Asianet Suvarna News Asianet Suvarna News

Gardening Tips : ಗಿಡದಲ್ಲಿ ರಾಶಿ ರಾಶಿ ಹೂ ಬರ್ಬೇಕೆಂದ್ರೆ ಹೀಗೆ ಮಾಡಿ

ಗುಲಾಬಿ ಗಿಡದಲ್ಲಿ ಹೂ ಗೊಂಚಲಾಗಿ ಬಿಟ್ರೆ ಮನಸ್ಸಿಗೆ ಖುಷಿ. ನರ್ಸರಿಯಲ್ಲಿ ನಾಲ್ಕೈದು ಹೂ ಬಿಟ್ಟ ಗಿಡಕ್ಕೆ ಮನಸೋತು ಅದನ್ನು ಮನೆಗೆ ತರ್ತೇವೆ. ಆದ್ರೆ ಮನೆಗೆ ಬಂದ ಗಿಡ ಬಾಡಿ, ಸಾಯುತ್ತೆ. ಇಲ್ಲ ಅಲ್ಲೋ ಇಲ್ಲೋ ಒಂದು ಹೂ ಬಿಡುತ್ತೆ. ಇದಕ್ಕೆ ಪರಿಹಾರ ಏನು ಗೊತ್ತಾ?
 

Cheap Gardening Hacks For Flowering Plants
Author
First Published Mar 16, 2023, 5:45 PM IST | Last Updated Mar 16, 2023, 5:45 PM IST

ಪ್ರೀತಿಯ ಸಂಕೇತವಾದ ಗುಲಾಬಿ ಹೂಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ನಮ್ಮ ಕೈತೋಟದಲ್ಲಿ ಸ್ವತಃ ನಾವೇ ಬೆಳೆಸಿದ ಗಿಡದಲ್ಲಿ ಹೂ ಬಿಟ್ಟರೆ ಅದರ ಖುಷಿಗೆ ಸಾಟಿಯಿಲ್ಲ. ಆದರೆ ಕೆಲವೊಮ್ಮೆ ನರ್ಸರಿ ಹಾಗೂ ಇನ್ನಿತರ ಕಡೆಗಳಿಂದ ಒಳ್ಳೆಯ ಹೂ ಬಿಡುವ ಗಿಡಗಳನ್ನು ಮನೆಗೆ ತಂದು ಹಾಕಿದರೆ ಅವು ದುರ್ಬಲಗೊಂಡು ಅದರಲ್ಲಿ ಹೂವು ಬಿಡುವುದೇ ಇಲ್ಲ. ನರ್ಸರಿಯಲ್ಲಾಗುವ ಹೂಗಳು ಮನೆಯಲ್ಲೇಕೆ ಆಗುವುದಿಲ್ಲ ಎಂದು ನೀವೂ ಯೋಚಿಸ್ತಿರಬಹುದು. ಅಂತಹ ಸಮಸ್ಯೆಯಗಳಿಗೆ ಪರಿಹಾರ ಕೊಡುವ ಕೆಲವು ಗಾರ್ಡನಿಂಗ್ ಸೀಕ್ರೆಟ್ ಇಲ್ಲಿದೆ.

ಕಡಿಮೆ ಖರ್ಚಿನಲ್ಲಿ ನಳನಳಿಸುತ್ತೆ ಗುಲಾಬಿ (Rose) ಹೂಗಳು :  ಗಿಡದಲ್ಲಿ ಹೂ ಅಥವಾ ಹಣ್ಣುಗಳು ಬಿಡಲು ಸಾಸಿವೆ (Mustard) ಎಣ್ಣೆ ಬಹಳ ಉಪಯುಕ್ತವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಹಳದಿ ಅಥವಾ ಕಪ್ಪು (Black ) ಬಣ್ಣದ ಸಾಸಿವೆಯನ್ನು ತರಬೇಕು.

ಗೊಬ್ಬರ ತಯಾರಿಸುವ ವಿಧಾನ:
• ಮುಚ್ಚಳವಿರುವ ಒಂದು ಡಬ್ಬದಲ್ಲಿ 250 ಗ್ರಾಂ ಸಾಸಿವೆ ಎಣ್ಣೆಯ ಕೇಕ್ ಅನ್ನು 10 ಲೀಟರ್ ನೀರಿಗೆ ಹಾಕಿ.
• ನಂತರ ಅರ್ಧ ಲೀಟರ್ ಮಜ್ಜಿಗೆಯನ್ನು ಅದಕ್ಕೆ ಹಾಕಿ.
• ಮಜ್ಜಿಗೆ ಹಾಕಿದ ನಂತರ 3 ದಿನಗಳ ಕಾಲ ಡಬ್ಬವನ್ನು ಮುಚ್ಚಿಡಿ.
• ಪ್ರತಿದಿನ ಡಬ್ಬದ ಮುಚ್ಚಲು ತೆಗೆದು ಮಿಕ್ಸ್ ಮಾಡುತ್ತಿರಿ.

Kitchen Tips: ಬೆಲೆ ಬಿಸಿಯಲ್ಲಿ ನಿಂಬೆ ಹಣ್ಣು ದೀರ್ಘಕಾಲ ಬರ್ಬೇಕೆಂದ್ರೆ ಹೀಗ್ ಮಾಡಿ

ತಯಾರಿಸಿದ ಗೊಬ್ಬರವನ್ನು ಹೀಗೆ ಬಳಸಿ
• ತಯಾರಿಸಿದ ಗೊಬ್ಬರವನ್ನು ಅರ್ಧ ಲೀಟರ್ ತೆಗೆದುಕೊಂಡು ಅದಕ್ಕೆ ಅರ್ಧದಷ್ಟು ನೀರನ್ನು ಹಾಕಿ.
• ಗಿಡದ ಬುಡದಲ್ಲಿರುವ ಮಣ್ಣನ್ನು ಸ್ವಲ್ಪ ತೆಗೆದು ನೀವು ತಯಾರಿಸಿದ ಗೊಬ್ಬರವನ್ನು ಹಾಕಿ.
• ಈ ಗೊಬ್ಬರವನ್ನು ಹಾಕಿದ ನಂತರ 20 ದಿನಗಳ ಕಾಲ ನೀವು ಬೇರೆ ಯಾವುದೇ ಗೊಬ್ಬರವನ್ನು ಹಾಕಬಾರದು.

ಹಣ್ಣಿನ ಗಿಡಗಳಿಗೆ ಈ ರೀತಿ ಗೊಬ್ಬರ ಹಾಕಿ : ಹೂವಿನ ಗಿಡಗಳಿಗಿಂತ ಹಣ್ಣಿನ ಗಿಡಗಳಿಗೆ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಅವಕ್ಕೆ ಗುಣಮಟ್ಟದ ಗೊಬ್ಬರವೂ ಬೇಕು. ಫಲ ನೀಡುವ ಸಸ್ಯಗಳಿಗೆ ಹಸುವಿನ ಸಗಣಿಯ ಗೊಬ್ಬರ ಬಹಳ ಉತ್ತಮ. ಕಾಂಪೋಸ್ಟ್ ಗೊಬ್ಬರವನ್ನು ಕೂಡ ಹಾಕಬಹುದು.

Health Tips: ಫ್ರೋಜನ್ ಆಹಾರ ಬಳಸೋದ್ರಿಂದ ಕಾಡುತ್ತೆ ಗಂಭೀರ ಸಮಸ್ಯೆ

ಏನು ಮಾಡಬೇಕು?: 
• ಗೊಬ್ಬರ ಹಾಕುವ ಮೊದಲು ಗಿಡದ ಮೇಲ್ಭಾಗವನ್ನು ಸ್ವಲ್ಪ ಬಿಡಿಸಿ. 
• ನೀವು ತಂದಂತಹ ಗೊಬ್ಬರವನ್ನು ಚೆನ್ನಾಗಿ ಪೌಡರ್ ಮಾಡಿ ಗಿಡಗಳಿಗೆ ಹಾಕಿ. 
• ಗೊಬ್ಬರ ಹಾಕಿದ ನಂತರ ಒಂದು ಹಿಡಿ ಬೋನ್ ಮೀಲ್ ಹಾಕಿ.
• ಎರಡೂ ಗೊಬ್ಬರವನ್ನು ಹಾಕಿದ ನಂತರ ಮೇಲಿನಿಂದ ಸ್ವಲ್ಪ ಮಣ್ಣನ್ನು ಹಾಕಿ ಮುಚ್ಚಿ.
• ಹಣ್ಣಿನ ಗಿಡಗಳಿಗೆ ನೀರನ್ನು ಕಡಿಮೆ ಹಾಕಿದರೆ ಅದರಲ್ಲಿ ಹಣ್ಣುಗಳು ಹೆಚ್ಚು ಬಿಡುತ್ತವೆ. ನಾವು ನೀರನ್ನು ಹೆಚ್ಚು ಹಾಕುವುದರಿಂದ ಅದರಲ್ಲಿ ಎಲೆಗಳೇ ಹೆಚ್ಚು ಬೆಳೆಯುತ್ತವೆ.

ನಿಂಬೆ ಜಾತಿಯ ಸಸ್ಯಗಳಿಗೆ ಹೀಗೆ ಮಾಡಿ : ನಿಂಬೆಯ ತರಹದ ಹಣ್ಣುಗಳಿಗೆ 50 ಗ್ರಾಂ ಉಪ್ಪನ್ನು 1 ಲೀಟರ್ ನೀರಲ್ಲಿ ಬೆರೆಸಿ ಎರಡು ದಿನಗಳ ಕಾಲ ಅದನ್ನು ಕರಗಲು ಬಿಡಿ. ಅದು ಚೆನ್ನಾಗಿ ಕರಗಿ ಫಿಲ್ಟರ್ ಆದ ಮೇಲೆ ಅದನ್ನು ಔಷಧಿಯ ತರಹ ಗಿಡಗಳಿಗೆ ಸಿಂಪಡಿಸಿ. ಇದರಿಂದ ಕೀಟಗಳು ಕಡಿಮೆಯಾಗಿ ಹಣ್ಣು ಹೆಚ್ಚು ಬಿಡುತ್ತವೆ.

ನರ್ಸರಿಯಿಂದ ತಂದ ಗಿಡಗಳನ್ನು ಹೀಗೆ ನೆಡಬೇಕು : ನರ್ಸರಿಯಿಂದ ಗಿಡಗಳನ್ನು ತಂದಾಗ ಅದರ ಬೇರುಗಳಲ್ಲಿರುವ ಹೆಚ್ಚಿನ ಕಾಂಡಗಳನ್ನು ತೆಗೆಯಬೇಕು. ಇಲ್ಲದಿದ್ದರೆ ಗಿಡಕ್ಕೆ ಬೇಕಾಗುವ ಪೋಷಕಾಂಶಗಳನ್ನು ಅದೇ ಹೀರಿಕೊಳ್ಳುತ್ತದೆ. ಗುಲಾಬಿಯಂತಹ ಗಿಡಗಳಿಗೆ 12ರಿಂದ 18 ಇಂಚಿನ ಪಾಟ್ ಗಳು ಸಾಕಾಗುತ್ತವೆ. ದೊಡ್ಡದಾಗಿ ಬೆಳೆಯುವ ಗಿಡಗಳನ್ನು ದೊಡ್ಡ ಪಾಟ್ ನಲ್ಲಿಯೇ ಹಾಕಬೇಕು. ಮೊದಮೊದಲು ಗಿಡಗಳಿಗೆ ಹೆಚ್ಚು ಮತ್ತು ಜೋರಾಗಿ ನೀರುಣಿಸಬೇಡಿ ಅದರಿಂದ ಬೇರುಗಳು ದುರ್ಬಲವಾಗುತ್ತವೆ ಮತ್ತು ಸತ್ತುಹೋಗುತ್ತವೆ.

Latest Videos
Follow Us:
Download App:
  • android
  • ios