ನಿರ್ಮಾಪಕಿ ಏಕ್ತಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅರೆ ಸ್ಮೃತಿ ಇರಾನಿ ಹೀಗಿದ್ರಾ ಎಂದು ಅಚ್ಚರಿಗೊಳಿಸುತ್ತೆ ಈ ವಿಡಿಯೋ..

ನಿರ್ಮಾಪಕಿ ಏಕ್ತಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅರೆ ಸ್ಮೃತಿ ಇರಾನಿ ಹೀಗಿದ್ರಾ ಎಂದು ಅಚ್ಚರಿಗೊಳಿಸುತ್ತೆ ಈ ವಿಡಿಯೋ..

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಿಸ್ ಇಂಡಿಯಾ ಕಂಟೆಸ್ಟೆಂಟ್ ಆಗಿದ್ದಾಗಿನ ವಿಡಿಯೋ ತುಣುಕೊಂದು ವೈರಲ್ ಆಗ್ತಿದೆ. ಸಚಿವೆಯಾಗಿ ಸಿಂಪಲ್ ಸಾರಿಯಲ್ಲೂ ಸುಂದರವಾಗಿ ಕಾಣಿಸುವ ಸ್ಮೃತಿ ತಮ್ಮ ಟೀನೇಜ್‌ನಲ್ಲಿ ಇನ್ನೂ ಕ್ಯೂಟ್ ಆಗಿದ್ದರು.

ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

ಕೇಂದ್ರ ಸಚಿವೆ ತಾವು ನಟಿ ಹಾಗೂ ಮಾಡೆಲ್ ಆಗಿದ್ದ ಸಂದರ್ಭ 1998ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋದಲ್ಲಿ 21 ವರ್ಷದ ಸ್ಮೃತಿ ಅವರು, ಅಡ್ವೆಂಚರ್ ಸ್ಪೋರ್ಟ್‌, ಆಂಗ್ಲ ಸಾಹಿತ್ಯ ಬಗ್ಗೆ ತಮ್ಮ ಆಸಕ್ತಿ ಬಗ್ಗೆ ಮಾತನಾಡಿದ್ದಾರೆ.

View post on Instagram

ಆ ಸಂದರ್ಭದಲ್ಲಿಯೇ ರಾಜಕೀಯ ಆಸ್ತಿ ಬಗ್ಗೆಯೂ ಮಾತನಾಡಿದ್ದ ಅವರು, ತಮ್ಮ ದೇಶದ ಜನರನ್ನು ತಿಳಿದುಕೊಳ್ಳುವ ಕುರಿತಾದ ಆಸಕ್ತಿಯನ್ನೂ ತಿಳಿಸಿದ್ದಾರೆ. ವಿಡಿಯೋ ತುಣುಕು ಪೋಸ್ಟ್ ಮಾಡಿ ಸ್ಮೃತಿ ಅವರ ಜರ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಏಕ್ತಾ ಕಪೂರ್.

ಮಾಡೆಲ್, ನಟಿಯಾಗಿದ್ದು, ಮಿಸ್‌ ಇಂಡಿಯಾ ಕಂಟೆಸ್ಟ್‌ನಲ್ಲಿ ಸೋತರೂ ಯಶಸ್ವಿ ರಾಜಕಾರಣಿಯಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಏಕ್ತ ಪಕೂರ್ ನಿರ್ದೇಶಿಸಿ, ನಿರ್ಮಿಸಿದ ಕ್ಯೂ ಕೀ ಸಾಸ್ ಭೀ ಕಭೀ ಬಹು ಥೀ ಎಂಬ ಸೀರಿಯಲ್‌ನಲ್ಲಿ ಸ್ಮೃತಿ ನಟಿಸಿದ್ದರು. ಈ ಸೀರಿಯಲ್‌ ಅಂದು ಬಹಳಷ್ಟು ಫ್ಯಾನ್ಸ್ ಬೇಸ್ ಹೊಂದಿತ್ತು