Asianet Suvarna News Asianet Suvarna News

Women Life: ಬೈಕ್ ಕೊಡ್ಸು ಅಂತಿದ್ದ ಪತಿಗಾಗಿ ಸಗಣಿ ಮಾರಿ ಗಿಫ್ಟ್‌ ಮಾಡಿದ ಹೆಂಡತಿ

ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಾಗೋದಿಲ್ಲ. ಇದಕ್ಕೆ ಮಹಿಳೆ ಉತ್ತಮ ನಿದರ್ಶನ. ಗಂಡನ ಆಸೆ ತೀರಿಸಲು ಆಕೆ ಮಾಡಿದ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 
 

Chhattisgarh Success Women
Author
Bangalore, First Published May 28, 2022, 2:35 PM IST | Last Updated May 28, 2022, 2:35 PM IST

ಜೀವನ (Life) ದಲ್ಲಿ ಗುರಿ ಇರ್ಬೇಕು. ಆಗ ಮಾತ್ರ ಸಾಧನೆ ಸುಲಭ. ಗುರಿಯಿಲ್ಲದ ಜೀವನ ಗುರುವಿಲ್ಲದ ಬದುಕು ಎರಡೂ ದಡ ಸೇರುವುದಿಲ್ಲ. ವಿದ್ಯಾಭ್ಯಾಸ ಮಾಡಿದ ಜನರು ಸಾಮಾನ್ಯವಾಗಿ ಡಾಕ್ಟರ್ (Doctor) ಆಗ್ಬೇಕು, ಇಂಜಿನಿಯರ್ ಆಗ್ಬೇಕು, ವಿಮಾನ ಹಾರಿಸ್ಬೇಕು ಹೀಗೆ ಅನೇಕ ಗುರಿ ಹೊಂದಿರುತ್ತಾರೆ. ಆದ್ರೆ ಶಿಕ್ಷಣವಿಲ್ಲದ ಜನರ ಗುರಿ ಒಂದಾದ್ರೆ ಸಾಗುವ ದಾರಿ ಅನಿವಾರ್ಯವಾಗಿ ಬೇರೆಯಾಗುತ್ತದೆ. ನಗರ ಪ್ರದೇಶದಲ್ಲಿರುವಷ್ಟು ಸೌಲಭ್ಯ,ಉದ್ಯೋಗವಕಾಶ ಗ್ರಾಮೀಣ ಪ್ರದೇಶದಲ್ಲಿ ಇಲ್ಲ ನಿಜ. ಆದ್ರೆ ಮನಸ್ಸು ಮಾಡಿದ್ರೆ ಗ್ರಾಮೀಣ ಪ್ರದೇಶದಲ್ಲಿರುವ ವಸ್ತುಗಳನ್ನು ಬಳಸಿಕೊಂಡೇ ವ್ಯವಹಾರ ಶುರು ಮಾಡ್ಬಹುದು. ಕೈತುಂಬ ಸಂಪಾದನೆ ಮಾಡ್ಬಹುದು. ಇದಕ್ಕೆ ಬುದ್ದಿ ಜೊತೆ ಪರಿಶ್ರಮ ಬಹಳ ಮುಖ್ಯ. ನಾವು ಹಳ್ಳಿಯಲ್ಲಿದ್ದೇವೆ, ಏನೂ ಸಾಧ್ಯವಿಲ್ಲ ಎನ್ನುವವರಿಗೆ ಈ ಮಹಿಳೆ ಪ್ರೇರಣೆ. ಹಸುವಿನ ಸಗಣಿ ಆಕೆ ಜೀವನವನ್ನು ಬದಲಿಸಿದೆ. ಆಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ದನದ ಸಗಣಿ ಕಾರಣವಾಗಿದೆ. ಈ ಸಗಣಿ ವ್ಯಾಪಾರದಿಂದಲೇ ಗಂಡನ ಕನಸು ಈಡೇರಿಸಿದ್ದಾಳೆ ಮಹಿಳೆ. ಅಷ್ಟಕ್ಕೂ ಆ ಸಾಧಕಿ  ಯಾರು ಹಾಗೆ ಆಕೆ ಮಾಡಿದ ಸಾಧನೆ ಏನು ಎಂಬುದನ್ನು ನಾವಿಂದು ಹೇಳ್ತೇವೆ. 

ಗಂಡನಿಗೆ ಬೈಕ್ ಕೊಡಿಸಿದ ಮಹಿಳೆ : ಛತ್ತೀಸ್‌ಗಢದ ಬಸ್ತಾರ್‌ನ ಬಕ್ವಾಂಡ್ ಪ್ರದೇಶದ ಮಂಗನಾರ್‌ ಮಹಿಳೆ ಈಗ ಎಲ್ಲರಿಗೆ ಮಾದರಿ. ಮಹಿಳೆ ಹೆಸರು ನೀಲಿಮಾ ದೇವಾಂಗನ್ (Neelima Devangan) . ನೀಲಿಮಾ, ಹಸುವಿನ ಸಗಣಿ (Cow Dung) ಮಾರಾಟದಿಂದ ಬಂದ ಹಣದಿಂದ ತನ್ನ ಪತಿಗೆ ಬೈಕ್ (Bike ) ಉಡುಗೊರೆಯಾಗಿ ನೀಡಿದ್ದಾರೆ. ಇದು ಎಲ್ಲರನ್ನು ಅಚ್ಚರಿಗೊಳಿಸಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ಗೋಧನ್ ನ್ಯಾಯ ಯೋಜನೆ (Godhan Nyay Yojana) ಯಡಿ ದನಗಳ ಮಾಲೀಕರಿಂದ ಸಗಣಿಯನ್ನು ಖರೀದಿಸಲಾಗುತ್ತದೆ. 2 ರೂಪಾಯಿ ಕೆ.ಜಿ.ಗೆ ಸಗಣಿ ಖರೀದಿಸಲಾಗುತ್ತದೆ. ಎರಡು ರೂಪಾಯಿ ಕೆ.ಜಿ ಸಗಣಿಯಿಂದ ಏನು ಸಿಗುತ್ತೆ ಅಂತಾ ನೀವು ಕೇಳ್ಬಹುದು. ಆದ್ರೆ ಇದೇ ಎರಡೆರಡು ರೂಪಾಯಿ ಸೇರಿ 80 ಸಾವಿರವಾಗಿದೆ ಅಂದ್ರೆ ನೀವು ನಂಬ್ಲೇಬೇಕು. ಮಹಿಳೆ ಬಾಳಿನಲ್ಲೂ ಹಸುವಿನ ಸಗಣಿಯಿಂದ ಬರುವ ಆದಾಯವು ಆರ್ಥಿಕವಾಗಿ ದೊಡ್ಡ ಬದಲಾವಣೆಯನ್ನು ತರುವ  ಕೆಲಸ ಮಾಡಿದೆ.   

ಭಾರತದಲ್ಲಿ ಕೇವಲ ಶೇ.36ರಷ್ಟು ಮಹಿಳೆಯರು ಮಾತ್ರ ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸ್ತಾರೆ !

ದನದ ಸಗಣಿಯಿಂದ ಆರ್ಥಿಕ ಬಲ ಪಡೆಯುತ್ತಿದೆ ಜನಾಂಗ : ಸರ್ಕಾರದ ಯೋಜನೆ ಇಲ್ಲಿನ ಜನರ ಜೀವನದಲ್ಲಿ ಅನೇಕ ಬದಲಾವಣೆ ತಂದಿದೆ. ಗೋಧನ್ ಯೋಜನೆ ಕೇವಲ ನೀಲಿಮಾ ದೇವಾಂಗನ್ ರನ್ನು ಮಾತ್ರವಲ್ಲ ಅವರು ಜನಾಂಗವನ್ನು ಕೂಡ ಆರ್ಥಿಕವಾಗಿ ಬಲಗೊಳಿಸಿದೆ. ಗೊಬ್ಬರ ಮಾರಾಟ ಮಾಡಿ ನೀಲಿಮಾ ಹಾಗೂ ಅವರ ಸಂಘದ ಸದಸ್ಯರು ಹತ್ತು ಲಕ್ಷ ರೂಪಾಯಿ ಗಳಿಸಿದ್ದಾರಂತೆ. ಈ ಸಂಘದ ಸದಸ್ಯರು 13 ಲಕ್ಷ ಮೌಲ್ಯದ ಎರೆಹುಳು ಗೊಬ್ಬರ ತಯಾರಿಸಿದ್ದಾರಂತೆ. ಇದನ್ನು ಮಾರಾಟ ಮಾಡುವ  ಮೂಲಕ ಸಮುದಾಯದ ಜನರು ಎರಡು ಲಕ್ಷ ರೂಪಾಯಿ ಗಳಿಸಿದ್ದಾರಂತೆ. ಇಷ್ಟೇ ಅಲ್ಲ ನರ್ಸರಿ ಮೂಲಕ 60 ಸಾವಿರ ರೂಪಾಯಿ ಗಳಿಸಿದ್ದೇವೆ. ಮೀನು ಸಾಕಾಣಿಕೆ ಮೂಲಕ 60 ಸಾವಿರ, ಕೋಳಿ ಸಾಕಾಣಿಕೆ ಮೂಲಕ 75 ಸಾವಿರ ಆದಾಯ ಗಳಿಸಿದ್ದೇವೆ ಎನ್ನುತ್ತಾರೆ ನೀಲಿಮಾ. 

ಭಾರತದಲ್ಲಿ ಇನ್ನೂ ಮುಟ್ಟಿನ ಬಗ್ಗೆ ಮಿಥ್, ತೊಲಗುತ್ತೆ ಯಾವಾಗ?

ಜೋಳದ ಯಂತ್ರ ಖರೀದಿ : ಈ ಗ್ರಾಮದಲ್ಲಿ ಗೋಧನ್ ನ್ಯಾಯ ಯೋಜನೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಹಸುವಿನ ಸಗಣಿ, ಸಮುದಾಯದ ಇನ್ನೊಬ್ಬ ವ್ಯಕ್ತಿಯ ಜೀವನದಲ್ಲೂ ದೊಡ್ಡ ಬದಲಾವಣೆ ತಂದಿದೆ. ಕೃಷ್ಣ ದೇವಾಂಗನ್ ಹೆಸರಿನ ವ್ಯಕ್ತಿ ಮೂರು ಲಕ್ಷ ರೂಪಾಯಿ ಮೌಲ್ಯದ ಹಸುವಿನ ಸಗಣಿ ಮಾರಾಟ ಮಾಡಿ ಈ ಹಣದಲ್ಲಿ ಜೋಳದ ಯಂತ್ರ ಖರೀದಿಸಿದ್ದಾರಂತೆ.  

Latest Videos
Follow Us:
Download App:
  • android
  • ios