ಕೊರೋನಾ ವೈರಸ್ ಮುಖ್ಯವಾಗಿ ಪುಟ್ಟ ಮಕ್ಕಳಿಗೂ ವೃದ್ಧರಿಗೂ ಹೆಚ್ಚು ಅಪಾಯಕಾರಿಯಾಗಿ ಬದಲಾಗಿದೆ. ಆದರೆ ಬಹಳಷ್ಟು ಜನ ಹಿರಿಯ ಜೀವಗಳು ಕೊರೋನಾ ವಿರುದ್ಧ ಗೆದ್ದಿದ್ದಾರೆ.
ಪ್ರಿಸ್ಸಿಲ್ಲಾ ಬೊಯೆಲ್ ಅವರ ಜನ್ಮ ದಿನ ಆಚರಣೆ ಈ ವರ್ಷ ವಿಶೇಷ ಘಟನೆಯಾಗಿದೆ. ಈಕೆ 106 ನೇ ವರ್ಷಕ್ಕೆ ಕಾಲಿಟ್ಟಿದ್ದಲ್ಲದೆ ಜೊತೆಗೆ, ಈ ಬೇಸಿಗೆಯಲ್ಲಿ COVID-19 ಅನ್ನು ಸೋಲಿಸಬೇಕಾದ ಅನಿವಾರ್ಯತೆ ಇತ್ತು.
ತನ್ನ ತವರು ರಾಜ್ಯದ ಗವರ್ನರ್ ಆಸಾ ಹಚಿನ್ಸನ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. COVID 19ನಿಂದಾಗಿ ಅವರು ಜೂನ್‌ನಲ್ಲಿ ಒಂದು ತಿಂಗಳು ಆಸ್ಪತ್ರೆಯಲ್ಲಿ ಕಳೆಯಬೇಕಾಯ್ತ ಎಂದು ಹಚಿನ್ಸನ್ ಹೇಳಿದ್ದಾರೆ.
ಸೆಕ್ಸ್ ಡಾಲ್‌ನ್ನು ಮದುವೆಯಾದ ಬಾಡಿ ಬಿಲ್ಡರ್..! ಇಲ್ನೋಡಿ ಫೋಟೋಸ್
ಇದು ತನ್ನ ಜೀವಿತಾವಧಿಯಲ್ಲಿ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಭಾನುವಾರ ಪಾಠ ಮಾಡುವುದರಿಂದ ಹಿಡಿದು ಲಿಟಲ್ ರಾಕ್‌ನಲ್ಲಿ ಬ್ಯೂಟಿ ಪಾರ್ಲರ್ ಕೂಡಾ ಹೊಂದಿದ್ದಾರೆ ಈಕೆ.
ಅಂದಿನಿಂದ ಬೊಯೆಲ್ ಹಲವಾರು ಬಾರಿ ಕೊರೋನಾ ಡೆಸ್ಟ್ ಮಾಡಿಸಿಕೊಂಡಿದ್ದಾರೆ ಎಂದು ಹಚಿನ್ಸನ್ ಹೇಳಿದ್ದಾರೆ. "ಥ್ಯಾಂಕ್ಸ್ ಗೀವಿಂಗ್ ಮತ್ತು ಇವರ ದೀರ್ಘಾಯುಷವನ್ನು ಅವರ ಕುಟುಂಬ ಆಚರಿಸಿದ್ದರು. ಸೋಷಿಯಲ್ ಡಿಸ್ಟೈನ್ಸಿಂಗ್ ಪಾಲಿಸಿಕೊಂಡು ಕಾರ್ಯಕ್ರಮ ನಡೆಸಲಾಯಿತು.
ಸೂಪರ್ ಆಗಿ ಅಡುಗೆ ಮಾಡ್ತಾರೆ ಅಮೆರಿಕದ ಭಾವೀ ಉಪಾಧ್ಯಕ್ಷೆ: ಜನರಿಗೆ ಥ್ಯಾಂಕ್ಸ್ ಹೇಳಿದ್ದು ಹೀಗೆ
ಅವರ ಆತ್ಮೀಯರು ಕಾರನ್ನು ಅಲಂಕರಿಸಿ, ಅದರಲ್ಲಿಯೇ ಅವರನ್ನು ಕೇರ್ ಸೆಂಟರ್‌ನಿಂದ ಕರೆದುಕೊಂಡು ಬಂದಿದ್ದಾರೆ. ನ್ಯುಮೋನಿಯಾ, COVID-19, ಮತ್ತು ಕ್ಯಾನ್ಸರ್ ಅನ್ನು ದಾಟಿ ಈಕೆ 106 ಕ್ಕೆ ತಲುಪಿದರು ಎಂದು ಬೊಯೆಲ್ ಅವರ ದೊಡ್ಡ-ಸೊಸೆ ಟೆರ್ರಿ ಜಾನ್ಸನ್ ಹೇಳಿದ್ದಾರೆ.
ನಾವು ಇದನ್ನು ದೇವರು ಮಾಡಿದ ಪವಾಡವೆಂದು ನೋಡುತ್ತೇವೆ" ಎಂದು ಬೊಯೆಲ್ ಅವರ ದೊಡ್ಡ ಸೋದರಳಿಯ ಗಾರ್ಲ್ಯಾಂಡ್ ಇ. ಮಾರ್ಮನ್ ಹೇಳಿದ್ದಾರೆ. ಬಾಯ್ಲ್ ಅವರ ಕುಟುಂಬವು ದಯೆ, ನಂಬಿಕೆ, ಸಮರ್ಪಣೆ ಮತ್ತು ಆರೋಗ್ಯಕರ ಆಹಾರ ವೃದ್ಧೆಯ ದೀರ್ಘಾವಧಿಯ ರಹಸ್ಯ ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 26, 2020, 3:48 PM IST