Min read

ಇಸ್ರೇಲ್ ಜೊತೆ ನಂಟಿಗೆ ಆಕ್ರೋಶ: ಪಾಕಿಸ್ತಾನದಲ್ಲಿ ಕೆಎಫ್‌ಸಿ ಕಚೇರಿಗೆ ನುಗ್ಗಿ ದಾಂಧಲೆ

KFC Outlet Vandalized in Pakistan Over Israel-Gaza Conflict
Pakistan KFC Attack

Synopsis

ಗಾಜಾದ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಕೆಲ ಪ್ಯಾಲೇಸ್ತೀನ್ ಬೆಂಬಲಿಗರು KFC ಶಾಪ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಾಕಿಸ್ತಾನ: ಗಾಜಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಪಾಕಿಸ್ತಾನದಲ್ಲಿ ಕೆಲ ಪ್ಯಾಲೇಸ್ತೀನ್ ಬೆಂಬಲಿಗರು ಅಲ್ಲಿನ ಕೆಎಫ್‌ಸಿ ಶಾಪ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಘಟನೆಯ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ರಾವಲ್ಪಿಂಡಿಯ ಸದ್ದರ್ ಪ್ರದೇಶದಲ್ಲಿರುವ ಮಿಲಿಟರಿ ಗಾರಿಸನ್ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಏಪ್ರಿಲ್ 13 ರಂದು ಈ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿಭಟನಾಕಾರರ ಗುಂಪು ಅಲ್ಲಿದ್ದ ಗ್ರಾಹಕರಿಗೆ ಕಿರಿಕಿರಿ ಮಾಡಿದ್ದಲ್ಲದೇ ಕೆಎಫ್‌ಸಿ ಒಳಭಾಗದಲ್ಲಿ ನಿಂತು ಇಸ್ರೇಲ್, ಅಮೆರಿಕಾ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ. ರಾವಲ್ಪಿಂಡಿಯ ಸದ್ದಾರ್ ಪ್ರದೇಶದಲ್ಲಿರುವ ಅಂತರರಾಷ್ಟ್ರೀಯ ಫಾಸ್ಟ್ ಫುಡ್ ಔಟ್ಲೆಟ್ ದಾಂಧಲೆ ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲಾಗಿದೆ  ಸಿಸಿಟಿವಿ ದೃಶ್ಯಾವಳಿಗಳ ಮೂಲಕ ದುಷ್ಕರ್ಮಿಗಳನ್ನು ಪತ್ತೆಹಚ್ಚಿದ್ದು, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಪೊಲೀಸರು ಭರವಸೆ ನೀಡಿದ್ದಾರೆ. ಆದರೆ ಘಟನೆಯ ವೀಡಿಯೊ ತುಣುಕು ಈಗ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ಗಾಜಾದಲ್ಲಿ ನರಮೇಧಕ್ಕೆ ತಾಂತ್ರಿಕ ನೆರವು: ಮೈಕ್ರೋಸಾಫ್ಟ್ 50ನೇ ವಾರ್ಷಿಕೋತ್ಸವದಲ್ಲಿ ಭಾರತೀಯ ಯುವತಿಯ ಗಲಾಟೆ

ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವು ಪುರುಷರು ಅಲ್ಲಿದ್ದ ಗ್ರಾಹಕರನ್ನು ನಿಂದಿಸುತ್ತಾ, ರೆಸ್ಟೋರೆಂಟ್ ಧ್ವಂಸ ಮಾಡಿ, ಗ್ರಾಹಕರನ್ನು ಹೊರಹೋಗುವಂತೆ ಕೇಳುತ್ತಿರುವುದು ಕಂಡು ಬರುತ್ತಿದೆ. ಈ ವೇಳೆ ಜನರು ಭಯದಿಂದ ಸ್ಥಳದಿಂದ ಓಡಿಹೋಗುವುದನ್ನು ಕಾಣಬಹುದು. ವಿಡಿಯೋದಲ್ಲಿ ಪ್ಯಾಲಿಸ್ತಾನ್‌ ಧ್ವಜವನ್ನು ಸಹ ಕಾಣಬಹುದು. ಕೆಎಫ್‌ಸಿ ಸದ್ದಾರ್ ಬ್ರಾಂಚ್‌ನ ಮ್ಯಾನೇಜರ್ ನೀಡಿದ ದೂರಿನ ಪ್ರಕಾರ, ಏಪ್ರಿಲ್ 13 ರ ಭಾನುವಾರ ರಾತ್ರಿ 8:30 ರ ಸುಮಾರಿಗೆ 10 ರಿಂದ12 ಜನರಿದ್ದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಕೆಎಫ್‌ಸಿ ಆವರಣಕ್ಕೆ ನುಗ್ಗಿ, ಗ್ರಾಹಕರಿಗೆ ಕಿರುಕುಳ ನೀಡಿ, ಘೋಷಣೆಗಳನ್ನು ಕೂಗಿತು. ನಾವು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ನಿಂದನೆ ಮಾಡಿದರು ಮತ್ತು ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದಿದ್ದಾರೆ. 

ಪ್ರತಿಭಟನೆಗೆ ಕಾರಣವೇನು?

ಇಸ್ರೇಲ್ ಜೊತೆಗಿನ ಅಮೆರಿಕಾದ ನಂಟಿನ ಕಾರಣಕ್ಕೆ ಮತ್ತು ಗಾಜಾದಲ್ಲಿ ಇಸ್ರೇಲ್ ದಾಳಿಯಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಕೆಲವು ಮುಸ್ಲಿಂ ಪ್ರದೇಶಗಳಲ್ಲಿ ಕೆಎಫ್‌ಸಿ ಮತ್ತು ಇತರ ಯುಎಸ್ ಬ್ರ್ಯಾಂಡ್‌ಗಳನ್ನು ಬಹಿಷ್ಕರಿಸಲಾಗುತ್ತಿದೆ. ಕಳೆದ ವಾರದ ಆರಂಭದಲ್ಲಿ, ಪಾಕಿಸ್ತಾನದ ಕರಾಚಿಯ ರಕ್ಷಣಾ ವಸತಿ ಪ್ರಾಧಿಕಾರ (ಡಿಎಚ್‌ಎ)ದಲ್ಲಿರುವ ಜಾಗತಿಕ ಫಾಸ್ಟ್ ಫುಡ್ ಸಂಸ್ಥೆ ಕೆಎಫ್‌ಸಿ ಮೇಲೆ ಕೋಪಗೊಂಡ ಗುಂಪೊಂದು ದಾಳಿ ಮಾಡಿತು. ನೆರೆಯ ಬಾಂಗ್ಲಾದೇಶದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇಲ್ಲಿ, ಇಸ್ರೇಲ್ ಜೊತೆ ನಂಟು ಹೊಂದಿರುವ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಬಾಟಾ, ಕೆಎಫ್‌ಸಿ, ಪಿಜ್ಜಾ ಹಟ್ ಮತ್ತು ಪೂಮಾಗಳ ಮಳಿಗೆಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಲಾಗಿತ್ತು.

ಯುದ್ಧದಿಂದ ಬೇಸತ್ತ ಪ್ಯಾಲೆಸ್ತೀನಿಯನ್ನರು ಹಮಾಸ್‌ ವಿರುದ್ಧವೇ ಪ್ರತಿಭಟನೆ!

ಚೀನಾದಿಂದ ಅಮೆರಿಕಕ್ಕೆ ಮತ್ತೊಂದು ಶಾಕ್‌: ಅಪರೂಪದ ಲೋಹ ರಫ್ತಿಗೆ ನಿರ್ಬಂಧ?

ಬೀಜಿಂಗ್‌: ಅಮೆರಿಕ ಮತ್ತು ಚೀನಾದ ನಡುವೆ ಸುಂಕ ಉದ್ವಿಗ್ನತೆಯ ನಡುವೆ ಚೀನಾ, ಡೊನಾಲ್ಡ್‌ ಟ್ರಂಪ್‌ಗೆ ಮತ್ತೊಂದು ಶಾಕ್‌ ನೀಡಲು ಮುಂದಾಗಿದ್ದು, ಸೆಮಿ ಕಂಡಕ್ಟರ್‌, ಐಟಿ ಉತ್ಪನ್ನಗಳಲ್ಲಿ ಬಳಕೆಯಾಗುವ ಅಪರೂಪದ ಲೋಹ ರಫ್ತಿಗೆ ನಿರ್ಬಂಧ ವಿಧಿಸಲು ಮುಂದಾಗಿದೆ. ಇದರಿಂದ ಅಮೆರಿಕದ ಐಟಿ ವಲಯಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ಡಿಸ್ಪ್ರೋಸಿಯಮ್ ಮತ್ತು ನಿಯೋಡೈಮಿಯಮ್ ಎನ್ನುವ ಅಪರೂಪದ ಲೋಹಗಳು ಚೀನಾದಲ್ಲಿ ಲಭ್ಯ. ಇದು ರಕ್ಷಣಾ ಉಪಕರಣಗಳು, ಸೆಮಿ ಕಂಡಕ್ಟರ್‌ಗಳು, ಇಂಧನ ವಲಯ, ಎಲೆಕ್ಟ್ರಾನಿಕ್ ಡಿಸ್‌ಪ್ಲೇ ಸೇರಿದಂತೆ ಬಹುತೇಕ ತಂತ್ರಜ್ಞಾನಗಳ ಬಳಕೆಗೆ ಅಗತ್ಯ. ವಿಶ್ವದಲ್ಲಿ ಇದರ ಉತ್ಪಾದನೆಯ ಶೇ.90ರಷ್ಟು ಪಾಲು ಚೀನಾದ್ದಿದೆ. ಇದೀಗ ಚೀನಾ ರಫ್ತಿಗೆ ನಿರ್ಬಂಧವನ್ನು ವಿಧಿಸಲು ಮುಂದಾಗಿರುವುದರಿಂದ, ಐಟಿ ವಲಯದಲ್ಲಿರುವ ಮುಂಚೂಣಿಯಲ್ಲಿರುವ ಅಮೆರಿಕಗೆ ಇದರಿಂದ ಪೆಟ್ಟು ಬೀಳಲಿದ್ದು, ಸೆಮಿ ಕಂಡಕ್ಟರ್‌, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ.

 

Latest Videos