ತಲೆಯ ಕೂದಲನ್ನೇ ಕಿತ್ತು ತಿನ್ತಿದ್ಲು, ಹೊಟ್ಟೆಯಲ್ಲಿದ್ದ ಕೂದಲೆಷ್ಟು ಗೊತ್ತಾ ?
ಸಾಮಾನ್ಯವಾಗಿ ತಿನ್ನೋ ಆಹಾರವಲ್ಲದೆ ಕೆಲವೊಬ್ಬರಿಗೆ ಮಣ್ಣು, ಹಸಿ ಮೊಟ್ಟೆ, ಅಕ್ಕಿ ಮೊದಲಾದ ವಿಚಿತ್ರ ವಸ್ತುಗಳನ್ನು ತಿನ್ನೋ ಅಭ್ಯಾಸವಿರುತ್ತದೆ. ಹಾಗೆಯೇ ಇಲ್ಲೊಬ್ಬಳು ವ್ಯಕ್ತಿ ಕೂದಲನ್ನು ತಿನ್ನೋ ಅಭ್ಯಾಸ ಇಟ್ಟುಕೊಂಡಿದ್ಲು. ಆದ್ರೆ ಆಕೆ ತಿಂದಿರೋ ಕೂದಲು ಅಷ್ಟಿಷ್ಟಲ್ಲ. ಆಪರೇಷನ್ ನಡೆಸಿದ ವೈದ್ಯರು ಹೊಟ್ಟೆಯಿಂದ ಹೊರತೆಗೆದಿದ್ದು ಬರೋಬ್ಬರಿ 3 ಕೆಜಿ ಕೂದಲು.
ಉದ್ದುದ್ದ ಕೂದಲು ಅಂದ್ರೆ ಸಾಮಾನ್ಯವಾಗಿ ಎಲ್ರಿಗೂ ಇಷ್ಟ ಇರುತ್ತೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನವರು ಕೂದಲು (Hair) ಉದುರುವ ಸಮಸ್ಯೆಯಿಂದ ಹೈರಾಣಾಗಿ ಹೋಗಿರ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕೂದಲು ಉದುರಿ ಹೋಗ್ತಾ ಇರುತ್ತೆ. ಆದ್ರೆ ಇಲ್ಲೊಬ್ಬಾಕೆಗೆ ಆ ಸಮಸ್ಯೆ ಇಲ್ಲ. ಆದ್ರೆ ಅದರ ಬದಲಿಗೆ ಆಕೆಯೇ ಕೂದಲನ್ನು ಕಿತ್ತು ತಿನ್ತಿದ್ಲು. ಹೌದು..ಅಚ್ಚರಿಯೆನಿಸಿದರೂ ಇದು ನಿಜ. ಚೀನಾದ ಯುವತಿಯೊಬ್ಬಳು (Girl) ಹೀಗೆ ಕೂದಲನ್ನು ಕಿತ್ತು ಕಿತ್ತು ಬರೋಬ್ಬರಿ 3 ಕೆಜಿಯಾಗುವಷ್ಟು ಕೂದಲನ್ನು ತಿಂದಿದ್ದಾಳೆ. ಆಪರೇಷನ್ ಮಾಡಿದ ವೈದ್ಯರೇ (Doctors) ಇದನ್ನು ನೋಡಿ ದಂಗಾಗಿದ್ದಾರೆ.
ಬರೋಬ್ಬರಿ 3 Kg ಕೂದಲನ್ನು ತಿಂದ ಯುವತಿ
ಶಾಂಕ್ಸಿ ಪ್ರಾಂತ್ಯದಿಂದ ಬಂದಿರುವ ಬಾಲಕಿ ಪಿಕಾ ಎಂಬ ಕಾಯಿಲೆಯಿಂದ (Disease) ಬಳಲುತ್ತಿದ್ದು, ಇದರಲ್ಲಿ ಜನರು ಮಣ್ಣು, ಪೇಪರ್, ಜೇಡಿಮಣ್ಣು ಮತ್ತು ಇತರ ಆಹಾರವಲ್ಲದ ವಸ್ತುಗಳನ್ನು (Things) ತಿನ್ನುತ್ತಾರೆ. ಹಾಗೆಯೇ ಪೋಷಕರಿಂದ (Parents) ದೂರವಿದ್ದು ಪ್ರತ್ಯೇಕವಾಗಿ ವಾಸಿಸುತ್ತಿದ್ದ ಯುವತಿ ತಲೆಯಿಂದ ಕೂದಲನ್ನು ಕಿತ್ತುಕೊಂಡು ತಿನ್ತಿದ್ಲು. ಕಳೆದ ಕೆಲವು ದಿನಗಳಿಂದ ಯುವತಿ ಯಾವುದನ್ನೂ ತಿನ್ನಲಾಗದೆ, ಹೊಟ್ಟೆಯ ಅಸ್ವಸ್ಥತೆಯಿಂದ ಬಳಲ್ತಾ ಇದ್ಲು. ಈ ಬಗ್ಗೆ ವೈದ್ಯರು (Doctors) ಪರಿಶೀಲನೆ ನಡೆಸಿದಾಗ ಆಕೆ ಕೂದಲನ್ನು ತಿನ್ನುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಅಳೋದು ದೌರ್ಬಲ್ಯದ ಸಂಕೇತವಲ್ಲ, ಕಣ್ಣೀರು ಬರದಿದ್ರೆ ಈ ಕಾಯಿಲೆನೂ ಆಗಿರ್ಬೋದು !
ಹೊಟ್ಟೆಯಲ್ಲಿ ಆಹಾರಕ್ಕೇ ಜಾಗವಿಲ್ಲ
ವೈದ್ಯರು ಆಕೆಯ ಹೊಟ್ಟೆ (Stomach)ಯಿಂದ ಮೂರು ಕಿಲೋಗ್ರಾಂಗಳಷ್ಟು ತೂಕದ ಹೇರ್ ಬಾಲ್ ಅನ್ನು ತೆಗೆದುಹಾಕಿದ್ದಾರೆ. ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಹೊಟ್ಟೆಯಲ್ಲಿ ತುಂಬಾ ಕೂದಲುಗಳಿದ್ದು, ಆಹಾರಕ್ಕಾಗಿ ಜಾಗವಿಲ್ಲ, ಹೀಗಾಗಿ ಆಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದಳು ಎಂಬುದನ್ನು ಹೇಳಿದ್ದಾರೆ. ಯುವತಿಯ ಪೋಷಕರು ಕೆಲಸಕ್ಕಾಗಿ ದೂರ ವಾಸಿಸುತ್ತಿದ್ದರಿಂದ ಅವಳನ್ನು ಬೆಳೆಸಿದ ಆಕೆಯ ಅಜ್ಜಿ, ಇದು ತುಂಬಾ ಗಂಭೀರವಾಗುವವರೆಗೂ ಅಸ್ವಸ್ಥತೆಯನ್ನು ಗಮನಿಸಲಿಲ್ಲ ಎಂದು ವರದಿ ತಿಳಿಸಿದೆ. ಆಕೆ ಅನೇಕ ವರ್ಷಗಳಿಂದ ಮಾನಸಿಕ ಸಮಸ್ಯೆಯನ್ನು (Mental health problem) ಅನುಭವಿಸುತ್ತಿರುವುದು. ಹೀಗಾಗಿ ಕೂದಲನ್ನು ತಿನ್ನುತ್ತಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ಕೂದಲನ್ನು ಅತಿಯಾಗಿ ಜಗಿಯುವ ಮತ್ತು ಸೇವಿಸುವ ವಿಚಿತ್ರ ಅಭ್ಯಾಸವನ್ನು (Habit) ಚೀನಾದ ಈ 14 ವರ್ಷದ ಯುವತಿ ಹೊಂದಿದ್ದಳು. ಅತಿ ಹೆಚ್ಚಿನ ಪ್ರಮಾಣದಲ್ಲಿ ಕೂದಲನ್ನು ಸೇವಿಸಿದ್ದರಿಂದ ಆಕೆಯ ತಲೆ ಬಹುತೇಕ ಬೋಳಾಗಿತ್ತು. ಬಾಲಕಿಗೆ ಆಹಾರ (Food) ಸೇವಿಸಲು ಸಾಧ್ಯವಾಗದಷ್ಟು ಅಸ್ವಸ್ಥಳಾಗಿದ್ದಳು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಶಸ್ತ್ರಚಿಕಿತ್ಸಕರು ಎರಡು ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಅವಳ ಹೊಟ್ಟೆ ಮತ್ತು ಕರುಳಿನಿಂದ (Gut) ಇಟ್ಟಿಗೆಯ ತೂಕದ ಹೇರ್ ಬಾಲ್ ಅನ್ನು ತೆಗೆದುಹಾಕಿದರು.
ಮಾರಕ ಕಾಯಿಲೆಗೆ ಕಾರಣವಾಗೋ ಐದು ಬ್ಯಾಕ್ಟಿರೀಯಾ; ಎಲ್ಲೆಲ್ಲಿ ಇರುತ್ತವೆ ತಿಳ್ಕೊಳ್ಳಿ
ಆಕೆಯ ಚಿಕಿತ್ಸೆಯ ಉಸ್ತುವಾರಿ ಹೊತ್ತಿರುವ ಕ್ಸಿಯಾನ್ ಡಾಕ್ಸಿಂಗ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಶಿ ಹೈ ಮಾತನಾಡಿ, 'ಅವಳು ತಿನ್ನಲು ಸಾಧ್ಯವಾಗದ ಕಾರಣ ನಮ್ಮ ಬಳಿಗೆ ಬಂದಳು. ಅವಳ ಹೊಟ್ಟೆ ತುಂಬಾ ಕೂದಲಿನಿಂದ ತುಂಬಿದೆ ಎಂದು ನಾವು ಕಂಡುಕೊಂಡೆವು. ಆಕೆಯ ಕರುಳು ಕೂಡ ಬ್ಲಾಕ್ ಆಗಿತ್ತು' ಎಂದು ತಿಳಿಸಿದ್ದಾರೆ.
ಕೂದಲು ತಿನ್ನುವುದು ಮಾರಣಾಂತಿಕ
ಕೂದಲು ತಿನ್ನುವುದು ಮಾರಣಾಂತಿಕವೆಂದು ಸಾಬೀತಾದ ಪ್ರಕರಣಗಳೂ ಇವೆ. 2017ರಲ್ಲಿ ಬ್ರಿಟನ್‌ನಲ್ಲಿ 16 ವರ್ಷದ ವಿದ್ಯಾರ್ಥಿನಿ ತನ್ನ ಹೊಟ್ಟೆಯಲ್ಲಿ ಹೇರ್‌ಬಾಲ್‌ನಿಂದ ಉಂಟಾದ ಸೋಂಕಿನಿಂದ ಹಠಾತ್ ಸಾವನ್ನಪ್ಪಿದ್ದಳು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿತ್ತು. US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಪ್ರಕಾರ, ತಮ್ಮ ಕೂದಲನ್ನು ನುಂಗುವ ರೋಗಿಗಳು (Patients) ಸಾಮಾನ್ಯವಾಗಿ ರಾಪುಂಜೆಲ್ ಸಿಂಡ್ರೋಮ್‌ನಿಂದ ಬಳಲುತ್ತಾರೆ. ಇದು ಟ್ರೈಕೊಫೇಜಿಯಾ ಎಂಬ ಮನೋವೈದ್ಯಕೀಯ ಅಸ್ವಸ್ಥತೆಯಿಂದ ಉಂಟಾಗುತ್ತದೆ ಎಂದು ತಿಳಿದುಬಂದಿದೆ.