ಆ ಸ್ತ್ರೀ ನಿಮಗೆ ಆಕರ್ಷಕವಾಗಿ ಕಂಡರೆ ಬಲಪಂಥೀಯರು ಎಂದೂ, ಇಲ್ಲವಾದರೆ ಎಡಪಂಥೀಯರು ಎಂದೂ ತಿಳಿಯಬೇಕು. ಪುರುಷರಲ್ಲೂ ಅಷ್ಟೆ. ಅವರ ಮುಖ ಹೆಚ್ಚು ನಿರ್ಭಾವುಕವಾಗಿ, ಅಸಂತೋಷಿಗಳಂತೆ ಕಂಡರೆ ಎಡಪಂಥೀಯರಂತೆ. ನಗುವಿನಿಂದ ಕೂಡಿ ಸ್ಮಾರ್ಟ್ ಆಗಿ ಕಂಡರೆ ಬಲಪಂಥೀಯರಂತೆ!

ಅನೇಕ ಸಲ ಚಿತ್ರವಿಚಿತ್ರವಾದ ಎಂತೆಂಥದೋ ಅಧ್ಯಯನಗಳು ನಡೆಯುತ್ತವೆ. ಅವುಗಳಲ್ಲಿ ಇದೂ ಒಂದು. ಈ ಅಧ್ಯಯನದ ವಿವರ ಪೂರ್ತಿ ನಿಜವೇ ಆಗಿದ್ದರೆ ನೀವು ಎಡಪಂಥೀಯ ಹಾಗೂ ಬಲಪಂಥೀಯ ಮಹಿಳೆಯರನ್ನು ಪುರುಷರನ್ನೂ ಅವರನ್ನು ಮಾತನಾಡಿಸದೇ ಸ್ಪಷ್ಟವಾಗಿ ಗುರುತಿಸಬಹುದು.

ಅದು ಹೇಗೆ ಅಂತೀರಾ? ಅವರ ಮುಖವನ್ನು ಗಮನಿಸಿದರಾಯಿತು. ಆ ಸ್ತ್ರೀ ನಿಮಗೆ ಆಕರ್ಷಕವಾಗಿ ಕಂಡರೆ ಬಲಪಂಥೀಯರು (Rightist) ಎಂದೂ, ಇಲ್ಲವಾದರೆ ಎಡಪಂಥೀಯರು ಎಂದೂ ತಿಳಿಯಬೇಕು. ಪುರುಷರಲ್ಲೂ ಅಷ್ಟೆ. ಅವರ ಮುಖ ಹೆಚ್ಚು ನಿರ್ಭಾವುಕವಾಗಿ, ಅಸಂತೋಷಿಗಳಂತೆ ಕಂಡರೆ ಎಡಪಂಥೀಯರಂತೆ. ನಗುವಿನಿಂದ ಕೂಡಿ ಸ್ಮಾರ್ಟ್ ಆಗಿ ಕಂಡರೆ ಬಲಪಂಥೀಯರಂತೆ. ಇದು ನಾವು ಹೇಳುತ್ತಿರುವುದಲ್ಲ. ಒಂದು ಅಧ್ಯಯನದಿಂದ ತಿಳಿದುಬಂದಿರುವುದು. ಅದೂ ಕೂಡ ಮನುಷ್ಯರು ಮಾಡಿದ ಅಧ್ಯಯನವಲ್ಲ. ನ್ಯೂರಾಲ್ ನೆಟ್‌ವರ್ಕ್ ಎಂದು ಕರೆಯಲಾಗುವ ಡೀಪ್ ಲರ್ನಿಂಗ್ ಕೃತಕ ಬುದ್ಧಿವಂತಿಕೆಯ (AI) ಮೂಲಕ ನಡೆಸಲಾದ ಅಧ್ಯಯನವಿದು. ಈ ಸಮೀಕ್ಷೆಗೆ ಇದು ಸಾವಿರಾರು ಮುಖಗಳ ಫೋಟೋಗಳನ್ನು ಬಳಸಿಕೊಂಡಿದೆ. ಇದು ಡೆನ್ಮಾರ್ಕ್ ಮತ್ತು ಸ್ವೀಡನ್‌ನ ತಜ್ಞರು ಸೇರಿ ನಡೆಸಿದ ಅಧ್ಯಯನ.

ಸಂಶೋಧಕರ ನಿಜವಾದ ಉದ್ದೇಶ ಇದ್ದುದು AIಯ ಆತಂಕಕಾರಿ ನಿಖರತೆಯನ್ನು ತೋರಿಸುವುದಾಗಿತ್ತು. ಈಗ ಏನು ಗೊತ್ತಾಗಿದೆ ಎಂದರೆ ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ (Social Media) ಕಾಣುವ ವ್ಯಕ್ತಿಗಳ ಸೆಲ್ಫಿಯನ್ನು ಬಳಸಿಕೊಂಡೂ ವ್ಯಕ್ತಿಯ ರಾಜಕೀಯ ದೃಷ್ಟಿಕೋನವನ್ನು (Political Vision) ಸರಿಯಾಗಿ ಊಹಿಸಬಹುದು ಎಂದು. 'ಡೀಪ್ ಲರ್ನಿಂಗ್ ಎಐಗಳಿಂದ ಖಾಸಗಿತನಕ್ಕೆ ಬೆದರಿಕೆ ಇದೆ ಎಂಬುದನ್ನು ನಮ್ಮ ಸಮೀಕ್ಷೆಯ ಫಲಿತಾಂಶ ದೃಢಪಡಿಸಿದೆ' ಎಂದು ಸಂಶೋಧಕರು ಹೇಳಿದ್ದಾರೆ. ಈ ಅಧ್ಯಯನದ ವಿವರ ನೇಚರ್ ಮಾಲೀಕತ್ವದ ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಗಿದೆ.

ಡೆನ್ಮಾರ್ಕ್ ಮತ್ತು ಸ್ವೀಡನ್‌ನ ಮೂವರು ಮನಶ್ಶಾಸ್ತ್ರಜ್ಞರು ಮತ್ತು ಪೊಲಿಟಿಕಲ್ ಸೈಂಟಿಸ್ಟ್‌ಗಳು, ಮುಖದ ಅಭಿವ್ಯಕ್ತಿ ಕೋಡಿಂಗ್ ಮತ್ತು ವರ್ಗೀಕರಣದ ಸಾಮರ್ಥ್ಯವನ್ನು ಹೊಂದಿರುವ ನರಮಂಡಲದ ವಿಶ್ಲೇಷಣೆಗಾಗಿ ರಾಜಕೀಯ ಒಲವುಳ್ಳ 3,323 ಮಂದಿಯ ಚೆಹರೆಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿದ್ದರು. ಎಲ್ಲಾ ಫೋಟೋಗಳು 2017ರ ಡ್ಯಾನಿಶ್ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳದಾಗಿದ್ದವು. 

ಈ ಫೋಟೋಗಳನ್ನು ಎಐಗೆ ಫೀಡ್ ಮಾಡಲಾಯಿತು. ಅವರ ಮುಖದ ಕೇವಲ ಒಂದು ಫೋಟೋವನ್ನು ಆಧರಿಸಿ ವ್ಯಕ್ತಿಯ ರಾಜಕೀಯ ಒಲವನ್ನು ಊಹಿಸಲು AIಗೆ ಹೇಳಲಾಯಿತು. ಎಐಯ ಊಹೆ ಶೇ.61ರಷ್ಟು ಕರಾರುವಕ್ಕಾಗಿತ್ತು. ಪುರುಷರಿಗೆ ಫಲಿತಾಂಶ ಹೆಚ್ಚು ನಿಖರವಾಗಿತ್ತು (ಶೇ.65). ಡೆನ್ಮಾರ್ಕ್‌ನಲ್ಲಿ ಕಡಿಮೆ ಮಟ್ಟದ ರಾಜಕೀಯ ಧ್ರುವೀಕರಣವಿದೆ. ಮುನ್ಸಿಪಲ್ ಚುನಾವಣೆಯಲ್ಲಿ ಇನ್ನೂ ಕಡಿಮೆ. ಹೀಗಾಗಿ ಎಐ ಅಷ್ಟೇನೂ ಸಫಲವಾಗಲಾರದು ಎಂದು ಊಹಿಸಲಾಗಿತ್ತು. ಆದರೆ ಸಂಶೋಧಕರ ಊಹೆಯನ್ನು ಎಐ ಸುಳ್ಳುಮಾಡಿತು. ಮೈಕ್ರೊಸಾಫ್ಟ್‌ ಕಂಪನಿಯ ಅಜುರೆಸ್ ಕಾಗ್ನಿಟಿವ್ ಸರ್ವೀಸಸ್‌ನ ಫೇಸ್ API ಅನ್ನು ಈ ಸಂಶೋಧನೆ ಬಳಸಿದೆ. 

ರಿಸ್ಕ್ ವಿಷ್ಯ ಬಂದಾಗ ಹಿಂದೆ ಸರಿತಾರೆ ಮಹಿಳೆಯರು!

ಡೀಪ್ ಲರ್ನಿಂಗ್ ಅಲ್ಗಾರಿದಮ್ (Deep Learning Algorithm) ಒಂದು ಅಸಾಮಾನ್ಯ ಸಂಗತಿಯನ್ನು ಮಾತ್ರ ತಿಳಿಸಿದೆ. ಎಡಪಂಥೀಯ ಸ್ತ್ರೀ ರಾಜಕೀಯ ಅಭ್ಯರ್ಥಿಗಳು ತಿರಸ್ಕಾರವನ್ನು ವ್ಯಕ್ತಪಡಿಸುವ ಮುಖವನ್ನು ಹೊಂದಿದ್ದಾರೆ ಎಂದು ಅದು ಅಭಿಪ್ರಾಯಪಟ್ಟಿತು. ಸಂಪ್ರದಾಯವಾದಿ ದೃಷ್ಟಿಕೋನಗಳಿರುವ ಸ್ತ್ರೀಯರಿಗೆ ಹೆಚ್ಚಿನ ಆಕರ್ಷಣೆಯ ರೇಟಿಂಗ್ ಅನ್ನು ಕೊಟ್ಟಿತು. ಇದಕ್ಕೆ ಹಿಂದಿನ ಸಂಶೋಧನೆಗಳೂ ಪೂರಕವಾಗಿವೆಯಂತೆ. ಹಿಂದಿನ ಹಲವು ಸಂಶೋಧನೆಗಳು ಆಕರ್ಷಣೆ ಮತ್ತು ಸಂಪ್ರದಾಯವಾದದ ನಡುವಿನ ಸಂಬಂಧವನ್ನು ಎತ್ತಿ ತೋರಿಸಿವೆ ಎಂದು ಈ ಅಧ್ಯಯನಕಾರರು ಬರೆದಿದ್ದಾರೆ.

ಇಷ್ಟು ವಿಷಯ ಖಚಿತವಾದ ಮೇಲೆ ನಿಮ್ಮ ಸುತ್ತಮುತ್ತಲೂ ನೀವೇ ಗಮನಿಸಬಹುದು. ಯಾವ ಮಹಿಳೆಯರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ, ಯಾರು ಅನಾಕರ್ಷಕವಾಗಿದ್ದಾರೆ, ಯಾವ ಪುರುಷ ಸ್ಮಾರ್ಟ್ ಆಗಿ ಕಾಣಿಸ್ತಾನೆ, ಯಾರು ಗೂಬೆ ಮುಖ ಹೊಂದಿದ್ದಾನೆ- ಎಲ್ಲವನ್ನೂ ನೋಡಿ ನೀವೇ ಒಂದು ತೀರ್ಮಾನಕ್ಕೆ ಬರಬಹುದು. ಅಥವಾ ಉಲ್ಟಾ ತೀರ್ಮಾನ ಕೂಡ ಮಾಡಬಹುದು. ಅಂದರೆ ಎಡಪಂಥೀಯ- ಬಲಪಂಥೀಯರು ಯಾರು ಅನ್ನುವುದು ನಿಮಗೆ ಖಚಿತವಾಗಿ ಗೊತ್ತಿರುವ ಒಂದಷ್ಟು ಮಂದಿಯ ಫೋಟೋಗಳನ್ನು ಎದುರಿಗೆ ಇಟ್ಟುಕೊಂಡು ನಿರ್ಧಾರಕ್ಕೆ ಬರಬಹುದು! 

Ramayana: ರಾವಣನ ಸಾವಿನ ನಂತರ ರೂಪವತಿ, ಪತಿವ್ರತೆ ಮಂಡೋದರಿ ಎಲ್ಲಿಗೋದಳು?