ಸ್ತನದ ಮೇಲೆ ಕಾಣಿಸುವ ಅಸಹಜ ಮಚ್ಚೆಗೂ, ಕ್ಯಾನ್ಸರ್ ಗೂ ಇದೆ ಸಂಬಂಧ; ಇರಲಿ ಎಚ್ಚರ!

ಬಹುತೇಕ ಸ್ತನ ಕ್ಯಾನ್ಸರ್‌ನ ವಿಧಗಳು ಚಿಕಿತ್ಸೆಯಿಂದ ಗುಣ ಹೊಂದುತ್ತವೆ. ಆದರೆ, ಆರಂಭಿಕ ಹಂತದಲ್ಲೇ ಅದನ್ನು ಗುರುತಿಸಿದರೆ ಚಿಕಿತ್ಸೆ ಸುಲಭ. ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಸ್ತನ ಕ್ಯಾನ್ಸರ್ ಇದ್ದರೆ ನೀವು ನಿರಂತರ ಸ್ಕ್ರೀನಿಂಗ್ ಟೆಸ್ಟ್ಸ್ ಮಾಡಿಸುತ್ತಿರಬೇಕು. 

5 Early Warning Signs of Breast Cancer in Most Women

ಸ್ತನ ಕ್ಯಾನ್ಸರ್ ಎಂಬುದು ಜಗತ್ತಿನಾದ್ಯಂತ ಸಾಮಾನ್ಯ ಕಾಯಿಲೆ ಎಂಬಂತಾಗಿಬಿಟ್ಟಿದೆ. ಪ್ರತಿ 28ರಲ್ಲಿ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ ಎನ್ನುತ್ತದೆ ಅಂಕಿಅಂಶ. ಭಾರತೀಯ ಕ್ಯಾನ್ಸರ್‌ಪೀಡಿತ ಮಹಿಳೆಯರಲ್ಲಿ ಶೇ.27ರಷ್ಟು ಮಂದಿಗೆ ಇರುವುದು ಸ್ತನ ಕ್ಯಾನ್ಸರ್. ನಗರ ಪ್ರದೇಶದ ಮಹಿಳೆಯರಲ್ಲಿ ಈ ಕಾಯಿಲೆ ಹೆಚ್ಚು. ಇದರಿಂದ ತಪ್ಪಿಸಿಕೊಳ್ಳುವ ಅತ್ಯುತ್ತಮ ವಿಧಾನ ಎಂದರೆ ಆರಂಭಿಕ ಹಂತದಲ್ಲೇ ಗುರುತಿಸುವುದು. ಹೀಗೆ ಗುರುತಿಸಲು ಆಗಾಗ ಸ್ಕ್ರೀನಿಂಗ್ ಟೆಸ್ಟ್ ಮಾಡಿಸುತ್ತಿರಬೇಕು. ವರ್ಷಕ್ಕೊಮ್ಮೆ ಮ್ಯಾಮೋಗ್ರಾಂ ಮಾಡಿಸುವುದರಿಂದ ಕಾಯಿಲೆ ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಬೇಗ ಗುರುತಿಸಿದರೆ ಚಿಕಿತ್ಸೆಯೂ ಫಲಕಾರಿಯಾಗುತ್ತದೆ. 

ತಾಯಿ ಹಾಲಿನ ಮಹತ್ವ ಸಾರಿ ತಂದೆಯಂದಿರಿಗೆ ಸಮೀರಾ ಕಿವಿಮಾತು

ಹೌದು, ಸ್ತನ ಕ್ಯಾನ್ಸರ್ ಎಂದರೆ ಸ್ತನದಲ್ಲಿ ಗಡ್ಡೆಯಾಗುತ್ತದೆ. ಆದರೆ, ಆರಂಭಿಕ ಹಂತದಲ್ಲೇ ಹಾಗೆ ಗಡ್ಡೆ ಸಿಗುವುದಿಲ್ಲ. ಬದಲಿಗೆ ಸಣ್ಣದೊಂದು ಗುಳ್ಳೆ, ಊತ, ಕೆಮ್ಮು, ಸುಸ್ತು ಇತ್ಯಾದಿ ಲಕ್ಷಣಗಳು ಕೂಡಾ ಏನೋ ಸರಿಯಿಲ್ಲ ಎಂದು ಹೇಳಲೆತ್ನಿಸುತ್ತಿರಬಹುದು. ಅಂಥ ಐದು ಸ್ತನ ಕ್ಯಾನ್ಸರ್ ಸೂಚನೆಗಳು ಇಲ್ಲಿವೆ. 

1. ಒಣಕೆಮ್ಮು

ಒಣಕೆಮ್ಮು, ಉಸಿರಾಟ ಸಮಸ್ಯೆ, ಗಂಟಲ ಕಿರಿಕಿರಿ ಕೂಡಾ ಕ್ಯಾನ್ಸರ್ ಕೋಶಗಳು ಶ್ವಾಸಕೋಶದವರೆಗೆ ಹರಡಿರುವುದನ್ನು ಹೇಳುತ್ತಿರಬಹುದು. ಈ ಸಮಸ್ಯೆಯನ್ನು ಸೆಕೆಂಡರಿ ಸ್ತನ ಕ್ಯಾನ್ಸರ್ ಎನ್ನಲಾಗುತ್ತದೆ. ಆದರೆ, ಬಹುತೇಕ ರೋಗಿಗಳು ಇದು ಸಾಮಾನ್ಯ ಕೆಮ್ಮು ಹಾಗೂ ಗಂಟಲ ನೋವೆಂದುಕೊಂಡು ನೆಗ್ಲೆಕ್ಟ್ ಮಾಡಿಬಿಡುತ್ತಾರೆ. ಕ್ಯಾನ್ಸರ್ ಸೆಲ್‌ಗಳು ಶ್ವಾಸಕೋಶದ ಸುತ್ತ ಇರುವ ಲೈನಿಂಗ್‌ ಮೇಲೆ ಬೆಳೆದು ಉಸಿರಾಡಲು ಸಮಸ್ಯೆ ಹಾಗೂ ನೀರು ನಿಲ್ಲುವಂತೆ ಮಾಡಬಹುದು. ಕೆಲ ಮಹಿಳೆಯರಿಗೆ ಇದರಿಂದ ಎದೆನೋವು ಕೂಡಾ ಬರಬಹುದು. ಮತ್ತೆ ಕೆಲವರಿಗೆ ಗಂಟಲು ಕಟ್ಟಿಕೊಂಡಂತೆ ಸ್ವರ ದಪ್ಪವಾಗಬಹುದು. ಈ ಲಕ್ಷಣಗಳು ಕೆಲ ವಾರಕ್ಕಿಂತ ಹೆಚ್ಚು ಸಮಯವಿದ್ದರೆ ವೈದ್ಯರನ್ನು ಕಾಣಬೇಕು. 

ತಾಯಿ ಎದೆಹಾಲುಣಿಸು: ಭವಿಷ್ಯದ ಭಾರತ ನಿನ್ನ ಕೂಸು!

2. ಹೊಸ ಮಚ್ಚೆ

ಸಾಮಾನ್ಯವಾಗಿ ಮಚ್ಚೆ, ಗುಳ್ಳೆಗಳು ಚರ್ಮದ ಕ್ಯಾನ್ಸರ್ ಲಕ್ಷಣವಾಗಿದ್ದರೂ, ಯಾವಾಗಲೂ ಕಾರಣ ಅದೇ ಆಗಿರಬೇಕಾಗಿಲ್ಲ. 5956 ಮಹಿಳೆಯರ ಮೇಲೆ ನಡೆಸಿದ ಅಧ್ಯಯನವೊಂದು ಹೆಚ್ಚಿನ ಮಚ್ಚೆ/ಗುಳ್ಳೆಗಳಿರುವವರಿಗೆ ಸ್ತನ ಕ್ಯಾನ್ಸರ್ ಬರುವ ಸಂಭವ ಶೇ.13ರಷ್ಟು ಹೆಚ್ಚು ಎಂದು ತಿಳಿಸಿದೆ. ಅದರಲ್ಲೂ ಋತುಬಂಧ ಸಮೀಪಿಸಿರುವ ಮಹಿಳೆಯರಲ್ಲಿ ಈ ಹೊಸ ಗುಳ್ಳೆಗಳು ಹೆಚ್ಚಾಗಿ ಕಂಡುಬರುತ್ತವೆ. ನಿಮ್ಮ ದೇಹದಲ್ಲಿ ಹೊಸದಾದ ಗುಳ್ಳೆಗಳು, ಮಚ್ಚೆಯಂಥ ಮಾರ್ಕುಗಳು ಕಂಡುಬಂದರೆ, ಮುಂಚೆ ಇದ್ದ ಮಚ್ಚೆಯೇ ಹೊಸ ರೂಪ ಪಡೆಯತೊಡಗಿದ್ದರೆ ವೈದ್ಯರನ್ನು ಕಾಣುವುದು ಅಗತ್ಯ. ತುರಿಕೆ, ಬ್ಲೀಡಿಂಗ್, ನೋವು ಹೊಂದಿದ, ಆಕಾರ, ಗಾತ್ರ ಹಾಗೂ ವಿನಾಯಸದಲ್ಲಿ ಬದಲಾವಣೆ ಪಡೆದ ಮಚ್ಚೆಗಳು ಸ್ತನ ಕ್ಯಾನ್ಸರ್ ಸೂಚಿಸುತ್ತಿರಬಹುದು. 

3. ಸುಸ್ತು

ಅತಿಯಾದ ಸುಸ್ತು ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಲ್ಲೊಂದು. ಇದು ಥೈರಾಯ್ಡ್ ಸಮಸ್ಯೆ ಅಥವಾ ಹಾರ್ಮೋನ್‌ಗಳ ಏರುಪೇರನ್ನೂ ಸೂಚಿಸುತ್ತಿರಬಹುದಾದರೂ ಇದನ್ನು ಕಡೆಗಣಿಸುವಂತಿಲ್ಲ. ಇದು ಕ್ಯಾನ್ಸರ್‍‌ನಿಂದಾಗಿದ್ದರೆ, ನೀವು ಎಷ್ಟೇ ವಿಶ್ರಾಂತಿ ತೆಗೆದುಕೊಂಡರೂ ಇದು ಸರಿಯಾಗುವುದಿಲ್ಲ. ಇದರೊಂದಿಗೆ ಖಿನ್ನತೆ, ನಿದ್ರಾಸಮಸ್ಯೆಗಳು, ನಿರಂತರ ನೋವು ಇರಬಹುದು. ಕಾರಣವೇ ಇಲ್ಲದೆ ಸದಾ ಸುಸ್ತು, ಶಕ್ತಿಹೀನತೆ ಅನುಭವಿಸುವಿರಿ. ಸ್ತನ ಕ್ಯಾನ್ಸರ್ ರೋಗಿಗಳಲ್ಲಿ 10ರಲ್ಲಿ 9 ಮಂದಿ ಚಿಕಿತ್ಸೆ ಸಂದರ್ಭದಲ್ಲಿ ಹೀಗೆ ಸುಸ್ತು ಅನುಭವಿಸುತ್ತಾರೆ. ಆದರೆ, ಇದು ಕಾಯಿಲೆಯ ಆರಂಭಿಕ ಹಂತದಲ್ಲೂ ಆಗಿ ಚಿಕಿತ್ಸೆ ಮುಗಿವವರೆಗೂ ಇರಬಹುದು. 

ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ

4. ಜೀರ್ಣಸಮಸ್ಯೆಗಳು

ಹೊಟ್ಟೆ ಗುಡುಗುಡಿಸುವುದು, ಮಲಬದ್ಧತೆ, ಮೂತ್ರ ನಿಲ್ಲದಿರುವುದು ಮುಂತಾದವು ಕೂಡಾ ಸ್ತನ ಕ್ಯಾನ್ಸರ್ ಲಕ್ಷಣಗಳು. ಈ ಕಾಯಿಲೆಯಿಂದ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳಾಗಿ ಅದು ಅಂಗಾಂಗಗಳ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಕೆಲ ರೋಗಿಗಳು ನಗುವಾಗ ಮೂತ್ರ ಹೋಗುವುದು, ಕೆಮ್ಮು ಹಾಗೂ ಸೀನನ್ನು ಅನುಭವಿಸುತ್ತಾರೆ. ಮತ್ತೆ ಕೆಲವರಿಗೆ ಇದ್ದಕ್ಕಿದ್ದಂತೆ ಮೂತ್ರಕ್ಕೆ ಹೋಗಬೇಕು ಎನಿಸುತ್ತದೆ. ಕ್ಯಾನ್ಸರ್ ದೇಹದ ಮೇಲೆ ಒತ್ತಡ ತರುವುದರಿಂದ ಜೀರ್ಣ ವ್ಯವಸ್ಥೆ ಏರುಪೇರಾಗುತ್ತದೆ. ಹಾಗಾಗಿ ಹೊಟ್ಟೆನೋವು, ಹಸಿವಿಲ್ಲದಿರುವುದು, ಅತಿಯಾಗಿ ತೂಕ ಕಳೆದುಕೊಳ್ಳುವುದು, ಹೊಟ್ಟೆಯ ಭಾಗದಲ್ಲಿ ಊತ ಮುಂತಾದವು ಕಂಡುಬರಬಹುದು. ಇಂಥ ಯಾವುದೇ ಅನುಮಾನಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಿ.

5. ಬೆನ್ನು ನೋವು

ಪ್ರತಿ 10ರಲ್ಲಿ ಎಂಟು ಮಂದಿ ಒಂದಿಲ್ಲೊಂದು ಸಮಯದಲ್ಲಿ ಬೆನ್ನುನೋವನ್ನು ಅನುಭವಿಸಿಯೇ ಇರುತ್ತಾರೆ. ಇಡೀ ದಿನ ಕುಳಿತಿರುವುದು, ಭಂಗಿ ಸರಿಯಿಲ್ಲದಿರುವುದು, ಭಾರ ಎತ್ತುವುದು, ಆರ್ತ್ರೈಟಿಸ್ ಹಾಗೂ ಪೆಟ್ಟು ಮಾಡಿಕೊಂಡಿದ್ದರೆ ಅದರಿಂದ ಬೆನ್ನು ನೋವು ಬರಬಹುದು. ಆದರೆ, ಸ್ತನ ಕ್ಯಾನ್ಸರ್ ಇದ್ದಾಗ ಕೂಡಾ ಬೆನ್ನು ನೋವು ಬರಬಹುದು. ಇದರರ್ಥ ಕ್ಯಾನ್ಸರ್ ಕೋಶಗಳು ಬೆನ್ನು ಹುರಿಗೆ ಹರಡಿವೆ ಎಂದು. ಹಾಗಾಗಿ, ಬೆನ್ನು ನೋವನ್ನು ಉದಾಸೀನ ಮಾಡುವಂತಿಲ್ಲ. ಹೀಗೆ ಕ್ಯಾನ್ಸರ್‌ನಿಂದ ಬರುವ ಬೆನ್ನುನೋವು ನೋರ ಮೂಳೆಗಳಿಂದಲೇ ಬರುತ್ತಿದೆ ಎನಿಸುತ್ತದೆ, ಬೆನ್ನು ಹುರಿ ಹಾಗೂ ಮೂಳೆಗಳ ಮೇಲೆ ಒತ್ತಡ ಹಾಕುತ್ತದೆ. ಇದರಿಂದಾಗಿ ರಾತ್ರಿ ನಿದ್ರಿಸುವುದು ಕಷ್ಟವಾಗುತ್ತದೆ. ನೋವಿನಿಂದ ಮೂಳೆಗಳು ವೀಕ್ ಆಗಿ ಸುಲಭವಾಗಿ ಫ್ರ್ಯಾಕ್ಚರ್ ಆಗಬಹುದು. ಕ್ಯಾನ್ಸರ್‌ನಿಂದ ಬೆನ್ನು ನೋವು ಬಂದಿದ್ದರೆ ಬಹುತೇಕ ಸಮಯ ಅದರ ಜೊತೆಗೆ ಸಂಕಟ, ಗೊಂದಲ, ಬಾಯಾರಿಕೆ, ಕಿರಿಕಿರಿ, ಸುಸ್ತು ಹಾಗೂ ಮಲಬದ್ಧತೆ ಕೂಡಾ ಕಾಣಿಸಿಕೊಳ್ಳುತ್ತದೆ. 

ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!

ಇದಲ್ಲದೆ, ಕಂಕುಳಲ್ಲಿ ಗುಳ್ಳೆ, ಎದೆಯುರಿ, ಋತುಚಕ್ರ ಏರುಪೇರು, ತಿನ್ನಲು ಕಷ್ಟವಾಗುವುದು ಕೂಡಾ ಸ್ತನ ಕ್ಯಾನ್ಸರ್ ಸೂಚಿಸುತ್ತಿರಬಹುದು. 

ಆಗಾಗ ನಿಮ್ಮ ಎದೆಯಲ್ಲಿ ಏನಾದರೂ ಗಂಟುಗಳು, ಗುಳ್ಳೆಗಳು, ಗಟ್ಟಿಯಾದ ಚರ್ಮ, ಊತ, ನಿಪ್ಪಲ್‌ನಲ್ಲಿ ಡಿಸ್ಚಾರ್ಜ್ ಏನಾದರೂ ಕಂಡುಬರುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುತ್ತಿರಬೇಕು. ಸ್ತನ ಕ್ಯಾನ್ಸರ್ ಆರಂಭದಲ್ಲಿ ತಲೆನೋವು, ಸಮತೋಲನ ತಪ್ಪುವುದು, ದೃಷ್ಟಿ ಮಂದ, ಸಂಕಟ, ಮೂತ್ರ ಮಾಡಲು ಸಮಸ್ಯೆ, ದೇಹದ ಯಾವುದೇ ಭಾಗ ಮರಗಟ್ಟುವುದು ಮುಂತಾದವು ಕಂಡುಬರಬಹುದು. ಇಂಥ ಲಕ್ಷಣಗಳು ಎರಡು ವಾರವಾದರೂ ಹೋಗದಿದ್ದರೆ ವೈದ್ಯರನ್ನು ಕಾಣಲೇಬೇಕು. 

Latest Videos
Follow Us:
Download App:
  • android
  • ios