ಫಸ್ಟ್ ಟೈಮ್ ಬ್ರಾ ಧರಿಸಿದಾಗ ವಿರೋಧಿಸಿದ್ರಂತೆ ಜನ, ಏನಿದರ ಇತಿಹಾಸ?
ಮಹಿಳೆಯರಿಗೆ ಅತ್ಯಂತ ಪ್ರಮುಖ ಡ್ರೆಸ್ ಗಳಲ್ಲಿ ಬ್ರಾ ಕೂಡ ಒಂದು. ಇದನ್ನು ಧರಿಸುವುದು ಮಹಿಳೆಯರಿಗೆ ಬಹಳ ಮುಖ್ಯ. ಯಾಕೆಂದರೆ ಸ್ಟೈಲಿಶ್ ಜೊತೆ, ಎಲ್ಲಾ ಡ್ರೆಸ್ ಗಳಲ್ಲಿ ಫಿಟ್ ಆಗಿ ಕಾಣಲು ಬ್ರಾ ಧರಿಸೋದು ತುಂಬಾನೆ ಮುಖ್ಯ. ಅಷ್ಟೇ ಅಲ್ಲ ಇದು ಸ್ತನಗಳ ಆರೋಗ್ಯಕ್ಕೆ ಸಹ ತುಂಬಾನೆ ಮುಖ್ಯ. ಆದರೆ ಯಾವಾಗ ಅದನ್ನು ಧರಿಸಲು ಪ್ರಾರಂಭಿಸಿದ್ದು ಅನ್ನೋದು ನಿಮಗೆ ಗೊತ್ತೇ? ಇಲ್ಲಿದೆ ನೋಡಿ, ಬ್ರಾ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಗಳು.
ಪ್ರಾಚೀನ ಕಾಲದಿಂದ ನೋಡೋದಾದ್ರೆ, ಅಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ. ಆದರೆ ಜಗತ್ತು ಸಾಮಾಜೀಕರಣಗೊಂಡಂತೆ, ಮೊದಲು ಮಹಿಳೆಯರು ಮತ್ತು ನಂತರ ಪುರುಷರು (Men) ಅಂಗವಸ್ತ್ರಗಳನ್ನು ಧರಿಸಲು ಪ್ರಾರಂಭಿಸಿದರು. ಮಹಿಳೆಯರ (Women) ಅತ್ಯಂತ ಪ್ರಮುಖ ಅಂಗಾಂಗಗಳ ಉಡುಪುಗಳ ಬಗ್ಗೆ ಹೇಳುವುದಾದರೆ, ಅವರ ಖಾಸಗಿ ಭಾಗಗಳನ್ನು ಮುಚ್ಚುವಂತಹ ಒಳಉಡುಪುಗಳು (inner Wear), ಇವೆಲ್ಲಾ ನಿಧಾನವಾಗಿ ಪ್ರಾರಂಭವಾದವು. ಆದರೆ ಜನರು ಇನ್ನೂ ಅದರ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ.
ಯಾರದ್ದೋ ಬ್ರಾದ ಪಟ್ಟಿ ಕಂಡುಬಂದರೆ, ಜನರು ಹೆಚ್ಚು ಅನ್ ಕಂಫರ್ಟೇಬಲ್ ಫೀಲ್ ಆಗ್ತಾರೆ. ಅಷ್ಟೇ ಅಲ್ಲ, ಇದನ್ನು ಟವೆಲ್ ಅಥವಾ ಇತರ ಬಟ್ಟೆಗಳ ಒಳಗೆ ಇರಿಸುವ ಮೂಲಕ ಒಣಗಿಸಲಾಗುತ್ತದೆ. ಆದರೆ ಈ ಒಳಉಡುಪುಗಳನ್ನು ಮಹಿಳೆಯರು ಯಾವಾಗ ಧರಿಸಲು ಆರಂಭಿಸಿದರು? ಇದರ ಇತಿಹಾಸ ಏನು ಅನ್ನೋದನ್ನು ನಾವಿಂದು ತಿಳಿಸುತ್ತೇವೆ ಕೇಳಿ….
ಬ್ರಾ ಧರಿಸುವುದು ಏಕೆ ಮುಖ್ಯ ?
ಬ್ರಾ ಧರಿಸುವುದು ಸರಿಯೇ ಅಥವಾ ತಪ್ಪೇ ಎಂಬ ಆಲೋಚನೆ ಮನಸ್ಸಿನಲ್ಲಿ ಬರುತ್ತದೆ. ಹಲವಾರು ವರ್ಷಗಳಿಂದ ಇದರ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಇದಕ್ಕೆ ನಿಖರವಾದ ಉತ್ತರವಿಲ್ಲ. ಆದರೆ ಬ್ರಾ ಧರಿಸುವುದರಿಂದ ಮಹಿಳೆಯರ ಸ್ತನಗಳು ಫಿಟ್ ಆಗಿ ಕಾಣುತ್ತವೆ. ಜೊತೆಗೆ ಸ್ತನಗಳಿಗೆ ಬೆಂಬಲ (Support to Breast) ಸಿಗುತ್ತದೆ. ಇದಲ್ಲದೆ, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಬ್ರಾಗಳು ಸಹ ಸಹಾಯ ಮಾಡುತ್ತವೆ. ಆದ್ದರಿಂದ ಮಹಿಳೆಯರು ಹಗಲಿನಲ್ಲಿ ಬ್ರಾಗಳನ್ನು ಧರಿಸಬೇಕು. ಆದರೆ, ರಾತ್ರಿ ಮಲಗುವಾಗ ವಿಶ್ರಾಂತಿ ಪಡೆಯಲು ಬ್ರಾವನ್ನು ತೆಗೆಯಬೇಕು.
ಬ್ರಾಗಳ ಇತಿಹಾಸ ಹೀಗಿದೆ (history of bra)
ಬ್ರಾವನ್ನು ಮೊದಲು ಯಾರು ಧರಿಸುತ್ತಿದ್ದರು ಮತ್ತು ಅದು ಯಾವಾಗ ಪ್ರಾರಂಭವಾಯಿತು ಎಂಬ ಪ್ರಶ್ನೆಯೂ ನಿಮ್ಮ ಮನಸ್ಸಿನಲ್ಲಿ ಬಂದಿದೆಯೇ? ಬ್ರಾಗಳ ಇತಿಹಾಸ ಸುಮಾರು 500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅದರ ಹೆಸರು ಮತ್ತು ವಿನ್ಯಾಸದಲ್ಲಿ ಅನೇಕ ಬದಲಾವಣೆಗಳು ಇದ್ದವು.
ಇಂದು, ಮಹಿಳೆಯರು ಪ್ಯಾಡೆಡ್, ಕಪ್ಸ್ ಅಥವಾ ವೈರ್ ಹೊಂದಿರುವ ಬ್ರಾಗಳನ್ನು ಧರಿಸುತ್ತಾರೆ ಅಲ್ವಾ? ಆದರೆ, ಪ್ರಾಚೀನ ಕಾಲದಲ್ಲಿ ಈಜಿಪ್ಟಿನ ಮಹಿಳೆಯರು ಚರ್ಮದ ಬ್ರಾಗಳನ್ನು ಧರಿಸುತ್ತಿದ್ದರು. ಅದೇ ಸಮಯದಲ್ಲಿ, ಗ್ರೀಕ್ ಮಹಿಳೆಯರು (Greek Women) ಇದನ್ನು ಸಾಮಾನ್ಯ ಬ್ರಾ ಬ್ಯಾಂಡ್ ನಂತೆ ಧರಿಸುತ್ತಿದ್ದರು.
ಭಾರತದ ಇತಿಹಾಸವು ಅಷ್ಟು ಹಳೆಯದಲ್ಲ. ಏಕೆಂದರೆ ಮಹಿಳೆಯರು ಇಲ್ಲಿ ಬ್ರಾಗಳ ಬದಲಿಗೆ ರವಿಕೆಗಳನ್ನು ಧರಿಸುತ್ತಿದ್ದರು. ಸ್ತನಗಳನ್ನು ಒಂದು ರೀತಿಯಲ್ಲಿ ಮುಚ್ಚಲು ಇದನ್ನು ಧರಿಸಲಾಗುತ್ತಿತ್ತು. ಇದು 6ನೇ ಶತಮಾನದಲ್ಲಿ ಹರ್ಷವರ್ಧನ ಕಾಲದಲ್ಲಿ ಚೋಲಿಯಾಗಿ ಪ್ರಾರಂಭವಾಯಿತು. ನಂತರದ ಸಮಯದಲ್ಲಿ ಮಹಿಳೆಯರು ಹೆಚ್ಚಾಗಿ ಬ್ಲೌಸ್ ಧರಿಸಲು ಪ್ರಾರಂಭಿಸಿದರು.
ಕಾರ್ಸೆಟ್ ಟ್ರೆಂಡ್ (corset bra)
ಇದರ ನಂತರ, ಲೋಹದಿಂದ ತಯಾರಿಸಿದ ಕಾರ್ಸೆಟ್ ಗಳನ್ನು 12 ನೇ ಶತಮಾನದಿಂದ 19ನೇ ಶತಮಾನದವರೆಗೆ ಯುರೋಪಿನಲ್ಲಿ ಬಳಸಲಾಯಿತು. ಲೋಹದಿಂದ ಮಾಡಿದ ಈ ಬ್ರಾ ತುಂಬಾ ಅನ್ ಕಂಫರ್ಟೇಬಲ್ ಆಗಿರುತ್ತಿತ್ತು, ಆದ್ದರಿಂದ 1890 ರ ದಶಕದಲ್ಲಿ ಅನೇಕ ದೇಶಗಳು ಮಹಿಳೆಯರಿಗಾಗಿ ಬಟ್ಟೆಯಿಂದ ಮಾಡಿದ ಕಾರ್ಸೆಟ್ ಬ್ರಾಗಳನ್ನು ತಯಾರಿಸಲು ಪ್ರಾರಂಭಿಸಿದವು. ಇದು ಜಾಕೆಟ್ ಇದ್ದಂತೆ. ಆದಾಗ್ಯೂ, ಕಾರ್ಸೆಟ್ ಹೆಚ್ಚು ಯಶಸ್ವಿಯಾಗಲಿಲ್ಲ, ಏಕೆಂದರೆ ಇದು ಮಹಿಳೆಯರಿಗೆ ಆತಂಕ, ಹೊಟ್ಟೆ ನೋವು (Stomach Pain) ಮತ್ತು ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು (Breathing Problem) ಉಂಟುಮಾಡಿತು, ಆದ್ದರಿಂದ ಇದನ್ನು 1900 ನಿಲ್ಲಿಸಲಾಯಿತು.
ಆಧುನಿಕ ಬ್ರಾಗಳು ಪ್ರಾರಂಭವಾದದ್ದು ಹೇಗೆ?
ಮೊದಲ ಆಧುನಿಕ ಬ್ರಾವನ್ನು (modern bra) ಫ್ರಾನ್ಸ್ ನಲ್ಲಿ ತಯಾರಿಸಲಾಯಿತು. ಇದನ್ನು ಬ್ರಾಸಿಯರ್ ಎಂದು ಕರೆಯಲಾಗುತ್ತಿತ್ತು. ಫ್ರೆಂಚ್ ಭಾಷೆಯ ಪ್ರಕಾರ ಇದು ದೇಹದ ಮೇಲ್ಭಾಗವನ್ನು ಅರ್ಥೈಸುತ್ತದೆ. ಮೇ 30, 1869 ರಂದು, ಫ್ರಾನ್ಸ್ ನ ಹರ್ಮಿನ್ ಕ್ಯಾಡಾಲ್ ಕಾರ್ಸೆಟ್ ಅನ್ನು ಎರಡು ತುಂಡುಗಳಾಗಿ ಕತ್ತರಿಸಿ ಒಳಉಡುಪನ್ನು ಮಾಡಿದರು. ಅದಕ್ಕೆ ಕಾರ್ಸೆಟ್ ಜಾರ್ಜ್ ಎಂದು ಹೆಸರಿಡಲಾಯಿತು. ನಂತರ ಅದರ ಮೇಲ್ಭಾಗವನ್ನು ಬ್ರಾದಂತೆ ಧರಿಸಲಾಯಿತು ಮತ್ತು ಮಾರಾಟ ಮಾಡಲಾಯಿತು.
ಬ್ರಾ ಧರಿಸಿದ ಬಾಲಿವುಡ್-ಹಾಲಿವುಡ್ ನಟಿ
1915 ಮತ್ತು 20 ರ ನಡುವೆ, ಸೆಮಿ-ಕಪ್ ಮತ್ತು ಕಪ್ ಬ್ರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು, ಇದು ಸ್ತನಗಳನ್ನು ಬೆಂಬಲಿಸುವುದು (support breast) ಮಾತ್ರವಲ್ಲದೆ ಅವುಗಳನ್ನು ಆಕಾರ ಮತ್ತು ಆಕರ್ಷಕವಾಗಿ ತೋರಿಸಿತು.
1940 ರ ದಶಕದಲ್ಲಿ, ಭಾರತೀಯ ಮಾರುಕಟ್ಟೆಗೆ ಅನೇಕ ರೀತಿಯ ಬ್ರಾಗಳು ಬಂದವು. ಬಾಲಿವುಡ್ ನಟಿಯರು ಇದನ್ನು ಬಳಸಿದರು, ಅದಕ್ಕೆ ಬುಲೆಟ್ ಬ್ರಾ ಎಂದು ಹೆಸರಿಸಲಾಯಿತು. ಈ ಬ್ರಾ ಎರಡೂ ಸ್ತನಗಳನ್ನು ಪರಸ್ಪರ ದೂರವಿರಿಸಿತು. ಇದರ ನಂತರ, 1975 ರಿಂದ ಸ್ಪೋರ್ಟ್ಸ್ ಬ್ರಾಗಳನ್ನು (sports bra)ಪರಿಚಯಿಸಲಾಯಿತು, ಇದನ್ನು ಜನರು ಕ್ರೀಡೆಯ ಸಮಯದಲ್ಲಿ ಧರಿಸುತ್ತಿದ್ದರು.
ವಿರೋಧವನ್ನು ಎದುರಿಸಬೇಕಾಗಿ ಬಂದ ಬ್ರಾ
ಮಹಿಳೆಯರ ಅಂಡರ್ ಗಾರ್ಮೆಂಟ್, ಬ್ರಾಗಳು ಅವರಿಗೆ ಅಷ್ಟು ಸುಲಭವಾಗಿ ಲಭ್ಯವಿರಲಿಲ್ಲ. 1960 ರ ದಶಕದಲ್ಲಿ ವೋಗ್ ನಿಯತಕಾಲಿಕವು ಬ್ರಾಸಿಯರ್ ಅನ್ನು ಬೆಂಬಲಿಸಿದಾಗ ಇದು ಅನೇಕ ವಿರೋಧಗಳನ್ನು ಎದುರಿಸಿತು. ಅನೇಕ ಸ್ತ್ರೀವಾದಿ ಸಂಘಟನೆಗಳು ಅದರ ಅನಾನುಕೂಲಗಳನ್ನು ಸೂಚಿಸಲು ಪ್ರಾರಂಭಿಸಿದವು. 1960 ರಲ್ಲಿಯೂ ಸಹ, ಹಲವಾರು ಸ್ತ್ರೀವಾದಿ ಸಂಘಟನೆಗಳು ಬ್ರಾಗಳ ವಿರುದ್ಧ ಚಳುವಳಿ ಪ್ರಾರಂಭಿಸಿದವು. ಅದನ್ನು ಧರಿಸುವುದು ಮಹಿಳೆಯರನ್ನು ಲೈಂಗಿಕ ವಸ್ತುವನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು. ಇದರೊಂದಿಗೆ, ಇದನ್ನು ಧರಿಸುವುದರಿಂದ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂದು ಸಹ ಹೇಳಲಾಯಿತು.