Asianet Suvarna News Asianet Suvarna News

Breast Milk Jewellery: ತಾಯಿ, ಮಗುವಿನ ಬಾಂಧವ್ಯದ ಎದೆಹಾಲಿನ ಆಭರಣ

ತಾಯಿ (Mother)ಯಾಗುವ ಅದ್ಭುತ ಅನುಭವ, ಮಗುವಿನ ಜತೆಗಿನ ಬಾಂಧವ್ಯದ ನೆನಪನ್ನು ಪ್ರತಿಯೊಬ್ಬ ಹೆಣ್ಣು (Woman) ಜೋಪಾನವಾಗಿ ಎತ್ತಿಡಬೇಕೆಂದು ಬಯಸುತ್ತಾಳೆ. ಫೋಟೋ, ವೀಡಿಯೋ ತೆಗೆದಿಟ್ಟುಕೊಳ್ಳುವುದು ಇದ್ದೇ ಇದೆ. ಆದರೆ ಇದಲ್ಲದೆಯೂ ತಾಯಂದಿರು  ಈ ನೆನಪನ್ನುವಿಶೇಷವಾಗಿ ಎದೆಗೂಡಲ್ಲಿ ಬಚ್ಚಿಡಬಹುದು. ಅದು ಹೇಗೆ ಗೊತ್ತಾ ?

Breast Milk Jewellery For Nursing Mothers
Author
Bengaluru, First Published Feb 26, 2022, 8:16 PM IST

ತಾಯಿ (Mother)ಯಾಗುವುದು ಎಂದರೆ ಪ್ರತಿಯೊಬ್ಬ ಹೆಣ್ಣಿಗೂ ಜನ್ಮವೇ ಸಾರ್ಥಕ್ಯವೆನಿಸುವ ಭಾವ. ಪುಟ್ಟ ಕಂದಮ್ಮ ಪಿಳಿಪಿಳಿ ಕಣ್ಣು ಬಿಡುವುದು, ಎದೆ ಹಾಲು (Breast Milk) ಕುಡಿಯವುದು, ನಗುವುದು, ಅಂಬೆಗಾಲಿಟ್ಟು ನಡೆಯುವುದು ಎಲ್ಲವೂ ಚೆಂದ. ಈ ಎಲ್ಲಾ ನೆನಪುಗಳನ್ನು ಹೆಣ್ಣು ಜೋಪಾನವಾಗಿ ಇರಿಸಿಕೊಳ್ಳಬೇಕೆಂದು ಬಯಸುತ್ತಾಳೆ. 

ಸ್ತನ್ಯಪಾನವು ಪ್ರತಿಯೊಬ್ಬ ತಾಯಿಯ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ಪುಟ್ಟ ಮಗುವಿನ ಪಾಲಿಗೆ ಹೇಗೆ ಎದೆಹಾಲು ಅಮೃತ ಸಮಾನವಾಗಿರುತ್ತದೋ ಹಾಗೆಯೇ ತಾಯಿಯ ಪಾಲಿಗೆ ಹಾಲೂಡಿಸುವುದು ಅದ್ಭುತ ಅನುಭವವಾಗಿರುತ್ತದೆ. ಹೀಗಾಗಿ, ನಿಮ್ಮ ಮತ್ತು ಮಗುವಿನ ನಡುವಿನ ವಿಶೇಷ ಬಾಂಧವ್ಯದ ಸ್ಮರಣಿಕೆಯನ್ನು ಮಾಡಲು ನೀವು ಬಯಸಿದರೆ, ಎದೆ ಹಾಲಿನ ಆಭರಣ (Jewellery)ವನ್ನು ತಯಾರಿಸುವ ಬಗ್ಗೆ ಯೋಚಿಸಬಹುದು.

ಎದೆ ಹಾಲಿನ ಆಭರಣ ಎಂದರೇನು?
ಸ್ತನ ಹಾಲಿನ ಆಭರಣವು ಎದೆ ಹಾಲಿನಿಂದ ತುಂಬಿದ ಕಲ್ಲು ಹೊಂದಿರುವ ಆಭರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಅನೇಕ ಹೆಸರಾಂತ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳು ತಾಯಂದಿರಿಗಾಗಿ ಈ ಆಭರಣವನ್ನು ತಯಾರಿಸಿ ಕೊಡುತ್ತಿವೆ.

Sleep Better: ಹೊಸ ತಾಯಂದಿರೇ, ನಿದ್ರಾಹೀನತೆಯ ಸಮಸ್ಯೆಯೇ ? ಹೀಗೆ ಮಾಡಿ

ಮಹಿಳೆಯರು ಯಾಕೆ ಆಯ್ಕೆ ಎದೆಹಾಲಿನ ಆಭರಣ ಇಷ್ಟಪಡುತ್ತಾರೆ ?
ಸ್ವಭಾತಹಃ ಮಹಿಳೆಯರು ಭಾವನಾತ್ಮಕ ಜೀವಿಗಳು. ಅವರು ತಮ್ಮ ಜೀವನದಲ್ಲಿ ಸ್ಮರಣೀಯ ಅನುಭವವನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ. ಮಾತೃತ್ವವು ಹೆಣ್ಣಿನ ಜೀವನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿಯೇ ಮಹಿಳೆ (Woman)ಈ ನೆನಪುಗಳನ್ನು ಜೀವಮಾನ ಪೂರ್ತಿ ಜೋಪಾನವಾಗಿಡಲು ಬಯಸುತ್ತಾಳೆ.

ಆಭರಣಗಳನ್ನು ತಯಾರಿಸುವ ಎದೆಹಾಲನ್ನು ಹೇಗೆ ಸಂರಕ್ಷಿಸಲಾಗುತ್ತದೆ ?
ಎದೆಹಾಲಿನಿಂದ ಆಭರಣವನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಹಲವರಿಗೆ ಕುತೂಹಲ ಮೂಡಿಸುವ ವಿಚಾರ. ಎದೆಹಾಲಿನ ಆಭರಣ ತಯಾರಿಸುವುದು ಸುಲಭ ಪ್ರಕ್ರಿಯೆ ಏನಲ್ಲ. ಪ್ರತಿಯೊಬ್ಬ ಆಭರಣ ಕಲಾವಿದರು ಎದೆ ಹಾಲಿನಿಂದ ಆಭರಣಗಳನ್ನು ವಿನ್ಯಾಸಗೊಳಿಸಲು ತಮ್ಮದೇ ಆದ ತಂತ್ರಗಳನ್ನು ಅನುಸರಿಸುತ್ತಾರೆ, ಆದರೂ, ಹಾಲನ್ನು ಸಂರಕ್ಷಿಸುವ ಮೂಲ ವಿಧಾನವು ಹೆಚ್ಚು ಕಡಿಮೆ ಒಂದೇ ಆಗಿರಬಹುದು. ಇದನ್ನು ಸಾಮಾನ್ಯವಾಗಿ ಹೇಗೆ ಮಾಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಸ್ತನಗಳ ಉರಿಯೂತಕ್ಕೇನು ಕಾರಣ? ಲಕ್ಷಣಗಳ ಬಗ್ಗೆ ಗಮನವಿರಲಿ

ಮೊದಲಿಗೆ ಎದೆಹಾಲನ್ನು ಜಿಪ್ ಲಾಕ್ ಪೌಚ್ ಅಥವಾ ಕಂಟೈನರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಇದನ್ನು ಆಭರಣ ತಯಾರಿಸುವ ಕಲಾವಿದರಿಗೆ ರವಾನಿಸಲಾಗುತ್ತದೆ. ಬಳಿಕ ಹಾಲನ್ನು ನಂತರ ರಾಸಾಯನಿಕಗಳೊಂದಿಗೆ ಬೆರೆಸಲಾಗುತ್ತದೆ. ಅದು ಹಾಲನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಆಭರಣಗಳನ್ನು ತಯಾರಿಸಲು ಒಂದು ಔನ್ಸ್ ಎದೆಹಾಲು ಬೇಕಾಗುತ್ತದೆ.

ಎದೆ ಹಾಲಿನ ಆಭರಣವನ್ನು ಹೇಗೆ ತಯಾರಿಸಲಾಗುತ್ತದೆ ?
ಎದೆಹಾಲನ್ನು ಉಪಯೋಗಿಸಿ ನೆಕ್ಲೇಸ್ ಪೆಂಡೆಂಟ್, ಉಂಗುರ ಹೀಗೆ ಹಲವು ಆಭರಣಗಳನ್ನು ತಯಾರಿಸಲಾಗುತ್ತದೆ. ಹಾಲನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸುವ ಮೂಲಕ ಹಾಲು ಬಿಸಿ ಮತ್ತು ತಂಪಾಗಿಸುವ ತೀವ್ರ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರಿಂದ ಹಾಲನ್ನು ಅಗತ್ಯವಿರುವಂತೆ ಅಚ್ಚು ಮಾಡಲು ಮತ್ತು ಆಕಾರವನ್ನು ಪಡೆಯಲು ಸುಲಭವಾಗುತ್ತದೆ. ನಂತರ ಇದನ್ನು ಎದೆ ಹಾಲಿನ ನೆಕ್ಲೇಸ್, ಉಂಗುರ, ಕಿವಿಯೋಲೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು.

ಆಭರಣ ಹಾಳಾಗದಂತಿರಲು ಏನು ಮಾಡಬೇಕು ?
ಆಭರಣಗಳನ್ನು ನೇರ ಸೂರ್ಯನ ಬೆಳಕಿಗೆ ದೀರ್ಘಕಾಲದ ವರೆಗೆ ಒಡ್ಡಬೇಡಿ, ಏಕೆಂದರೆ ಇದು ಬಣ್ಣ ಬದಲಾಗಲು ಕಾರಣವಾಗಬಹುದು.  ಅತಿಯಾದ ಬೆವರುವಿಕೆಯು ಕಲ್ಲಿನ ಹೊಳಪನ್ನು ಹಾಳುಮಾಡುತ್ತದೆ. ಆಭರಣಗಳನ್ನು ಯಾವುದೇ ರೀತಿಯ ಹೊಗೆಗೆ ಒಡ್ಡಿಕೊಳ್ಳುವುದರಿಂದ ದೂರವಿಡಿ. ಏಕೆಂದರೆ ದೀರ್ಘಕಾಲ ಹೊಗೆಗೆ ಒಡ್ಡಿಕೊಳ್ಳುವುದರಿಂದ ಕಲ್ಲಿನ ಬಣ್ಣವು ಬದಲಾಗಬಹುದು. ಆಭರಣಗಳನ್ನು ಸುಗಂಧ ದ್ರವ್ಯಗಳು, ಎಣ್ಣೆಗಳು, ಕ್ರೀಮ್‌ಗಳು, ಹೇರ್ ಸ್ಪ್ರೇಗಳು ಅಥವಾ ಇತರ ರೀತಿಯ ರಾಸಾಯನಿಕ ವಸ್ತುಗಳಿಂದ ದೂರವಿಡಿ. ಆಭರಣವನ್ನು ಸ್ವಚ್ಛಗೊಳಿಸಲು ತುಂಬಾ ಮೃದುವಾದ ಬಟ್ಟೆಯನ್ನು ಬಳಸಿ. 

Latest Videos
Follow Us:
Download App:
  • android
  • ios