Asianet Suvarna News

ಯಶಸ್ವೀ ಮಹಿಳೆಯ ಏಳು ಎಫೆಕ್ಟಿವ್ ಅಭ್ಯಾಸಗಳು

ಯಶಸ್ವೀ ಮಹಿಳೆ ಎನಿಸಿಕೊಳ್ಳುವುದು ಸುಲಭವಲ್ಲ. ಇದಕ್ಕಾಗಿ ಅವರು ಹಲವಷ್ಟು ಕಷ್ಟ ಪಟ್ಟಿರುತ್ತಾರೆ. ಕಷ್ಟವನ್ನೇ ಇಷ್ಟ ಪಟ್ಟಿರುತ್ತಾರೆ. ಬಿದ್ದರೂ ಸಾವರಿಸಿಕೊಂಡು ಎದ್ದು ನಡೆದಿರುತ್ತಾರೆ, ಅಳು ಬಂದಾಗ ಕಣ್ಣೊರೆಸಿಕೊಂಡು ನಗುತ್ತಾ ಮುಂದೆ ಸಾಗಿರುತ್ತಾರೆ. ಎನರ್ಜಿಯನ್ನು ಸದಾ ಸರಿಯಾದ ದಿಕ್ಕಿನಲ್ಲಿ ಚಾನಲೈಸ್ ಮಾಡುವ ಕಲೆ ಸಿದ್ದಿಸಿಕೊಂಡಿರುತ್ತಾರೆ. 

7 Habits Successful Women Have in Common
Author
Bengaluru, First Published Nov 20, 2019, 5:28 PM IST
  • Facebook
  • Twitter
  • Whatsapp

ಸಾಮಾನ್ಯವಾಗಿ ಕೆಲವರಲ್ಲಿ ಹುಟ್ಟುತ್ತಲೇ ಗೆಲ್ಲುವ ಛಲ, ಧೈರ್ಯ, ಅದಕ್ಕಾಗಿ ಹಾರ್ಡ್ ವರ್ಕ್ ಮಾಡುವ ಅಭ್ಯಾಸ, ಅಧಿಕಾರ ಮನಸ್ಥಿತಿ ಬೆಳೆದು ಬಂದಿದ್ದರೆ, ಮತ್ತೆ ಕೆಲವರು ಯಶಸ್ವಿ ಎನಿಸಿಕೊಳ್ಳಲು ಈ ಗುಣಗಳನ್ನು ಕಷ್ಟ ಪಟ್ಟು ಗಳಿಸುತ್ತಾರೆ. ಇನ್ನು ಕೆಲವರು ಅವನ್ನು ಸಾಧಿಸಲಾಗದೆ ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. ಆದರೆ, ಥಿಯೋಡರ್ ರೂಸ್‌ವೆಲ್ಟ್ ಹೇಳುವಂತೆ 'ಹೋಲಿಕೆಯೇ ಸಂತೋಷದ ಕಳ್ಳ' ಎಂಬುದು ಮನಸ್ಸಿನಲ್ಲಿದ್ದರೆ ನಮ್ಮ ನಮ್ಮ ಯಶಸ್ಸಿಗೆ ವೈಯಕ್ತಿಕವಾಗಿ ನಮ್ಮದೇ ಸೂತ್ರಗಳನ್ನೂ, ದಾರಿಗಳನ್ನೂ ಕಂಡುಕೊಳ್ಳಬಹುದು. ಮತ್ತೊಬ್ಬರ ಯಶಸ್ಸಿನ ಅಳತೆಗೋಲಲ್ಲಿ ನಮ್ಮ ಯಶಸ್ಸನ್ನು ಅಳೆಯುವುದನ್ನು ಬಿಟ್ಟು ಅದಕ್ಕಾಗಿ ನಮ್ಮದೇ ಮಾನದಂಡಗಳನ್ನು ರಚಿಸಿಕೊಳ್ಳಬೇಕು. ಹೀಗೆ ವೈಯಕ್ತಿಕ ಮಾನದಂಡಗಳನ್ನು ಸಾಮಾನ್ಯವಾಗಿ ಮಹಿಳೆಯರು ರಚಿಸಿಕೊಂಡಿರುತ್ತಾರೆ ಎನ್ನುತ್ತದೆ ಅಧ್ಯಯನ. 

ಅಮ್ಮನ ಪಾಸಿಟಿವ್ ಯೋಚನೆಗೆ ಮಗುವಿನ ಕಾಯಿಲೆ ಗುಣ

ಹೌದು, ಮಹಿಳೆಯರು ತಮ್ಮ ಯಶಸ್ಸನ್ನು ಹಣ, ಗೆಲುವು ಅಥವಾ ಪೊಸಿಶನ್ನಿಂದ ಅಳೆಯುವುದಿಲ್ಲ. ಬದಲಿಗೆ ಅವರಿಗೆ ವೈಯಕ್ತಿಕವಾಗಿ ಜೀವನದಲ್ಲಿ ಯಾವುದು ಮುಖ್ಯವೆನಿಸುತ್ತದೋ ಅದನ್ನು ಗೆಲ್ಲುವ ಮೂಲಕ ಅಳೆಯುತ್ತಾರೆ. ಅವರಿಗೆ ಹಣ ಹಾಗೂ ಪೊಸಿಶನ್‌ಗಿಂತ ಉದ್ಯೋಗ ಮಾಡುವ ಪರಿಸರ ಸಂತೋಷದಾಯಕವಾಗಿದ್ದರೆ ಅದೇ ಗೆಲುವು ಎನಿಸುತ್ತದೆ ಎಂಬುದು ಅಧ್ಯಯನ ಕಂಡುಕೊಂಡ ಫಲಿತಾಂಶ. ಇದು 'ಥ್ರೈವ್ ಗ್ಲೋಬಲ್' ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ. 

ಯಾವುದನ್ನೇ ಮಾಡುವಾಗ ಅದರ ಮೇಲೆ ನಮಗೆ ಅಪಾರ ಪ್ರೀತಿ ಇದ್ದರೆ, ಖಂಡಿತಾ ನಾವದರಲ್ಲಿ ಯಶಸ್ಸು ಗಳಿಸಬಹುದು. ಇಷ್ಟಾಗಿಯೂ ಸಮಾಜದ ಕಣ್ಣಿನಲ್ಲಿ ಹಾಗೂ ವೈಯಕ್ತಿಕವಾಗಿ ಯಶಸ್ಸು ಗಳಿಸಿದ ಮಹಿಳೆಯರಲ್ಲಿ ಕೆಲವೊಂದಿಷ್ಟು ಗುಣಗಳು ಕಾಮನ್ ಆಗಿವೆ. ಅವುಗಳ ಬಗ್ಗೆ ತಿಳಿದಿರುವುದು ಹಾಗೂ ಅವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದರಿಂದ ಭವಿಷ್ಯದ ಯಶಸ್ಸಿಗೆ ಬುನಾದಿ ಹಾಕಿದಂತಾಗುತ್ತದೆ. ಅವೇನೆಂದು ತಿಳಿಯೋಣ ಬನ್ನಿ.

ಪೇರೆಂಟಿಗ್‌ನಲ್ಲಿ ಉದ್ಯೋಗಸ್ಥ ತಾಯಂದಿರು ಎಡವುದೆಲ್ಲಿ

ಪ್ಯಾಶನ್
ನಾವು ಮಾಡುವ ಕೆಲಸದ ಬಗ್ಗೆ ನಮಗೆ ಅಪಾರ ಪ್ರೀತಿಯಿದ್ದರೆ, ಅದನ್ನು ಮಾಡಲು ಮನಸ್ಸೂ ಬರುತ್ತದೆ, ಮುಂದುವರಿಸಿಕೊಂಡು ಹೋಗುವ ಶ್ರದ್ಧೆಯೂ ಉಳಿಯುತ್ತದೆ. ಕೌಶಲ್ಯಗಳು ಹಾಗೂ ಅನುಭವ ರೆಸ್ಯೂಮೆಯನ್ನು ಆಸಕ್ತಿಕರವಾಗಿಸುತ್ತಾವಾದರೂ, ಮಾಡುವ ಕೆಲಸದ ಮೇಲೆ ಪ್ರೀತಿಯಿದ್ದರೆ ಅದು ನಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. ಪ್ಯಾಶನ್ ಇದ್ದರೆ ಆಕಾಶವೂ ಮಿತಿಯಲ್ಲ. 

ಅನುಭೂತಿ
ಹಲವರು ಅನುಭೂತಿಯನ್ನು ವೀಕ್ನೆಸ್ ಎಂದುಕೊಳ್ಳುತ್ತಾರೆ. ಆದರೆ, ಅನುಭೂತಿಯು ಬಹಳ ಸ್ಟ್ರಾಂಗ್ ಆದ ಗುಣ. ಈ ಗುಣದಿಂದಾಗಿ ನಾವು ಪರರನ್ನು ಅರ್ಥಮಾಡಿಕೊಳ್ಳಬಲ್ಲೆವು. ಅಷ್ಟೇ ಅಲ್ಲ, ಅವರ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿ, ಮನಸ್ಥಿತಿ ಏನಿದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಂಪತಿ ಗುಣವಿರುವವರಲ್ಲಿ ಸಾಮಾನ್ಯವಾಗಿ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುತ್ತದೆ ಹಾಗೂ ಅವರು ಮತ್ತೊಬ್ಬರೊಡನೆ ಬಹಳ ಚೆನ್ನಾಗಿ ಮಾತನಾಡಬಲ್ಲರು. ಉತ್ತಮ ಸಂವಹನ ಕೌಶಲ ಯಶಸ್ಸಿನ ಹಾದಿಯನ್ನು ಸುಲಭಗೊಳಿಸುತ್ತದೆ. 

ಅಪರಿಪೂರ್ಣತೆ ಒಪ್ಪಿಕೊಳ್ಳುವ ಗುಣ
ಕೆಲವೊಮ್ಮೆ ಕೈ ತಪ್ಪಿ ಕೆಟ್ಟ ನಿರ್ಧಾರಗಳು, ತಪ್ಪುಗಳು ನಡೆಯುತ್ತವೆ. ಅವನ್ನೇ ಹಳಿಯುತ್ತಾ ಕೂರುವುದರಲ್ಲಿ ಎನರ್ಜಿ ಹಾಕುವ ಬದಲು ಅದರಿಂದ ಪಾಠ ಕಲಿತು ಮುನ್ನಡೆಯುವುದು ಉತ್ತಮ. ಯಾರಿಗೂ ಯಾವುದೂ ಶೇ.100ರಷ್ಟು ಪರ್ಫೆಕ್ಟ್ ಆಗಿ ಆಗಲು ಸಾಧ್ಯವಿಲ್ಲ. ಪರಿಪೂರ್ಣತೆಗಾಗಿ ಹಂಬಲಿಸುವುದರಿಂದ ನಿರಾಸೆ ಹಾಗೂ ಸೋಲು ಪದೇ ಪದೆ ಎದುರಾಗುತ್ತವೆ. ಬದಲಿಗೆ ಅಪರಿಪೂರ್ಣತೆಯನ್ನೇ ಒಪ್ಪಿಕೊಂಡು ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುವುದು ಉತ್ತಮ. ತನ್ನ ಮೇಲೆ ನಂಬಿಕೆ
ಯಶಸ್ವಿ ಮಹಿಳೆಯರೆಲ್ಲರನ್ನೂ ಅವರ ಮೇಲೆ ಅವರಿಗೆ ಅಪಾರ ನಂಬಿಕೆ ಇರುತ್ತದೆ. ಅವರ ಪ್ರತಿಭೆಯ ಮೇಲೆ, ಪರಿಶ್ರಮದ ಮೇಲೆ, ಧೈರ್ಯ, ಚಿಂತನೆ ಎಲ್ಲವುಗಳ ಮೇಲೆ ನಂಬಿಕೆ ಇರುತ್ತದೆ. ಅಂದ ಹಾಗೆ ಕಂಫರ್ಟ್ ಝೋನ್ ಬಿಟ್ಟು ಹೊರಬರುವ ಧೈರ್ಯ ತೋರದೆ, ರಿಸ್ಕ್ ತೆಗೆದುಕೊಳ್ಳದೆ ಖಂಡಿತಾ ಯಶಸ್ಸು ಸಾಧ್ಯವಿಲ್ಲ. ಫ್ಲೆಕ್ಸಿಬಲಿಟಿ
ಜೀವನ ಯಾವಾಗಲೂ ಟ್ವಿಸ್ಟ್ ಇಟ್ಟಿರುತ್ತದೆ. ಎಲ್ಲವೂ ನಾವು ಅಂದುಕೊಂಡಂತೆಯೇ ಆಗುವುದು ಸಾಧ್ಯವಿಲ್ಲ. ಆಗೆಲ್ಲ ಗುರಿಯ ಹಾದಿಯನ್ನು ರಿಸ್ಟ್ರಕ್ಚರ್ ಮಾಡುವುದು ಅಗತ್ಯ. ಈ ಕಲೆ ಒಲಿಸಿಕೊಂಡರೆ ಎಂಥ ಸಂದರ್ಭವನ್ನೂ ಸುಲಭವಾಗಿ ನಿಭಾಯಿಸಬಹುದು. ಸೋಮಾರಿತನಕ್ಕೆ ತಿಲಾಂಜಲಿ
ಯಶಸ್ಸು ಬೇಕೆನಿನುವವರು ಯಾರೂ ಸೋಮಾರಿಯಾಗಿದ್ದು ಗುರಿ ಮುಟ್ಟಲು ಸಾಧ್ಯವೇ ಇಲ್ಲ. ಇಂದು ಮಾಡಬೇಕಾದ ಯಾವ ಕೆಲಸವನ್ನೂ ಅವರು ನಾಳೆಗೆ ಮುಂದೂಡಲಾರರು. ಯಶಸ್ಸಿಗೆ ಬೇಕಾಗಿರುವುದು ಪರಿಶ್ರಮ ಹಾಗೂ ಬದ್ಧತೆ. ಹಾಗಾಗಿ, ಅದನ್ನು ತಲುಪಲು ಅವರು ನಿರಂತರ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಪ್ರತಿ ದಿನ ಗುರಿಯನ್ನು ನೆನೆದು ಕೆಲಸ ಮಾಡುತ್ತಾರೆ. ತಮ್ಮ ಮೇಲೆ ಹೂಡಿಕೆ
ಯಶಸ್ವೀ ಮಹಿಳೆಯರು ತಮ್ಮ ಸಮಯ, ಹಣ, ಪ್ರತಿಭೆಯನ್ನು ಯಶಸ್ಸಿಗೆ ಅಗತ್ಯವಾದ ಸಂಪನ್ಮೂಲ, ಅನುಭವಗಳ ಗಳಿಕೆಯಲ್ಲಿ ಹಾಕುತ್ತಾರೆ. ತಮ್ಮ ಮೇಲೆಯೇ ಕಲಿಕೆಗಾಗಿ, ಗಳಿಕೆಗಾಗಿ ಮಾಡಿದ ಹೂಡಿಕೆ ಎಂದಿಗೂ ವ್ಯರ್ಥವಾಗುವುದಿಲ್ಲ. ಜೊತೆಗೆ, ಅವರು ತಮ್ಮ ಸಮಯವನ್ನು ಇತರೆ ಯಶಸ್ವೀ ಮಹಿಳೆಯರ ಜೊತೆ ಕಳೆಯಲು ಇಷ್ಟಪಡುತ್ತಾರೆ. ಇದರಿಂದ ಹೊಸತು ಕಲಿಯಲು ಅವರಿಗೆ ಸಹಾಯವಾಗುತ್ತದೆ. 

Follow Us:
Download App:
  • android
  • ios