ಮಿಕ್ಸರ್ ಗ್ರೈಂಡರ್ ಶಬ್ದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವಿಲ್ಲ. ಗರ್ಭದೊಳಗಿನ ಆಮ್ನಿಯೋಟಿಕ್ ದ್ರವ ಮಗುವನ್ನು ರಕ್ಷಿಸುತ್ತದೆ. ಮಿಕ್ಸರ್ ಶಬ್ದ ಮಗುವಿನ ಕಿವಿಗೆ ತಲುಪುವುದಿಲ್ಲ. ಗೃಹೋಪಯೋಗಿ ಉಪಕರಣಗಳ ಶಬ್ದ ಭ್ರೂಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಗರ್ಭಿಣಿಯರು ಆರಾಮವಾಗಿ ಕೆಲಸ ಮಾಡಿ, ದಣಿವಾದಾಗ ವಿಶ್ರಾಂತಿ ಪಡೆಯಬೇಕು.
ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಅನ್ನು ಬಳಸಿದರೆ ಅದರ ಶಬ್ದಕ್ಕೆ ಹೊಟ್ಟೆಯೊಳಗಿನ ಮಗು ಹೆದರಿಕೊಳ್ಳುತ್ತದೆ. ಹೀಗಾಗಿ, ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಕೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ, ಇದಕ್ಕೆ ವೈಜ್ಞಾನಿಕ ಆಧಾರಗಳೇನಾದರೂ ಇವೆಯೇ ಎಂಬುದನ್ನು ಸ್ವತಃ ತಜ್ಞ ವೈದ್ಯರು ಸ್ಪಷ್ಟಪಸಿದ್ದಾರೆ. ಇಲ್ಲಿದೆ ನೋಡಿ ವೈದ್ಯರ ಅಭಿಪ್ರಾಯ.
ಮಹಿಳೆಯರು ಗರ್ಭಿಣಿಯರಾಗಿದ್ದ ವೇಳೆ ಸಂಗೀತವನ್ನು ಕೇಳಬೇಕು, ಶಾಂತ ವಾತಾವರಣದಲ್ಲಿ ಇರಬೇಕು, ಪ್ರಶಾಂತತೆಯ ಸ್ಥಳದಲ್ಲಿ ಕುಳಿತು ಒಳ್ಲೆಯ ಪುಸ್ತಕಗಳನ್ನು ಓದಬೇಕು ಎಂದು ಹೇಳುತ್ತಾರೆ. ಇನ್ನು ಹೆಚ್ಚು ಜನಸಂದಣಿಗೆ ಹೋಗಬಾರದು, ಹೆಚ್ಚು ಭಾರವನ್ನು ಎತ್ತಬಾರದು, ಹೆಚ್ಚು ಶಬ್ದವಿರುವ ಜಾಗಕ್ಕೆ ಹೋಗಬಾರದು ಎಂದು ಹೇಳುತ್ತಾರೆ. ಜೊತೆಗೆ, ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಬಳಕೆ ಮಾಡುವ ಮಿಕ್ಸರ್ ಗ್ರೈಂಡರ್ ಅನ್ನು ಬಳಕೆ ಮಾಡಬಾರದು ಎಂದು ಕೆಲವರು ಹೇಳುತ್ತಾರೆ. ಕಾರಣ, ಮಿಕ್ಸರ್ ಗ್ರೈಂಡರ್ ತುಂಬಾ ಶಬ್ದ ಮಾಡಲಿದ್ದು, ಹೊಟ್ಟೆಯ ಮುಂಭಾಗದಲ್ಲಿಯೇ ಇಟ್ಟುಕೊಂಡು ಬಳಕೆ ಮಾಡುವುದರಿಂದ ನೇರವಾಗಿ ಮಗುವಿಗೆ ಶಬ್ದ ಹೆಚ್ಚಾಗಿ ಕೇಳಿಸುತ್ತದೆ. ಇದರಿಂದ ಮಗು ಭಯಗೊಳ್ಳುತ್ತದೆ. ಕೆಲವು ಸಂದರ್ಭದಲ್ಲಿ ಮಗುವಿನ ತುಂಬಾ ಮೃದುವಾದ ಕಿವಿಗಳು ಹಾಳಾಗುತ್ತವೆ ಎಂದೂ ಹೇಳುತ್ತಾರೆ. ಆದರೆ, ಇದ್ಯಾವುದಕ್ಕೂ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಮಹಿಳೆ ತನ್ನ ಆರೋಗ್ಯದ ಜೊತೆಗೆ ಹೊಟ್ಟೆಯೊಳಗಿರುವ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಕೆಲವು ಮಹಿಳೆಯರು ಮನೆಯಲ್ಲಿ ಒಬ್ಬರೇ ಇದ್ದಲ್ಲಿ ಮನೆಯಲ್ಲಿ ದಿನನಿತ್ಯ ಮಾಡುವ ಕೆಲಸಗಳಾದ ಅಡುಗೆ ಮಾಡುವುದು, ನೆಲ ಒರೆಸುವುದು, ಕಸ ಗುಡಿಸುವುದು, ಬಟ್ಟೆ ವಾಷಿಂಗ್ ಮಷಿನ್‌ಗೆ ಹಾಕಿ ಒಣಗೊಸಲು ಹಾಕುವುದು, ನೀರು ತುಂಬುವುದು ಇತರೆ ಕೆಲಸಗಳನ್ನು ಮಾಡುತ್ತಾರೆ. ಇನ್ನು ಅಡುಗೆ ಮಾಡುವಾಗ ಜೋರಾಗಿ ಸೌಂಡ್ ಮಾಡುವ ಮಿಕ್ಸರ್ ಗ್ರೈಂಡರ್ (mixer grinder) ಕೂಡ ಬಳಸುತ್ತಾರೆ. ಆದರೆ, ಈ ಮಿಕ್ಸರ್ ಗ್ರೈಂಡರ್ ಶಬ್ದವು ಗರ್ಭಿಣಿಯ ಹೊಟ್ಟೆಯೊಳಗಿನ ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ತ್ರೀರೋಗ ತಜ್ಞೆ ಡಾ. ತನುಜ್ ಲಾವಾನಿಯಾ ರೈ ತಿಳಿಸಿದ್ದಾರೆ.
ಇದನ್ನೂ ಓದಿ: UPSC 2 ವರ್ಷ ತಯಾರಿಗೆ 100 ಪೆನ್ನುಗಳು- ಟೆಕ್ಕಿ ಆದಿತಿಯ ಕಥೆ ವೈರಲ್
ಗರ್ಭಿಣಿ ಮಹಿಳೆಯರು ಮಿಕ್ಸರ್ ಗ್ರೈಂಡರ್ ಬಳಸೋದು ಸೇಫ್ ಅಲ್ವಾ?
ಸಾಮಾನ್ಯವಾಗಿ ಗರ್ಭಿಣಿಯಾದ ನಂತರ 3 ತಿಂಗಳಿಗೆ ಮಗುವಗೆ ಕಿವಿಗಳು ಬೆಳವಣಿಗೆ ಆಗುತ್ತವೆ. ಆಗ ಗರ್ಭಿಣಿಯರು ಹೆಚ್ಚು ಶಬ್ದ ಮಾಡುವ ಅಥವಾ ಗದ್ದಲ ಕೇಳಿಸುವ ಸ್ಥಳದಲ್ಲಿ ಇರಬಾರದು ಎಂದು ಹಿರಿಯರು ಹೇಳುತ್ತಾರೆ. ಅಂಥದ್ದರಲ್ಲಿ ಹೊಟ್ಟೆಯ ಮುಂದೆ ಇಟ್ಟುಕೊಂಡು ಮಸಾಲೆ ಪದಾರ್ಥಗಳನ್ನು ರುಬ್ಬಲು ಬಳಸುವ ಅತಿಯಾಗಿ ಶಬ್ದ ಮಾಡುವ ಕ್ಸರ್ ಗ್ರೈಂಡರ್ ಬಳಸುವುದು ಸುರಕ್ಷಿತವೇ? ಎಂಬುದು ಎಲ್ಲರ ಅನುಮಾನವಾಗಿದೆ. ಈ ಬಗ್ಗೆ ನೆಟ್ಟಿಗರು ಇನ್‌ಸ್ಟಾಗ್ರಾಂನಲ್ಲಿ ಸ್ತ್ರೀರೋಗ ತಜ್ಞರಿಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ಸ್ತ್ರೀರೋಗ ತಜ್ಞ ಡಾ. ತನುಜ್ ಲಾವಾನಿಯಾ ರೈ ಅವರು, ಗರ್ಭಿಣಿಯರು ಮಿಕ್ಸರ್ ಗ್ರೈಂಡರ್ ಬಳಸುವುದರಿಂದ ಮಗುವಿಗೆ ಹಾನಿಯಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಮಿಕ್ಸಿಯಿಂದ ಬರುವ ಶಬ್ದ ನಮಗೆ ಮಾತ್ರ ಜೋರಾಗಿ ಕೇಳಿಸುತ್ತದೆ. ಆದರೆ, ಮಿಕ್ಸರ್ ಗ್ರೈಂಡರ್‌ನ ಶಬ್ದ ಗರ್ಭದೊಳಗೆ ಇರುವ ಮಗುವಿಗೆ ಕೇಳಿಸುವುದಿಲ್ಲ. ಇಲ್ಲಿ ಮುಖ್ಯವಾಗಿ ಮಿಕ್ಸರ್ ಗ್ರೈಂಡ್ ಮಾಡುವ ಶಬ್ದವು ಮಹಿಳೆಯ ಗರ್ಭಕೋಶ ಅಥವಾ ಗರ್ಭದೊಳಗಿನ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಇದನ್ನೂ ಓದಿ: ಇಸ್ರೇಲ್ ಜೊತೆ ನಂಟಿಗೆ ಆಕ್ರೋಶ: ಪಾಕಿಸ್ತಾನದಲ್ಲಿ ಕೆಎಫ್‌ಸಿ ಕಚೇರಿಗೆ ನುಗ್ಗಿ ದಾಂಧಲೆ
ಪ್ರತಿ ಮಗುವೂ ಕೂಡ ಗರ್ಭಾಶಯದೊಳಗಿನ ಆಮ್ನಿಯೋಟಿಕ್ ದ್ರವದಿಂದ ರಕ್ಷಿಸಲ್ಪಟ್ಟಿರುತ್ತದೆ. ಆದ್ದರಿಂದ ಮಿಕ್ಸರ್ ಗ್ರೈಂಡರ್ ಶಬ್ದವು ಮಗುವಿನ ಕಿವಿಗೆ ತಲುಪಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೆ ಗೃಹೋಪಯೋಗಿ ಉಪಕರಣಗಳಿಂದ ಹೊರ ಹೊಮ್ಮುವ ಕಡಿಮೆ ತೀವ್ರತೆಯ ಶಬ್ದಗಳು ಭ್ರೂಣದ ಆರೋಗ್ಯ ಅಥವಾ ಬೆಳವಣಿಗೆಯ ಮೇಲೆ ಯಾವುದೇ ರೀತಿಯ ನಕರಾತ್ಮಕ ಪರಿಣಾಮವನ್ನು ಉಂಟುಮಾಡುವುದಿಲ್ಲ ಎಂದು ವೈಜ್ಞಾನಿಕ ಅಧ್ಯಯನಗಳಿಂದ ತಿಳಿದುಬಂದಿದೆ ಎಂದು ವೈದ್ಯೆ ತನುಜ್ ಲವಾನಿಯಾ ತಿಳಿಸಿದ್ದಾರೆ.
ಗರ್ಭಿಣಿಯರು ಮನೆ ಕೆಲಸಗಳನ್ನು ಮಾಡುವಾಗ ಬೆನ್ನಿನ ಮೇಲೆ ಅನಗತ್ಯ ಭಾರವನ್ನು ಹಾಕಬಾರದು. ಆರಾಮದಾಯಕವಾಗಿ ನಿಂತು ಅಥವಾ ಕುಳಿತು ಕೆಲಸ ಮಾಡಬೇಕು. ಮುಖ್ಯವಾಗಿ ದಣಿವು ಆದಾಗ ವಿಶ್ರಾಂತಿ ಪಡೆದುಕೊಳ್ಳಬೇಕು. ಇದನ್ನು ಎಲ್ಲರೂ ಪಾಲಿಸಬೇಕು. ತಾಯಿಗೆ ತುಂಬಾ ಆಯಾಸವಾದಲ್ಲಿ ಹೊಟ್ಟೆಯೊಳಗಿನ ಮಗುವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
