ಸಿಕ್ಕ ಫೋನನ್ನು ಪ್ರಾಮಾಣಿಕವಾಗಿ ವಾಪಸ್ ಮಾಡಿದವಳಿಗೆ ಫೇಕ್ ನೋಟ್ ಗಿಫ್ಟ್! ಠಾಣೆ ಮೆಟ್ಟಿಲೇರಿದ ನಾರಿ

ಒಂದು ವಸ್ತುವನ್ನು ಕಳೆದುಕೊಂಡಾಗ ನೋವಾಗುತ್ತೆ. ಅದೇ ವಾಪಸ್ ಸಿಕ್ಕಾಗ ಖುಷಿ ಡಬಲ್ ಆಗೋದಲ್ಲದೆ ತಂದುಕೊಟ್ಟವನಿಗೆ ಧನ್ಯವಾದದ ಜೊತೆ ಒಂದು ಸಣ್ಣ ಗಿಫ್ಟ್ ಕೊಡುವವರಿದ್ದಾರೆ. ಆದ್ರೆ ಈ ಮಹಿಳೆಗೆ ಉಪಕಾರ ಮಾಡಿಯೂ ಪ್ರಯೋಜನವಾಗ್ಲಿಲ್ಲ. 
 

China Woman Calls Police After Returning Lost Phone To Owner And Receiving Fake Banknotes Reward roo

ವಿಶ್ವದಲ್ಲಿ ಪ್ರಾಮಾಣಿಕ, ಪರಸ್ಪರ ನೆರವಾಗುವ ಜನರು ಇನ್ನೂ ಇದ್ದಾರೆ. ದುಃಖದಲ್ಲಿರುವವರಿಗೆ ಸಹಾಯ ಮಾಡುವ ಜನರು, ಬೇರೆಯವರ ವಸ್ತುಗಳು ತಮಗೆ ಸಿಕ್ಕಾಗ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಪ್ರಾಮಾಣಿಕವಾಗಿ ವಾಪಸ್ ಮಾಡುವವರನ್ನು ನೀವು ನೋಡ್ಬಹುದು. ಆಟೋದಲ್ಲಿ, ಬಸ್ ನಲ್ಲಿ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಜನರು ತಮ್ಮ ವಸ್ತುಗಳನ್ನು ಕಳೆದುಕೊಳ್ಳೋದು ಮಾಮೂಲಿ. ಬೇರೆಯವರ ವಸ್ತು ತಮ್ಮ ಕೈಗೆ ಬಂದಾಗ ಅದನ್ನು ಇಟ್ಟುಕೊಳ್ಳದೆ ಮಾಲೀಕನಿಗೆ ವಸ್ತುವನ್ನು ಹಿಂದಿರುಗಿಸಿದ ಅನೇಕ ಸುದ್ದಿಗಳು ಆಗಾಗ ಕೇಳಿ ಬರ್ತಿರುತ್ತವೆ. ಇನ್ನೊಬ್ಬರ ವಸ್ತು ಎಷ್ಟೇ ಬೆಲೆ ಬಾಳುವುದಾಗಿರಲಿ ಅದನ್ನು ಅವರಿಗೆ ಹಿಂದಿರುಗಿಸಿದಾಗ ಆತ್ಮ ತೃಪ್ತಿಯೊಂದು ಸಿಗುತ್ತದೆ. ಕೆಲ ಬಾರಿ ಮಾಲೀಕ, ವಸ್ತು ಹಿಂದಿರುಗಿಸಿದವರಿಗೆ ಉಡುಗೊರೆ ನೀಡುವುದಿದೆ. ಅವರು ಯಾವ ಉಡುಗೊರೆ ನೀಡ್ತಾರೆ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಅವರ ಯೋಗ್ಯತೆಗೆ ತಕ್ಕಂತೆ ಗಿಫ್ಟ್ ನೀಡಬಹುದು. ಭಾರತದಲ್ಲಿ ಉಡುಗೊರೆ ನೀಡ್ಲೇಬೇಕು ಎಂಬ ರೂಲ್ಸ್ ಕೂಡ ಇಲ್ಲ. ಆದ್ರೆ ನೀಡಿದ ಉಡುಗೊರೆ ಯಾವುದೇ ಪ್ರಯೋಜನಕ್ಕೆ ಬರೋದಿಲ್ಲ ಎಂದಾದ್ರೆ ಅದ್ರಿಂದ ಬೇಸರವಾಗೋದು ಸಹಜ. ಅವರ ವಸ್ತುಗಳನ್ನು ವಾಪಸ್ ನೀಡಿದ ಮೇಲೆ ಅವರು ನಿಮಗೆ ಅವಮಾನ ಮಾಡಿದ್ರೆ ಸಿಟ್ಟಿನ ಜೊತೆ ನೋವಾಗುತ್ತೆ. ಚೀನಾದ ಮಹಿಳೆಗೂ ಅದೇ ಆಗಿದೆ.

ಚೀನಾ (China) ದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಮಹಿಳೆಯೊಬ್ಬರು ತನಗಾದ ಮೋಸದ ಬಗ್ಗೆ ಹೇಳಿದ್ದಾಳೆ. ಆಕೆಗೆ ಮೊಬೈಲ್ (Mobile) ಫೋನ್ ಒಂದು ಸಿಕ್ಕಿತ್ತು. ಪ್ರಾಮಾಣಿಕವಾಗಿದ್ದ ಮಹಿಳೆ ಆ ಫೋನನ್ನು ಮಾಲೀಕನಿಗೆ ನೀಡಿದ್ದಾಳೆ. ಇದಕ್ಕೆ ಬದಲಾಗಿ ಫೋನ್ ಮಾಲೀಕ ಉಡುಗೊರೆ ನೀಡಿದ್ದಾನೆ. ಆ ಉಡುಗೊರೆ (Gift) ಕವರ್ ನೋಡಿದ ಮಹಿಳೆಗೆ ಖುಷಿಯಾಗಿದೆ. ಆದ್ರೆ ಒಳಗಿದ್ದ ವಸ್ತು ನೋಡಿ ನಿರಾಶೆ ಆಗಿದ್ದಲ್ಲದೆ ಪೊಲೀಸರಿಗೆ ಕರೆ ಮಾಡಿ ದೂರು ನೀಡುವಂತಾಗಿದೆ.

VIRAL VIDEO: ಹಿಮಾಚ್ಛಾದಿತ ಮೈನಸ್ 25 ಡಿಗ್ರಿ ಸ್ಥಳದಲ್ಲಿ ಗುಜರಾತಿನ ಜೋಡಿ ಮದುವೆಯ ರಂಗು

ಮಹಿಳೆ ಫೋನ್ ವಾಪಸ್ ನೀಡಿದ ನಂತ್ರ ಆಕೆಗೆ 3,100 ಯುವಾನ್ ಅಂದ್ರೆ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಕೆಂಪು ಪ್ಯಾಕೆಟ್ ನೀಡಲಾಗಿದೆ. ಮಹಿಳೆ ಅದನ್ನು ತೆರೆದು ನೋಡಿದಾಗ  ಅದ್ರಲ್ಲಿ ಅಸಲಿ ಹಣ ಇರಲಿಲ್ಲ.. ಹಣವನ್ನು ಎಣಿಸಿ ಪ್ರಾಕ್ಟೀಸ್ ಮಾಡಲು ಬ್ಯಾಂಕ್ ಗುಮಾಸ್ತರಿಗೆ ನೀಡುವ ನಕಲಿ ನೋಟುಗಳಿದ್ದವು. 

ಈ ಬಗ್ಗೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ನನಗೆ ನಕಲಿ ನೋಟು ನೀಡಿ ಅವಮಾನ ಮಾಡಲಾಗಿದೆ ಎಂದಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಮಾಲೀಕನ ವಿಚಾರಣೆ ಮಾಡಿದ್ದಾರೆ. ಆತ ನಕಲಿ ನೋಟು ನೀಡಿರೋದಾಗಿ ಒಪ್ಪಿಕೊಂಡಿದ್ದಾನೆ. ಆರಂಭದಲ್ಲಿ ಮಹಿಳೆ ಮೊಬೈಲ್ ವಾಪಸ್ ನೀಡಲು ಒಪ್ಪಿರಲಿಲ್ಲ. ಕೊನೆಯಲ್ಲಿ ಮೊಬೈಲ್ ವಾಪಸ್ ನೀಡಿದ್ದಾಳೆ. ಹಾಗಾಗಿ ಇದು ಕೋಪದಿಂದ ಕೂಡಿರ ಗಿಫ್ಟ್ ಆಗಿದೆ ಎಂದಿದ್ದಾನೆ. ನಕಲಿ ನೋಟುಗಳನ್ನು ನೀಡೋದು ಕಾನೂನು ಬಾಹಿರ ಎಂದು ಮಹಿಳೆ ಪರ ವಕೀಲರು ಹೇಳಿದ್ದಾರೆ. 

ನಿದ್ರಾಹೀನತೆ, ಮೊಬೈಲ್ ಅಡಿಕ್ಷನ್ ಇವೆಲ್ಲವೂ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!

ಚೀನಾದ ನಿಯಮವೇನು? : ಚೀನಾ ಸಿವಿಲ್ ಕೋಡ್ ನಲ್ಲಿ ಕಳೆದುಕೊಂಡ ವಸ್ತುವಿನ ಬಗ್ಗೆ ನಿಯಮವಿದೆ. ಬೇರೊಬ್ಬರ ವಸ್ತು ನಮಗೆ ಸಿಕ್ಕಾಗ ಅದರ ಬಗ್ಗೆ ಪೊಲೀಸರಿಗೆ ವರದಿ ಮಾಡಬೇಕು. ನಂತ್ರ ವಸ್ತುವಿನ ಮಾಲೀಕನಿಗೆ ಆ ವಸ್ತುವನ್ನು ಹಿಂದಿರುಗಿಸಬೇಕು. ವಸ್ತುವಿನ ಮಾಲೀಕ, ಹುಡುಕಿಕೊಟ್ಟವರಿಗೆ ಅಗತ್ಯ ವೆಚ್ಚವನ್ನು ನೀಡಬೇಕು. ಅಂದ್ರೆ ವಸ್ತುವನ್ನು ಸುರಕ್ಷಿತವಾಗಿಡಲು ಮತ್ತು ಓಡಾಟಕ್ಕೆ ಆದ ಖರ್ಚನ್ನು ನೀಡಬೇಕಾಗುತ್ತದೆ. ವಸ್ತು ವಾಪಸ್ ಸಿಕ್ಕಿದ ಖುಷಿಗೆ ಉಡುಗೊರೆ ಕೂಡ ನೀಡಬಹುದು. ವಸ್ತು ಸಿಕ್ಕ ವ್ಯಕ್ತಿ ಅದನ್ನು ಮಾಲಿಕನಿಗೆ ನೀಡಲು ನಿರಾಕರಿಸಿದ್ರೆ ಅಥವಾ ವರದಿ ಮಾಡದೆ ಹೋದ್ರೆ ಆತನಿಗೆ ಯಾವುದೇ ಉಡುಗೊರೆ ನೀಡಬಾರದು ಎನ್ನುವ ನಿಯಮವಿದೆ.

Latest Videos
Follow Us:
Download App:
  • android
  • ios