Bra Hacks: ಹಳೆಯ ಬ್ರಾ ಎಸಿಬೇಕಿಲ್ಲ,ಈ ರೀತಿ ಮರುಬಳಕೆ ಮಾಡಿ

ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಬೇಕಾಬಿಟ್ಟಿ ಬ್ರಾ ಇರುತ್ತದೆ. ಆದರೆ ಬ್ರಾ ಹಳೆತಾದರೆ ಅದನ್ನು ಎಸೆಯುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಕಾಣಿಸುವುದಿಲ್ಲ. ಆದರೆ ಹಳೆಯ ಬ್ರಾವನ್ನು ಮರುಬಳಕೆ ಮಾಡಬಹುದಾದ ಕೆಲವು ವಿಧಾನಗಳನ್ನು ನಾವಿಲ್ಲಿ ಹೇಳುತ್ತೇವೆ.

Bra Hacks, How to Recyle your old bra, Simple hacks Vin

ಹೆಣ್ಮಕ್ಕಳ ಅಗತ್ಯಗಳಲ್ಲಿ ಬ್ರಾ ಕೂಡ ಒಂದು. ಹೆಣ್ಮಕ್ಕಳು ಹದಿಹರೆಯಕ್ಕೆ ಬರ್ತಿದ್ದಂತೆ ಬ್ರಾ ಧರಿಸಲು ಶುರು ಮಾಡ್ತಾರೆ. ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿಯ ಬ್ರಾ ಲಭ್ಯವಿದೆ. ಬಡವ, ಶ್ರೀಮಂತ ಎನ್ನದೆ ಎಲ್ಲ ಹುಡುಗಿಯರೂ ತಮ್ಮ ಬಜೆಟ್‌ಗೆ ಅನುಗುಣವಾಗಿ ಬ್ರಾ ಖರೀದಿಸುತ್ತಾರೆ. ಕಡಿಮೆ ಬೆಲೆಗೂ ಬ್ರಾ ಲಭ್ಯವಿದೆ. ಹಾಗೆ ದುಬಾರಿ ಬೆಲೆಯ, ಬೇರೆ ಬೇರೆ ಡಿಸೈನ್ ನ ಬ್ರಾ ಮಾರುಕಟ್ಟೆಯಲ್ಲಿದೆ. ಸ್ತನ ದೊಡ್ಡದಾಗಿದ್ರೆ ಹುಡುಗಿಯರು ಮುಜುಗರಪಟ್ಟುಕೊಳ್ತಾರೆ. ಸ್ತನ ಚಿಕ್ಕದಾಗಿದ್ರೆ ಅದು ಕೂಡ ಅವರ ಕೀಳರಿಮೆಗೆ ಕಾರಣವಾಗುತ್ತದೆ. ನಿಪ್ಪಲ್ ಕಾಣಬಾರದು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾ ಲಭ್ಯವಿದೆ. ಪ್ಯಾಡೆಡ್ ಬ್ರಾ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತದೆ. 

ಆಯಾ ಡ್ರೆಸ್‌ಗೆ ಅನುಗುಣವಾಗಿ ವಿಭಿನ್ನ ರೀತಿಯ ಬ್ರಾಗಳನ್ನು ಹಾಕಲಾಗುತ್ತದೆ. ಕಡಿಮೆ ಗುಣಮಟ್ಟದ ಬ್ರಾ ಆದರೆ ಕಡಿಮೆ ಸಮಯ ಬಾಳ್ವಿಕೆ ಬರುತ್ತದೆ. ಆದರೆ ಬ್ರಾಡೆಂಡ್ ಬ್ರಾಗಳು ಸುದೀರ್ಘ ಸಮಯ ಹಾಗೆಯೇ ಇರುತ್ತದೆ. ಆದರೆ, ಬಟ್ಟೆ ಯಾವುದೇ ಆಗಿರಲಿ, ಅದರ ಅವಧಿ ಮುಗಿದ ನಂತರ, ಅದು ಹಾಳಾಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಬ್ರಾವನ್ನು ಎಸೆಯಬೇಕಾಗುತ್ತದೆ. ಇತರ ಬಟ್ಟೆಗಳಾದರೆ ಕಟ್ ಮಾಡಿ ಮ್ಯಾಟ್ ಮಾಡುವುದ, ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಆದರೆ ಬ್ರಾದಿಂದ ಏನನ್ನೂ ಮಾಡಲು ಸಾಧ್ಯವಾಗಲ್ಲ ಅನ್ನುತ್ತಾರೆ ಹಲವರು. ಹೀಗಾಗಿ ಬ್ರಾ ಹಳೆತಾದರೆ ಅದನ್ನು ಎಸೆಯುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಕಾಣಿಸುವುದಿಲ್ಲ. ಹಲವರು ಈ ರೀತಿಯ ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ ಬ್ರಾ ಮರುಬಳಕೆ (Reuse) ಮಾಡುವ ವಿಧಾನ ಇಲ್ಲಿದೆ.

ತುಂಬಾ ಬಿಗಿಯಾದ ಬ್ರಾ ಧರಿಸಿದ್ರೆ ಗಂಭೀರ ಅನಾರೋಗ್ಯ ಕಾಡುತ್ತೆ!

ನಾವಿಲ್ಲಿ ಹಳೆಯ ಬ್ರಾವನ್ನು ಮರುಬಳಕೆ ಮಾಡಬಹುದಾದ ಅಂತಹ ಕೆಲವು ವಿಧಾನಗಳನ್ನು ಹೇಳುತ್ತೇವೆ. ಅದರ ಮೂಲಕ ನಿಮ್ಮ ಹಳೆಯ ಬ್ರಾವನ್ನು ಎಸೆಯುವ ಬದಲು ಅದನ್ನು ಮತ್ತೆ ಹೊಸ ರೂಪದಲ್ಲಿ ಬಳಸಲು ನಿಮಗೆ ಸಾಧ್ಯವಾಗುತ್ತದೆ.

ಹಳೆಯ ಬ್ರಾ ಮರುಬಳಕೆ ಮಾಡುವುದು ಹೇಗೆ?

ಹಳೆಯ ಬ್ರಾ ಟಾಪ್
ಬ್ರಾ ಹಳೆಯದಾಗಿದ್ದರೆ, ಅದರಿಂದ ಮೇಲ್ಭಾಗವನ್ನು ಮರುಸೃಷ್ಟಿಸಬಹುದು. ಇತ್ತೀಚಿನ ದಿನಗಳಲ್ಲಿ ಫ್ರಿಂಜ್ಡ್ ಟಾಪ್‌ಗಳು ಹೆಚ್ಚು ಟ್ರೆಂಡ್ ಆಗಿವೆ. ನೀವು ಬ್ರಾ ಮುಂಭಾಗಕ್ಕೆ 2 ರಿಂದ 3 ಪದರಗಳ ಲೇಸ್‌ನ್ನು ಅನ್ನು ಸೇರಿಸಿದರೆ ನಿಮ್ಮ ಫ್ರಿಂಜ್ ಟಾಪ್ ಸಿದ್ಧವಾಗುತ್ತದೆ. ಈ ರೀತಿಯ ಟಾಪ್ ಜೊತೆಗೆ ನೀವು ಕ್ರಾಪ್ ಜಾಕೆಟ್ ಅಥವಾ ಶರ್ಟ್ ಇತ್ಯಾದಿಗಳನ್ನು ಧರಿಸಬಹುದು.

ಡಿಸೈನರ್ ಬ್ರಾ
ನಿಮ್ಮ ಬಳಿಯಿರುವ ಬ್ರಾ ಹಳೆಯದಾಗಿದ್ದರೆ, ಧರಿಸಲು ಯೋಗ್ಯವಾಗಿಲ್ಲದಿದ್ದರೆ, ನೀವು ಅದನ್ನು ಲೇಸ್, ರಿಬ್ಬನ್, ಕೃತಕ ಹೂವುಗಳಿಂದ ಅಲಂಕರಿಸಬಹುದು. ಬ್ರಾಗೆ ಹೊಸ ಶೈಲಿಯನ್ನು (New style) ನೀಡಬಹುದು. ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಲುಕ್‌ಗಾಗಿ ಬ್ರಾಲೆಟ್ ಟಾಪ್‌ಗಳ ಟ್ರೆಂಡ್ ಕಂಡುಬರುತ್ತಿದೆ . ಬ್ರಾವನ್ನು ಈ ರೀತಿ ಡೆಕೊರೇಟ್ ಮಾಡಿದರೆ, ನೀವು ಅದನ್ನು ಸೀರೆಯೊಂದಿಗೆ ಬ್ಲೌಸ್‌ನಂತೆ ಅಥವಾ ಬೇರೆ ಜೀನ್ಸ್‌ನೊಂದಿಗೆ ಟಾಪ್‌ನಂತೆ ಧರಿಸಬಹುದು.

ಫಸ್ಟ್ ಟೈಮ್ ಬ್ರಾ ಧರಿಸಿದಾಗ ವಿರೋಧಿಸಿದ್ರಂತೆ ಜನ, ಏನಿದರ ಇತಿಹಾಸ?

ಬ್ರಾಲೆಟ್ ಬ್ಲೌಸ್
ಬ್ರಾಲೆಟ್ ಬ್ಲೌಸ್‌ನ ಫ್ಯಾಷನ್ ಈಗ ಟ್ರೆಂಡೀಯಾಗಿದೆ. ಸೀರೆ (Saree)ಯೊಂದಿಗೆ ಮಾತ್ರವಲ್ಲದೆ ನೀವು ಮಾಡರ್ನ್‌ ಬಟ್ಟೆಗಳೊಂದಿಗೆ ಬ್ರಾಲೆಟ್ ಬ್ಲೌಸ್ ಧರಿಸಬಹುದು. ನಿಮ್ಮ ಡಿಸೈನರ್ ಬ್ರಾ ಹಳೆಯದಾಗಿದ್ದರೆ ಅದರಿಂದ ನೀವು ಸೊಗಸಾದ ಬ್ರಾಲೆಟ್ ಬ್ಲೌಸ್ ಅನ್ನು ಸಿದ್ಧಪಡಿಸಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿಯೇ ಸಾಕಷ್ಟು ಅಲಂಕಾರ ಸಾಧನಗಳು ಸಿಗುತ್ತವೆ. 

Woman Health: ಬ್ರಾ ಹಾಕೋದ್ರಿಂದ ಬೆನ್ನು ನೋವು ಬರುತ್ತಾ ?

Latest Videos
Follow Us:
Download App:
  • android
  • ios