Asianet Suvarna News Asianet Suvarna News

ಕ್ಯೂಂಕಿ...ಸೊಸೆ ರೀತಿ ಸ್ಮೃತಿ ಇರಾನಿ ಮನೆ ತೋರಿಸಿದ ಆ್ಯಂಕರ್‌ಗೆ ಪಾನಿಪೂರಿ ಮಾಡಿಕೊಟ್ಟ ಕೇಂದ್ರ ಸಚಿವೆ!

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮನೆ ಏನ್ ಸಖತ್ತಾಗಿದೆ ಗೊತ್ತಾ? ಜೊತೆಗೆ ಬಹಳ ಫುಡೀ ಆಗಿರುವ ಸ್ಮೃತಿ ಗಾಡಿಯವ್ರು ಮಾಡೋದಕ್ಕಿಂತಲೂ ಚೆನ್ನಾಗಿ ಪಾನಿಪೂರಿ ಮಾಡ್ತಾರೆ!

central minister Smruthi irani makes panipuri and serves anchors bni
Author
First Published Mar 25, 2024, 10:37 AM IST

ಸ್ಮೃತಿ ಇರಾನಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಒಂದು ಕಾಲದ ಫೇಮಸ್ ನಟಿ. ಈಗ ನಲವತ್ತೆಂಟರ ಹರೆಯದ ಸ್ಮೃತಿ ಇರಾನಿ ತಮ್ಮ ಖಡಕ್ ಮಾತುಗಳಿಗೂ ಫೇಮಸ್. ಇತ್ತೀಚೆಗೆ ಕರ್ಲಿ ಟೇಲ್ಸ್ ಎಂಬ ಬಹಳ ಜನಪ್ರಿಯ ಯೂಟ್ಯೂಬ್‌ ಚಾನೆಲ್‌ಗೆ ಅವರು ಸಂದರ್ಶನ ನೀಡಿದರು. ಅಲ್ಲಿ ತಾನೊಬ್ಬ ಕೇಂದ್ರ ಸಚಿವೆ ಅನ್ನೋದನ್ನೂ ಮರೆತು ನಿರೂಪಕಿಯ ಜೊತೆಗೆ ಬೆರೆತರು. ಫುಟ್‌ಪಾತ್‌ನಲ್ಲಿ ಗಾಡಿಯವ್ರು ಮಾಡೋದಕ್ಕಿಂತಲೂ ರುಚಿಯಾಗಿ ತಾನು ಪಾನಿಪೂರಿ ಮಾಡಬಲ್ಲೆ ಅನ್ನೋದನ್ನು ನಿರೂಪಿಸಿದರು.

ನಿನ್ನೆ ತಾನೇ ಸ್ಮೃತಿ ಇರಾನಿ ಅವರ ಸ್ಟೇಟ್‌ಮೆಂಟ್ ಸಖತ್ ವೈರಲ್ ಆಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸ್ಮೃತಿ ಇರಾನಿ ಸಮರ್ಥವಾಗಿ ತಮ್ಮ ವಾದ ಮಂಡಿಸಿದ್ದರು. ರಾಹುಲ್‌ ಗಾಂಧಿ 'ದ್ವಂದ್ವ ನಿಲುವು' ಹೊಂದಿದ್ದಾರೆ, ಈಗ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬದ ಬಗ್ಗೆ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಆದರೆ ಇದೇ ರಾಹುಲ್, ತೆಲಂಗಾಣದಲ್ಲಿ ದೆಹಲಿ ಮುಖ್ಯಮಂತ್ರಿ 'ಭ್ರಷ್ಟ' ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಒಂದೇ ವಿಷಯದ ಮೇಲೆ ಹೇಗೆ ವಿವಿಧ ರೀತಿಯಲ್ಲಿ ದಾಳ ಉರುಳಿಸುತ್ತಾರೆ ಎಂಬುದಕ್ಕೆ ನಾನು ಪುರಾವೆ ನೀಡಲು ಬಯಸುತ್ತೇನೆ. ಜುಲೈ 2, 2023 ರಂದು ತೆಲಂಗಾಣದಲ್ಲಿ ಕೆಸಿಆರ್ ಕೂಡ ಭ್ರಷ್ಟ, ಮದ್ಯ ಹಗರಣ ನಡೆದಿದೆ ಎಂಬುದು ಎಲ್ಲಾ ಏಜೆನ್ಸಿಗಳಿಗೂ ಗೊತ್ತು. ಗೋವಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಎಎಪಿ ಭ್ರಷ್ಟಾಚಾರದ ಹಣವನ್ನು ಬಳಸಿದೆ ಎಂಬ ಮಾತಿಗೆ ರಾಹುಲ್ ಪೂರಕವಾಗಿ ಸ್ಪಂದಿಸಿದ್ದರು. ಹಾಗಿದ್ದರೆ ರಾಹುಲ್ ಅವರ ಈ ಮನಸ್ಥಿತಿಯನ್ನು ಏನನ್ನಬೇಕು ಎಂದು ನೇರವಾಗಿ ಸ್ಮೃತಿ ಪ್ರಶ್ನೆ ಮಾಡಿದ್ದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಿಸ್‌ ಇಂಡಿಯಾ ಕಂಟೆಸ್ಟೆಂಟ್ ಆಗಿದ್ದಾಗ ಹೀಗಿದ್ರು..!

ಇದೇ ವೇದಿಕೆಯಲ್ಲಿ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, 'ಶಕ್ತಿ ಎಂದರೆ ದುರ್ಗಾ. ಶಕ್ತಿ ಎಂದರೆ ದೇಶ' ಎಂದು ಉತ್ತರಿಸಿದ್ದೂ ಹಲವರ ಮೆಚ್ಚುಗೆಗೆ ಪಾತ್ರವಾಯಿತು. ಹೀಗಿರುವ ಸ್ಮೃತಿ ಇರಾನಿ ಕೆಲವೊಮ್ಮೆ ತಾವೂ ವಿವಾದಾತ್ಮಕ ಹೇಳಿಕೆ ನೀಡಿರುವುದುಂಟು. ಇದೀಗ ಇವರು ಕರ್ಲಿ ಟೇಲ್ಸ್ ಚಾನೆಲ್ ನೀಡಿದ ಸಂದರ್ಶನದಲ್ಲಿ ತಾನೆಷ್ಟು ಸಖತ್ತಾಗಿ ಪಾನಿಪುರಿ ಮಾಡಬಲ್ಲೆ ಅನ್ನುವುದನ್ನೂ ಸಾಕ್ಷಿ ಸಮೇತ ತೋರಿಸಿದ್ದಾರೆ. ನಿರೂಪಕಿ ಕಾಮಿಯಾ ಜಾನಿ ಸಚಿವೆ ಸ್ಮೃತಿ ಇರಾನಿ ಅವರ ಮನೆಗೆ ವಿಸಿಟ್ ಮಾಡಿದ್ದರು. ಈ ವೇಳೆ ಅವರು ಸಚಿವೆಯ ಮನೆ ಹೇಗಿದೆ ಅನ್ನೋದನ್ನು ತೋರಿಸಿದ್ದಾರೆ. ಸುತ್ತ ಲತಾ ಮಂಟಪಗಳಿಂದ ಕೂಡಿದ ಶಕ್ತಿ ದೇವತೆಯ ವಿಗ್ರಹ, ಅನೇಕ ಕಲಾತ್ಮಕ ವಸ್ತುಗಳಿರುವ ಸ್ಮೃತಿ ಇರಾನಿ ಮನೆ ಸಚಿವೆಯ ಕಲಾ ಅಭಿರುಚಿ ಯಾವ ರೀತಿಯದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.

ಇದರ ಜೊತೆಗೆ ತಾನೊಬ್ಬ ಫುಡೀ ಎಂದು ಸ್ಮೃತಿ ಹೇಳಿದ್ದರೆ. ಅಷ್ಟಾಗಿದ್ದರೆ ಓಕೆ, ಆದರೆ ತಾನೇ ಸ್ವತಃ ಪಾನಿಪೂರಿ ತಯಾರಿಸಿ ನಿರೂಪಕಿ ನೀಡಿ ಟೇಸ್ಟ್ ಮಾಡಿ ಎಂದು ಹೇಳಿದ್ದಾರೆ. 'ಈ ರೀತಿಯ ಪಾನಿಪೂರಿಯನ್ನು ನಾವು ಫುಟ್‌ಪಾತ್‌ನಲ್ಲಿ ಸವಿಯುತ್ತೇವೆ. ಪಾನಿಪುರಿ ಅಂಗಡಿಯಾತ ಪಾನಿಯಲ್ಲಿ ಪೂರಿಯ ಜೊತೆಗೆ ತನ್ನ ಕೈಯನ್ನೂ ಅದ್ದಿ ಪಾನಿಪೂರಿ ನೀಡುತ್ತಾರೆ' ಎಂದು ನಿರೂಪಕಿ ಹೇಳಿದ್ದಾರೆ. 'ನಿಜ. ಆದರೆ ಆ ಪಾನಿಪೂರಿಗೆ ಸಖತ್ ಟೇಸ್ಟ್ ಇರುತ್ತೆ. ಆದರೆ ನಾನು ಈಗ ನಿಮಗೆ ಪಾನಿಪೂರಿ ಕೊಡ್ತೀನಿ. ಇದು ಗಾಡಿಯವನು ಮಾಡುವ ಪಾನಿಪೂರಿಗಿಂತ ರುಚಿ ಇಲ್ಲಾಂದ್ರೆ ಹೇಳಿ' ಎಂದು ಸ್ಮೃತಿ ಹೇಳಿದ್ದಾರೆ.

 

ಕೆಲವು ದಿನಗಳ ಹಿಂದೆ ಮಾಡಿರೋ ಈ ಸಂದರ್ಶನ ಯೂಟ್ಯೂಬ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

Follow Us:
Download App:
  • android
  • ios