Asianet Suvarna News Asianet Suvarna News

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧ, 80 ಬಾಲಕಿಯರಿಗೆ ವಿಷವುಣಿಸಿದ ಶಾಲೆ!

ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ವರ್ಷದಿಂದ ವರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಹೆಣ್ಣ ಮಗುವನ್ನು ಶಿಕ್ಷಣದಿಂದ ವಂಚಿತಳನ್ನಾಗಿ ಮಾಡುವುದು ಸೇರಿದಂತೆ ಹಲವು ಶೋಷಣೆ ಈಗಲೂ ನಡೆಯುತ್ತಿದೆ. ಇದೀಗ ಹೆಣ್ಣುಮಕ್ಕಳ ಶಿಕ್ಷಣದ ವಿರೋಧದ ನಡುವೆ ಶಾಲೆಗೆ ತೆರಳಿದ 80 ಬಾಲಕಿಯರಿಗೆ ವಿಷ ಆಹಾರ ನೀಡಿದ ಘಟನೆ ನಡೆದಿದೆ.

80 Girl students poisoned in school over amid intense scrutiny over women education Afghanistan ckm
Author
First Published Jun 5, 2023, 6:30 PM IST

ಆಫ್ಘಾನಿಸ್ತಾನ(ಜೂ.05): ಹೆಣ್ಣುಮಕ್ಕಳ ಶಿಕ್ಷಣಕ್ಕೆ ಭಾರಿ ವಿರೋಧ. ಹೆಣ್ಣು ಮಗು ಹೊರಗೆ ಹೋಗುವಂತಿಲ್ಲ. ಶಿಕ್ಷಣ ಪಡೆಯುವಂತಿಲ್ಲ.ಈ ವಿರೋಧದ ನಡುವೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು. ಆದರೆ ಶಾಲೆಯಲ್ಲಿ 80 ಹೆಣ್ಣುಮಕ್ಕಳಿಗೆ ವಿಷ ಆಹಾರ ನೀಡಲಾಗಿದೆ. ತೀವ್ರ ಆಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಘಟನೆ ನಡೆದಿರುವುದು ಆಫ್ಘಾನಿಸ್ತಾನದಲ್ಲಿ. ಹೆಣ್ಣುಮಕ್ಕಳ ಶೋಷಣೆ, ದೌರ್ಜನ್ಯ, ಲೈಂಗಿಕ ಕಿರುಕುಳ ಸೇರಿದಂತೆ ಹಲವು ಘಟನೆಗಳು ವರದಿಯಾಗುತ್ತಲೇ ಇದೆ. ಈ ಕುರಿತು ಕಠಿಣ ಕಾನೂನು, ಜಾಗೃತಿ ಇದ್ದರೂ ಘಟನೆಗಳು ಮರುಕಳಿಸುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತೀ ಹೆಚ್ಚು ದೌರ್ಜನ್ಯ, ಶೋಷಣೆ ನಡೆಯುತ್ತಿರುವ ರಾಷ್ಟ್ರಗಳ ಪೈಕಿ ಆಫ್ಘಾನಿಸ್ತಾನ ಕೂಡ ಒಂದು. 

ಆಫ್ಘಾನಿಸ್ತಾದನ ಸರ್ ಇ ಪೊಲ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ತಾಲಿಬಾನ್ ಆಡಳಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿರೋಧವಿದೆ. ಸದ್ಯ ತಾಲಿಬಾನ್ ಈ ಕುರಿತು ಫತ್ವಾ, ಘೋಷಣೆ ಹೊರಡಿಸದಿದ್ದರೂ ಹಲವು ಪ್ರಾಂತ್ಯಗಳಲ್ಲಿ ಹಲವು ನಿಬಂಧನೆಗಳಿವೆ. ನಸ್ವಾನ್ ಇ ಕಬೂದ್ ಅಬ್ ಸ್ಕೂಲ್ ಹಾಗೂ ನಸ್ವಾನ್ ಇ ಫೈಜಾಬಾದ್ ಸ್ಕೂಲ್ ಎರಡು ಶಾಲೆಯಲ್ಲಿ ವಿಷಾಹಾರ ನೀಡಿದ ಘಟನೆ ವರದಿಯಾಗಿದೆ.

ದೇವರ ಸ್ವಂತ ನಾಡಿನಲ್ಲಿ ಸ್ತ್ರೀ ಶಕ್ತಿ, 14 ಜಿಲ್ಲೆಗಳ ಪೈಕಿ 8ರಲ್ಲಿ ಮಹಿಳೆಯರೇ ಜಿಲ್ಲಾಧಿಕಾರಿಗಳು

ಈ ಎರಡು ಶಾಲೆಗಳು ಅಕ್ಕಪಕ್ಕದಲ್ಲಿದೆ. ಈ ಶಾಲೆಯ ಮಕ್ಕಳು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಬೂದ್ ಅಬ್ ಶಾಲೆಯ 60 ಹೆಣ್ಣು ಮಕ್ಕಳು ಹಾಗೂ ಫೈಜಾಬಾದ್ ಶಾಲೆಯ 20 ಹೆಣ್ಣುಮಕ್ಕಳಿಗೆ ವಿಷ ಆಹಾರ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವ ಮೊಹಮ್ಮದ್ ರಹಮಾನಿ, ಶಾಲೆಯಲ್ಲಿ ವಿಷಾಹಾರ ನೀಡಲಾಗಿದೆ. ಇದರಿಂದ ಮಕ್ಕಳು ಅಸ್ವಸ್ಥರಾಗಿದ್ದಾರೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇತ್ತ ಶಾಲಾ ಆಡಳಿತ ಮಂಡಳಿ ಬೇರೆ ಕತೆ ಹೇಳುತ್ತಿದೆ. ಶಾಲೆಗೆ ಯಾರೋ ಪ್ರವೇಶಿಸಿದ್ದಾರೆ. ಮಕ್ಕಳಿಗೆ ವಿಷಾಹಾರ ನೀಡಿದ್ದಾರೆ. ಈ ಘಟನೆಯಲ್ಲಿ ಶಾಲಾ ಆಡಳಿತ ಮಂಡಳಿಯ ಪಾತ್ರವಿಲ್ಲ ಎಂದಿದೆ. ಇತ್ತ ಮೊಹಮ್ಮದ ರಹಮಾನಿ ಕೂಡ ಮೂರನೇಯವರ ಪಾತ್ರವಿದೆ ಎಂದಿದ್ದಾರೆ. ಈ ಕುರಿತು ತನಿಖೆ ನಡೆಸುವುದಾಗಿ ರಹಮಾನಿ ಹೇಳಿದ್ದಾರೆ. ಈ ಘಟನೆ ಬಳಿಕ ಆಫ್ಘಾನಿಸ್ತಾನದ ಸರ್ ಇ ಪೊಲ್ ಪ್ರಾಂತ್ಯದಲ್ಲಿ ಹಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ. ಶಾಲೆಯೂ ಸುರಕ್ಷಿತವಲ್ಲ ಎಂದಿದ್ದಾರೆ.  

ನೌಕದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆ ಹರಿಹರದ ಗಟ್ಟಿಗಿತ್ತಿ ಯುವತಿ!

ಮಹಿಳಾ ಹಕ್ಕು ಕಸಿದರೆ ಮತ್ತಷ್ಟುನಿರ್ಬಂಧ: ಆಫ್ಘನ್‌ಗೆ ವಿಶ್ವಸಂಸ್ಥೆ ಎಚ್ಚರಿಕೆ
ಅಪ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡಾಗಿನಿಂದ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದೇ ರೀತಿ ತಾಲಿಬಾನ್‌ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದರೆ ದೇಶದÜ ಮೇಲೆ ವಿಶ್ವಸಂಸ್ಥೆ ನಿರ್ಬಂಧ ಹೇರುತ್ತೇವೆ ಎಂದು ತಾಲಿಬಾನ್‌ಗೆ ವಿಶ್ವಸಂಸ್ಥೆ ಖಡಕ್‌ ಎಚ್ಚರಿಕೆ ನೀಡಿದೆ. ವಿಶ್ವವಿದ್ಯಾಲಯ, ಶಾಲೆ, ಜಿಮ್‌, ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಂದ ಮಹಿಳೆಯರನ್ನು ತಾಲಿಬಾನ್‌ ನಿಷೇಧಿಸಿದೆ. ಇದಕ್ಕೆ ವಿಶ್ವಸಂಸ್ಥೆ ಸೇರಿದಂತೆ ಇತರ ರಾಷ್ಟ್ರಗಳು ವಿರೋಧ ವ್ಯಕ್ತ ಪಡಿಸಿವೆ. ಕಳೆದ ವಾರ ಮಹಿಳೆಯರನ್ನೊಳಗೊಂಡ ವಿಶ್ವಸಂಸ್ಥೆ ಪ್ರತಿನಿಧಿಗಳ ತಂಡವೊಂದು ಅಪ್ಘಾನಿಸ್ತಾನಕ್ಕೆ ಭೇಟಿ ನೀಡಿ ಮಹಿಳೆಯರ ಸುರಕ್ಷತೆ ಹಾಗೂ ಅವರ ಹಕ್ಕುಗಳ ಬಗ್ಗೆ ಪರಿಶೀಲಿಸಿದ್ದಾರೆ. ಯಾವುದೇ ಕಾರಣಕ್ಕೂ ತಾಲಿಬಾನ್‌ ಮಹಿಳೆಯರ ಮೇಲೆ ಹೇರುತ್ತಿರುವ ನಿರ್ಬಂಧವನ್ನು ವಿಶ್ವಸಂಸ್ಥೆ ಸಹಿಸುವುದಿಲ್ಲ. ಒಂದು ವೇಳೆ ಇದು ಮುಂದುವರೆದರೆ ಕಠಿಣ ನಿರ್ಬಂಧಗಳನ್ನು ಹೇರಲಾಗುವುದು ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios