ಸಿನಿಮಾ ಫೀಲ್ಡ್‌ಗೆ ಬರೋ ಮುಂಚೆ ಹತ್ರತ್ರ ನೂರು ಕೆಜಿ ತೂಗ್ತಿದ್ರು ಸಾರಾ ಆಲೀಖಾನ್. ಈಗ ಏಳುಮಲ್ಲಿಗೆ ತೂಕದ ರಾಜ ಕುಮಾರಿಯಂತಾಗಿದ್ದಾರೆ. ಡುಮ್ಮಿಯಾಗಿದ್ದಾಗ ಮತ್ತು ಈಗಿನ ವೀಡಿಯೋವನ್ನು ಈಕೆ ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಈಗ ವೈರಲ್ ಆಗ್ತಿದೆ. 

ಸಾರಾ ಅಲಿಖಾನ್ ಗೆ 24ರ ಹರೆಯದ ಚೆಂದುಳ್ಳಿ ಚೆಲುವೆ. ಬಹು ಬೇಡಿಕೆಯ ಬಾಲಿವುಡ್ ನಟಿ. ಈಕೆಯದು ಪರ್ಫೆಕ್ಟ್ ಫಿಟ್‌ನೆಸ್‌. ಈಗ ಈ ಹುಡುಗಿ ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವೀಡಿಯೋವೊಂದು ವೈರಲ್ ಆಗ್ತಿದೆ.ಈ ವೀಡಿಯೋದಲ್ಲಿ ಸಾರಾ ಅಲಿಖಾನ್ ಅವರ ಹಿಂದಿದ್ದ ವೀಡಿಯೋ ಇದೆ. 96 ಕೆಜಿ ತೂಕದ ಈಕೆ ಫನ್ನಿಯಾಗಿ ನಗ್ತಿರುವ, ಕಿಚಾಯಿಸ್ತಿರುವ ವೀಡಿಯೋವದು. ಸಿಕ್ಕಾಪಟ್ಟೆ ದಪ್ಪಗಿದ್ದ ಈಕೆ ಆಗ ಸಂಪ್ರದಾಯಸ್ಥ ಹುಡುಗಿಯ ಡ್ರೆಸ್ ಹಾಕ್ಕೊಂಡು ತಮ್ಮನ ಜೊತೆಗೆ ಏನೋ ತಮಾಷೆ ಮಾಡಿ ನಗುತ್ತಿರೋ ವೀಡಿಯೋ ಅದು. ಇದರ ಜೊತೆಗೆ ಸಾರಾ ಈಗ ಸಖತ್ ಫಿಟ್ ಆಂಡ್ ಸ್ಮಾರ್ಟ್ ಆಗಿರೋ ವೀಡಿಯೋ ಇದೆ. ಹಾಗಿದ್ದ ಹುಡುಗಿ ಹೀಗಾಗೋದಕ್ಕೆ ಎಷ್ಟೆಲ್ಲ ಕಷ್ಟಪಡಬೇಕಾಯ್ತು, ಯಾವ ಪರಿ ಬೆವರಿಳಿಸಬೇಕಾಯ್ತು ಅನ್ನೋದನ್ನ ಈ ವೀಡಿಯೋ ಮೂಲಕ ಕೇದಾರನಾಥ್ ಹುಡುಗಿ ರಿವೀಲ್ ಮಾಡಿದ್ದಾರೆ.

ನಮಸ್ತೇ ದರ್ಶಕೋ

ಲಾಕ್‌ಡೌನ್‌ಗೆ ಗೋಲಿ ಮಾರೋ ಅನ್ನೋ ಟೋನ್‌ನಲ್ಲಿ ಇನ್‌ಸ್ಟಾದಲ್ಲಿ ಪ್ರತಿ ದಿನ ಒಂದೊಂದು ಎಪಿಸೋಡ್‌ ವೀಡಿಯೋ ಪ್ರಸಾರ ಮಾಡೋ ಖುಷಿ ಸಾರಾದು. 'ನಮಸ್ತೆ ದರ್ಶಕೊ' ಅಂತ ಅವರು ಈ ಎಪಿಸೋಡ್‌ಗಳಿಗೆ ಹೆಸರು ಕೊಟ್ಟಿದ್ದಾರೆ. ನಾಲ್ಕು ದಿನಗಳ ಹಿಂದೆ ಸಾರಾ ಈ ನಮಸ್ತೆ ದರ್ಶಕೊ ಎಪಿಸೋಡ್‌ನಲ್ಲಿ ತಮ್ಮ ಇಂಡಿಯಾ ಜರ್ನಿಯ ವೀಡಿಯೋ ಹರಿಯಬಿಟ್ಟಿದ್ದರು. ಬಿಹಾರದ ಹಳ್ಳಿಯಲ್ಲಿ ಹುಲ್ಲು ಹೊತ್ತು ನಡೆಯೋ ವೀಡಿಯೋ, ರಾಜಸ್ಥಾನದಲ್ಲಿ ಒಂಟೆ ಸವಾರಿ ಮಾಡುವ ವೀಡಿಯೋ, ತೆಲಂಗಾಣದ ಮಾರ್ಕೆಟ್ ಸುತ್ತೋದು, ಉತ್ತರ ಪ್ರದೇಶದಲ್ಲಿ ಸಂಗೀತ ಆಲಿಸೋದು, ಆಂದ್ರ ಪ್ರದೇಶದಲ್ಲಿ ಅಂಗಡಿಯವರ ಜೊತೆಗೆ ಚೌಕಾಸಿ ಮಾಡೋದು, ಹೈವೇಯಲ್ಲಿ ದಾರಿ ತೋರಿಸಿದ ಸ್ಥಳೀಯ ಇತ್ಯಾದಿ ಇಂಟೆರೆಸ್ಟಿಂಗ್ ಡೀಟೈಲ್ಸ್ ಇದರಲ್ಲಿದ್ದವು. ಉತ್ತರಖಂಡ್ ನ ಹಿಮಾಲಯ ಪರ್ವತ ಶ್ರೇಣಿ, ಚುಟ್ಟಾ ಸೇದುವ ಸಾಧುಗಳು, ಹರ್ಯಾಣದ ಮಕ್ಕಳ ಮಾತು, ಕೇರಳ, ಪಂಜಾಬ್ ಮೊದಲಾದೆಡೆ ಕಳೆದ ಕ್ಷಣಗಳನ್ನೂ ಅವರು ಈ ವೀಡಿಯೋದಲ್ಲಿ ಕಟ್ಟಿಕೊಟ್ಟಿದ್ದಾರೆ.

View post on Instagram

ಎಪಿಸೋಡ್‌ 2

ನಮಸ್ತೆ ದರ್ಶಕೊ ಎಪಿಸೋಡ್ 2 ಕಂಪ್ಲೀಟ್ ಆಗಿ ಡೆಡಿಕೇಟ್ ಆಗಿರೋದು ಈಕೆಯ ಫಿಟ್ ನೆಸ್ ಜರ್ನಿಗೆ. ಧಡೂತಿ ದೇಹದ ಕನ್ನಡಕಧಾರಿ ಯುವತಿ ಎಲ್ಲಿ, ಬಳಕೋ ಬಳ್ಳಿಯಂಥಾ ಕೋಲ್ಮಿಂಚಿನ ಚೆಲುವೆ ಎಲ್ಲಿ? ಆದರೆ ಆ ಹುಡುಗಿಯೇ ಈ ಹುಡುಗಿಯೂ ಸಹ ಎನ್ನುತ್ತಾ ಹಾಗೆ ದಪ್ಪಗೆ ಗುಂಡಗಿದ್ದ ತಾನು ಈಗಿನ ಸ್ಥಿತಿಗೆ ಬರಲು ಯಾವ ಪರಿ ಕಷ್ಟಪಟ್ಟೆ ಅನ್ನೋದನ್ನೂ ಸಾರಾ ಈ ಎಪಿಸೋಡ್‌ನಲ್ಲಿ ರಿವೀಲ್ ಮಾಡಿದ್ದಾರೆ. ಇದರಲ್ಲಿ ಸಾರಾ ಅಲಿಖಾನ್ ನಾನಾ ಬಗೆಯ ವರ್ಕೌಟ್‌ಗಳ ಟ್ರೂ ಸ್ಟೋರಿ ಇದೆ. ಜಿಮ್‌ನಲ್ಲಿ ವರ್ಕೌಟ್, ಸೂರ್ಯ ನಮಸ್ಕಾರ, ಈಜು, ಕಿಕ್‌ ಬಾಕ್ಸಿಂಗ್, ವೈಟ್‌ ಟ್ರೈನಿಂಗ್, ಮನೇಲೇ ಮಾಡೋ ಎಕ್ಸರ್‌ಸೈಸ್‌ಗಳ ವಿವರಗಳಿವೆ. ಫುಲ್‌ ಸಾರಾ ಅರ್ಧ ಸಾರಾ ಆಗಿದ್ದು ಹೀಗೆ ಅಂತ ಈಕೆ ಹೇಳ್ತಾರೆ.

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ..

ಸಾರಾ ಅಲಿಖಾನ್ ಪಿಸಿಓಡಿ ಅಂದರೆ ಪೊಲಿಸಿಸ್ಟಿಕ್ ಓವರಿಸ್ ಸಿಂಡ್ರೋಮ್ ಅನ್ನೋ ಹಾರ್ಮೋನಲ್ ಸಮಸ್ಯೆಗೆ ತುತ್ತಾಗಿ ಅತಿಯಾಗಿ ದಪ್ಪವಾಗಿದ್ದರು. ಆಗೆಲ್ಲ ಡ್ರೆಸ್ ಖರೀದಿಸಲೂ ಮುಜುಗರ ಪಡುತ್ತಿದ್ದ, ಎಲ್ಲರ ಜೊತೆಗೆ ಮುಕ್ತವಾಗಿ ಬೆರೆಯಲು ಕೀಳರಿಮೆ ಪಟ್ಟುಕೊಳ್ಳುತ್ತಿದ್ದ ಹುಡುಗಿ ಆಮೇಲೆ ತಮ್ಮ ಆತ್ಮಸ್ಥೈರ್ಯದಿಂದಲೇ ಸ್ಕ್ರಿಕ್ಟ್ ಡಯೆಟ್ ಮತ್ತು ವರ್ಕೌಟ್ ಮೂಲಕ ತೂಕ ಇಳಿಸುತ್ತಾ ಬಂದರು. 96 ಕೆಜಿ ಇದ್ದವರು 53ಕ್ಕೆ ಇಳಿದಿದ್ದಾರೆ.

ಈ ಗಣಪನಿಗೆ ನಿತ್ಯ ಸಾವಿರ ಕೊಡ ಅಭಿಷೇಕ ಆಗಲೇಬೇಕು!

ಸಾರಾ ಅಲಿಖಾನ್ ಇನ್‌ಸ್ಟಾ ಗ್ರಾಮ್‌ನಲ್ಲಿ ಪೋಸ್ಟ್ ಮಾಡ್ತಿರೋ ಈ ವೀಡಿಯೋ ಸಖತ್ ವೈರಲ್‌ ಆಗಿದೆ. 28 ಲಕ್ಷ ಅಂದರೆ 2.8 ಮಿಲಿಯನ್ ಜನ ಈ ವೀಡಿಯೋ ವೀಕ್ಷಿಸಿ ಲೈಕ್ ಮಾಡಿದ್ದಾರೆ. 'ಬಬ್ಲೀ ಹುಡುಗಿ, ನೀನೇ ನಮಗೆಲ್ಲ ಇನ್‌ಸ್ಪಿರೇಶನ್', 'ನನಗೂ ಪಿಸಿಓಡಿ ಸಮಸ್ಯೆ ಇದೆ. ನನ್ನಂಥವಳಿಗೆ ನೀವೇ ಸ್ಫೂರ್ತಿ' ಅನ್ನೋ ಕಮೆಂಟ್‌ಗಳು ಬಂದಿವೆ.

ಪಂಚಾಂಗ: ಸೂರ್ಯನ ಆರಾಧನೆಯಿಂದ ಶುಭ, ತಂಬಿಗೆ ನೀರಿನಲ್ಲಿ ಕೆಂಪು ದಾಸವಾಳ ಅರ್ಪಿಸಿ!