ಆಶಾ ಭೋಂಸ್ಲೆ ಹಾಡಿದ ಪಿಯಾ ತೂ ಅಬ್‌ ತೋ ಆಜಾ ಬಹಳಷ್ಟು ಜನರಿಗೆ ಇಂದಿಗೂ ಫೇವರೇಟ್ ಸಾಂಗ್. ಇಬ್ಬರು ವೃದ್ಧೆಯರು ಹಾಡು ಕೇಳಿ ಖುಷಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಸಂಗೀತ ಯಾರಿಗೆ ಇಷ್ಟವಿಲ್ಲ ಹೇಳಿ, ಅದನ್ನು ಆಸ್ವಾದಿಸುವುದೂ ಒಂದು ಕಲೆ. ಇಲ್ಲಿ ಒಂದು ಕಡೆ ವೃದ್ಧೆಯರಿಬ್ಬರು ಆಶಾ ಭೋಂಸ್ಲೆ ಹಾಡಿಗೆ ರಸ್ತೆಯಲ್ಲೇ ಡ್ಯಾನ್ಸ್ ಮಾಡಿದ್ದಾರೆ. ಕೆಲವೊಂದು ವಿಡಿಯೋಗಳು ನೆಟ್ಟಿಗರಿಂದ ಭಾರೀ ಮೆಚ್ಚಗೆ ಪಡೆಯುತ್ತವೆ. ಸಹಜತೆಯಿಂದ ಕೂಡಿದ ವಿಡಿಯೋ ಜನ ಲೈಕ್ ಮಾಡಿ ಶೇರ್ ಮಾಡುತ್ತಾರೆ. ಈ ವಿಡಿಯೋ ಕೂಡಾ ಅಂತಹದೇ ಲಿಸ್ಟ್‌ಗೆ ಸೇರಿದೆ.

ಎಪ್ಪತ್ತೆರಡು ಬಾರಿ ಮುಖದ ಸರ್ಜರಿ ಮಾಡಿಸಿಕೊಂಡವನಿಗೆ ಈಗ ಹೆಣ್ಣಾಗುವ ಆಸೆ!

ಭಾರೀ ಖುಷಿಯಲ್ಲಿ, ಫುಲ್ ಎನರ್ಜೆಟಿಕ್ ಆಗಿ ಇಬ್ಬರು ಡ್ಯಾನ್ಸ್ ಮಾಡಿರೋದನ್ನು ನೋಡಿ ನೆಟ್ಟಿಗರೂ ಖುಷಿ ಪಟ್ಟಿದ್ದಾರೆ. 15 ಸೆಕುಂಡುಗಳ ಈ ವಿಡಿಯೋ ಕ್ಲಿಪ್‌ @peechetodekho ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಆಗಿದೆ.

ಸೀರೆ ಉಟ್ಟುಕೊಂಡಿದ್ದ ವೃದ್ಧೆಯರು ಆಶಾ ಭೋಂಸ್ಲೆಯ 1971ರ ಪಿಯಾ ತೂ ಅಬ್ ತೋ ಆಜಾ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ವ್ಯಕ್ತಿಯೊಬ್ಬರು ಬಂದು ವೃದ್ಧೆಯರಿಗೆ ಸಾಥ್ ಕೊಟ್ಟಿದ್ದಾರೆ.

ಭಾರತದ ಟಾಪ್ 10 ಬ್ಯುಸಿನೆಸ್‌ ಮಹಿಳೆಯರು ಇವರು

ದಿಸ್ ಈಸ್ ಸೋ ಕ್ಯೂಟ್ ಎಂಬ ಕ್ಯಾಪ್ಶನ್ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಹಾಡನ್ನು ಆರ್‌ಡಿ ಬರ್ಮಾನ್ ಕಂಪೋಸ್ ಮಾಡಿದ್ದು, ಕರವನ್ ಸಿನಿಮಾ ಹಾಡಾಗಿದೆ ಇದು.

ಈ ವಿಡಿಯೋವನ್ನು 3000ಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಬಹಳಷ್ಟು ಲೈಕ್ಸ್ ಮತ್ತು ರೀಟ್ವೀಟ್ ಕೂಡಾ ಬಂದಿದೆ. ದಿಲ್ ತೋ ಬಚ್ಚ ಆಹೇ ಜೀ ಎಂದು ವೃದ್ಧೆಯರ ಉತ್ಸಾಹ ನೋಡಿದ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.