Woman Health: ಬ್ರಾ ಹಾಕೋದ್ರಿಂದ ಬೆನ್ನು ನೋವು ಬರುತ್ತಾ ?
ಬ್ರಾ ಎಂಬುದು ಮಹಿಳೆಯರು ಧರಿಸುವ ಒಳಉಡುಪು. ಇದು ಮಹಿಳೆಯರಿಗೆ ಫಿಟ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತೆ. ಇನ್ನು ಬ್ರಾ ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಆದರೆ ಕೆಲವು ಅಧ್ಯಯನಗಳು ಬ್ರಾ ಧರಿಸುವುದರಿಂದ ಆಗುವ ಅನಾನುಕೂಲತೆಗಳ ಬಗ್ಗೆ ತಿಳಿಸುತ್ತವೆ. ಆದರೆ ಇವು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ತಿಳಿಯೋಣ.
ಬ್ರಾ ಧರಿಸಲು ಇಷ್ಟಪಡದ ಅನೇಕ ಮಹಿಳೆಯರಿದ್ದಾರೆ. ಬ್ರಾ ಧರಿಸುವುದರಿಂದ ಅನೇಕ ಮಹಿಳೆಯರು ಉಸಿರುಗಟ್ಟಿದ ಅನುಭವವಾಗುತ್ತದೆ. ಬ್ರಾ ಧರಿಸೋದು ಅಂದ್ರೆ ತುಂಬಾ ಇರಿಟೇಟಿಂಗ್ ಕೆಲಸ ಎಂದು ಹೇಳೋ ಮಹಿಳೆಯರು ಸಹ ಇದ್ದಾರೆ. ವಿವಿಧ ಆರೋಗ್ಯ ತಜ್ಞರು ಬ್ರಾಗಳ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಇದಲ್ಲದೆ ಬ್ರಾ ಧರಿಸುವುದರಿಂದ, ಧರಿಸದೇ ಇರುವುದರಿಂದ ಹಾಗಾಗುತ್ತೆ, ಹೀಗಾಗುತ್ತೆ ಅನ್ನೋ ಕೆಲವೊಂದು ತಪ್ಪು ಅಭಿಪ್ರಾಯಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲು ಸ್ತನದ ಬಗ್ಗೆ ತಿಳಿದುಕೊಳ್ಳೋದು ಮುಖ್ಯ
ಬ್ರಾಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ನಿಮ್ಮ ಸ್ತನದ (Breast) ಬಗ್ಗೆ ತಿಳಿದುಕೊಳ್ಳೋದು ತುಂಬಾನೆ ಮುಖ್ಯ. ಸ್ತನಗಳು ಗ್ಲೆಂಡುಲಾರ್ ಅಂಗಾಂಶ ಮತ್ತು ಕೊಬ್ಬಿನಿಂದ ಮಾಡಲ್ಪಟ್ಟಿವೆ. ಸ್ತನವನ್ನು ದೃಢವಾಗಿಡಲು ಕೂಪರ್ ಲಿಗಮೆಂಟ್ ಎಂಬ ಅಸ್ಥಿರಜ್ಜು ಸಹಾಯ ಮಾಡುತ್ತೆ. ಸ್ತನದ ಆಕಾರವು ಗ್ಲೆಂಡುಲಾರ್ ಅಂಗಾಂಶ ಮತ್ತು ಕೊಬ್ಬನ್ನು ಅವಲಂಬಿಸಿರುತ್ತದೆ. ಬ್ರಾ ಧರಿಸುವುದು ಅಥವಾ ಧರಿಸದಿರುವುದು ಪ್ರತಿಯೊಬ್ಬ ಮಹಿಳೆಯ (Woman) ವೈಯಕ್ತಿಕ ಆಯ್ಕೆಯಾಗಿದೆ. ನೀವು ಬ್ರಾ ಧರಿಸದಿದ್ದರೆ, ಅದು ನಿಮ್ಮ ಸ್ತನವನ್ನು ಹಾನಿಗೊಳಿಸುತ್ತಿದೆ ಅಥವಾ ಬ್ರಾ ಧರಿಸದಿದ್ದರೆ ಕೆಲವು ರೋಗ (Disease) ಬರುವ ಸಾಧ್ಯತೆ ಇದೆ ಎಂದು ನೀವು ಭಯಪಡಬೇಕಾಗಿಲ್ಲ. ಹಾಗೆಯೇ ಬ್ರಾ ಬಗ್ಗೆ ಎಲ್ಲಾ ಮಹಿಳೆಯರ ಮನಸ್ಸಿನಲ್ಲಿ ಕೆಲವು ತಪ್ಪು ಅಭಿಪ್ರಾಯಗಳಿವೆ ಆ ಬಗ್ಗೆ ಇಲ್ಲಿದೆ ಮಾಹಿತಿ.
ಸ್ತನದ ಸಮಸ್ಯೆ ಹೆಣ್ಣಿಗೆ ಕಾಡೋದು ಕಾಮನ್, ಇಗ್ನೋರ್ ಮಾಡೋದು ಬೇಡ
ಬ್ರಾ ಬಗ್ಗೆ ನೀವು ತಿಳಿದುಕೊಂಡಿರುವ ಈ ವಿಚಾರಗಳು ನಿಜವಲ್ಲ
1. ಅಂಡರ್‌ವೈರ್ ಬ್ರಾಗಳು ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ: 1990ರ ದಶಕದ ಕೆಲವು ಸಂಶೋಧನೆಗಳು ಅಂಡರ್‌ವೈರ್ ಬ್ರಾಗಳು ಸ್ತನದಲ್ಲಿ ವಿಷವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್ ಅಪಾಯ (Danger)ವನ್ನು ಹೆಚ್ಚಿಸುತ್ತವೆ ಎಂದು ಹೇಳಿವೆ. ಅಂಡರ್‌ವೈರ್ ಬ್ರಾಗಳು ದೀರ್ಘಕಾಲದ ವರೆಗೆ ಧರಿಸಲು ಅನಾನುಕೂಲವಾಗಬಹುದು. ಆದರೆ ಇಂಥಾ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸಮರ್ಥಿಸಲು ಯಾವುದೇ ಪುರಾವೆಗಳಿಲ್ಲ. ಅಂಡರ್‌ವೈರ್ ಬ್ರಾಗಳು ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದು ಸಾಬೀತಾಗಿಲ್ಲ.
2. ಸರಿಯಾದ ಬ್ರಾ ಬೆನ್ನು ನೋವನ್ನು ತಡೆಯುತ್ತದೆ: ಸರಿಯಾದ ಸ್ತನಬಂಧವು ನಿಮ್ಮ ಭಂಗಿಯನ್ನು ಸುಧಾರಿಸುತ್ತದೆ ಅಥವಾ ಬೆನ್ನು ನೋವನ್ನು ತಡೆಯುತ್ತದೆ ಎಂಬುದಾಗಿ ಹೇಳುತ್ತದೆ. ಆದರೆ ಇದು ಸುಳ್ಳು. ಬ್ರಾ ಧರಿಸುವ ಪ್ರಯೋಜನಗಳು ಮುಖ್ಯವಾಗಿ ಸೌಂದರ್ಯವರ್ಧಕಗಳಾಗಿವೆ ಮತ್ತು ಇದು ಬೆನ್ನುನೋವಿನ (Backpain) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.ಬೆನ್ನುನೋವಿಗೆ ಧರಿಸುವ ಬ್ರಾ ಯಾವುದೇ ರೀತಿಯಲ್ಲಿ ಕಾರಣವಾಗುವುದಿಲ್ಲ.
3. ಬ್ರಾ ಪಟ್ಟಿಗಳು ಬೆನ್ನು ನೋವಿಗೆ ಕಾರಣವಾಗಬಹುದು: ಸರಿಯಾದ ಗಾತ್ರದ ಸ್ತನಬಂಧವು ಆರಾಮವನ್ನು ಮಾತ್ರ ನೀಡುತ್ತದೆ, ಆದರೆ ತಪ್ಪಾದ ಗಾತ್ರದ ಸ್ತನಬಂಧವು ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಆದ್ದರಿಂದ, ನಿಮ್ಮ ಬ್ರಾ ನಿಮಗೆ ಬೆನ್ನು ನೋವನ್ನು ನೀಡುತ್ತಿದೆ ಎಂದು ನೀವು ಭಾವಿಸಿದರೆ, ನಿಮ್ಮ ಸ್ತನಬಂಧದ ಗಾತ್ರ (Size)ವನ್ನು ಪರಿಶೀಲಿಸಬೇಕಾಗುತ್ತದೆ.
ತಪ್ಪಾದ ಬ್ರಾ ಗಾತ್ರ ಧರಿಸುವುದನ್ನು ಬಿಟ್ಟುಬಿಡಿ, ಸರಿಯಾದ ಸೈಜ್ ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್
4. ಮಲಗುವಾಗ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆ: ಮಲಗಲು ಬ್ರಾ ಧರಿಸುವುದು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ನಿಮಗೆ ಮಲಗುವಾಗ ಬ್ರಾ ಧರಿಸಲು ಆರಾಮದಾಯಕವಾಗಿದ್ದರೆ ಹಾಗೇ ಮಾಡಬಹುದು. ಅದು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ. ಸ್ತನದಲ್ಲಿ ಯಾವುದೇ ಬದಲಾವಣೆಗಳು ನೋವು ಅಥವಾ ಗಂಟುಗಳು ಕಂಡುಬದ್ದರೆ ನೀವು ಇಂಥಾ ಅಭ್ಯಾಸ (Habit)ವನ್ನು ನಿಲ್ಲಿಸಬೇಕು. ವಾಸ್ತವವಾಗಿ, ಡಾ.ಕ್ಯುಟೆರಸ್ ಕೂಡ ಒಳ ಉಡುಪು ಬ್ರಾಗಳು ನಿಮಗೆ ಕ್ಯಾನ್ಸರ್ ನೀಡುವುದಿಲ್ಲ. ಇದು ನಿಜವಾಗಿಯೂ ಆಯ್ಕೆಯ ವಿಷಯವಾಗಿದೆ. ಬ್ರಾ ಮತ್ತು ಸ್ತನ ಕ್ಯಾನ್ಸರ್‌ಗೆ ಯಾವುದೇ ಲಿಂಕ್ ಇಲ್ಲ ಎಂದು ತಿಳಿಸಿದ್ದಾರೆ.
5. ಬ್ರಾ ಧರಿಸದಿರುವುದು ಸ್ತನಗಳ ಗಾತ್ರ ಕುಗ್ಗಿಸುತ್ತದೆ: ಬ್ರಾ ಧರಿಸದಿರುವುದು ನಿಮ್ಮ ಸ್ತನಗಳು ಕುಗ್ಗಲು ಕಾರಣವಾಗುತ್ತದೆ ಎಂಬುದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯ ನಂಬಿಕೆಯಾಗಿದೆ. ಆದರೆ ಇದು ನಿಜವಲ್ಲ, ಏಕೆಂದರೆ ಸ್ತನಬಂಧವಿಲ್ಲದೆ ಹೋಗುವುದು ನಿಮ್ಮ ಸ್ತನಗಳನ್ನು ಅವುಗಳ ಮೂಲ ಆಕಾರಕ್ಕೆ ತರುತ್ತದೆ ಮತ್ತು ಕುಗ್ಗುವಿಕೆಗೆ ಕಾರಣವಾಗುವುದಿಲ್ಲ.