Asianet Suvarna News Asianet Suvarna News

Bad Breath ಮುಜುಗರ ತರುತ್ತಿದೆಯೇ? ಇಷ್ಟ್ ಮಾಡಿ ಸಾಕು..

ಕೆಲವರ ಬಾಯಿ ಏನೂ ತಿನ್ನದೇ ಇದ್ದರೂ ವಾಸನೆ ಬರುತ್ತಿರುತ್ತದೆ. ಇದಕ್ಕೆ ಬೇರೆ ಬೇರೆ ರೀತಿಯ ಆರೋಗ್ಯ ತೊಂದರೆಗಳೂ ಕಾರಣವಾಗಿರಬಹುದು. ಉಳಿದಂತೆ ಬಾಯಿ ವಾಸನೆ ಹಾಗೂ ಉಸಿರಾಡುವಾಗ ಬರುವ ಕೆಟ್ಟ ವಾಸನೆಗೆ ಸಾಮಾನ್ಯವಾಗಿ ನಾವು ಸೇವಿಸುವ ಆಹಾರ(Food)ಗಳೇ ಕಾರಣವಾಗಿರುತ್ತವೆ. 
 

Foods that Cause Bad Breath and How To Treat
Author
Bangalore, First Published Mar 22, 2022, 6:04 PM IST

ಕಾಫಿ, ಟೀ ಅಥವಾ ಹಾಲು ಕುಡಿದು ಬಾಯಿ (Mouth) ತೊಳೆದುಕೊಳ್ಳದೆ ಕೆಲ ಸಮಯ ಹಾಗೆಯೇ ಇದ್ದರೆ ಬಾಯಿಯಿಂದ ಒಂದು ರೀತಿಯ ವಾಸನೆ (Bad Breath) ಬರುವುದು ಎಲ್ಲರ ಅನುಭವಕ್ಕೂ ಬಂದಿರಬಹುದು. ಇದಕ್ಕೆ ಬಾಯಿಯಲ್ಲಿ ವಾಸನೆ ಬರುವ ಬ್ಯಾಕ್ಟೀರಿಯಾ (Bacteria) ಪ್ರಮಾಣ ಹೆಚ್ಚುವುದೇ ಕಾರಣ. ಹಾಗೆಯೇ ಇನ್ನೂ ಅನೇಕ ಕಾರಣಗಳಿಂದ ಬಾಯಿ ವಾಸನೆ ಉಂಟಾಗಬಹುದು.
ಬಾಯಿ ವಾಸನೆ ಅಥವಾ ಕೆಟ್ಟ ಉಸಿರಾಟವನ್ನು ವೈದ್ಯಕೀಯ ಭಾಷೆಯಲ್ಲಿ ಹ್ಯಾಲಿಟೋಸಿಸ್ (Halitosis) ಎಂದು ಕರೆಯಲಾಗುತ್ತದೆ. ಕೆಲವು ಆಹಾರಗಳು ಬಾಯಿಯ ವಾಸನೆಗೆ ಕಾರಣವಾಗುತ್ತವೆ. 
•    ಎಲ್ಲರಿಗೂ ಗೊತ್ತಿರುವಂತೆ ಸಾಮಾನ್ಯವಾಗಿ ಈರುಳ್ಳಿ (Onion) ಹಾಗೂ ಬೆಳ್ಳುಳ್ಳಿ (Garlic) ತಿಂದ ಬಳಿಕ ಅವುಗಳ ವಾಸನೆ ದೀರ್ಘ ಸಮಯ ಇರುತ್ತದೆ. ಅಷ್ಟೇ ಅಲ್ಲ, ಸ್ವಲ್ಪ ಸಮಯದ ಅವುಗಳ ವಾಸನೆಯೊಂದಿಗೆ ಬೇರೆ ರೀತಿಯ ವಾಸನೆಗಳೂ ಸೇರಿಕೊಳ್ಳುತ್ತವೆ. ಇದಕ್ಕೆ ಕಾರಣ, ಅವುಗಳಲ್ಲಿರುವ ಸಲ್ಫರ್. ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸಿದಾಕ್ಷಣ ನಮ್ಮ ರಕ್ತದ ಕಣಗಳು ಸಲ್ಫರ್ (Sulphur) ಅನ್ನು ಹೀರಿಕೊಳ್ಳುತ್ತವೆ ಹಾಗೂ ಉಸಿರಾಟದ ಸಮಯದಲ್ಲಿ ಸಲ್ಫರ್ ವಾಸನೆ ಹೊರಬರುತ್ತದೆ.  
•    ಹಾಲು (Milk), ಬೆಣ್ಣೆ (Cheese)ಯನ್ನು ಸೇವಿಸಿದ ಸ್ವಲ್ಪ ಸಮಯದ ಬಳಿಕ ಬಾಯಿಯಿಂದ ವಾಸನೆ ಬರುವುದು ಸಾಮಾನ್ಯ. ಇದಕ್ಕೆ ಅದರಲ್ಲಿರುವ ಅಮಿನೋ ಆಸಿಡ್ (Amino Acid) ಕಾರಣ. ಅಮಿನೋ ಆಸಿಡ್ ನಿಂದಾಗಿ ಸೃಷ್ಟಿಯಾಗುವ ಬ್ಯಾಕ್ಟೀರಿಯಾಗಳು ಸಲ್ಫರ್ ಸಂಯುಕ್ತವನ್ನು ಉತ್ಪಾದಿಸುತ್ತವೆ. ಅಂತಿಮವಾಗಿ ಹೈಡ್ರೋಜೆನ್ ಸಲ್ಫೈಡ್ ಉತ್ಪಾದನೆಯಾಗಿ ಉಸಿರಾಡುವಾಗ ಕೆಟ್ಟ ವಾಸನೆ ಉಂಟಾಗುತ್ತದೆ. 
•    ಕಾಫಿ (Coffee), ಟೀ (Tea), ಆಲ್ಕೋಹಾಲ್ (Alcohol) ನಿಂದಲೂ ಬಾಯಿ ವಾಸನೆ ಅಥವಾ ಉಸಿರಾಡುವಾಗ ವಾಸನೆ ಉಂಟಾಗುತ್ತದೆ. ಇವು ಬಾಯಿಯನ್ನು ಒಣಗಿಸುತ್ತವೆ. ಈ ಸಮಯದಲ್ಲಿ ಕೆಟ್ಟ ವಾಸನೆ ಬೀರುವ ಬ್ಯಾಕ್ಟೀರಿಯಾ ಬೆಳೆಯುತ್ತವೆ. ಇನ್ನು, ಆಲ್ಕೋಹಾಲ್ ನಮ್ಮ ದೇಹದ ರಕ್ತನಾಳಗಳಲ್ಲಿ ಸೇರಿಕೊಳ್ಳುವುದರಿಂದ ಹೆಚ್ಚು ಸಮಯ ವಾಸನೆ ಬರುತ್ತದೆ. 
•    ಅಧಿಕ ಸಕ್ಕರೆ (Sugar) ಸೇವಿಸುವುದರಿಂದಲೂ ಬಾಯಿ ವಾಸನೆ ಉಂಟಾಗುತ್ತದೆ ಎಂದರೆ ಅಚ್ಚರಿ ಎನಿಸಬಹುದು. ಸಕ್ಕರೆ ಸೇವನೆಯಿಂದ ಬಾಯಿಯಲ್ಲಿ ಕ್ಯಾಂಡಿಡಾ ಯೀಸ್ಟ್ (Candida Yeast) ಮಟ್ಟ ಹೆಚ್ಚಾಗುತ್ತದೆ. ಅಚ್ಚರಿ ಎಂದರೆ, ಹೆಚ್ಚು ಸಿಹಿ ತಿನ್ನುವವರ ನಾಲಿಗೆಯ ಬಣ್ಣ ಬಿಳಿಯಾಗುತ್ತದೆ. 

ಪುಸ್ತಕವನ್ನು ಹತ್ತಾರು ವರ್ಷ ಸುಂದರವಾಗಿಡ್ಬೇಕೆಂದ್ರೆ ಈ Tips ಬಳಸಿ

ಬಾಯಿ ವಾಸನೆ ನಿವಾರಣೆ ಮಾಡಿಕೊಳ್ಳಲು ಕೆಲವು ಆಹಾರಪದಾರ್ಥಗಳನ್ನು ನಿಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ಅವುಗಳೆಂದರೆ, 
•    ಗ್ರೀನ್ ಟೀಯಲ್ಲಿರುವ ಆಂಟಿಆಕ್ಸಿಡಂಟ್ (Antioxidant) ಅಂಶ ಬಾಯಿಯ ಕೆಟ್ಟ ವಾಸನೆ ಹೋಗಲಾಡಿಸಲು ಸಹಕಾರಿ. ಹಾಗೂ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. 
•    ಪುದೀನಾ (Mint) ಎಲೆಗಳನ್ನು ಅಗಿಯುವುದರಿಂದ ಬಾಯಿ ವಾಸನೆ ನಿವಾರಣೆಯಾಗುತ್ತದೆ. ಸೋಂಪು ಕಾಳನ್ನೂ ಸೇವನೆ ಮಾಡಬಹುದು. ಇವೆರಡೂ ಬಾಯಿ ವಾಸನೆ ನಿಯಂತ್ರಿಸುವ ನೈಸರ್ಗಿಕ ರಾಸಾಯನಿಕಗಳನ್ನು ಹೊಂದಿವೆ. ಅವುಗಳನ್ನೇ ನೇರವಾಗಿ ಸೇವಿಸಬೇಕೆಂದಿಲ್ಲ, ಸಲಾಡ್, ಚಪಾತಿ, ದಾಲ್ ಗಳ ಮೂಲಕವೂ ಸೇವಿಸಬಹುದು. 
•    ಲವಂಗವನ್ನು (Clove) ತಿನ್ನುವುದರ ಮೂಲಕ ಬಾಯಿ ವಾಸನೆ ದೂರವಾಗುತ್ತದೆ. ಲವಂಗವು ಆಂಟಿಬ್ಯಾಕ್ಟೀರಿಯಲ್ (Antibacterial) ಆಗಿದ್ದು, ಊಟವಾದ ಬಳಿಕ ಒಂದು ಲವಂಗವನ್ನು ನಿಧಾನವಾಗಿ ಅಗಿದು ತಿನ್ನಬೇಕು. 

ಅತಿ ಹೆಚ್ಚು ಬೆವರುತ್ತಿದ್ದರೆ ದೇಹದ ಈ ಅಂಗದ ಸ್ವಚ್ಛತೆ ಮರೀಬೇಡಿ

•    ಹುದುಗಿದ ಆಹಾರವಾಗಿರುವ ಮೊಸರನ್ನು ಸೇವಿಸುವುದು ಬಾಯಿಯಲ್ಲಿ ಉತ್ತಮ ಬ್ಯಾಕ್ಟೀರಿಯಾ ಅಭಿವೃದ್ಧಿಯಾಗಲು ಸಹಕಾರಿ. ಅದರಿಂದ ತಕ್ಷಣದ ಪರಿಣಾಮ ಕಾಣಿಸುವುದಿಲ್ಲವಾದರೂ ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿ. ಬಾಯಿ ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿಯಂತ್ರಿಸುವಲ್ಲಿ ಯೋಗರ್ಟ್ (Yogurt) ಬಹಳ ಮುಖ್ಯ ಪಾತ್ರ ವಹಿಸುತ್ತದೆ. 
•    ಇವೆಲ್ಲದರೊಂದಿಗೆ ಬಾಯಿಯನ್ನು ಸ್ವಚ್ಛ (Hygiene) ವಾಗಿಟ್ಟುಕೊಳ್ಳಬೇಕು. ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು, ಅಗತ್ಯವಿದ್ದರೆ ಫ್ಲಾಸಿಂಗ್ ಮಾಡಬೇಕು. ಹಳೆಯ ಬ್ರಷ್ ಬಳಕೆ ಮಾಡಬಾರದು. 

Follow Us:
Download App:
  • android
  • ios