Asianet Suvarna News Asianet Suvarna News

ಮಹಿಳೆಯನ್ನು ಕಾಡೋ ಇವು ಹೃದಯಾಘಾತದ ಲಕ್ಷಣ...

ಹೆಚ್ಚು ಮಂದಿ ಎದೆ ನೋವನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಿಬಿಡುತ್ತಾರೆ. ಆದರಿದು ಹೃದಯಾಘಾತದ ಲಕ್ಷಣವೂ ಆಗಿರಬಹುದು. ಮಹಿಳೆಯರನ್ನು ಕಾಡುವ ಈ ಲಕ್ಷಣಗಳ ಬಗ್ಗೆ ಇರಲಿ ಗಮನ...

Cause of heart attack in women
Author
Bengaluru, First Published Mar 3, 2019, 1:31 PM IST

ಇತ್ತೀಚೆಗೆ ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಹೃದಯಾಘಾತ ಕಾಣಿಸಿಕೊಳ್ಳುತ್ತದೆ. ಬದಲಾದ ಲೈಫ್ ಸ್ಟೈಲ್ ಹೃದಯಾಘಾತಕ್ಕೆ ಕಾರಣವಾಗಿರಲೂಬಹುದು. ಅದರಲ್ಲೂ ಮಹಿಳೆಯರಲ್ಲಿ ಕಾಡುವ ಈ ಸಮಸ್ಯೆ ಪುರುಷರಿಗಿಂತ ವಿಭಿನ್ನ. ಮಹಿಳೆಯರಲ್ಲಿ ಹೃದಯಾಘಾತ ಉಂಟಾಗುವ ಮುನ್ನ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ... 

40ರ ಹೆಂಗಸರು ಈ ಟೆಸ್ಟ್ ಮಾಡಿಸಿಕೊಳ್ಳಬೇಕು!

  • ಹೊಟ್ಟೆ ಭಾಗದಲ್ಲಿ ಹೆಚ್ಚಿನ ಒತ್ತಡ ಹಾಗೂ ತೀಕ್ಷ್ಣ ನೋವು ಕಾಣಿಸಿಕೊಳ್ಳುತ್ತದೆ. 
  • ಬೆನ್ನು, ಕುತ್ತಿಗೆ, ಕೆಳ ದವಡೆ ಹಾಗೂ ತೋಳುಗಳಲ್ಲಿ ಆಗಾಗ ಅಥವಾ ಥಟ್ಟನೆ ನೋವು ಕಾಣಿಸಿಕೊಂಡರೆ ಕಡೆಗಣಿಸಬೇಡಿ. ಬದಲಾಗಿ ಕೂಡಲೇ ವೈದ್ಯರನ್ನು ಕಾಣಿ.
  • ರಾತ್ರಿ ಹೊತ್ತು ಮೈಯಲ್ಲಿ ಸಡನ್ ಆಗಿ ನೋವು ಕಾಣಿಸಿಕೊಂಡು ಎಚ್ಚರವಾದರೆ, ಇದು ಪದೇ ಪದೇ ಆಗುತ್ತಿದ್ದರೆ ಹೃದಯಾಘಾತದ ಲಕ್ಷಣ. 
  • ತುಂಬಾ ಸುಸ್ತು, ಕೆಲಸ ಮಾಡಲು ಅಸಾಧ್ಯವಾಗುವಂಥ ಅನುಭವ ಉಂಟಾಗುವುದು, ಅಲ್ಲದೆ ತಲೆ ತಿರುಗಿದ ಅನುಭವವೂ ಸಹ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣ. 
  • ಸುತ್ತ ಮುತ್ತ ತಣ್ಣನೆ ವಾತಾವರಣವಿದ್ದರೂ ನೀವು ಬೆವರುತ್ತಿದ್ದರೆ, ತಕ್ಷಣ ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಿ. 
  • ಎದೆ ಭಾಗದಲ್ಲಿ ನೋವಾಗುವುದು ಹಾಗೂ ಸೂಜಿ ಚುಚ್ಚಿದಂತಾಗುವುದೂ ಹೃದಯಾಘಾತದ ಮುನ್ಸೂಚನೆ. 
Follow Us:
Download App:
  • android
  • ios