್ಲ ಆಯಾಮದಿಂದಲೂ ವಿಚಾರ ಮಾಡಿಯೇ ಹೇಳುತ್ತೀರಿ. ಆಗ ಸಹಜವಾಗಿ ನಿಮ್ಮ ಉತ್ತರ ದೀರ್ಘವಾಗಿರುತ್ತದೆ. ಸಾಮಾನ್ಯ ಜನ ಬರೀ “ಹೌದು’ ಅಥವಾ “ಇಲ್ಲ’ ಎನ್ನುವ ಉತ್ತರ ನೀಡುವಂತಹ ಪ್ರಶ್ನೆಗಳಿಗೂ ನಿಮ್ಮದು ವಿವರಣೆ (Explanation) ಇರಬಹುದು.

Mental Health Tips: ಆತಂಕದ ಸಮಸ್ಯೆಯೇ? ಆತಂಕ ಬೇಡ, ದಿನವೂ ಆರೇ ಕೆಲಸ ಮಾಡಿ ಆರಾಮಾಗಿರಿ

•    ಸಣ್ಣ ಮಾತುಕತೆಯೇ ಇಲ್ಲ (No Small Talk)
ನೀವು ಸಿಕ್ಕಾಪಟ್ಟೆ ಯೋಚನೆಗಳನ್ನು ಹೊಂದಿದ್ದರೆ ಕಡಿಮೆ ಮಾತನಾಡುವುದು ವಿರಳ. ಆಳವಾದ ವಿಚಾರ-ವಿಮರ್ಶೆ ಮಾಡುವುದು ನಿಮಗಿಷ್ಟ. ಒಂದೇ ಅಂಶದ ಬಗ್ಗೆ ದೀರ್ಘವಾದ ಮಾತುಕತೆ ನಡೆಸುತ್ತೀರಿ.  ಚರ್ಚಿಸುತ್ತೀರಿ, ಬೋರ್ (Bore) ಎನ್ನುವುದೇ ಆಗುವುದಿಲ್ಲ. 

•    ಸಂಕೀರ್ಣ ಸವಾಲುಗಳಿಗೆ (Challenge) ಜೈ
ಅತಿಯಾಗಿ ಯೋಚನೆ ಮಾಡುವ ಮಂದಿ ತಮ್ಮಷ್ಟೇ ಸಂಕೀರ್ಣವಾದ ಸವಾಲುಗಳನ್ನು ಸ್ವೀಕರಿಸುತ್ತಾರೆ. ಅವರಿಗೆ ಮಾನವ ಹಕ್ಕುಗಳ (Human Rights) ಬಗ್ಗೆ ಹೋರಾಡುವ ಮನಸ್ಸಿರುತ್ತದೆ. ಹವಾಮಾನ ಬದಲಾವಣೆಯಂತಹ ವಿಚಾರಗಳ ಬಗ್ಗೆ ಮಾತನಾಡುತ್ತಾರೆ, ರಾಜಕೀಯ ವಲಯಗಳು ಮುಖ್ಯವಾಗಿರುತ್ತವೆ. ಅವರು ಮಾಡುವ ಕೆಲಸಗಳ ಅನಿಶ್ಚಿತತೆ (Uncertain) ಇದ್ದರೂ, ಪ್ರಗತಿ ಕಾಣುವ ಭರವಸೆ ಇಲ್ಲವಾದರೂ ಅವರು ಮಾಡುವುದನ್ನು ನಿಲ್ಲಿಸುವುದಿಲ್ಲ. 

•    ಬಹು ಆಯಾಮದ ಪರಿಹಾರಗಳು
ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಂದೇ ನಿಟ್ಟಿನಲ್ಲಿ ಯೋಚನೆ ಮಾಡುವುದು ಸಾಮಾನ್ಯರ ಧೋರಣೆ. ಆದರೆ, ಗಾಢ ಚಿಂತನೆ  ಹೊಂದಿರುವವರು ಒಂದು ಸಮಸ್ಯೆಯನ್ನು ಹಲವಾರು ಆಯಾಮಗಳಲ್ಲಿ ಚಿಂತಿಸುತ್ತಾರೆ. ಅದರಿಂದ ಹೊರಬರಲು ಹತ್ತಾರು ಮಾರ್ಗಗಳನ್ನು ಯೋಜಿಸುತ್ತಾರೆ.

•    ಜೀವನದಲ್ಲಿ ವೈರುದ್ಧ್ಯಗಳು ಸಾಮಾನ್ಯ
ಚಿಂತಕರು, ಜೀವನದಲ್ಲಿ ವಿರೋಧಾಭಾಸಗಳು (Contrast) ಇದ್ದೇ ಇರುತ್ತವೆ ಎಂದು ನಂಬಿರುತ್ತಾರೆ. ಜೀವನವೆಂದರೆ, ಕೇವಲ ಬಿಳಿ-ಕಪ್ಪು ಬಣ್ಣದಿಂದ ಕೂಡಿಲ್ಲ ಎಂದು ಹೇಳುತ್ತಾರೆ. ಬುದ್ಧಿವಂತಿಕೆ, ಚೈಲ್ಡಿಶ್ ನೆಸ್ (Childishness) ಕೂಡ ಇರಬಹುದು. ಭಾವನಾತ್ಮಕವಾಗಿ ಅಪ್ರಬುದ್ಧರಾಗಿದ್ದರೂ ಪ್ರಬುದ್ಧ ವಿಚಾರ ಹೊಂದಿರಬಹುದು. 

Mental Health: ವಯಸ್ಸಾದ್ರೂ ಖುಷಿಯಾಗಿರ್ಬೇಕಾ? ಮಿದುಳನ್ನ ಫ್ರೆಶ್‌ ಆಗಿಟ್ಕೊಳಿ

•    ಲಿಂಗಾಧಾರಿತ (Gender) ಸಾಂಪ್ರದಾಯಿಕ ಮನಸ್ಸಿಲ್ಲ
ಚಿಂತಕರು ಯಾವುದೇ ರೀತಿಯಲ್ಲೂ ಲಿಂಗಾಧಾರಿತ ಸಂಪ್ರದಾಯಗಳನ್ನು ಒಪ್ಪಿಕೊಳ್ಳುವುದಿಲ್ಲ. ಅವುಗಳನ್ನು ತಿರಸ್ಕರಿಸುತ್ತಲೇ ಇರುತ್ತಾರೆ ಹಾಗೂ ಇತರ ಲಿಂಗಿಗಳ ಪರವಾಗಿಯೂ ಹೋರಾಡಬಹುದು.

•    ಅದ್ಭುತ ಕಲ್ಪನಾಶಕ್ತಿ (Imagine)
ಚಿಂತಕರಿಗೆ ಸಾಮಾನ್ಯವಾಗಿ ಉತ್ತಮ ಕಲ್ಪನಾ ಶಕ್ತಿ ಇರುತ್ತದೆ. ಅವರು ಸಾಮಾನ್ಯರಿಗಿಂತ ವಿಭಿನ್ನವಾಗಿ ಕಲ್ಪನೆ ಮಾಡಬಲ್ಲರು. ಕ್ರಿಯಾಶೀಲತೆಯಿಂದ (Creativity) ಎಲ್ಲವನ್ನೂ ನೋಡಬಲ್ಲರು. 
 

Latest Videos
Follow Us:
Download App:
  • android
  • ios