ಈ ಕೆಫೆಯಲ್ಲಿ ಕೆಲ್ಸ ಮಾಡೋ ಹುಡುಗೀರು ಪಿರಿಯೆಡ್ಸ್ ಆದ್ರೆ ರೆಡ್ ಸ್ಟಿಕ್ಕರ್ ಧರಿಸ್ಬೇಕಂತೆ !
ಮುಟ್ಟಿನ ದಿನಗಳಲ್ಲಿ ಮಹಿಳೆಯರು ವಿಶ್ರಾಂತಿ ಪಡೆಯಲೆಂದು ಕೆಲ ಕಂಪೆನಿಗಳು ರಜೆ ನೀಡುತ್ತವೆ. ಆದರೆ ಇಲ್ಲೊಬ್ಬ ಕೆಫೆ ಮಾಲೀಕ ಮಹಿಳಾ ಸಿಬ್ಬಂದಿಯು ಮುಟ್ಟಾದ ದಿನಗಳಲ್ಲಿ ಕೆಂಪು ಸ್ಟಿಕರ್ ಧರಿಸಬೇಕು ಎಂಬ ವಿಲಕ್ಷಣ ಹೇಳಿಕೆ ನೀಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಮುಟ್ಟು ನೈಸರ್ಗಿಕ ಕ್ರಿಯೆ. ಇದ್ರಿಂದ ಹೆಣ್ಣು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಈಗ್ಲೂ ಮುಟ್ಟು ಎಂಬ ಪದವನ್ನೇ ಒಪ್ಪಿಕೊಳ್ತಿಲ್ಲ. ಮುಟ್ಟಿನ ವಿಷ್ಯದಲ್ಲಿ ಈಗ್ಲೂ ಸಂಪ್ರದಾಯ, ಪದ್ಧತಿಗಳನ್ನು ಅನೇಕ ಕಡೆ ಆಚರಣೆ ಮಾಡಲಾಗ್ತಿದೆ. ಇನ್ನು ಮುಟ್ಟಾದ ಮಹಿಳೆಯನ್ನು ಹೇಗೆ ಒಪ್ಪಿಕೊಂಡಾರು ? ಅನೇಕ ಕಡೆ ಈಗಲೂ ಮುಟ್ಟಿನ ಬಗ್ಗೆ ಹಲವು ತಪ್ಪು ಅಭಿಪ್ರಾಯಗಳಿವೆ. ಮುಟ್ಟಾದ ಹುಡುಗಿಯರು, ಮಹಿಳೆಯರಿಗೆ ಅನೇಕ ನಿಷೇಧಗಳಿವೆ. ಇದು ಮಹಿಳೆಯರ ಭಾವನಾತ್ಮಕ ಸ್ಥಿತಿ, ಮನಸ್ಥಿತಿ ಮತ್ತು ಜೀವನಶೈಲಿ ಮತ್ತು ಮುಖ್ಯವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಮುಟ್ಟಿನ ಬಗ್ಗೆ ಸರಿಯಾದ ಜ್ಞಾನವಿಲ್ಲ. ನೈರ್ಮಲ್ಯದ ಬಗ್ಗೆ ಶಿಕ್ಷಣವಿಲ್ಲ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕೆಫೆ ಮಾಲೀಕರೊಬ್ಬರು ಇತ್ತೀಚೆಗೆ ತಮ್ಮ ಮಹಿಳಾ (Woman) ಸಿಬ್ಬಂದಿಗೆ ಸಂಬಂಧಿಸಿ ವಿಲಕ್ಷಣ ಹೇಳಿಕೆಯೊಂದಿಗೆ ನೀಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಕೆಫೆಯಲ್ಲಿ ಕೆಲಸ ಮಾಡುವ ಮಹಿಳೆಯರು ಮುಟ್ಟಾದರೆ (Menstruation) ಬರುವಾಗ ಕೆಂಪು ಸ್ಟಿಕ್ಕರ್ ಧರಿಸಿಕೊಂಡು ಬರಬೇಕು ಎಂದು ಕೆಫೆ ಮಾಲೀಕ ಹೇಳಿಕೊಂಡಿದ್ದಾನೆ. ಮಾಲೀಕರು ತಮ್ಮ ಸಿಬ್ಬಂದಿ ಅವಧಿಯ ಮೇಲೆ ಇತರರಿಗೆ ಅದನ್ನು ಘೋಷಿಸುವ ಟ್ಯಾಗ್ ಅನ್ನು ಧರಿಸಬೇಕೆಂದು ನಿರ್ಧರಿಸಿದನು. ಇದರಿಂದಾಗಿ ಅವರು ಸ್ವಲ್ಪ ಹೆಚ್ಚಿನ ಕನ್ಸರ್ನ್ ಪಡೆದುಕೊಳ್ಳಬಹುದು ಎಂದಿದ್ದಾನೆ ಆದರೆ ಕೆಫೆ ಮಾಲೀಕನ ಈ ನಿರ್ಧಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಮುಟ್ಟಾದಾಗ ಸ್ನಾನ ಮಾಡಿದ್ರೆ ಹೆಣ್ಣು ಬಂಜೆಯಾಗುತ್ತಾಳೆ!
ಕೆಫೆಯಲ್ಲಿ ಕೆಲಸ ಮಾಡುವ ಹುಡುಗಿಯರು ಮುಟ್ಟಾದರೆ ವಿಲಕ್ಷಣ ನಿರ್ಬಂಧ
ಕೆಫೆಯಲ್ಲಿ ಕೆಲಸ ಮಾಡುವ ಹುಡುಗಿಯರು ಮುಟ್ಟಾದರೆ ಹುಡುಗರು (Men) ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಹೀಗಾಗಿ ನೀವು ಋತುಚಕ್ರದ ಸಮಯದಲ್ಲಿದ್ದರೆ ಕೆಂಪು ಸ್ಟಿಕ್ಕರ್ ಅನ್ನು ಧರಿಸುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ ಎಂದು ಮಾಲೀಕರು ಹೇಳಿದರು. ಕೈಲ್ ಮತ್ತು ಜಾಕಿ ಓ ಶೋನಲ್ಲಿ ಭಾಗವಹಿಸಿದ್ದ ಕೆಫೆ ಮಾಲೀಕ ಆಂಟನಿ ಈ ವಿಲಕ್ಷಣ ಹೇಳಿಕೆ ನೀಡಿದ್ದಾನೆ. ಕೆಫೆ ಮಾಲೀಕ ಆಂಥೋನಿಯವರ ಹೇಳಿಕೆಗಳು ರೇಡಿಯೊ ನಿರೂಪಕ ಕೈಲ್‌ಗೆ ಸಂಪೂರ್ಣ ಆಘಾತ ಮತ್ತು ಗೊಂದಲಕ್ಕೆ (Confusion) ಕಾರಣವಾಯಿತು. ಹೀಗಿರುವಾಗ ಜಾಕಿ ಓ ಆಂಥೋನಿಯ ಪ್ರತಿಪಾದನೆಯನ್ನು ಪುನರುಚ್ಚರಿಸಿದರು.
ಇದನ್ನು ತಿಳಿದ ಬಳಿಕ ಕೈಲ್ ಜಾಕಿ ಓ ಆಂಥೋನಿಯ ಪ್ರಸ್ತಾಪವನ್ನು ಟೀಕಿಸಿದರು ಮತ್ತು ಅವರ ಕಲ್ಪನೆಯನ್ನು ಮಹಿಳೆಯರಿಗೆ ಅವಮಾನಕರ ಎಂದು ಉಲ್ಲೇಖಿಸಿದ್ದಾರೆ. ಅವರ ಮಹಿಳಾ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳು ಮತ್ತು ಗ್ರಾಹಕರಿಗೆ (Customers) ತಮ್ಮ ಮುಟ್ಟಿನ ಚಕ್ರವನ್ನು ಬಹಿರಂಗಪಡಿಸಲು ಒತ್ತಾಯಿಸಬಾರದು ಎಂದು ಅವರು ಹೇಳಿದರು.
ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದ್ರೆ ಏನಾಗುತ್ತೆ?
ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹಾರ್ಮೋನ್ ಏರುಪೇರಿನಿಂದ ಭಾವನಾತ್ಮಕವಾಗಿ ಒತ್ತಡಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ಅವಧಿಯಲ್ಲಿ ಕೆಂಪು ಸ್ಟಿಕರ್ ಧರಿಸಿದರೆ ಉಳಿದವರು ಅವರೊಂದಿಗೆ ಜಾಗ್ರತೆಯಿಂದ ವ್ಯವಹರಿಸಲು ಸೂಚನೆ ಸಿಕ್ಕಂತಾಗುತ್ತದೆ. ಏಕೆಂದರೆ ಇಬ್ಬರು ಮಹಿಳಾ ಸಿಬ್ಬಂದಿಯೊಂದಿಗೆ ತಾನು ಗ್ರಾಹಕರೆದುರೇ ಈ ವಿಷಯವಾಗಿ ಸಮಸ್ಯೆ ಎದುರಿಸಿದ್ದೇನೆ ಎಂದು ಶೋನಲ್ಲಿ ಹೇಳಿಕೊಂಡಿದ್ಧಾನೆ. ಆಂಥೋನಿಯ ಈ ಅರ್ಥಹೀನ ಪ್ರಸ್ತಾಪವನ್ನು ಅನೇಕರು ಟೀಕಿಸಿದ್ದಾರೆ. ಇವನ ಈ ಕಲ್ಪನೆಯೇ ಮಹಿಳೆಯರಿಗೆ ಅವಮಾನಕರ ಎಂದಿದ್ದಾರೆ.
ಮಹಿಳೆಯರಿಗೆ ತಮ್ಮ ಮುಟ್ಟಿನ ದಿನಗಳನ್ನು ಬಹಿರಂಪಡಿಸಲು ಒತ್ತಾಯ ಮಾಡಬಾರದು ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಆಯಂಟನಿಗೆ ಗಂಭೀರವಾದ ಸಮಸ್ಯೆಗಳಿವೆ ಎಂದು ಹಲವರು ಕಿಡಿಕಾರಿದ್ದಾರೆ. ಅದೇನೆ ಇರ್ಲಿ, ಮುಟ್ಟಿನ ಬಗ್ಗೆಯಿರುವ ಅಭಿಪ್ರಾಯಗಳು ಕಾಲ ಅದೆಷ್ಟು ಮುಂದುವರಿದರೂ ಬದಲಾಗುತ್ತಿಲ್ಲ ಅನ್ನೋದು ವಿಪರ್ಯಾಸ.