Asianet Suvarna News Asianet Suvarna News

Ramayana: ರಾವಣನ ಸಾವಿನ ನಂತರ ರೂಪವತಿ, ಪತಿವ್ರತೆ ಮಂಡೋದರಿ ಎಲ್ಲಿಗೋದಳು?

ರಾವಣನ ಪತ್ನಿ ಮಂಡೋದರಿ ಎಂಬುದು ಅನೇಕರಿಗೆ ತಿಳಿದಿದೆ. ರಾಮ – ರಾವಣರ ಯುದ್ಧದಲ್ಲಿ ರಾವಣನ ನಿಧನವಾದ್ಮೇಲೆ ಮುಂದೇನಾಯ್ತು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. 
 

What Happened To Mandodari After Ravana Death In Ramayana  roo
Author
First Published Jun 22, 2023, 5:31 PM IST | Last Updated Jun 22, 2023, 5:31 PM IST

ಹಿಂದೂ ಮಹಾಕಾವ್ಯಗಳಲ್ಲಿರುವ ಅನೇಕ ಪೌರಾಣಿಕ ಕತೆಗಳು ಇಂದಿಗೂ ನಮ್ಮೆಲ್ಲರ ಕಣ್ಣಿಗೆ ಕಟ್ಟುವಂತಿದೆ. ಹಾಗೆಯೇ ಅವುಗಳಲ್ಲಿ ಬರುವ ಪಾತ್ರಗಳು ಕೂಡ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ವೃದ್ಧರೊಂದೇ ಅಲ್ಲ, ಪುಟ್ಟ ಮಕ್ಕಳು ಕೂಡ ಪೌರಾಣಿಕ ಕಥೆಗಳನ್ನು ಹೇಳುತ್ತಾರೆ. ಅದರಲ್ಲೂ ರಾಮಾಯಣದ ಕತೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ರಾವಣನ ದುಷ್ಟತನ ಹಾಗೂ ರಾಮನ ಆದರ್ಶಗಳು ಎಷ್ಟೋ ಜನರ ಬದುಕಿಗೆ ಉದಾಹರಣೆಯಾಗಿದೆ.

ಪೌರಾಣಿಕ ಕತೆಗಳು (Stories) ಎಷ್ಟು ಸುಂದರವಾಗಿದೆಯೋ ಅಷ್ಟೇ ರಹಸ್ಯಮಯವೂ ಆಗಿದೆ. ಏಕೆಂದರೆ ಅದರಲ್ಲಿ ಬರುವ ಎಷ್ಟೋ ಪಾತ್ರಗಳು ಮತ್ತು ಸನ್ನಿವೇಶಗಳು ಇನ್ನೂ ನಿಗೂಢವಾಗಿಯೇ ಇದೆ. ಅಂತಹ ಒಂದು ಪಾತ್ರ ಮಂಡೋದರಿಯದ್ದಾಗಿದೆ. ಮಂಡೋದರಿ ರಾವಣ (Ravana) ಹೆಂಡತಿ. ರಾವಣನ ನಿಧನದ ನಂತರ ಪರಮ ಪತಿವ್ರತೆಯಾದ ಮಂಡೋದರಿ ಏನಾದಳು ಎನ್ನುವುದು ಇಂದಿಗೂ ಯಾರಿಗೂ ತಿಳಿದಿಲ್ಲ. ಇಂದು ನಾವು ಮಂಡೋದರಿಯ ಕುರಿತು ಹೇಳಲಾಗುವ ಕೆಲವು ವಿಷಯಗಳನ್ನು ಹೇಳ್ತೇವೆ.

ಈ ಪವಿತ್ರ ಎಲೆಗಳೊಂದಿಗೆ ದೇವ-ದೇವತೆಗಳಿಗಿದೆ ಸಂಬಂಧ!

ಯಾರು ಈ ಮಂಡೋದರಿ (Mandodari)? : ಮಂಡೋದರಿ ಅಸುರರ ರಾಜನಾದ ಮಾಯಾಸುರ ಮತ್ತು ಅಪ್ಸರೆಯ ಮಗಳು. ಮಂಡೋದರಿ ಅತ್ಯಂತ ಸುಂದರಿ ಹಾಗೂ ಒಳ್ಳೆಯ ಗುಣದವಳಾಗಿದ್ದಳು. ಮಂಡೋದರಿಯ ಸೌಂದರ್ಯಕ್ಕೆ ಮರುಳಾದ ರಾವಣ ಆಕೆಯನ್ನು ಮದುವೆಯಾದ. ರಾವಣದ ಪಟ್ಟದ ರಾಣಿಯಾದ ಮಂಡೋದರಿಗೆ ಮೇಘನಾಥ ಮತ್ತು ಅಕ್ಷಯ ಕುಮಾರ ಎಂಬ ಇಬ್ಬರು ಮಕ್ಕಳಿದ್ದರು.  ಮಂಡೋದರಿಯನ್ನು ಪತಿವೃತಾ ಶಿರೋಮಣಿ ಎಂದು ವರ್ಣಿಸಲಾಗುತ್ತದೆ. ರಾವಣ ಎಷ್ಟೇ ತಪ್ಪುಗಳನ್ನು ಮಾಡಿದರೂ, ಎಷ್ಟೇ ಕೆಟ್ಟ ಕೆಲಸಗಳನ್ನು ಮಾಡಿದರೂ ಕೂಡ ಆಕೆ ರಾವಣನನ್ನು ತನ್ನ ಸರ್ವಸ್ವ ಎಂದೇ ಭಾವಿಸುತ್ತಿದ್ದಳು ಮತ್ತು ರಾವಣನಿಗೆ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಬುದ್ಧಿ ಹೇಳುತ್ತಿದ್ದಳು.

ರಾವಣನ ನಿಧನದ ನಂತರ ಮಂಡೋದರಿಗೆ ಏನಾಯ್ತು? : ಶ್ರೀರಾಮನು ರಾವಣನನ್ನು ವಧೆ ಮಾಡಿದ ನಂತರ ಲಂಕಾಪಟ್ಟಣದಲ್ಲಿ ವಿಭೀಷಣ ಮಾತ್ರ ಇದ್ದ. ಶ್ರೀರಾಮ ವಿಭೀಷಣನಿಗೆ ಪಟ್ಟಾಭಿಷೇಕ ಮಾಡಿ ಅವನನ್ನು ಲಂಕಾಧಿಪತಿಯೆಂದು ಹೇಳಿದ ಎಂದು ಎಲ್ಲ ಪುರಾಣ ಕತೆಗಳು ಹೇಳುತ್ತವೆ. ಈ ಸಮಯದಲ್ಲಿ ಮಂಡೋದರಿ ವಿಭೀಷಣನ ಪತ್ನಿಯಂತೆ ಜೀವನ ಕಳೆದಳು ಎಂದು ಕೂಡ ಹೇಳಲಾಗುತ್ತೆ. ಇನ್ನು ಕೆಲವು ಕಡೆ ರಾವಣನ ನಿಧನದ ನಂತರ ಪತಿವ್ರತೆಯಾಗಿದ್ದ ಮಂಡೋದರಿಯೂ ಕೂಡ ಸಾವಿಗೆ ಶರಣಾದಳು ಎಂದು ಹೇಳಲಾಗಿದೆ.

ರಾಮನು ಮಂಡೋದರಿಗೆ ಆಕೆಯ ಕರ್ತವ್ಯದ ಕುರಿತು ತಿಳಿಸಿ ರಾಜ್ಯವನ್ನು ನಡೆಸುವಂತೆ ಹೇಳಿದ. ಆದರೆ ಮಂಡೋದರಿ ವಿಧವೆ ಜೀವನವನ್ನು ಸ್ವೀಕರಿಸಿ, ಆಧ್ಯಾತ್ಮ ಜೀವನಕ್ಕೆ ಕಾಲಿಟ್ಟಳು ಎಂದು ಅನೇಕ ಕತೆಗಳು ಹೇಳಿವೆ. ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದ ಮಂಡೋದರಿ ತನ್ನ ಜೀವನವನ್ನು ಧಾರ್ಮಿಕ ಆಚರಣೆಗೆ ಮೀಸಲಿಟ್ಟಳು ಎನ್ನಲಾಗುತ್ತದೆ.

Ketu Gochar 2023ದ ಅಶುಭ ಪರಿಣಾಮಕ್ಕೆ 5 ರಾಶಿಗಳು ವಿಲವಿಲ

ಮಂಡೋದರಿಯ ಕುರಿತು ಕೆಲವು ರೋಚಕ ಸಂಗತಿಗಳು : 
• ಮಂಡೋದರಿ ಹೇಮಾ ಎನ್ನುವ ಅಪ್ಸರೆಯ ಮಗಳಾಗಿದ್ದಳು. ದೇವರಾಜ ಇಂದ್ರನ ಸಭೆಯಲ್ಲಿ ಋಷಿ ಕಶ್ಯಪರ ಮಗ ಮಾಯಾಸುರನ ದೃಷ್ಟಿ ಹೇಮಾ ಮೇಲೆ ಬಿತ್ತು. ನಂತರ ಮಾಯಾಸುರ ಹೇಮಾಳನ್ನು ವಿವಾಹವಾದ.
• ಮಾಯಾಸುರ ಹಾಗೂ ಹೇಮಾರ ವಿವಾಹವಾದ ನಂತರ ಅವರಿಗೆ ಹೆಣ್ಣು ಮಗು ಹುಟ್ಟಿತು. ಅದಕ್ಕೆ ಅವರು ಮಥುರಾ ಎಂದು ನಾಮಕರಣ ಮಾಡಿದರು.
• ಮಾಯಾಸುರ ರೂಪವತಿಯಾದ ಮಂಡೋದರಿ ವಿವಾಹವನ್ನು ಮಾಡಬೇಕೆಂದು ನಿರ್ಧರಿಸಿದಾಗ ಮಾಯಾಸುರನಿಗೆ ಯೋಗ್ಯ ವರ ಸಿಗಲೇ ಇಲ್ಲ.
• ರಾವಣ ಮಂಡೋದರಿಯನ್ನು ಭೇಟಿಯಾದ ನಂತರ ಅವನು ಆಕೆಯನ್ನು ಮೋಹಿಸಿ ವಿವಾಹವಾದ.
• ರಾವಣ ಮಂಡೋದರಿಗೆ ಜೀವನದ ಕೊನೆಯವರೆಗೂ ನೀನೇ ನನ್ನ ಹೆಂಡತಿ ಎಂದು ವಚನ ನೀಡಿ ಆಕೆಯನ್ನು ಲಂಕೆಯ ರಾಣಿಯನ್ನಾಗಿಸಿದ್ದ.
• ರಾವಣ ಮಂಡೋದರಿಯ ಮದುವೆಯಾದ ನಂತರ ಮಾಯಾಸುರನು ರಾವಣನಿಗೆ ಚಿನ್ನದ ಲಂಕೆಯನ್ನು ಉಡುಗೊರೆಯಾಗಿ ನೀಡಿದ.
• ಒಂದು ವಿಶೇಷವಾದ ಬಾಣದಿಂದ ರಾವಣನ ಮೃತ್ಯುವಾಗಿತ್ತು. ಈ ಬಾಣದ ಕುರಿತಾದ ಮಾಹಿತಿಯನ್ನು ಮಂಡೋದರಿಯೇ ಹನುಮಂತನಿಗೆ ನೀಡಿದ್ದಳು ಎಂದು ಕೂಡ ಉಲ್ಲೇಖಿಸಲಾಗಿದೆ.
 

Latest Videos
Follow Us:
Download App:
  • android
  • ios