ಮಹಿಳೆಯರು ಭಾರ ಎತ್ತೋದ್ರಿಂದ ತೂಕ ಹೆಚ್ಚಳವಾಗುತ್ತಾ ?
ಸ್ಲಿಮ್ ಆಗಿ ಫಿಟ್ ಆಗಿರಬೇಕು ಅಂತ ಪ್ರತಿಯೊಬ್ಬರೂ ಬಯಸುತ್ತಾರೆ. ಅದರಲ್ಲೂ ಮಹಿಳೆಯರಿಗಂತೂ ನಮ್ಮ ದೇಹ ಹಾಗೂ ಸೌಂದರ್ಯದ ಬಗ್ಗೆ ಅತಿ ಹೆಚ್ಚು ಕಾಳಜಿಯಿರುತ್ತದೆ. ಹೀಗಾಗಿಯೇ ಜಿಮ್, ವ್ಯಾಯಾಮ ಅಂತ ಒದ್ದಾಡ್ತಾರೆ. ಆದ್ರೆ ಭಾರ ಎತ್ತೋದ್ರಿಂದ ಮಹಿಳೆಯರ ತೂಕ ಹೆಚ್ಚಾಗುತ್ತಾ ? ಕಡಿಮೆಯಾಗುತ್ತಾ ?
ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇವತ್ತಿನ ದಿನಗಳಲ್ಲಿ ತೂಕ ಹೆಚ್ಚಳ ಎಂಬುದು ಹೆಚ್ಚಿನವರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ. ತೂಕ ಹೆಚ್ಚಾದ್ಮೇಲೆ ಕಡಿಮೆ ಮಾಡ್ಕೊಳ್ಳೋಕೆ ಜಿಮ್, ವರ್ಕೌಟ್, ಡಯೆಟ್, ರನ್ನಿಂಗ್, ವಾಕಿಂಗ್ ಅಂತ ಏನೇನೋ ಮಾಡ್ತಾರೆ. ತೂಕ ಇಳಿಸಿಕೊಳ್ಳೋಕೆ ಹೆಚ್ಚಿನವರು ಫಾಲೋ ಮಾಡೋದು ಜಿಮ್ ಎಕ್ಸರ್‌ಸೈಸ್. ಅಲ್ಲಾದರೆ ಭಾರ ಭಾರವಾದ ವಸ್ತುಗಳನ್ನು ಕೊಟ್ಟು ವ್ಯಾಯಾಮ ಮಾಡಿಸಿ ತೂಕ ಇಳಿಸಿಕೊಳ್ಳುವಂತೆ ಮಾಡ್ತಾರೆ. ಅಧಿಕ ತೂಕದ ಸಮಸ್ಯೆ ಇತ್ತೀಚಿಗೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಪುರುಷರು, ಮಹಿಳೆಯರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹೆಚ್ಚಾದ ತೂಕದಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿ, ವ್ಯಾಯಾಮದ (Excercis) ಕೊರತೆ, ಒತ್ತಡದಿಂದ ತೂಕ ಹೆಚ್ಚಾಗುತ್ತೆ ಅಂತಾರೆ. ಕುಳಿತಲ್ಲೇ ಮಾಡುವ ಕೆಲಸ, ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಸೋಮಾರಿಯಾಗಿರುವ ದಿನಚರಿ, ಜಂಕ್‌ಫುಡ್ ಸೇವನೆ ವೈಟ್ ಗೈನ್‌ಗೆ ಕಾರಣವಾಗುತ್ತೆ ಎಂದು ಹೇಳುತ್ತಾರೆ. ಹೀಗಾಗಿಯೇ ಹೆಚ್ಚಿನವರು ದೇಹ ಫಿಟ್ ಆಗಿರಲೆಂದೇ ವಿನಾಕಾರಣ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ. ಭಾರ ಎತ್ತುವುದು, ಇಳಿಸುವುದು ಮೊದಲಾದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇಹದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಮಹಿಳೆಯರು ಜಿಮ್‌ಗೂ ಸೇರುತ್ತಾರೆ. ಇಲ್ಲಿ ಇಂಥಹದ್ದೇ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಆದ್ರೆ ಭಾರ ಎತ್ತೋ ಅಭ್ಯಾಸ ಮಹಿಳೆಯರಲ್ಲಿ ತೂಕ ಹೆಚ್ಚಾಗೋಕೆ ಕಾರಣವಾಗುತ್ತಾ ?
ತೂಕ ಇಳಿಸಿಕೊಳ್ಳುವ ಆತುರದಲ್ಲಿ ಆರೋಗ್ಯ ಹಾಳು ಮಾಡ್ಕೊಳ್ಳಬೇಡಿ
ಭಾರ ಎತ್ತೋದ್ರಿಂದ ಮಹಿಳೆಯರ ದೇಹದಲ್ಲಿ ಏನಾಗುತ್ತದೆ ?
ಇತ್ತೀಚಿನ ವರ್ಷಗಳಲ್ಲಿ, ಭಾರ ಎತ್ತುವುದು ಭಾರೀ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಪುರುಷರು ಮತ್ತು ಮಹಿಳೆಯರಲ್ಲಿ ವರ್ಕ್ ಔಟ್ ದಿನಚರಿಯ ದೊಡ್ಡ ಭಾಗವಾಗಿದೆ. ಹೆಚ್ಚು ಮಹಿಳೆಯರು (Woman) ತೂಕ ಎತ್ತುವ ಮೂಲಕ ವೈಟ್ ಲಾಸ್ ಮಾಡಿಕೊಳ್ಳುವುದು ಅಂದುಕೊಳ್ಳುತ್ತಾರೆ. ಆದ್ರೆ ಇನ್ನೂ ಕೆಲವೊಬ್ಬರು ಭಾರ ಎತ್ತೋದ್ರಿಂದ ತಮ್ಮ ಭಾರ ಹೆಚ್ಚಾಗುತ್ತೆ ಅಂದುಕೊಳ್ಳುತ್ತಾರೆ. ಇದರಲ್ಲಿ ಯಾವುದು ನಿಜ.
ಮಹಿಳೆಯರು ಭಾರ ಎತ್ತುವುದರಿಂದ ತೂಕ ಹೆಚ್ಚಳವಾಗುವುದಿಲ್ಲ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಕೊಬ್ಬಿನ ಶೇಕಡಾವಾರು ಉತ್ತಮ ಮೈಕಟ್ಟುಗೆ ಪಡೆಯಲು ಮುಖ್ಯವಾದ ಅಂಶವಾಗಿದೆ. ಆದ್ರೆ ತೂಕ (Weight) ಇಳಿಸಿಕೊಳ್ಳಲು ದೇಹದಲ್ಲಿ ಕಡಿಮೆ ಶೇಕಡಾವಾರು ಕೊಬ್ಬಿನ ಅಗತ್ಯವಿರುತ್ತದೆ. ಭಾರವಾದ ತೂಕ ಎತ್ತುವಿಕೆಯು ಮಾತ್ರ ಅದನ್ನು ಸಾಧಿಸಲು ಸಹಾಯ ಮಾಡುತ್ತದೆ. ಭಾರವನ್ನು ಎತ್ತೋದ್ರಿಂದ ದೇಹದ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಹಾರ್ಮೋನುಗಳಲ್ಲಿ ಸಮತೋಲನ ಉಂಟಾಗುತ್ತದೆ. ಬಲವಾದ ಸ್ನಾಯುಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳು ನಿರ್ಮಾಣಗೊಳ್ಳುತ್ತವೆ. ಮೂಳೆ (Bone) ಸಾಂದ್ರತೆಯಲ್ಲಿ ಹೆಚ್ಚಳವಾಗುತ್ತದೆ. ಒತ್ತಡದ ಮನಸ್ಥಿತಿ ಹೋಗಿ ಮನಸ್ಸು ನಿರಾಳಗೊಳ್ಳುತ್ತದೆ.
30 ನಿಮಿಷ ಒಂದೇ ಸ್ಥಳದಲ್ಲಿ ಕುಳಿತರೆ ಸ್ಥೂಲಕಾಯ ಬರುತ್ತೆ ಹುಷಾರ್ !
ಬರ್ನ್ ಮಾಡಬಹುದಾದ ಕ್ಯಾಲೊರಿ ತಿನ್ನಬೇಕು
ತೂಕವನ್ನು ಎತ್ತುವಾಗ, ನೀವು ಬರ್ನ್ ಮಾಡಬಹುದಾದ ಕ್ಯಾಲೊರಿಗಳನ್ನು ತಿನ್ನುವುದು ಮುಖ್ಯ. ದೇಹ (Body)ದಲ್ಲಿ ಸಾಕಷ್ಟು ಪೋಷಕಾಂಶಗಳು ಇದ್ದಾಗ ಮಾತ್ರ ಹೊಸ ಅಂಗಾಂಶವನ್ನು ನಿರ್ಮಿಸಲಾಗುತ್ತದೆ. ಅನೇಕ ಮಹಿಳೆಯರು ಸ್ನಾಯುಗಳನ್ನು ನಿರ್ಮಿಸಲು ಮತ್ತು ಉಳಿಸಿಕೊಳ್ಳಲು ಸಹಾಯ ಮಾಡುವ ಸಾಕಷ್ಟು ಕ್ಯಾಲೋರಿಗಳು ಮತ್ತು ಪ್ರೋಟೀನ್‌ಳನ್ನು ತಿನ್ನುವುದಿಲ್ಲ. ಸರಾಸರಿ ನಿರ್ಮಿತ ಮಹಿಳೆ ದಿನಕ್ಕೆ 1600-1800 ಕ್ಯಾಲೊರಿಗಳನ್ನು ಸೇವಿಸಬೇಕು.