Asianet Suvarna News Asianet Suvarna News

Wedding Trends: ಮದುವೆಯಲ್ಲಿ ಮದುಮಗಳು ನಗೋದು ತಪ್ಪಾ?

ಹಳೇ ಕಾಲದವರು ಗೊತ್ತಲ್ಲ. ಹಿಂದಿಲ್ಲ-ಮುಂದಿಲ್ಲ ಬೇಕಾಬಿಟ್ಟಿ ರೂಲ್ಸ್‌. ಅದ್ರಲ್ಲೂ ಮದ್ವೆ ವಿಷ್ಯದಲ್ಲಂತೂ ಒಂಚೂರು ಹೆಚ್ಚೇ ಕಟ್ಟುನಿಟ್ಟು. ಮದುಮಗಳು (Bride) ಮದ್ವೆ ಮೊದ್ಲು ಹುಡುಗನ್ನ ನೋಡ್ಬಾರ್ದು, ಮದ್ವೆ (Marriage) ದಿನ ನಗಬಾರ್ದು ಹೀಗೆ ಏನೆಲ್ಲಾ ಹೇಳ್ತಿದ್ರು. ಆದ್ರೆ ಇವತ್ತಿನ ಹುಡುಗೀರು ಗೊತ್ತಲ್ಲ ಮದ್ವೆ ದಿನ ನಗ್ತಾ (Laugh), ಡ್ಯಾನ್ಸ್ ಮಾಡ್ತಾ ಬಿಂದಾಸ್ ಆಗಿರ್ತಾರೆ.

Bride Laughing During Her Wedding Ceremony
Author
Bangalore, First Published Mar 18, 2022, 1:01 PM IST

ಏನ್ ಹುಡುಗಿ (Girl) ನೋ, ತನ್ನ ಮದುವೆ (Marriage) ಅನ್ನೋ ಪರಿವೇನೂ ಇಲ್ಲ. ನಾಚಿಕೆ (Shy) ಬಿಟ್ಟು ನಗ್ತಿದ್ದಾಳೆ. ಸ್ವಲ್ಪ ನಯ ನಾಜೂಕು ಕಲಿಸ್ಬೇಕಲ್ವಾ? ಹೀಗಂತ ಅನೇಕರ ಬಾಯಲ್ಲಿ ನಾವು ಕೇಳಿರ್ತೇವೆ. ಮದುವೆ ಮಂಟಪದಲ್ಲಿ ಹುಡುಗಿ ಸ್ವಲ್ಪ ನಕ್ಕರೂ ನೆರೆದವರ ಕಣ್ಣು (Eyes) ಕೆಂಪಾಗುತ್ತದೆ. ಅದೇನೇ ಆಗ್ಲಿ, ಮದುವೆ ಸಂದರ್ಭದಲ್ಲಿ ವಧು (Bride) ನಾಚಿಕೊಳ್ಳಲೇಬೇಕು. ಮಹಿಳೆ ಸ್ವಾತಂತ್ರ್ಯದ ಬಗ್ಗೆ ನಾವು ಎಷ್ಟೇ ಮಾತನಾಡಿದ್ರೂ ಮದುವೆ ದಿನ ನಾಚಿಕೊಳ್ಳದ ವಧುವನ್ನು ಬೇರೆ ರೀತಿಯಲ್ಲೇ ನೋಡಲಾಗುತ್ತೆ.

ಯಾವುದೇ ಕಾರಣಕ್ಕೂ ಆಕೆ ಬಾಯ್ಬಿಟ್ಟು ನಗುವಂತಿಲ್ಲ. ಭಯ ತುಂಬಿದ ನಾಚಿಕೆ ಆಕೆ ಮುಖದಲ್ಲಿರ್ಬೇಕು. ಮದುವೆಯ ಪ್ರತಿ ಕ್ಷಣವನ್ನು ಆನಂದಿಸುವ, ಎಲ್ಲರ ಜೊತೆ ಎಂಜಾಯ್ ಮಾಡುವ ವಧು ಒಳ್ಳೆಯವಳಲ್ಲವೇ ಅಲ್ಲ. ಮದುವೆ ದಿನ ತಗ್ಗಿ-ಬಗ್ಗಿ ನಡೆಯಬೇಕು ಜೊತೆಗೆ ವರನ ಕಡೆಯವರ ಜೊತೆ ಜಾಸ್ತಿ ಮಾತನಾಡ್ಬಾರದು ಇದು ಅಲಿಖಿತ ನಿಯಮ. 

ಲವ್ ಮ್ಯಾರೇಜ್ ಆದ್ರೂ ದಾಪತ್ಯದಲ್ಲಿ ಕಲಹ ಮೂಡಲು ಕಾರಣ ಏನು?

ಇಲ್ಲಿ ಯಾರು ಸರಿ, ಯಾರು ತಪ್ಪು ಎಂಬುದು ಬರುವುದಿಲ್ಲ. ಯೋಜನೆ ಮಾಡ್ಬೇಕಾದ ವಿಷ್ಯವೆಂದ್ರೆ ಮದುವೆಯ ಸುಂದರ ಕ್ಷಣವನ್ನು ಸಂಪೂರ್ಣವಾಗಿ ಆನಂದಿಸುವ ಹುಡುಗಿ ಸುಸಂಸ್ಕೃತಳಲ್ಲವೇ ಎಂಬುದು. ಮದುವೆಯಲ್ಲಿ ಎಲ್ಲ ಆಚರಣೆಗಳನ್ನು ಮೌನವಾಗಿ ಆಚರಿಸುವ ಹಾಗೂ ಅತ್ತೆ ಮನೆಯವರು - ಗಂಡ ಹೇಳಿದಂತೆ ನಡೆಯುವ ಹುಡುಗಿ ಸುಸಂಸ್ಕೃತಳಾ ಎಂದು. ಹಿಂದಿನ ಪದ್ಧತಿ ಏನೇ ಇರಲಿ, ಈಗ ಕಾಲ ಬದಲಾಗಿದೆ. ಹುಡುಗಿಯರು ಬದಲಾಗಿದ್ದಾರೆ. ಹುಡುಗಿಯರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಲು ಶುರು ಮಾಡಿದ್ದಾರೆ. ದಶಕಗಳ ಹಿಂದಿದ್ದ ಪದ್ಧತಿ ಈಗಿಲ್ಲ. ಮರ್ಯಾದೆ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಹುಡುಗಿಯರು ಪ್ರಶ್ನಿಸಲು ಶುರು ಮಾಡಿದ್ದಾರೆ. ಹಾಗಾಗಿ ಈಗಿನ ಮದುವೆಗಳಲ್ಲಿ ನಾವು ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.

ಮದುವೆ ದಿನ ನಾಚಿಕೆ ಏಕೆ ? : ಸಾಮಾಜಿಕ ಜಾಲತಾಣಗಳಲ್ಲಿ ನೀವು ಈಗ ಆಗಿರುವ ಬದಲಾವಣೆಗಳನ್ನು ನೋಡ್ಬಹುದು. ಹುಡುಗಿಯರು ಮದುವೆ ದಿನ ಅನೇಕ ಫೋಟೋಗಳಿಗೆ ಫೋಸ್ ನೀಡುವ ಜೊತೆಗೆ ಸ್ಟೇಜ್ ನಲ್ಲಿ ಅತ್ತೆ ಮನೆಯವರ ಮುಂದೆ ಡಾನ್ಸ್ ಮಾಡ್ತಾರೆ. ಈಗಿನ ಹುಡುಗಿಯರು ವಾಸ್ತವವನ್ನು ಅರಿತಿದ್ದಾರೆ. ಮದುವೆಯಲ್ಲಿ ನಾಚಿಕೊಳ್ಳುವ ಅವಶ್ಯಕತೆ ಏನಿದೆ ಎಂಬುದನ್ನು ಪ್ರಶ್ನೆ ಮಾಡ್ತಿದ್ದಾರೆ. ಹಿಂದೆ ಮದುವೆ ಅಂದ್ರೆ ಹುಡುಗಿಯರು ಅಳ್ತಿದ್ದರು. ಈಗಿನ ಹುಡುಗಿಯರು, ಜೀವನದಲ್ಲಿ ಒಮ್ಮೆ ಬರುವ ಈ ದಿನವನ್ನು ಎಂಜಾಯ್ ಮಾಡ್ಬೇಕೆಂದುಕೊಳ್ಳುವುದಲ್ಲದೆ ಎಲ್ಲ ಆಚರಣೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ತಾರೆ.

Wedding Preparation: ಮಾಡೋ ಕೆಲಸ ಬಿಟ್ಟು ಈ ವಿಷ್ಯಕ್ಕೆ ಜಗಳ ಆಡ್ಕೊಂಡು ಕೂತಿದೆ ಈ ಜೋಡಿ

ಸಂಪ್ರದಾಯ ಬದಲಿಸಿದ ಹುಡುಗಿಯರು: ಕೊರೊನಾ ನಂತ್ರ ಮದುವೆ ಶೈಲಿ ಕೂಡ ಬದಲಾಗಿದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಸಂಪ್ರದಾಯವನ್ನು ಹುಡುಗಿಯರು ಬದಲಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಪ್ರಯತ್ನ ನಡೆಸಿದ್ದಾರೆ. ಕೆಲವರು ಕುದುರೆ ಏರಿ ಮಂಟಪಕ್ಕೆ ಬಂದ್ರೆ ಮತ್ತೆ ಕೆಲವರು ಬೈಕ್ ಏರಿ ಬಂದಿದ್ದಾರೆ. ಹಿಂದೆ ಮದುವೆ ಅಂದ್ರೆ ಭಯದಲ್ಲಿರುತ್ತಿದ್ದ ಹುಡುಗಿಯರು ಈಗ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ.

ಹೆಣ್ಣು ಹುಟ್ಟುತ್ತಲೇ ತಾತ್ಸಾರ ಭಾವ ಶುರುವಾಗ್ತಿತ್ತು. ಆಕೆ ಪರರ ಮನೆಗೆ ಹೋಗುವವಳು ಎಂಬ ಕಾರಣಕ್ಕೆ ಸರಿಯಾಗಿ ವಿದ್ಯೆ ಕೂಡ ಕಲಿಸ್ತಿರಲಿಲ್ಲ. ಆದ್ರೆ ಈಗಿನ ಪಾಲಕರು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಿದ್ದಾರೆ. ಅವರಿಗೆ ವಿದ್ಯೆ ನೀಡಿ ಅವರನ್ನು ದೊಡ್ಡ ಹುದ್ದೆಗಳಲ್ಲಿ ನೋಡುವ ಕನಸು ಕಾಣ್ತಾರೆ. ಹಾಗೆಯೇ ಮದುವೆ ನಿಶ್ಚಿತವಾಗ್ತಿದ್ದಂತೆ ಆಕೆಯನ್ನು ಪರರ ಸ್ವತ್ತು ಎಂದು ನೋಡ್ತಿದ್ದ ಭಾವ ಈಗಿಲ್ಲ. ಮದುವೆ ನಂತ್ರ ಏನೂ ಬದಲಾಗುವುದಿಲ್ಲ ಎಂಬುದನ್ನು ತಿಳಿದಿರುವ ಹುಡುಗಿಯರು ತವರು ಮನೆಯಿಂದ ಹೋಗುವ ವೇಳೆ ಗೋಳೋ ಅಂತಾ ಅಳೋದಿಲ್ಲ.  

Follow Us:
Download App:
  • android
  • ios