ಬಂಟಿ ಮಹಾಜನ್, 50 ವರ್ಷಗಳ ಪರಿಶ್ರಮದಿಂದ ಪ್ರಸಿದ್ಧ ಪೇಸ್ಟ್ರಿ ಬಾಣಸಿಗರಾಗಿ ಬೆಳೆದಿದ್ದಾರೆ. ತಾಯಿಯ ಪ್ರೇರಣೆಯಿಂದ ಬೇಕಿಂಗ್ ಹವ್ಯಾಸ ಬೆಳೆಸಿಕೊಂಡ ಅವರು, ವಿಭಿನ್ನ ವಿನ್ಯಾಸದ ಕೇಕ್‍ಗಳನ್ನು ತಯಾರಿಸಿ ಪ್ರಸಿದ್ಧಿ ಪಡೆದರು. ನೀತಾ ಅಂಬಾನಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅವರ ಗ್ರಾಹಕರಾಗಿದ್ದಾರೆ. 2004ರಲ್ಲಿ 'ದಿ ಡೆಸರ್ಟ್ ಕೆಫೆ' ಪ್ರಾರಂಭಿಸಿ, ಡಿಸೈನರ್ ವೆಡ್ಡಿಂಗ್ ಕೇಕ್ ಪರಿಚಯಿಸಿದರು. ಗುಣಮಟ್ಟ ಮತ್ತು ಕಲಾತ್ಮಕತೆಯಿಂದಾಗಿ ಅವರು ಯಶಸ್ಸು ಗಳಿಸಿದ್ದಾರೆ.

ಮನಸ್ಸು ಮಾಡಿದ್ರೆ ಯಾವ ಕೆಲ್ಸವೂ ಕಠಿಣವಲ್ಲ. ಹಾಗೇ ವಯಸ್ಸು ಇಲ್ಲಿ ಬರೀ ಲೆಕ್ಕ. ಅದಕ್ಕೆ ಈಗಾಗ್ಲೇ ಅನೇಕರು ಉದಾಹರಣೆಯಾಗಿದ್ದಾರೆ. ನಾವಿಂದು ಸೆಲೆಬ್ರಿಟಿಗಳಿಗೆ ಕೇಕ್ ಮಾರಾಟ ಮಾಡುವ ಬಂಟಿ ಮಹಾಜನ್ ಬಗ್ಗೆ ಹೇಳ್ತೇವೆ. ಬಂಟಿ ಮಹಾಜನ್, ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಮನೆ ಬೇಕರಿ ವ್ಯಾಪಾರಿಯಾಗಿದ್ದ ಬಂಟಿ ಮಹಾಜನ್ (Bunty Mahajan), ಕಳೆದ 50 ವರ್ಷಗಳಲ್ಲಿ ತಮ್ಮ ಜೀವನವನ್ನು ಪ್ರಸಿದ್ಧ ಪೇಸ್ಟ್ರಿ ಬಾಣಸಿಗ (Pastry chef)ರಾಗಿ ಪರಿವರ್ತಿಸಿಕೊಂಡಿದ್ದಾರೆ. ನೀತಾ ಅಂಬಾನಿ, ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ರೋಹಿತ್ ಶರ್ಮಾ ಮತ್ತು ಇಶಾ ಡಿಯೋಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅವ್ರ ಗ್ರಾಹಕರು. ನೀತಾ ಮತ್ತು ಮುಖೇಶ್ ಅಂಬಾನಿಯವರ 40 ನೇ ವಿವಾಹ ವಾರ್ಷಿಕೋತ್ಸವಕ್ಕೆ ಪ್ರಸಿದ್ಧ ಪೇಸ್ಟ್ರಿ ತಯಾರಿಸಿ ಮತ್ತೆ ಸುದ್ದಿಗೆ ಬಂದಿದ್ದಾರೆ.

50 ವರ್ಷಗಳ ಹಿಂದೆ ಶುರುವಾದ ಪಯಣ : ಬಂಟಿ ಮಹಾಜನ್ ಏಕಾಏಕಿ ಪ್ರಸಿದ್ಧಿಗೆ ಬಂದಿಲ್ಲ. ರಾತ್ರೋರಾತ್ರಿ ಸೆಲೆಬ್ರಿಟಿ ಗ್ರಾಹಕರನ್ನು ಗಳಿಸಿಲ್ಲ. ಬಂಟಿ ಯಶಸ್ಸಿನ ಹಿಂದೆ 50 ವರ್ಷಗಳ ಶ್ರಮವಿದೆ. ಬಂಟಿ ಬೇಕಿಂಗ್ ಉತ್ಸಾಹ 50 ವರ್ಷಗಳ ಹಿಂದೆ ಅವರ ತಾಯಿಯಿಂದ ಶುರುವಾಯ್ತು. ಅಮ್ಮನಿಂದ ಸ್ಫೂರ್ತಿ ಮತ್ತು ಪ್ರೋತ್ಸಾಹದೊಂದಿಗೆ ಬೇಕಿಂಗನ್ನು ಬಂಟಿ ಹವ್ಯಾಸವಾಗಿ ಪ್ರಾರಂಭಿಸಿದ್ರು. ಅವರು ತಮ್ಮ ಅಡುಗೆಯಲ್ಲಿ ಪ್ರಯೋಗ ಮಾಡಲು ಶುರು ಮಾಡಿದ್ರು. ಹೊಸ ಹೊಸ ವಿನ್ಯಾಸಕ್ಕೆ ಆದ್ಯತೆ ನೀಡಿದ್ರು. ಆರಂಭದಲ್ಲಿ ಅವರ ಸ್ನೇಹಿತರು ಮತ್ತು ಕುಟುಂಬವೇ ಅವರ ಗ್ರಾಹಕರಾಗಿದ್ದರು. ಬಂಟಿ ಪೇಸ್ಟ್ರಿ ತಿಂದವರು ಬಾಯ್ತುಂಬ ಹೊಗಳಿದ್ದರು. ಅಲ್ಲದೆ ಆರ್ಡರ್ ನೀಡಲು ಶುರು ಮಾಡಿದ್ದರು. 

ಮುಖೇಶ್ ಅಂಬಾನಿ, ಅಮಿತಾ ಬಚ್ಚನ್ ಸೇರಿ ದೊಡ್ಡ ಸೆಲೆಬ್ರಿಟಿಗಳು ಕುಡಿಯೋ ಹಾಲು ಯಾವ್ದು?

ಆರಂಭದಲ್ಲಿ ಗಿಟಾರ್ ಆಕಾರದ ಕೇಕ್ ಬಂಟಿ ಪ್ರಸಿದ್ಧಿಯನ್ನು ಹೆಚ್ಚಿಸಿತು. ನಿಜವಾದ ಗಿಟಾರ್‌ನ ರಚನೆ ಬಗ್ಗೆ ಸ್ಟಡಿ ಮಾಡಿ, ಅದ್ರಂತೆ ಗಿಟಾರ್ ಕೇಕ್ ತಯಾರಿಸಿದ್ದರು. ಮದುವೆ ನಂತ್ರವೂ ತಮ್ಮ ಹವ್ಯಾಸವನ್ನು ಬಂಟಿ ಮಹಾಜನ್ ಬಿಡಲಿಲ್ಲ. ಮದುವೆ ನಂತ್ರ ಪತಿ ಸುನಿಲ್ , ಬಂಟಿಗೆ ಸಪೋರ್ಟ್ ಮಾಡಿದ್ರಿಂದ ಬಂಟಿ ಇಷ್ಟು ಯಶಸ್ವಿಯಾಗಲು ಮತ್ತೊಂದು ಕಾರಣ. ಬಿಎ ಮುಗಿಸಿರುವ ಬಂಟಿ ಮಹಾಜನ್, ಲಂಡನ್ ಮತ್ತು ಪ್ಯಾರಿಸ್‌ನ ಲೆ ಕಾರ್ಡನ್ ಬ್ಲೂನಲ್ಲಿ ಕೋರ್ಸ್‌ ಮುಗಿಸಿದ್ರು. ಲಂಡನ್‌ನ ಪ್ರಶಸ್ತಿ ವಿಜೇತ ಬ್ಯಾಚ್‌ಮನ್ ಪೇಸ್ಟ್ರಿರಿಯಲ್ಲಿ ಪೇಸ್ಟ್ರಿ ಬಾಣಸಿಗ ಕ್ರಿಸ್ ಬ್ಯಾಚ್‌ಮನ್ ಅವರ ಅಡಿಯಲ್ಲಿ ಮೂರು ವಾರಗಳ ತರಬೇತಿಯನ್ನು ಪಡೆದ್ರು. 

ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ದಕ್ಷಿಣ ಭಾರತದ ಶ್ರೀಮಂತಿಕೆ ತೋರಿಸಿದ ಸೀಬೆ ಹಣ್ಣು

2004 ರಲ್ಲಿ ಬಂಟಿ ತಮ್ಮ ಹವ್ಯಾಸವನ್ನು ವ್ಯಾಪಾರವಾಗಿ ಬದಲಿಸಿದ್ರು. ಮುಂಬೈನಲ್ಲಿ ದಿ ಡೆಸರ್ಟ್ ಕೆಫೆ ಶುರು ಮಾಡಿದ್ರು. ಆರಂಭದಲ್ಲಿ ಪ್ಲೇಟೆಡ್ ಡೆಸರ್ಟ್ ಮಾರಾಟ ಮಾಡುತ್ತಿದ್ದರು. ಏಳು ವರ್ಷಗಳ ನಂತ್ರ ತಮ್ಮದೇ ಆದ ಡಿಸೈನರ್ ವೆಡ್ಡಿಂಗ್ ಕೇಕ್ ಪರಿಚಯಿಸುವ ಮೂಲಕ ಭಾರತದ ಸಿಹಿತಿಂಡಿಗಳ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ರು. ಬಂಟಿ ತಮ್ಮ ಪೇಸ್ಟ್ರಿ ಕೇಕ್ ನಲ್ಲಿ ಹೊಸ ಪ್ರಯೋಗ ಮಾಡ್ತಾನೆ ಬಂದಿದ್ದಾರೆ. ವರ್ಷದಲ್ಲಿ ಎರಡು ಬಾರಿ ಹೊಸ ವಿನ್ಯಾಸವನ್ನು ಪರಿಚಯಿಸುತ್ತಾರೆ. ಪ್ರತಿಯೊಂದೂ ವಿಶಿಷ್ಟ ಥೀಮ್‌ ಮತ್ತು ಬಣ್ಣದೊಂದಿಗೆ ಬರುತ್ತದೆ. ಕಲಾತ್ಮಕತೆ ಮತ್ತು ಗುಣಮಟ್ಟದಿಂದಲೇ ಬಂಟಿ ಪ್ರಸಿದ್ಧಿ ಪಡೆದಿದ್ದಾರೆ. ಕಳೆದ ವರ್ಷ 3.8 ಲಕ್ಷ ಆರ್ಡರ್‌ಗಳನ್ನು ಬಂಟಿ ಪೂರ್ಣಗೊಳಿಸಿದ್ದಾರೆ. ಬಂಟಿ ತಮ್ಮ ಬ್ರ್ಯಾಂಡ್ ಶುರು ಮಾಡಿ 20 ವರ್ಷ ಕಳೆದಿದೆ. ಬಂಟಿಗೆ ಅವರ ಮಗ ಸುಚಿತ್ ಮಹಾಜನ್ ಸಾಥ್ ನೀಡಿದ್ದಾರೆ. ಔಟ್ ಆಫ್ ದಿ ಬ್ಲೂನಲ್ಲಿ 12 ವರ್ಷಗಳ ಕಾಲ ಕೆಲಸ ಮಾಡಿದ ನಂತರ 2016 ಡೆಲಿಸಿಯಾಸ್‌ನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.