ಹತ್ತು ಸಾವಿರಕ್ಕೆ ವ್ಯವಹಾರ ಶುರು ಮಾಡಿ, ಸೋಲಿನ ನಂತ್ರವೂ ಎದ್ದು ನಿಂತ ಮಹಿಳೆ

ಸಾಧನೆ ಮಾಡ್ಬೇಕು ಅಂದ್ರೆ ಆಲಸ್ಯ ಬಿಡ್ಬೇಕು. ಸಖಾಸುಮ್ಮನೆ ಕಾರಣ ಹೇಳ್ತಾ ಕೂರುವ ಬದಲು ಗುರಿ ಮುಟ್ಟುವವರೆಗೆ ಹೋರಾಟ ನಡೆಸಬೇಕು. ಇದಕ್ಕೆ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಶಶಿ ಸೋನಿ ಉತ್ತಮ ನಿದರ್ಶನ. 

business Success Story Izmo Ltd Chairperson Shashi Soni roo

ಯಶಸ್ಸಿನ ಹಿಂದೆ ದೊಡ್ಡ ಹೋರಾಟವಿರುತ್ತದೆ. ಈಗ ನೂರು, ಸಾವಿರ ಕೋಟಿ ವ್ಯವಹಾರ ನಮಗೆ ಸಣ್ಣದಾಗಿ ಕಾಣ್ಬಹುದು. ಆದ್ರೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವ ಸಮಯದಲ್ಲಿ ಅವರ ಸಂಘರ್ಷ ಕಠಿಣವಾಗಿರುತ್ತದೆ. ಇದು ಫಾಸ್ಟ್ ಯುಗ. ಜನರು ಹಣ ಹೂಡಿದ ತಕ್ಷಣ ಗಳಿಕೆ ಶುರು ಆಗ್ಬೇಕು, ಶ್ರೀಮಂತರಾಗ್ಬೇಕು ಎಂದು ಬಯಸ್ತಾರೆ. ಆದ್ರೆ ಆಗಿನ ಕಾಲ ಹಾಗಿರಲಿಲ್ಲ. ಹಣ ಹೂಡಿದ ಎಷ್ಟೂ ವರ್ಷಗಳ ನಂತ್ರ ಫಲ ಸಿಗ್ತಿದೆ. ಕೇವಲ ಹತ್ತು, ಇಪ್ಪತ್ತು ಸಾವಿರ ಹೂಡಿಕೆ ಮಾಡಿ ಕೆಲಸ ಶುರು ಮಾಡಿದ ಅನೇಕರು ಈಗ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ. ದೇಶದ ಅತ್ಯುತ್ತಮ ಉದ್ಯಮಿ ಎನ್ನಿಸಿಕೊಂಡಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದ್ರಲ್ಲಿ ಶಶಿ ಸೋನಿ ಕೂಡ ಒಬ್ಬರು. ನಿಮಗೆ ತಿಳಿದಿರುವಂತೆ ಈ ವರ್ಷ ಶಶಿ ಸೋನಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 69 ವರ್ಷದ ಶಶಿ ಸೋನಿ ಭಾರತದ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಚಿರಪರಿಚಿತ ಹೆಸರು. ಮಹಿಳಾ ಉದ್ಯಮಿ ಶಶಿ ಸೋನಿ ಇಜ್ಮೋ ಲಿಮಿಟೆಡ್‌ನ ಸಂಸ್ಥಾಪಕರು.

ಶಶಿ ಸೋನಿ (Shashi Soni) ಪ್ರಯಾಣ ಸುಲಭವಾಗಿರಲಿಲ್ಲ. ಅನೇಕ ಸೋಲುಗಳನ್ನು ಕಂಡರೂ ಛಲಬಿಡದ ಶಶಿ ಸೋನಿ ಈಗ ಯಶಸ್ವಿನ ಮೆಟ್ಟಿಲೇರಿದ್ದಾರೆ. ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ಶಶಿ ಸೋನಿ 1971ರಲ್ಲಿ ವ್ಯಾಪಾರ (Business) ಕ್ಷೇತ್ರಕ್ಕೆ ಕಾಲಿಟ್ಟರು. ಅವರು 10,000 ರೂಪಾಯಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಡೀಪ್ ಟ್ರಾನ್ಸ್‌ಪೋರ್ಟ್ ಅನ್ನು ಶುರು ಮಾಡಿದ್ರು. ಆದರೆ ಅದು ಬಹಳ ದಿನ ನಡೆಯಲಿಲ್ಲ. ಕೇವಲ ನಾಲ್ಕು ವರ್ಷಗಳ ಕಾಲ ಈ ವ್ಯವಹಾರ ನಡೆಸಿದ ಅವರು, ಅದನ್ನು ಕೈ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. 1975 ರಲ್ಲಿ ಮುಂಬೈನ ಮುಲುಂಡ್ ಪ್ರದೇಶದಲ್ಲಿ ದೀಪ್ ಮಂದಿರ್ ಹೆಸರಿನ ಎಸಿ ಚಿತ್ರಮಂದಿರವನ್ನು ತೆರೆದರು. ಆದ್ರೆ ಶಶಿ ಸೋನಿಗೆ ಇದು ಕೈ ಹತ್ತಲಿಲ್ಲ. 1980ರ ದಶಕದವರೆಗೂ ಇದು ಓಡಲಿಲ್ಲ. ಇದ್ರಿಂದಲೂ ಶಶಿ ಸೋನಿ ಹಿಂದೆಸರಿಯಬೇಕಾಯ್ತು. 

ಭಾರತೀಯ ಬಿಲಿಯನೇರ್ 141279 ಕೋಟಿ ರೂ ಆಸ್ತಿ ಒಡೆಯನ ಸೊಸೆ ಪ್ರಸಿದ್ಧ ಫ್ಯಾಷನ್ ಡಿಸೈನರ್

ಆದ್ರೆ ಅವರ ಇನ್ನೊಂದು ವ್ಯವಹಾರ ಯಶಸ್ಸಿನ ರುಚಿ ಕಾಣಿಸಿತು. ಶಶಿ ಸೋನಿ, ಆಕ್ಸಿಜನ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಗ್ಯಾಸ್ ಉತ್ಪಾದನಾ ಘಟಕ ಶುರು ಮಾಡಿದ್ರು. ಇದ್ರಲ್ಲಿ ಸಾಕಷ್ಟು ಲಾಭಗಳಿಸಿದ ಅವರು, ತಮ್ಮ ಹೋರಾಟದಲ್ಲಿ ಗೆದ್ದಿದ್ದರು. ನಿಧಾನವಾಗಿ ಅವರು ತಾಂತ್ರಿಕ ಕ್ಷೇತ್ರದ ಬಗ್ಗೆ ಗಮನ ಹರಿಸಲು ಶುರು ಮಾಡಿದ್ದರು. 

2005ರಲ್ಲಿ ಶಶಿ ಸೋನಿ ಇಜ್ಮೋ ಲಿಮಿಟೆಡ್‌ ತೆರೆದ್ರು. ಅವರ ಕಂಪನಿಯು ವಿಶ್ವದ ಅತಿದೊಡ್ಡ ಕಂಪನಿಯಾಗಿದೆ. ಇಜ್ಮೋ, ಆಟೋಮೋಟಿವ್ ಚಿತ್ರಗಳು ಮತ್ತು ಅನಿಮೇಷನ್‌ಗಳ ವಿಶ್ವದ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ. ಇವರ ಕಂಪನಿಯು ಅನೇಕ ದೊಡ್ಡ ಆಟೋ ಕಂಪನಿಗಳಿಗೆ ಆಟೋಮೊಬೈಲ್ ಪರಿಹಾರಗಳನ್ನು ಒದಗಿಸುತ್ತದೆ. ಅಮೇರಿಕಾ, ಯುರೋಪ್ ಮತ್ತು ಏಷ್ಯಾದಲ್ಲಿ ಇವರ ಕಂಪನಿ ವ್ಯವಹಾರ ನಡೆಸುತ್ತದೆ. ಶಶಿ ಸೋನಿ ಈ ಕಂಪನಿಯ ಅಧ್ಯಕ್ಷರಾಗಿದ್ದು, ಅವರ ಕಂಪನಿಯನ್ನು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿಯೂ ಪಟ್ಟಿಮಾಡಲಾಗಿದೆ.

Parbati Baruah : ಪುರುಷ ಪ್ರಧಾನ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆ.. ಆನೆ ಮಾವುತ ಪಾರ್ಬತಿ ಬರುವಾಗೆ ಪದ್ಮಶ್ರೀ

ಇಜ್ಮೋ ಲಿಮಿಟೆಡ್‌ ಅನೇಕ ಅಂಗ ಸಂಸ್ಥೆಗಳನ್ನು ಹೊಂದಿದೆ. ಶಶಿ ಸೋನಿ ತಮ್ಮ ವ್ಯವಹಾರ ನೋಡಿಕೊಂಡು ಹೋಗೋದು ಮಾತ್ರವಲ್ಲದೆ ಅನೇಕರಿಗೆ ನೆರವಾಗಿದ್ದಾರೆ. ಅವರ ದೀಪ್ ಜನಸೇವಾ ಸಮಿತಿ, ಜನರಿಗೆ ಉದ್ಯೋಗ ನೀಡಲು ನೆರವಾಗುತ್ತಿದೆ. ಸಮಿತಿಯು ಮಹಿಳೆಯರಿಗೆ ಶಿಕ್ಷಣ, ಪಿಂಚಣಿ ಯೋಜನೆ, ಅಂಗವಿಕಲರಿಗೆ ನಿಧಿ ಸಂಗ್ರಹ ಸೇರಿದಂತೆ ಅನೇಕ ಕೆಲಸಗಳಲ್ಲಿ ನೆರವು ನೀಡುತ್ತದೆ. ಶಶಿ ಸೋನಿ ತಮ್ಮ ಕೆಲಸದ ಮೂಲಕವೇ ಎಲ್ಲರಿಂದ ಗುರುತಿಸಲ್ಪಟ್ಟಿದ್ದು, ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. 

Latest Videos
Follow Us:
Download App:
  • android
  • ios