ಸಣ್ಣ ಗ್ರಾಮದ ಪುಟ್ಟ ಜಾತ್ರೆಯಿಂದ ಪ್ರಾರಂಭವಾಗಿ 12 ದೇಶಗಳನ್ನು ಸುತ್ತಾಡಿ ಅಲ್ಲಿಯೂ ತೊಗಲುಗೊಂಬೆಯಾಟವನ್ನು ಪ್ರದರ್ಶನ ಮಾಡಿ ಬಂದಿರುವುದು ಇವರ ಹೆಗ್ಗಳಿಕೆ.  ಕೊಪ್ಪಳ ತಾಲೂಕಿನಿಂದ ಸುಮಾರು 22 ಕಿ.ಮೀ ದೂರದಲ್ಲಿರುವ ಮೊರನಾಳ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ 103 ಇಳಿ ವಯಸ್ಸಿನ ಭೀಮವ್ವ ನಮ್ಮ ಜಾನಪದ ಕಲೆಯನ್ನು ಅಂತಾರಾಷ್ಟ್ರೀಯ
ಮಟ್ಟಕ್ಕೆ ಕೊಂಡೊಯ್ದಿರುವುದು ನಮ್ಮ ಹೆಮ್ಮೆ.

ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!

ದೇಶ-ವಿದೇಶಗಳಲ್ಲಿ ಕಲೆ ಪ್ರದರ್ಶನ

12 ವರ್ಷದ ಬಾಲ್ಯದಲ್ಲಿ ಅಜ್ಜ ದದೇಗಲ್ ಭರಮಪ್ಪ ಹಾಗೂ ಅಜ್ಜಿ ಗೌರವ್ವರಿಂದ ತೊಗಲುಗೊಂಬೆಯಾಟವನ್ನು ಕಲಿತ ಭೀಮವ್ವ, ಲಂಡನ್, ಇಟಲಿ, ಸ್ವಿಡ್ಜರ್ಲೆಂಡ್, ಪ್ಯಾರಿಸ್, ಇರಾನ್, ದುಬೈ, ಮಲೇಷಿಯಾ, ಜರ್ಮನಿಯಲ್ಲಿ ಅಮೆರಿಕಾ ಇನ್ನಿತರ ದೇಶಗಳಲ್ಲಿ ರಾಮಾಯಣ ಹಾಗೂ ಪಾಂಡವರ ಪರ್ವವನ್ನು ಸಂಪೂರ್ಣವಾಗಿ ಪ್ರದರ್ಶಿಸಿದ್ದಾರೆ. ಈ ಸಾಧನೆ ಮಾಡಿದ ಭೀಮವ್ವರಿಗೆ ಹಲವಾರು ದೊಡ್ಡ ದೊಡ್ಡ ಪ್ರಶಸ್ತಿಗಳು ಬಂದಿವೆ.

ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನ

ಕೊಪ್ಪಳದ ಇರಕಲ್ ಗಡದ ಹನುಮಟ್ಟಿಯ ಗ್ರಾಮದ ಸಂಜೀವಪ್ಪ, ಹೊಳೆಯಮ್ಮ ದಂಪತಿಗಳ ಮಗಳಾದ ಭೀಮವ್ವ 200 ವರ್ಷಗಳಿಂದ ಇವರ ಕುಟುಂಬ ಕಾಪಾಡಿಕೊಂಡ ಬಂದ
ತೊಗಲುಗೊಂಬೆಯಾಟವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

'ಬಾಲ್ಡ್ ಕ್ವೀನ್' ಆಗಿ ಬಾಡಿ ಶೇಮಿಂಗ್‌ಗೆ ಸಡ್ಡು ಹೊಡೆದ ಅಕ್ಷಯಾ

ಮೊರನಾಳ ಗ್ರಾಮದ ತೊಗಲುಗೊಂಬೆಯಾಟದಲ್ಲಿcಪ್ರಸಿದ್ಧಿ ಪಡೆದಿದ್ದ ದೊಡ್ಡಬಾಳಪ್ಪ ಅವರನ್ನು ಮದುವೆಯಾಗಿ ಗಂಡನೊಂದಿಗೆ ಕೊಪ್ಪಳ, ಇತರೆ ಜಿಲ್ಲೆ, ದೇಶದ ಮುಂಬಯಿ,
ದೆಹಲಿ ಹಾಗೂ ವಿದೇಶಿಗಳಲ್ಲಿ ಈವರೆಗೆ 7000 ರಿಂದ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ಮಹಾಭಾರತ ಹಾಗೂ ರಾಮಾಯಣ ಸನ್ನಿವೇಶಗಳ
ಸಂಭಾಷಣೆ ಹಾಗೂ ಪ್ರಸಂಗದ ಸಾಲುಗಳನ್ನು ಸುಲಲಿತವಾಗಿ ಹಾಡುತ್ತಾರೆ ಇವರು.

ಕಲಾವಿದ ಕುಟುಂಬ

ಕ್ಯಾನ್ಸರ್‌ ಗೆದ್ದವಳಿಗೆ ಶಾಲೆ ಪ್ರವೇಶ ನಿರಾಕರಿಸಿದ್ದ ಶಿಕ್ಷಕರಿಗೆ ಪಾಠ ಕಲಿಸಿದ ಸಚಿವ ಸುರೇಶ್ ಕುಮಾರ್

ತಮ್ಮ ಕಲೆಯಿಂದ ಇಡೀ ಕುಟುಂಬವನ್ನು ನಿರ್ವಹಣೆ ಮಾಡಿರುವ ಭೀಮವ್ಬ ಅಜ್ಜಿ, ಮಕ್ಕಳಾದ ವಿರುಪಾಕ್ಷಪ್ಪ, ಯಂಕಪ್ಪ ಹಾಗೂ ಕೇಶಪ್ಪ ಮತ್ತು ಸೊಸೆಯಿಂದಿರಾದ ಕಮಲಮ್ಮ ಮತ್ತು ರತ್ನವ್ವ ಸೇರಿದಂತೆ ಮೊಮ್ಮಕ್ಕಳಿಗೂ ಈ ಕಲೆಯನ್ನು ಕಲಿಸಿದ್ದು ಅವರು ಸಹ ವಿವಿಧ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ನಡೆಯುವ ಉತ್ಸವ, ಜಾತ್ರೆ, ಕಲೋತ್ಸವ, ಸಮಾರಂಭಗಳಲ್ಲಿ ಪ್ರದರ್ಶನ ಮಾಡುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಗೊಂಬೆ ಆಟ ಪ್ರದರ್ಶನ ಮಾಡುವ ಭೀಮಜ್ಜಿಗೆ ಕೇವಲ ಪೌರಾಣಿಕ ಕಥೆಗಳನ್ನು ಅಲ್ಲದೇ  ಸಾಮಾಜಿಕ ಕಥೆಗಳನ್ನು ತೊಗಲು ಗೊಂಬೆಯಾಟದಲ್ಲಿ ಪ್ರದರ್ಶಿಸಬೇಕು ಎಂಬ ಮಹಾದಾಸೆ ಇದೆ.