ಎಲ್ಲ ಬಿಟ್ಟು ವ್ಯಾನಲ್ಲಿ ಬದುಕು ಶುರು ಮಾಡಿದ ಬಹುಕೋಟ್ಯಾದಿಪತಿ ಮಹಿಳೆ
ಕೆಲವೊಂದು ಘಟನೆಗಳು ನಮ್ಮನ್ನು ನಿರಾಶೆಗೆ ತಳ್ಳುತ್ತೆ. ಜೀವನದಲ್ಲಿ ದೊಡ್ಡ ತಿರುವಿಗೆ ಕಾರಣವಾಗುತ್ತೆ. ಇದ್ದೂ ಇಲ್ಲದಂತೆ ಬದುಕಲು ಮನಸ್ಸು ಬಯಸುತ್ತೆ. ಕೋಟಿ ಆಸ್ತಿ ಇದ್ದರೂ ವ್ಯಾನ್ ನಲ್ಲಿ ಬದುಕುತ್ತಿರುವ ಈಕೆಯ ಕಥೆಗೂ ಇದೇ ಕಾರಣ.
ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ? ಮನುಷ್ಯನಿಗೆ ಇದ್ದಷ್ಟು ಸಾಲೋದಿಲ್ಲ. ಮಹಡಿ ಮೇಲೆ ಮಹಡಿ ಹೊಂದಿರುವ ಮನೆ, ಕೈಗೊಂದು, ಕಾಲಿಗೊಂದು ಆಳು, ಓಡಾಡಲು ವೆರೈಟಿ ಕಾರು, ಐಷಾರಾಮಿ ವಸ್ತುಗಳು ಬೇಕೆಂದೇ ಅನೇಕರು ದಿನವಿಡಿ ದುಡಿಯುತ್ತಾರೆ. ಕಷ್ಟಪಟ್ಟು ಹಣ ಕೂಡಿಹಾಕ್ತಾರೆ. ಇಲ್ಲದವರಿಗೆ ಕೂಡಿಡುವ ಆಸೆಯಾದ್ರೆ ಇದ್ದವರಿಗೆ ಅದನ್ನು ಹೇಗೆ ಡಬಲ್ ಮಾಡ್ಬೇಕೆಂಬ ಆಲೋಚನೆ. ಆದ್ರೆ ಇವರೆಲ್ಲರ ಮಧ್ಯೆ ಇದ್ದೂ ಇಲ್ಲದಂತೆ ಇರುವ ಜನರಿದ್ದಾರೆ. ಐಷಾರಾಮಿ ಜೀವನ ಅನೇಕ ಬಾರಿ ಜೀವನದಲ್ಲಿ ಜಿಗುಪ್ಸೆ ಮೂಡಿಸುತ್ತದೆ. ಹಣ, ಆಸ್ತಿ ಬೇಕಾದಷ್ಟಿದ್ದು, ಪ್ರೀತಿ ಮಾಡುವ ಜನರು ನಮ್ಮ ಬಳಿ ಇಲ್ಲವೆಂದ್ರೆ ಈ ಎಲ್ಲ ಐಷಾರಾಮಿ ಜೀವನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಹಣದ ಹಿಂದೆ ಬಿದ್ದು ಎಲ್ಲವನ್ನೂ ಕಳೆದುಕೊಳ್ಳುವವರು ಕೊನೆಯಲ್ಲಿ ನೆಮ್ಮದಿ ಹುಡುಕಲು ಶುರು ಮಾಡ್ತಾರೆ. ಇದಕ್ಕೆ ಕೈಟ್ಲಿನ್ ಪೈಲ್ ಉತ್ತಮ ಉದಾಹರಣೆ.
ಕೈಟ್ಲಿನ್ (Caitlin) ಪೈಲ್ ಗೆ 36 ವರ್ಷ. ಫ್ಲೋರಿಡಾ (Florida) ದ ನಿವಾಸಿ. ಒಂದು ಕಾಲದಲ್ಲಿ ಈಕೆ ಎಂಟು ಅಂತಸ್ತಿನ ಐಷಾರಾಮಿ (Luxury) ಮನೆಯಲ್ಲಿ ವಾಸವಾಗಿದ್ದಳು. ಕೈಟ್ಲಿನ್ 30 ವರ್ಷ ವಯಸ್ಸಿನಲ್ಲಿದ್ದಾಗ್ಲೇ ಪ್ರೂಫ್ ರೀಡಿಂಗ್ ವ್ಯವಹಾರವನ್ನು ಪ್ರಾರಂಭಿಸಿದ್ದಳು. ಮೊದಲ ವರ್ಷವೇ 82 ಲಕ್ಷ ರೂಪಾಯಿಯನ್ನು ಕೈಟ್ಲಿನ್ ಪೈಲ್ ಸಂಪಾದನೆ ಮಾಡಿದ್ದಳು. ಕೆಲವೇ ವರ್ಷಗಳಲ್ಲಿ ಆಕೆ ಆಸ್ತಿ 33 ಕೋಟಿ ರೂಪಾಯಿಗೆ ಬಂದು ನಿಂತಿತ್ತು. ಕೈಟ್ಲಿನ್ ಪೈಲ್, ತನ್ನ ಆಸೆಯಂತೆ ಐಷಾರಾಮಿ ಮನೆ ಖರೀದಿ ಮಾಡಿದ್ದಳು. ಒಳಾಂಗಣ ವಿನ್ಯಾಸವನ್ನು ನಿಂತು ಮಾಡಿಸಿದ್ದಳು. ಮದುವೆಯಾದ ಕೈಟ್ಲಿನ್ ಪೈಲ್ ಜೀವನ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದ್ರೆ ಎಂಟು ವರ್ಷದ ನಂತ್ರ ಸಂಪೂರ್ಣ ಬದಲಾಯ್ತು. ಐಷಾರಾಮಿ ಮನೆ, ಕೆಲಸಕ್ಕೆ ಒಂದಿಷ್ಟು ಆಳುಗಳನ್ನು ಹೊಂದಿದ್ದ ಕೈಟ್ಲಿನ್ ಪೈಲ್, ಎಂಟು ವರ್ಷದ ನಂತ್ರ ಪತಿಯಿಂದ ವಿಚ್ಛೇದನ ಪಡೆದಳು. ಆಗ ಆ ಬಂಗಲೆಯಲ್ಲಿ ಒಂಟಿಯಾಗಿ ಜೀವನ ನಡೆಸೋದು ಆಕೆಗೆ ಕಷ್ಟವಾಗಿತ್ತು.
ಎಂಥಾ ವಿಪರ್ಯಾಸ! ಪೇರೆಂಟಿಂಗ್ ಸಲಹೆ ನೀಡುತ್ತಿದ್ದ ಯೂಟ್ಯೂಬರ್‌ಗೆ ಸ್ವಂತ ಮಕ್ಕಳ ಮೇಲಿನ ದೌರ್ಜನ್ಯಕ್ಕೆ 60 ವರ್ಷ ಜೈಲು!
ಹಣದ ಸಮಸ್ಯೆ (Financial Crisis), ವಿಚ್ಛೇದನ (Divorce) ಮತ್ತು ಮನೆ ನಿರ್ವಹಣೆ (Home Maintainance) ಆಕೆಗೆ ಕಷ್ಟವಾಗಿತ್ತು. ಕೈಟ್ಲಿನ್ ಪೈಲ್ ಖಿನ್ನತೆಗೆ ಒಳಗಾಗಿದ್ದಳು. ಐಷಾರಾಮಿ ಮಹಲಿನೊಳಗೆ ಏಕಾಂಗಿಯಾಗಿ ವಾಸಿಸುವುದು ಆಕೆಯಿಂದ ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಅನೇಕ ವಿಡಿಯೋ ನೋಡಿದ್ದ ಆಕೆ ವ್ಯಾನ್ ನಲ್ಲಿ ವಾಸಿಸುವ ನಿರ್ಧಾರಕ್ಕೆ ಬಂದಳು. ನಂತ್ರ ತನ್ನ ಐಷಾರಾಮಿ ಬಂಗಲೆ ಮಾರಾಟ ಮಾಡಿದ ಕೈಟ್ಲಿನ್, ಸರಳ ಜೀವನಕ್ಕೆ ಹೊಂದಿಕೊಳ್ಳಲು 72 ಲಕ್ಷ ರೂಪಾಯಿಗೆ ಮರ್ಸಿಡಿಸ್ ಸ್ಪ್ರಿಂಟರ್ ವ್ಯಾನ್ ಖರೀದಿಸಿದಳು. ಈಗ ಅದ್ರಲ್ಲಿಯೇ ಕೈಟ್ಲಿನ್ ವಾಸ ಮಾಡ್ತಿದ್ದಾಳೆ.
ಮರ್ಸಿಡಿಸ್ ಸ್ಪ್ರಿಂಟರ್ ಅನ್ನು ಮನೆಯಾಗಿ ಬದಲಿಸಿದ್ದಾಳೆ. ವ್ಯಾನ್ ನಲ್ಲಿ ಫ್ರಿಜ್, ಜ್ಯೂಸರ್ ಮತ್ತು ಬ್ಲೆಂಡರ್ ನಿಂದ ಕೂಡಿದ ಅಡುಗೆ ಮನೆ ಇದೆ. ವ್ಯಾನ್ ನಲ್ಲಿ ವಾಸ ಮಾಡೋದು ಖುಷಿ ನೀಡಿದೆ ಎನ್ನುತ್ತಾಳೆ ಕೈಟ್ಲಿನ್.
ಇಂಗ್ಲಿಷ್ ಬಾರದೆ ಸಹಪಾಠಿಗಳ ಗೇಲಿಗೆ ಗುರಿಯಾದ ಐಎಎಸ್ ಆಫೀಸರ್ ಸುರಭಿ ಇಂಗ್ಲಿಷ್ ಕಲಿತದ್ದು ಹೇಗೆ?
ಐಷಾರಾಮಿ ಕಾರು (Luxurious Car), ಕೆಲಸಕ್ಕೆ ಜನರನ್ನು ಹೊಂದಿದಾಗ ನೆಮ್ಮದಿ (Peace of Mind) ಇರಲಿಲ್ಲ. ಈಗ ದಿನಕ್ಕೆ ಕೇವಲ 30 ಡಾಲರ್‌ಗಳಲ್ಲಿ ಬದುಕುತ್ತಿದ್ದೇನೆ. ಇದು ನನಗೆ ನೆಮ್ಮದಿ ನೀಡಿದೆ ಎಂದು ಕೈಟ್ಲಿನ್ ಹೇಳಿದ್ದಾಳೆ. ಆಕೆ ವ್ಯಾನ್ ನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಾಳೆ. ಫ್ಲೋರಿಡಾ, ನ್ಯಾಶ್ವಿಲ್ಲೆಗೆ ಪ್ರಯಾಣಿಸಿದ್ದಾಳೆ. ಆಗಾಗ ಪರ್ವತ ಪ್ರದೇಶಗಳಲ್ಲಿ ರಾತ್ರಿ ಕಳೆಯುತ್ತಾಳೆ. ಬಂಗಲೆಯಲ್ಲಿ ಒಂಟಿಯಾಗಿದ್ದೆ. ವ್ಯಾನ್ ಗೆ ಬಂದ್ಮೇಲೆ ಅನೇಕ ಸ್ನೇಹಿತರಾಗಿದ್ದಾರೆ. ಅನೇಕರ ಜೊತೆ ಡೇಟ್ ಗೆ ಹೋಗಿದ್ದೇನೆ. ಅಲ್ಲಿಲ್ಲದ ನೆಮ್ಮದಿ ಇಲ್ಲಿ ಸಿಗ್ತಿದೆ. ರಸ್ತೆ ಪ್ರಯಾಣ, ಸುತ್ತಾಟ ನನಗೆ ಇಷ್ಟ. ನಾನು ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಕೈಟ್ಲಿನ್ ಹೇಳಿದ್ದಾಳೆ.