ಮದುಮಗಳು ಮದುವೆಯ ಪೂರ್ವದಲ್ಲಿ 'ಶುದ್ಧ' ಆಗಿದ್ದಳೋ ಅಲ್ಲವೋ ಎಂದು ನೋಡುವ ಸಲುವಾಗಿ ಮೊದಲ ರಾತ್ರಿಯ ಬಳಿಕ ಪರೀಕ್ಷೆಯೊಂದನ್ನು ಮಾಡಲಾಗುತ್ತದೆ. ಅದರ ವಿಡಿಯೋ ವೈರಲ್​ ಆಗಿದೆ ನೋಡಿ... 

ಇಲ್ಲೊಂದು ವಿಡಿಯೋ ವೈರಲ್​ ಆಗಿದೆ. ಒಬ್ಬ ಯುವತಿ ಬಿಳಿಯ ಬಟ್ಟೆಯೊಂದನ್ನು ಹಿಡಿದು ನಿಂತಿದ್ದಾಳೆ. ಅದರಲ್ಲಿ ರಕ್ತದ ಕಲೆಗಳಿವೆ. ಅದನ್ನು ನೋಡಿ ಅಲ್ಲಿರೋ ಹೆಂಗಸರೆಲ್ಲರೂ ಖುಷಿಯಿಂದ ಆ ಯುವತಿಯನ್ನು ತಬ್ಬಿಕೊಳ್ಳುತ್ತಿದ್ದಾರೆ. ಆನಂದಬಾಷ್ಪವನ್ನೂ ಹರಿಸುತ್ತಿದ್ದಾರೆ. ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಆ ಯುವತಿ ಕೂಡ ನಗುವಿನ ಜೊತೆ ತಾನೇನೋ ಗೆದ್ದು ಬೀಗಿದೆ ಎನ್ನುವ ಸಂತಸದಲ್ಲಿ ಇದ್ದಾಳೆ. ಬಹುಶಃ ಈ ವೈರಲ್​ ವಿಡಿಯೋ ನೋಡಿದರೆ ಹಲವರಿಗೆ ಏನೂ ಅರ್ಥವಾಗದೇ ಹೋದೀತು. ಏನಾಗುತ್ತಿದೆ ಇಲ್ಲಿ ಎಂದು ತಿಳಿಯುವುದು ಕಷ್ಟವೇ. ಏಕೆಂದ್ರೆ ಇಂಥದ್ದೊಂದು ಅನಿಷ್ಠ ಪದ್ಧತಿಯನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಬಿಡಿ.

ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಕನ್ಯತ್ವದ ಪರೀಕ್ಷೆ. ಅದರಲ್ಲಿ ನವವಿವಾಹಿತೆ ಪಾಸ್​ ಆಗಿದ್ದಾಳೆ. ಮೊದಲ ರಾತ್ರಿಯ ಬಳಿಕ ಈ ಪರೀಕ್ಷೆ ನಡೆಯುತ್ತದೆ. ಕನ್ಯಾಪೊರೆ ಹರಿದು ರಕ್ತ ಬಂದರೆ, ಆಕೆ ಮದುವೆಯ ಮುನ್ನ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ನಡೆಸಿಲ್ಲ ಎನ್ನುವುದು ಸಾಬೀತು ಆಗುತ್ತದೆ. ನಾನು ಇನ್ನೂ ಕನ್ಯೆಯಾಗಿದ್ದು, ನನ್ನ ಮೊದಲ ರಾತ್ರಿಯಲ್ಲಿ ಕನ್ಯಾಪೊರೆ ಹರಿದಿದ್ದು, ರಕ್ತ ಬಂದಿದೆ ಎಂದು ಆ ಬಿಳಿಯ ವಸ್ತ್ರದಲ್ಲಿ ತೋರಿಸುತ್ತಿದ್ದಾಳೆ ಈಕೆ! ಇದನ್ನು ಕೇಳಿದರೆ ಅಬ್ಬಾ ಯಾವ ಕಾಲದಲ್ಲಿ ನಾವಿದ್ದೇವೆ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಇದು ಮಹಿಳೆ ಶುದ್ಧಳೋ ಅಲ್ಲವೋ ಎನ್ನುವ ಪರೀಕ್ಷೆಯಂತೆ. ಹಾಗಿದ್ದರೆ ಪುರುಷರಿಗೆ ಈ ಪರೀಕ್ಷೆ ಏಕಿಲ್ಲ ಎನ್ನುವುದು ಹಲವರ ಪ್ರಶ್ನೆ.

ಮಗುವಾದ್ಮೇಲೆ ದೀಪಿಕಾ ಗೂಗಲ್​ನಲ್ಲಿ ಹುಡುಕಿದ್ದು 'ಪುರ್​ರ್​'! ಏನಿದು ಅಂತ ನಟಿನೇ ಹೇಳಿದ್ದಾರೆ ಕೇಳಿ...

ಇಂದು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗೆ ಎಲ್ಲರೂ ಮಹಿಳೆಯರ ಗುಣಗಾನ ಮಾಡುವಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಅದೇ ಇನ್ನೊಂದು ಮೂಲೆಯಲ್ಲಿ ಇಂಥ ಅನಿಷ್ಠ ಪದ್ಧತಿಗಳು ಮುಂದುವರೆದಿವೆ. ಇಲ್ಲಿ ತಾನು ಕನ್ಯೆಯಾಗಿಯೇ ಇದ್ದೆ ಎಂದು ಸಾಬೀತಾಗಿದೆ ಎಂದು ಆ ಮದುಮಗಳು ಕೂಡ ಗೆದ್ದವರ ರೀತಿಯಲ್ಲಿ ನಗೆ ಬೀರುತ್ತಿದ್ದಾಳೆ. ಇದೇನೋ ಅವರ ಪದ್ಧತಿ, ಒಂದುವೇಳೆ ಕನ್ಯಾಪೊರೆ ಹರಿದು ರಕ್ತ ಬಾರದೇ ಹೋದರೆ? ಅಷ್ಟಕ್ಕೂ ಎಲ್ಲಾ ಯುವತಿಯರಿಗೆ ಮೊದಲ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಕನ್ಯಾಪೊರೆ ಹರಿಯಲೇಬೇಕೆಂದೇನೂ ಇಲ್ಲ ಎನ್ನುವುದು ಇದಾಗಲೇ ವೈದ್ಯರು ಹೇಳಿದ್ದಾರೆ.

ನೃತ್ಯ, ಯಕ್ಷಗಾನದಲ್ಲಿ ತೊಡಗಿಕೊಂಡವರು ಅಥವಾ ವಾಲಿಬಾಲ್​, ಫುಟ್​ಬಾಲ್ ಸೇರಿದಂತೆ ಕೆಲವು ಕ್ರೀಡಾಪಟುಗಳಿಗೆ ತಂತಾನೆಯಾಗಿ ಈ ಕನ್ಯಾಪೊರೆ ಹರಿದು ಹೋಗಿರುತ್ತದೆ. ಅಂಥ ಸಮಯದಲ್ಲಿ, ಮೊದಲ ರಾತ್ರಿ ಅಥವಾ ಮೊದಲ ಮಿಲನದ ಸಂದರ್ಭದಲ್ಲಿ ರಕ್ತ ಬರಲೇಬೇಕೆಂದೇನೂ ಇಲ್ಲ. ಆದರೆ ಇಂಥ ಅನಿಷ್ಠ ಪದ್ಧತಿಗೆ ಅದೆಷ್ಟು ಅಮಾಯಕ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೋ, ಮದುವೆಯಾಗಿ ಮೊದಲ ರಾತ್ರಿಯಾದ ಬಳಿಕವೂ ಇದೇ ಕನ್ಯಾಪೊರೆಯಿಂದಾಗಿ ಎಷ್ಟು ಮಂದಿಯನ್ನು ಮನೆಯಿಂದ ಹೊರಕ್ಕೆ ಹಾಕಲಾಗುತ್ತಿದೆಯೋ ಎನ್ನುವುದು ಮಾತ್ರ ಪ್ರಶ್ನಾರ್ಹವಾಗಿಯೇ ಉಳಿದಿದೆ! ಅಂದಹಾಗೆ ಇದು ಟರ್ಕಿಯ ಸಂಪ್ರದಾಯವಂತೆ! 

ಮೊದಲ ರಾತ್ರಿಯಂದೇ ಮಂಚ ಮುರಿದ ಗುಂಡಮ್ಮನ ರಿಯಲ್​ ಪತಿ ಹೇಗಿರಬೇಕು? ಅಣ್ಣಯ್ಯ ನಟಿಯ ಕನಸು ಕೇಳಿ...

View post on Instagram