ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ ಥೀಲ್ವಿಂಗ್ ಅವರು ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಟಾಪ್ 5 ಸ್ಪರ್ಧಿಗಳು ಯಾರು ಎಂಬುದರ ಮಾಹಿತಿ ಇಲ್ಲಿದೆ.
ಮೆಕ್ಸಿಕೋ: 2024ರ ಮಿಸ್ ಯುನಿವರ್ಸ್ ಯಾರು ಎಂಬ ಸಸ್ಪೆನ್ಸ್‌ಗೆ ತೆರೆ ಬಿದ್ದಿದೆ. ಡೆನ್ಮಾರ್ಕ್‌ನ ವಿಕ್ಟೋರಿಯಾ ಕೆಜೆರ ಥೀಲ್ವಿಂಗ್ ಅವರು ಮಿಸ್ ಯುನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಯೂನಿವರ್ಸ್ 2024ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟೋರಿಯಾ ಮಿಸ್ ಯುನಿವರ್ಸ್ ಆದರು. ಶೆನ್ನಿಸ್ ಪಲಾಸಿಯೋಸ್ ಈ ಸುಂದರ ಕಿರೀಟವನ್ನು ವಿಕ್ಟೋರಿಯಾ ಕೆಜೆರ ಥೀಲ್ವಿಂಗ್ ಅವರಿಗೆ ತೊಡಿಸಿದರು. ಡೆನ್ಮಾರ್ಕ್‌ನ ವಿಕ್ಟೋರಿಯಾ ಕ್ಜಾರ್ ಥೀಲ್ವಿಗ್, ಮೆಕ್ಸಿಕೊದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್, ನೈಜೀರಿಯಾದ ಚಿದಿಮ್ಮಾ ಅಡೆಟ್‌ಶಿನಾ, ಥಾಯ್ಲೆಂಡ್‌ನ ಸುಚಾತಾ ಚುವಾಂಗ್‌ಸ್ರಿ ಮತ್ತು ವೆನೆಜುವೆಲಾದ ಇಲಿಯಾನಾ ಮಾರ್ಕ್ವೆಜ್ ಟಾಪ್ ಫೈವ್ ಅಭ್ಯರ್ಥಿಗಳಾಗಿದ್ದರು.
ಟಾಪ್ 5 ಸ್ಥಾನದ ವಿಜೇತರ ಪಟ್ಟಿ
ಮಿಸ್ ಯುನಿವರ್ಸ್: ಡೆನ್ಮಾರ್ಕ್-ವಿಕ್ಟೋರಿಯಾ ಕೆಜೆರ ಥಿಲ್ವಿಂಗ್
1 ರನ್ನರ್-ಅಪ್: ನೈಜಿರಿಯಾ- ಚಿದಿಮ್ಮಾ ಅಡೆಟ್‌ಶಿನಾ
2ನೇ ರನ್ನರ್-ಅಪ್: ಮಕ್ಸಿಕೋ- ಮರಿಯಾ ಫೆರ್ನಾಂಡಾ ಬೆಲ್ಟ್ರಾನ್
3ನೇ ರನ್ನರ್-ಅಪ್: ಥೈಲ್ಯಾಂಡ್- ಸುಚಾತಾ ಚುವಾಂಗ್‌ಸ್ರಿ
4ನೇ ರನ್ನರ್-ಅಪ್: ವೆನೆಜುವೆಲಾ- ಇಲಿಯಾನಾ ಮಾರ್ಕ್ವೆಜ್
ಅಂತಿಮ ಪ್ರಶ್ನೋತ್ತರ ಸುತ್ತಿನಲ್ಲಿ ಮಿಸ್ ಯೂನಿವರ್ಸ್ 2024 ರ ಟಾಪ್ 5 ಸ್ಪರ್ಧಿಗಳು
