Kitchen Tips: ಬೆಲೆ ಬಿಸಿಯಲ್ಲಿ ನಿಂಬೆ ಹಣ್ಣು ದೀರ್ಘಕಾಲ ಬರ್ಬೇಕೆಂದ್ರೆ ಹೀಗ್ ಮಾಡಿ
ಫಾಸ್ಟ್ ಫುಡ್ ನಿಂದ ಹಿಡಿದು ಚಿತ್ರನ್ನದವರೆಗೆ ಎಲ್ಲ ಕಡೆ ನಿಂಬೆ ಹಣ್ಣು ಬೇಕೇಬೇಕು. ಬೆಲೆ ಹೆಚ್ಚಾಗಿದ್ರೂ ಪಾನಕ ಸೇವನೆ ಮಾಡೋರ ಸಂಖ್ಯೆ ಕಡಿಮೆಯಾಗಿಲ್ಲ. ಮನೆಯಲ್ಲಿರುವ ನಿಂಬೆ ಸುಮ್ನೆ ಕೊಳೆತು ಇಲ್ಲವೆ ಒಣಗಿ ಹಾಳಾಗ್ತಿದೆ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
ಅಡುಗೆ ಮನೆಯಲ್ಲಿ ನಿಂಬೆ ಹಣ್ಣಿಲ್ಲ ಅಂದ್ರೆ ಕೈ ಕಟ್ಟಿದಂತೆ. ಅನೇಕ ಅಡುಗೆಗೆ ಹುಳಿಯ ರೂಪದಲ್ಲಿ ನಾವು ನಿಂಬೆ ಹಣ್ಣನ್ನು ಬಳಕೆ ಮಾಡ್ತೇವೆ. ಅನೇಕರ ದಿನ ಶುರುವಾಗೋದೇ ನಿಂಬೆ ಹಣ್ಣಿನಿಂದ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಸೇವನೆ ಮಾಡೋರಿದ್ದಾರೆ. ನಿಂಬೆ ಹಣ್ಣು ಆಮ್ಲೀಯವಾಗಿದೆ. ಹಾಗಾಗಿ ನಿಂಬೆ ಹಣ್ಣನ್ನು ಸರಿಯಾದ ತಾಪಮಾನದಲ್ಲಿ ಸಂಗ್ರಹಿಸಿಡಬೇಕು. ಇಲ್ಲವೆಂದ್ರೆ ನಿಂಬೆ ಬೇಗ ಹಾಳಾಗುತ್ತದೆ. ನಿಂಬೆ (Lemon) ಹಣ್ಣಿನ ಬೆಲೆ ಬೇಸಿಗೆ ಬರ್ತಿದ್ದಂತೆ ಏರಿಕೆಯಾಗಿದೆ. ದುಬಾರಿ ಬೆಲೆ ನೀಡಿ ತಂದ ನಿಂಬು ಹಾಗೆ ಹಾಳಾದ್ರೆ ಹಣ (Money) ಪೋಲು. ನಿಂಬೆ ಹಣ್ಣಿನ ಜೀವಿತಾವಧಿ ಕಡಿಮೆ. ಬೇಗ ಒಣಗುತ್ತದೆ ಇಲ್ಲವೆ ಕಪ್ಪಾಗುತ್ತದೆ. ಅನೇಕರು ನಿಂಬೆ ಹಣ್ಣನ್ನು ಫ್ರಿಜ್ ನಲ್ಲಿ ಇಡ್ತಾರೆ. ನೀವು ಮಾರುಕಟ್ಟೆಯಲ್ಲಿ ನಿಂಬೆ ಹಣ್ಣು ಖರೀದಿ ಮಾಡುವಾಗ್ಲೇ ಕೆಲವೊಂದು ವಿಷ್ಯವನ್ನು ಗಮನಿಸಬೇಕು. ತಾಜಾ (Fresh) ಹಾಗೂ ತೆಳು ಸಿಪ್ಪೆ (Peel) ಯುಳ್ಳು ನಿಂಬೆ ಹಣ್ಣನ್ನು ಖರೀದಿ ಮಾಡ್ಬೇಕು. ದಪ್ಪ ಸಿಪ್ಪೆಯ ಹಣ್ಣಿಗಿಂತ ತೆಳುವಾದ ನಿಂಬೆ ಹಣ್ಣಿನಲ್ಲಿ ಹೆಚ್ಚು ರಸವಿರುತ್ತದೆ. ನಾವಿಂದು ನಿಂಬೆ ಹಣ್ಣು ಅನೇಕ ದಿನ ಬಳಕೆಗೆ ಯೋಗ್ಯವಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
Healthy Food : ಉಪ್ಪಿಟ್ಟು ಬೇಜಾರಾ? ಫಟಾ ಫಟ್ ಆಗ್ಬಿಡುತ್ತೆ ಈ ರವೆ ರೋಲ್. ಟೇಸ್ಟಿ ಮತ್ತು ಹೆಲ್ತೀ
ನಿಂಬೆ ಹಣ್ಣನ್ನು ನೀರಿನಲ್ಲಿ ಇಡಿ : ನಿಂಬೆಹಣ್ಣುಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ನೀವು ಅವುಗಳನ್ನು ನೀರಿನಿಂದ ಇಡಬಹುದು. ನೀವು ಒಂದು ಗಾಜಿನ ಜಾರ್ ಗೆ ನೀರನ್ನು ಹಾಕಿ. ಅದ್ರೊಳಗೆ ನಿಂಬೆ ಹಣ್ಣನ್ನು ಹಾಕಿ. ನಂತ್ರ ನಿಂಬೆ ಹಣ್ಣು ತುಂಬಿದ ಜಾರನ್ನು ಫ್ರಿಜ್ ನಲ್ಲಿ ಇಡಿ. ನೀವು ಹೀಗೆ ನಿಂಬೆ ಹಣ್ಣನ್ನು ಸಂಗ್ರಹಿಸಿದ್ರೆ ಹಣ್ಣು ತಾಜಾ ಆಗಿರುವುದಲ್ಲದೆ ರಸಭರಿತವಾಗಿರುತ್ತದೆ.
ಈ ಹಣ್ಣಿನ ಜೊತೆ ನಿಂಬೆ ಹಣ್ಣನ್ನು ಇಡಬೇಡಿ : ನೀವು ನಿಂಬೆ ಹಣ್ಣನ್ನು ಎಲ್ಲಿ ಇಡ್ತೀರಾ ಎಂಬುದು ಕೂಡ ಮುಖ್ಯವಾಗುತ್ತದೆ. ನೀವು ಬಾಳೆ ಹಣ್ಣು ಮತ್ತು ಸೇಬು ಹಣ್ಣಿನ ಜೊತೆ ನಿಂಬೆ ಹಣ್ಣನ್ನು ಇಡಬಾರದು. ಇದ್ರಲ್ಲಿರುವ ಎಥಿಲೀನ್ ಬೇಗ ಹಣ್ಣಾಗಲು ಕಾರಣವಾಗುತ್ತದೆ. ನಿಂಬೆಹಣ್ಣು ಬಹಳ ಸೂಕ್ಷ್ಮವಾಗಿರುತ್ತದೆ. ಸೇಬು, ಬಾಳೆಹಣ್ಣು ಸೇರಿದಂತೆ ಎಥಿಲೀನ್ ಅನ್ನು ಬಿಡುಗಡೆ ಮಾಡುವ ಹಣ್ಣುಗಳ ಬಳಿ ನಿಂಬೆ ಹಣ್ಣನ್ನು ಇಟ್ಟರೆ ಅದು ಬೇಗ ಹಾಳಾಗುತ್ತದೆ.
ಜಿಪ್ ಲಾಕ್ ಬ್ಯಾಗ್ : ನಿಂಬೆ ಹಣ್ಣು ದೀರ್ಘಕಾಲ ಬರಬೇಕೆಂದ್ರೆ ನೀವು ಮಾರುಕಟ್ಟೆಯಿಂದ ತಂದ ಹಣ್ಣನ್ನು ಜಿಪ್ ಲಾಕ್ ಬ್ಯಾಗ್ ನಲ್ಲಿ ಇಡಿ. ಇದ್ರಲ್ಲಿರುವ ನಿಂಬೆ ಹಣ್ಣಿಗೆ ಗಾಳಿ ಸೋಕುವುದಿಲ್ಲ. ಇದ್ರಿಂದಾಗಿ ನಿಂಬೆ ಹಣ್ಣನ್ನು ಬಹಳ ದಿನ ಕೆಡದೆ ಇಡಬಹುದು.
Healthy Snack : ಸ್ವಾದಿಷ್ಟಕರ ಮಖಾನಾ ಚಾಟ್ ರುಚಿಗೂ ಸೈ ಆರೋಗ್ಯಕ್ಕೂ ಸೈ
ಪ್ಲಾಸ್ಟಿಕ್ ಕಂಟೇನರ್ ಬಳಸಿ ನೋಡಿ : ನಿಂಬೆ ಹಣ್ಣನ್ನು ದೀರ್ಘಕಾಲ ಇಡಲು ಪ್ಲಾಸ್ಟಿಕ್ ಕಂಟೇನರ್ ಒಳ್ಳೆಯದು. ನೀವು ಮೊದಲು ನಿಂಬೆ ಹಣ್ಣನ್ನು ಪಾಲಿಥಿನ್ ನಲ್ಲಿ ಹಾಕಿ ಕಟ್ಟಿ ನಂತ್ರ ಅದನ್ನು ಪ್ಲಾಸ್ಟಿಕ್ ಕಂಟೇನರ್ ನಲ್ಲಿ ಹಾಕಿ ಫ್ರಿಜ್ ನಲ್ಲಿ ಇಡಿ.
ಸಹಾಯಕ್ಕೆ ಬರುತ್ತೆ ಅಲ್ಯೂಮಿನಿಯಂ ಫಾಯಿಲ್ : ನಿಮ್ಮ ಬಳಿ ಕಡಿಮೆ ನಿಂಬೆ ಹಣ್ಣುಗಳಿದ್ದರೆ ನೀವು ಅಲ್ಯೂಮಿನಿಯಂ ಫಾಯಿಲ್ ಬಳಕೆ ಮಾಡಬಹುದು. ನಿಂಬೆ ಹಣ್ಣನ್ನು ಅಲ್ಯೂಮಿನಿಯಂ ಫಾಯಿಲ್ ನಲ್ಲಿ ಕಟ್ಟಿ ಇಡಬೇಕು. ಹೀಗೆ ಮಾಡಿದ್ರೆ ನಿಂಬೆ ಹಣ್ಣು ಬೇಗ ಹಾಳಾಗುವುದಿಲ್ಲ.
ರಸತೆಗೆದಿಡಿ : ಮನೆಯಲ್ಲಿ ತುಂಬಾ ನಿಂಬೆ ಹಣ್ಣುಗಳಿದ್ದು, ಬೇಗ ಹಾಳಾಗುತ್ತದೆ ಎಂಬ ಭಯ ನಿಮಗಿದ್ದರೆ ನೀವು ಅದರ ರಸ ತೆಗೆದಿಡಬಹುದು. ರಸಕ್ಕೆ ಸ್ವಲ್ಪ ಉಪ್ಪು ಬೆರೆಸಿ, ಗ್ಲಾಸ್ ಜಾರ್ ನಲ್ಲಿ ಹಾಕಿ ಇಟ್ಟರೆ ತುಂಬಾ ದಿನಗಳವರೆಗೆ ನೀವಿದನ್ನು ಬಳಸಬಹುದು.