Asianet Suvarna News Asianet Suvarna News

ಸ್ತನಗಳ ಉರಿಯೂತಕ್ಕೇನು ಕಾರಣ? ಲಕ್ಷಣಗಳ ಬಗ್ಗೆ ಗಮನವಿರಲಿ

ಹೆರಿಗೆಯಾದ ಕೆಲವು ದಿನಗಳ ಕಾಲ ಬಾಣಂತಿಯರು ಮಗುವಿನ ಕುರಿತು ಕಾಳಜಿ ತೆಗೆದುಕೊಳ್ಳುವ ಜತೆಗೆ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಸ್ತನಗಳ ನಾಳಗಳಲ್ಲಿ ಹಾಲು ಹೆಚ್ಚು ಶೇಖರಣೆಯಾಗದಂತೆ ಪದೇ ಪದೆ ಮಗುವಿಗೆ ಹಾಲೂಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ತನಗಳ ಉರಿಯೂತದ ಸೋಂಕು ಉಂಟಾಗಬಹುದು. 
 

Know early symtoms of Mastitis in new mothers
Author
Bangalore, First Published Feb 25, 2022, 7:01 PM IST

ಪ್ರತಿ ಮಹಿಳೆಯ (Women) ಜೀವನದಲ್ಲಿ ಹೆರಿಗೆ (Delivery) ಎನ್ನುವುದು ಪ್ರಮುಖ ಹಂತ. ಮೊದಲು ಆರೋಗ್ಯ ಸೇವೆ ಇಲ್ಲದಿದ್ದ ಕಾಲದಲ್ಲೂ ಅಷ್ಟೆ, ಇಂದಿಗೂ ಅಷ್ಟೆ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಏನೋ ಒಂದು ಸಣ್ಣ ಅವಜ್ಞೆಯಿಂದ ಭಾರೀ ಅನಾಹುತವೇ ಆಗಿಬಿಡುತ್ತದೆ. ಮೊದಲ ಹೆರಿಗೆಯಂತೂ ಇನ್ನಷ್ಟು ಆತಂಕಕ್ಕೆ ಕಾರಣವಾಗುತ್ತದೆ. 
ಸಾಕಷ್ಟು ಹೊಸ ಅಮ್ಮಂದಿರು ಮಗುವಿನ ಆರೈಕೆ (Care) ಮಾಡುತ್ತ ತಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ. ಹೀಗಾಗಿ, ಹೆರಿಗೆಯಾದ ಬಳಿಕ ಕೆಲವು ದಿನಗಳಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯೆಂದರೆ, ಕೆಚ್ಚಲಿನ ಉರಿಯೂತ (Mastitis). ಇದರ ಕುರಿತು ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಬಹಳಷ್ಟು ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುತ್ತಾರೆಯೇ ಹೊರತು ವೈದ್ಯರನ್ನು ಕಾಣುವುದಿಲ್ಲ. ಬಾಣಂತಿಯರು ತಮ್ಮ ದೇಹದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದರೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು.  
ಬಾಲಿವುಡ್ ತಾರೆ ನೇಹಾ ಧೂಪಿಯಾ (Neha Dhupia) ಅವರಿಂದ ಶುರುವಾದ “ಫ್ರೀಡಂ ಟು ಫೀಡ್ (Freedom to Feed)’ ಕಡೆಯಿಂದ ಒಂದು ತುರ್ತು ಸಂದೇಶ ನೀಡಲಾಗಿದೆ. ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೆಚ್ಚಲಿನ ಉರಿಯೂತದ ಬಗ್ಗೆ ಮಾಹಿತಿ ನೀಡಲಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಪ್ರಯತ್ನ.

ಉರಿಯೂತವೆಂಬ ಸೋಂಕು (Infection)
ಸ್ತನಗಳ ಉರಿಯೂತ ಒಂದು ಸಾಮಾನ್ಯ ಸೋಂಕು. ಸ್ತನಗಳ ಕೋಶಗಳಿಗೆ ತಗುಲುವ ಸೋಂಕಿನಿಂದ ಬಾವು, ನೋವು ಉಂಟಾಗುತ್ತದೆ, ಸ್ತನಗಳು ಕೆಂಪಗಾಗುತ್ತವೆ. ಕೆಲವರಿಗೆ ಜ್ವರ ಹಾಗೂ ಜ್ವರದ ಲಕ್ಷಣಗಳು ಸಹ ಕಂಡುಬರಬಹುದು. ಇಂತಹ ಲಕ್ಷಣಗಳು ಯಾರಿಗಾದರೂ ಕಂಡುಬಂದರೆ, ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. 

ಸಾಮಾನ್ಯ ಲಕ್ಷಣಗಳು (Common Symtoms)
ಉರಿಯೂತವನ್ನು ಆರಂಭದಲ್ಲೇ ಗುರುತಿಸಲು ಸಾಧ್ಯ. ಬೇಗ ಗುರುತಿಸಿದರೆ ಹೆಚ್ಚು ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು. ಮುಖ್ಯವಾಗಿ, ಆರು ಲಕ್ಷಣಗಳನ್ನು ಗುರುತಿಸಬಹುದು. ಇವುಗಳಲ್ಲಿ ಯಾವುದೇ ತೊಂದರೆ ಕಂಡುಬಂದರೂ ಎಚ್ಚರಿಕೆ ತೆಗೆದುಕೊಳ್ಳಬೇಕು.
•    ಸ್ತನಗಳನ್ನು ಸ್ಪರ್ಶಿಸಿದಾಗ ಬಿಸಿ(Warm) ಆಗಿರುವಂತೆ ಕಂಡುಬರಬಹುದು.
•    ಸ್ತನಗಳ ಚರ್ಮ (Skin) ಕೆಂಪಗಾಗುತ್ತದೆ. ಅಲ್ಲದೆ, ಕೋಲಿನಂತಹ ಆಕಾರ ಬರಬಹುದು.
•    ಸ್ತನಗಳಲ್ಲಿ ಬಾವು (Swell) ಉಂಟಾಗುತ್ತದೆ.
•    ಮೈಯಲ್ಲಿ ಹಿತವಿರುವುದಿಲ್ಲ. ಜ್ವರ (Fever) ಕೂಡ ಬರಬಹುದು.
•    ಸ್ತನಗಳ ಅಂಗಾಂಶಗಳು (Tissue) ದಪ್ಪಗಾಗುವುದು, ಗಟ್ಟಿಯಾಗುವುದು.
•    ಹಾಲುಣಿಸುವಾಗ ನೋವು (Pain) ಹಾಗೂ ಉರಿ (Burn).

ಯಾಕಾಗಿ ಉರಿಯೂತ?
ಉರಿಯೂತ ಅನೇಕ ಕಾರಣಗಳಿಂದ ಸಂಭವಿಸಬಹುದು. ಹಾಲಿನ ನಾಳಗಳು ಕಟ್ಟಿಕೊಂಡಾಗಲೂ ಈ ಸಮಸ್ಯೆ ಕಂಡುಬರುತ್ತದೆ. ಹಾಲುಣಿಸಿದಾಗ ನಾಳಗಳಲ್ಲಿ ಹಾಲು ಪೂರ್ತಿ ಖಾಲಿಯಾಗದೆ ಇದ್ದಾಗ ಹಾಲಿನ ನಾಳದಲ್ಲಿ ಹಾಲು ಸರಾಗವಾಗಿ ಹರಿಯಲು ಸಾಧ್ಯವಾಗುವುದಿಲ್ಲ. ಆಗ ಹಾಲು ಬ್ಲಾಕ್ ಆಗಬಹುದು. ಹಾಲು ಹಿಮ್ಮುಖವಾಗಿ ತಳ್ಳಲ್ಪಡಬಹುದು. ಆಗ ಸ್ತನಗಳಲ್ಲಿ ಸೋಂಕಾಗುತ್ತದೆ. 
ಸ್ತನಗಳಿಗೆ ಬ್ಯಾಕ್ಟೀರಿಯಾ (Bacteria) ಪ್ರವೇಶವಾಗುವ ಸಾಧ್ಯತೆ ಇರುತ್ತದೆ. ಸ್ತನಗಳ ಮೇಲ್ಮೈ ಮೇಲಿರುವ ಅಥವಾ ಮಗುವಿನ ಬಾಯಲ್ಲಿ ಉತ್ಪತ್ತಿಯಾದ ಬ್ಯಾಕ್ಟೀರಿಯಾ ಸ್ತನಗಳ ನಿಪಲ್ ಮೂಲಕ ನಾಳಗಳನ್ನು ಪ್ರವೇಶಿಸಬಹುದು. ಹಾಲು ಶೇಖರಣೆಯಾದ ಸ್ಥಳದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ವೇಗವಾಗಿ ಆಗುತ್ತದೆ. ಆಗ ಸೋಂಕು ಉಂಟಾಗುತ್ತದೆ. 
ಸ್ತನಗಳ ತೊಟ್ಟಿ(Nipple)ನಲ್ಲಿ ಗಾಯವಾಗಿದ್ದರೆ, ಒಡೆದಿದ್ದರೆ ಬೇಗ ಉರಿಯೂತ ಉಂಟಾಗುತ್ತದೆ. ಇವು ಯಾವುದೂ ಇಲ್ಲದೆಯೂ ಸೋಂಕಾಗಬಹುದು. ಹಾಲುಣಿಸುವ ದಿನಗಳಲ್ಲಿ ಬಿಗಿಯಾದ ಬ್ರಾ ಧರಿಸುವುದು, ಸ್ತನಗಳ ಮೇಲೆ ಸೀಟ್ ಬೆಲ್ಟ್ ನಂತಹ ಒತ್ತಡ ಹಾಕುವುದು, ಭಾರದ ಬ್ಯಾಗ್ ಹೊರುವುದರಿಂದಲೂ ಹಾಲಿನ ನಾಳಗಳಲ್ಲಿ ಹರಿಯುವಿಕೆಗೆ ತಡೆಯಾಗಬಹುದು. ಅಪೌಷ್ಟಿಕತೆ (Poor Nutrition) ಕೂಡ ಉರಿಯೂತಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು, ಧೂಮಪಾನಿ (Smoking) ಮಹಿಳೆಯರಲ್ಲೂ ಇದು ಸಾಮಾನ್ಯ. ಅತಿಯಾಗಿ ಸುಸ್ತಾದ ಬಾಣಂತಿಯರಲ್ಲೂ ಉರಿಯೂತ ಕಂಡುಬರುತ್ತದೆ.

Follow Us:
Download App:
  • android
  • ios