63 ವರ್ಷದ ಹಿಂದೆ ಹುಟ್ಟಿದ್ರೆ ಮೂಟೆಗಟ್ಟಲೆ ಬಂಗಾರ ಕೊಳ್ಬೋದಿತ್ತು, 10 ಗ್ರಾಂಗೆ ಇದ್ದಿದ್ದು 99 ರೂ. !

ಚಿನ್ನ, ರನ್ನ, ಬಂಗಾರ ಅಂತ ಗಂಡ ಬಾಯ್ತುಂಬಾ ಅದೆಷ್ಟೇ ಕರೆದ್ರೂ ಹೆಂಗಳೆಯರಿಗೆ ಚಿನ್ನದೊಡವೆಗಳ ಮೋಹವಂತೂ ಬಿಟ್ಹೋಗಲ್ಲ. ಕಿವಿಯೋಲೆ, ನೆಕ್ಲೇಸ್, ಕಡ, ಡಾಬು ಅಂತ ಕೆಜಿಗಟ್ಟಲೆ ಬಂಗಾರ ಬೇಕು ಅಂತ ಅಂದ್ಕೊಳ್ತಾರೆ. ಆದ್ರೆ ಇವತ್ತಿನ ದಿನಗಳಲ್ಲಿ ಬಂಗಾರದ ಬೆಲೆ ನೋಡಿದ್ರೆ ಇಷ್ಟೆಲ್ಲಾ ಚಿನ್ನ ಖರೀದಿಸೋದು ಅಂದ್ರೆ ಕನಸೇ ಬಿಡಿ. ಆದ್ರೆ ನೀವು 63 ವರ್ಷದ ಹಿಂದೆ ಹುಟ್ಟಿದ್ರೆ ಮೂಟೆಗಟ್ಟಲೆ ಬಂಗಾರ ಕೊಳ್ಬೋದಿತ್ತು. ಯಾಕಂದ್ರೆ 10 ಗ್ರಾಂ ಚಿನ್ನದ ಬೆಲೆ ಇದ್ದಿದ್ದು 99 ರೂ. !

99 rupees for 10 grams of gold, netizens confused by the price gold bill of 1959 Vin

ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ (Gold) ಹೆಚ್ಚಿನ ಪ್ರಾಶಸ್ತ್ಯವಿದೆ. ಚಿನ್ನಾಭರಣ, ಚಿನ್ನದ ವಿಗ್ರಹ ಮೊದಲಾದವುಗಳನ್ನು ತಯಾರಿಸುತ್ತಾರೆ. ಹಿಂದೆಲ್ಲಾ ಹಿರಿಯರು ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಶೇಖರಿಸಿ ಇಡುತ್ತಿದ್ದರು. ನಂತರ ಕಷ್ಟಕಾಲದಲ್ಲಿ ಅವುಗಳನ್ನು ಮಾರಿ ದುಡ್ಡನ್ನು ಬಳಸಿಕೊಳ್ಳುತ್ತಿದ್ದರು.  ಆದರೆ ಇತ್ತೀಚಿಗೆ ಕೆಲವರು ತಮ್ಮ ಶ್ರೀಮಂತಿಕೆ (Richness) ಪ್ರದರ್ಶಿಶೋಕೆ ಚಿನ್ನಾಭರಣಗಳನ್ನು ಧರಿಸುತ್ತಾರೆ. ದೌಲತ್ತು ಪ್ರದರ್ಶಿಸಲು ಬಯಸುವವರು ಚಿನ್ನದಿಂದ ಹಲವು ವಿಶೇಷ ವಸ್ತುಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಹೂಡಿಕೆಯ ದೃಷ್ಟಿಯಿಂದ ಚಿನ್ನವನ್ನು ಬಳಸುತ್ತಾರೆ. ಆದ್ರೆ ಈಗ ಏನು ಮಾಡೋದಾದ್ರೂ ಚಿನ್ನ ಮುಟ್ಟಿದ್ರೆ ಕೈ ಸುಟ್ಟುಕೊಳ್ಳೋದು ಗ್ಯಾರಂಟಿ. ಅಷ್ಟರಮಟ್ಟಿಗೆ ಚಿನ್ನದ ಬೆಲೆ ಏರಿಕೆಯಾಗಿದೆ (Increase). ಆದ್ರೆ ಹಲವಾರು ವರ್ಷಗಳ ಹಿಂದೆ ಚಿನ್ನದ ಬೆಲೆ (Price) ಇಷ್ಟಿರಲ್ಲಿಲ್ಲ.

63 ವರ್ಷದ ಹಿಂದಿನ ಚಿನ್ನದ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಚಿನ್ನ, ರನ್ನ, ಬಂಗಾರ ಅಂತ ಗಂಡ ಬಾಯ್ತುಂಬಾ ಅದೆಷ್ಟೇ ಕರೆದ್ರೂ ಹೆಂಗಳೆಯರಿಗೆ ಚಿನ್ನದೊಡವೆಗಳ ಮೋಹವಂತೂ ಬಿಟ್ಹೋಗಲ್ಲ. ಕಿವಿಯೋಲೆ, ನೆಕ್ಲೇಸ್, ಕಡ, ಡಾಬು ಅಂತ ಕೆಜಿಗಟ್ಟಲೆ ಬಂಗಾರ ಬೇಕು ಅಂತ ಅಂದ್ಕೊಳ್ತಾರೆ. ಆದ್ರೆ ಇವತ್ತಿನ ದಿನಗಳಲ್ಲಿ ಬಂಗಾರದ ಬೆಲೆ ನೋಡಿದ್ರೆ ಇಷ್ಟೆಲ್ಲಾ ಚಿನ್ನ ಖರೀದಿಸೋದು ಅಂದ್ರೆ ಕನಸೇ ಬಿಡಿ. ಆದ್ರೆ ನೀವು 63 ವರ್ಷದ ಹಿಂದೆ ಹುಟ್ಟಿದ್ರೆ ಮೂಟೆಗಟ್ಟಲೆ ಬಂಗಾರ ಕೊಳ್ಬೋದಿತ್ತು. ಯಾಕಂದ್ರೆ 10 ಗ್ರಾಂ ಚಿನ್ನದ ಬೆಲೆ ಇದ್ದಿದ್ದು 99 ರೂ. ಹೌದು ನಂಬೋಕೆ ಕಷ್ಟವೆನಿಸಿದರೂ ಇದು ನಿಜ. 1959ರಲ್ಲಿ 10 ಗ್ರಾಂ ಚಿನ್ನಕ್ಕಿದ್ದ ಬೆಲೆಯ ಮೊತ್ತ ಕೇವಲ 99 ರೂಪಾಯಿ ಆಗಿದೆ. ಸದ್ಯ 63 ವರ್ಷಗಳ ಹಿಂದೆ ಚಿನ್ನಕ್ಕೆ ಇಷ್ಟು ಕಡಿಮೆ ಬೆಲೆಯಿತ್ತು ಅನ್ನೋ ವಿಚಾರ ಎಲ್ಲೆಡೆ ವೈರಲ್ ಆಗ್ತಿದೆ.

ಅರೆ, ಇಷ್ಟೊಂದು ಚೀಪಾ..1987ರಲ್ಲಿ ಒಂದು ರೂಪಾಯಿಗೆ ಒಂದು ಕೆಜಿ ಗೋಧೀನೆ ಸಿಗ್ತಿತಂತೆ !

ಸದ್ಯ ಚಿನ್ನ, ಬೆಳ್ಳಿ ಬೆಲೆ ಗಗನಕ್ಕೇರಿದೆ. ಹೊಸ ವರ್ಷದಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಬರೆದಿದೆ. ಇಂದಿನ ದರದ ಪ್ರಕಾರ ಹತ್ತು ಗ್ರಾಂ ಚಿನ್ದ ಬೆಲೆ ಬರೋಬ್ಬರಿ 50,900 ರೂ. ಇದೆ. ಈ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ಈಗಾಗಲೇ ಹೇಳಿದ್ದು, ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಕಾಲದ ಚಿನ್ನದ ಬಿಲ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಳೆ ನೋಟುಗಳು ಫೋಟೋ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ಬುಲೆಟ್ ಬಿಲ್‌ಗಳು ವೈರಲ್ ಆಗಿದ್ದವು, ಹಲವಾರು ವರ್ಷಗಳ ಹಿಂದೆ ಬುಲೆಟ್‌ಗಳು ಕೇವಲ 16,000 ರೂ.ಗೆ ಲಭ್ಯವಿದ್ದವು. ಈಗ ಅದೇ ಬುಲೆಟ್ ಬೆಲೆ 2 ಲಕ್ಷ ರೂ. ಆಗಿದೆ. ಇದರ ಬೆನ್ನಲ್ಲೇ ಇದೀಗ ಚಿನ್ನದ ಬಿಲ್ ವೈರಲ್ ಆಗಿದೆ. ಈ ಬಿಲ್‌ನ ವರ್ಷ 1959 ಎಂದು ನಮೂದಿಸಲಾಗಿದ್ದು, ಈ ಮಸೂದೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರಗಳಿವೆ, ಚಿನ್ನದ ದರವನ್ನು ನೋಡಿದ ನೆಟಿಜನ್‌ಗಳು ವಿಚಿತ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 1950ರಲ್ಲಿ ಸ್ವಾತಂತ್ರ್ಯದ ವೇಳೆ ಚಿನ್ನದ ಬೆಲೆ 10 ಗ್ರಾಂಗೆ 99 ರೂ. ಇರುವುದನ್ನು ತೋರಿಸಲಾಗಿದೆ.

Gold Rate Today: ಇಂದು ಹೇಗಿದೆ ನಿಮ್ಮ ನಗರದಲ್ಲಿ ಬಂಗಾರದ ದರ

ವೈರಲ್ ಆಗುತ್ತಿರುವ ಈ 1959 ರ ಬಿಲ್ ನಲ್ಲಿ 621 ಮತ್ತು 251 ರೂಪಾಯಿ ಮೌಲ್ಯದ ಚಿನ್ನದ ವಸ್ತುಗಳನ್ನು ಉಲ್ಲೇಖಿಸಲಾಗಿದೆ. ಇದಲ್ಲದೇ 12 ರೂಪಾಯಿ ಮೌಲ್ಯದ ಬೆಳ್ಳಿ ಮತ್ತು 9 ರೂಪಾಯಿ ಮೌಲ್ಯದ ಇತರ ವಸ್ತುಗಳು ಬಿಲ್‌ನಲ್ಲಿ ಇವೆ. ಒಟ್ಟು ಬಿಲ್ 99 ರೂಪಾಯಿ ಎಂದು ಕೊನೆಯಲ್ಲಿ ಬರೆಯಲಾಗಿದೆ.

ಭಾರತದಲ್ಲಿ1950-1999ರ ವರೆಗೆ  ಚಿನ್ನದ ಬೆಲೆ ಹೇಗಿತ್ತು ?

Year Rate(In INR)
1925 18.75
1930 18.05
1935 30.81
1940 36.04
1950 Rs.99
1951 Rs.98
1952 Rs.76
1953 Rs.73
1954 Rs.77
1955 Rs.79
1956 Rs.90
1957 Rs.90
1958 Rs.95
1959 Rs.102
1960 Rs.111
1961 Rs.119
1962 Rs.119
1963 Rs.97
1964 Rs.63
1965 Rs.71
1966 Rs.83
1967 Rs.102
1968 Rs.162
1969 Rs.176
1970 Rs.184
1971 Rs.193
1972 Rs.202
1973 Rs.243
1974 Rs.369
1975 Rs.520
1976 Rs.545
1977 Rs.486
1978 Rs.685
1979 Rs.890
1980 Rs.1300
1981 Rs.1800
1982 Rs.1600
1983 Rs.1800
1984 Rs.1900
1985 Rs.2000
1986 Rs.2100
1987 Rs.2500
1988 Rs.3000
1989 Rs.3100

1990 Rs.3200
1991 Rs.3400
1992 Rs.4300
1993 Rs.4100
1994 Rs.4500
1995 Rs.4650
1996 Rs.5100
1997 Rs.4700
1998 Rs.4000
1999 Rs.4200
2000 Rs.4400
2001 Rs.4300
2002 Rs.5000
2003 Rs.5700
2004 Rs.5800
2005 Rs.7000
2006 Rs.9000
2007 Rs.10800
2008 Rs.12500
2009 Rs.14500
2010 Rs.18000
2011 26,400
2012 31,050
2013 29,600
2014 28,006
2015 26,343
2016 28,623
2017 29,667
2018 31,438
2019 40,000

Latest Videos
Follow Us:
Download App:
  • android
  • ios