ತಾಯಿ ಹಾಲಿನ ಮಹತ್ವ ಸಾರಿ ತಂದೆಯಂದಿರಿಗೆ ಸಮೀರಾ ಕಿವಿಮಾತು
ಬಹುಭಾಷಾ ತಾರೆ ಸಮೀರಾ ರೆಡ್ಡಿ ಎಲ್ಲ ಗಂಡಂದಿರನ್ನು ಎಚ್ಚರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ರೆಡ್ಡಿ ತಾಯಿ ಹಾಲಿನ ಮಹತ್ವ ಸಾರಿದ್ದಾರೆ.
ಬಹುಭಾಷಾ ತಾರೆ ಸಮೀರಾ ರೆಡ್ಡಿ ಎರಡು ಮಕ್ಕಳ ತಾಯಿ. ‘ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ವಿಕ್’ನಲ್ಲಿ ತಮ್ಮ ಮಗಳ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು ಗಂಡಂದಿರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.
ಮೊದಲ ಬಾರಿಗೆ ತಂದೆಯಾದವರು ನನ್ನ ಮಾತು ಕೇಳಿ. ಇದು ವಿಶ್ವ ಸ್ತನ್ಯಪಾನ ವಾರವಾಗಿದೆ. ನನ್ನ ಮಾತನ್ನು ಒಂದು ಚೂರು ಆಲಿಸಿ.. ತಾಯಿ ಕೂಡ ಖಿನ್ನತೆಗೆ ಒಳಗಾಗುತ್ತಾರೆ. ಅವರಿಗೂ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಒತ್ತಡ ಹೆಚ್ಚಾಗುತ್ತದೆ. ಕೆಲ ಮಾನಸಿಕ ಒತ್ತಡಗಳು ತಾಯಿಯ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಇದು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಉಂಟುಮಾಡುತ್ತದೆ. ಪತ್ನಿಯರ ಜತೆಗೆ ಇದ್ದು ಅವರಿಗೆ ಶಕ್ತಿ ತುಂಬಿ.. ಅವರೊಂದಿಗೆ ಭಾವನಾತ್ಮಕವಾಗಿ ನಿಲ್ಲಿ ಎಂದು ಕೇಳಿಕೊಂಡಿದ್ದಾರೆ.