12ರ ಬಾಲೆಯನ್ನು ರೇಪ್ ಮಾಡಿ ರಸ್ತೆಗೆಸೆದ ದುರುಳರು: ಕಣ್ಣೀರಿಡುತ್ತ 8 ಕಿಮೀ ನಡೆದ ಹುಡುಗಿ
ಭಾರತೀಯ ಸಮಾಜ ಎತ್ತ ಸಾಗುತ್ತಿದೆ? ಪ್ರಪಂಚವೇ ಅರಿಯದ ಪುಟ್ಟ ಬಾಲಿಕಿಯನ್ನು ಅತ್ಯಾಚಾರವೆಸಗಿ ರಸ್ತೆಗೆಸೆದಿದ್ದಾರೆ ದುರುಳರು. ರಕ್ತದ ಮಡುವಿನಲ್ಲಿದ್ದ ಆ ಬಾಲೆ 8 ಕಿ.ಮೀ ನಡೆದಿದ್ದಾಳೆ.
ಜನರಲ್ಲಿ ಮಾನವೀಯತೆಯೇ ಸತ್ತೋಗಿದೆಯಾ ? ಈ ಪ್ರಶ್ನೆಗೆ ಉತ್ತರ ಹೌದು!
ಮನುಷ್ಯನಲ್ಲಿ ಮಾನವೀಯ ಗುಣ ದಿನ ದಿನವೂ ನಾಶವಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಮನುಷ್ಯನ ರಾಕ್ಷಸಿ ಮನಸ್ಥಿತಿಗೆ ಕನ್ನಡಿ ಹಿಡಿಯುವ ಜತೆಗೆ, ಭಯ ಹುಟ್ಟಿಸುವಂಥ ಆಘಾತಕಾರಿ ಘಟನೆ, ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಡೆದಿದೆ.
ಆಕೆ 12 ವರ್ಷದ ಬಾಲಕಿ. ಯಾವ ಊರೋ? ಯಾವ ಹಳ್ಳಿಯೋ? ಯಾರ ಮನೆಯ ಮಗಳೋ? ಆ ರಕ್ಕಸರ ಕೈಗೆ ಅದ್ಹೇಗೆ ಸಿಕ್ಕಿಬಿದ್ದಳು ದೇವರಿಗೇ ಗೊತ್ತು.
ದುರುಳರ ಕೈಗೆ ಸಿಕ್ಕ 12ರ ಬಾಲಕಿ, ಅಕ್ಷರಶಃ ನಲುಗಿ ಹೋದಳು. ಚಿಕ್ಕ ಹುಡುಗಿಯೆಂಬ ಕರುಣೆಯನ್ನೂ ತೋರದ ರಕ್ಕಸ, ಆಕೆಯನ್ನು ಹರಿದು ಮುಕ್ಕೇ ಬಿಟ್ಟಿದ್ದರು. ಅತ್ಯಾಚಾರಕ್ಕೊಳಗಾಗಿ ತೀವ್ರ ರಕ್ತಸ್ತಾವದಿಂದ ಬಳಲುತ್ತಿದ್ದ ಬಾಲಕಿಯನ್ನು, ಅದೇ ರಕ್ಕಸರು ಹೊತ್ತೊಯ್ದು ದಂಡಿ ಆಶ್ರಮದ ಬಳಿ ಎಸೆದು ಹೋಗಿ ಬಿಟ್ಟರು. ರಕ್ಕಸ ಗಂಡಸರ ಮೃಗೀಯ ವರ್ತನೆಯಿಂದ ಮಾನಸಿಕವಾಗಿ, ದೈಹಿಕವಾಗಿಯೂ ಜರ್ಝಿತವಾಗಿದ್ದ ಬಾಲಕಿ, ಅದು ಹೇಗೋ ಸುಧಾರಿಸಿಕೊಂಡಳು. ವಿಪರೀತ ಸುಸ್ತು, ಊಟ, ತಿಂಡಿ, ನೀರು ಸಿಗದೇ ಬಳಲಿದ್ದ ಬಾಲಕಿ, ಅದು ಹೇಗೋ ಶಕ್ತಿ ಒಗ್ಗೂಡಿಸಿ ರಸ್ತೆಗೆ ಬಂದಳು. ಹರಿದ ಬಟ್ಟೆ,
ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಪ್ರಭಾವ, 7 ವರ್ಷದ ಬಾಲಕನಿಂದ 5 ವರ್ಷದ ಬಾಲಕಿಯ ರೇಪ್
ಸುರಿಯುತ್ತಿರುವ ರಕ್ತದ ನಡುವೆ, ಅರೆ ನಗ್ನ ಸ್ಥಿತಿಯಲ್ಲಿ ಬೀದಿ ಬೀದಿ ಅಲೆಯುತ್ತಾ ಸಹಾಯಕ್ಕಾಗಿ ಯಾಚಿಸಿದ್ದಳು. ಆಕೆಯ ಅಸಹಾಯಕ ಸ್ಥಿತಿ ಕಂಡು ಒಬ್ಬೇ ಒಬ್ಬರ ಮನಸ್ಸು ಕರಗಲಿಲ್ಲ. ಒಬ್ಬರೇ ಒಬ್ಬರು ಆ ಹುಡುಗಿಯ ನೆರವಿಗೆ ಧಾವಿಸುವ ಕರುಣೆ ತೋರಲಿಲ್ಲ. ಕನಿಷ್ಠ ಬಟ್ಟೆ ಕೊಡುವ ಉದಾರತೆಯನ್ನೂ ತೋರಲಿಲ್ಲ. ಒಬ್ಬ ವ್ಯಕ್ತಿಯಂತೂ ಸಹಾಯ ಕೋರಿ ಬಂದ ಆಕೆಯನ್ನು ಅಲ್ಲಿಂದ ದೂರ ಹೋಗು ಎಂದು ಓಡಿಸುವ ದೃಶ್ಯ, ಮಾನವೀಯ ಗುಣವುಳ್ಳವರ ರಕ್ತ ಕುದಿಸುತ್ತದೆ.
ಉಜ್ಜಯನಿಯಿಂದ ಸುಮಾರು 15 ಕಿಮೀ ದೂರದ ಬದ್ನಾಗರ್ ರಸ್ತೆಯ ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ಈ ಬಾಲಕಿಯ ಮನಕುವ ಯಾತನೆಯ ದೃಶ್ಯಗಳು ಸೆರೆಯಾಗಿದೆ. ಹರಿದ ಬಟ್ಟೆಯಿಂದಲೇ ತನ್ನ ದೇಹದ ಭಾಗ ಮುಚ್ಚಿಕೊಳ್ಳಲು ಇನ್ನಿಲ್ಲದ ಕಷ್ಟಪಟ್ಟ ಬಾಲಕಿ, ಸಹಾಯಕ್ಕಾಗಿ ಕಂಡ, ಕಂಡವರೆನ್ನಲ್ಲ ಬೇಡಿಕೊಂಡಿದ್ದಾಳೆ.
ದೊಡ್ಡ ಮನೆಯ ಎದುರು ನಿಂತಿದ್ದ ವ್ಯಕ್ತಿ ಬಳಿ ಆಕೆಯ ಮಾನ ಮುಚ್ಚಲು ಸಹಾಯ ಮಾಡುವುದನ್ನೂ ಮರೆತು, ಆಕೆಯನ್ನು ಅಲ್ಲಿಂದ ಓಡಿಸಿದ್ದಾನೆ. ಆತನ ದಾರ್ಷ್ಟ್ಯದ ವರ್ತನೆ 1.7 ನಿಮಿಷದ ವಿಡಿಯೋದಲ್ಲಿ ಕಾಣಿಸುತ್ತದೆ.
ಹೀಗೆ ಸಹಾಯ ಕೇಳುತ್ತಾ, ಕಣ್ಣೀರಿಡುತ್ತಾ ಬಾಲಕಿ ಸುಮಾರು 8 ಕಿಲೋ ಮೀಟರ್ ನಡೆದಿದ್ದಾಳೆ. ಇಷ್ಟಾದರೂ, ಆ ಬಾಲಕಿಗೆ ಸ್ಥಿತಿ ಕಂಡು ಒಬ್ಬರ ಮನಸ್ಸೂ ಕರಗಲಿಲ್ಲ. ಮರುಗಲಿಲ್ಲ. ಯಾವ ಮನೆಯವರೂ ನೆರವು ನೀಡಲಿಲ್ಲ, ಹಾದಿ ಬೀದಿಯಲ್ಲಿ ಓಡಾಡುವವರೂ ಬಾಲಕಿಯ ಕಣ್ಣೀರಿಗೆ ಕರಗಲಿಲ್ಲ.
ಉದ್ಯೋಗದಲ್ಲಿದ್ದ ಕರ್ನಾಟಕ ಯುವತಿಯ ಮೇಲೆ ಹೈದರಾಬಾದ್‌ನಲ್ಲಿ ಅತ್ಯಾಚಾರ
ಬೀದಿ ಬೀದಿ ಅಲೆಯುತ್ತಾ ಕೊನೆಗೆ ಆಶ್ರಮವೊಂದನ್ನು ತಲುಪಿದ ಬಾಲಕಿಗೆ ಅಲ್ಲಿದ್ದ ಅರ್ಚಕರೊಬ್ಬರು ನೆರವಿಗೆ ಧಾವಿಸಿದ್ದಾರೆ. ಇದು ರೇಪ್ ಎಂದು ಅರಿತ ಅರ್ಚಕರು, ತಕ್ಷಣವೇ ಆಕೆ ದೇಹವನ್ನು ಟವೆಲ್‌ನಿಂದ ಮುಚ್ಚಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಹುಡುಗಿಗೆ, ಪೊಲೀಸ್ ಸಿಬ್ಬಂದಿಯೇ ರಕ್ತದಾನ ಮಾಡಿ, ಮಾನವೀಯತೆ ಮೆರೆದರು..
ಕೇಸ್ ದಾಖಲಿಸಿಕೊಂಡಿರುವ ಉಜ್ಜಯಿನಿ ಪೊಲೀಸರು, ಅತ್ಯಾಚಾರಿಗಳ ಬಂಧನಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಖಚಿತವಾಗಿದೆ ಅಂತ ಉಜ್ಜಯನಿಯ ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
ತನ್ನ ಊರು ಯಾವುದು, ಹೆಸರು, ಇತರ ವಿವರ ಹೇಳುವುದು ಬಾಲಕಿಗೆ ಸಾಧ್ಯವಾಗುತ್ತಿಲ್ಲ. ಆಕೆಯ ಮಾತಿನ ಶೈಲಿ ಗಮನಿಸಿದರೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದವಳು ಎನಿಸುತ್ತಿದೆ ಅಂತಾರೆ ಪೊಲೀಸರು.
ಗಂಡು ಮಗು ಆಗ್ಲಿ ಅಂತ ಹೆಣ್ಣು ಮಕ್ಕಳ ಮೇಲೆ ಸತತ 10 ವರ್ಷ ರೇಪ್ ಮಾಡಿದ ನೀಚ ತಂದೆ!
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಉಜ್ಜಯಿನಿ ಜನರ ಅಮಾನವೀಯತೆ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಆಕೆಯನ್ನು ಬರ್ಬರವಾಗಿ ಅತ್ಯಾಚಾರಗೈದ ರಕ್ಕಸರಿಗೂ, ಅಸಹಾಯಕಳಾಗಿ ಅಲೆಯುತ್ತಿರುವ ಬಾಲಕಿಗೆ ನೆರವು ನೀಡದ ಜನರಿಗೂ ಯಾವ ವ್ಯತ್ಯಾಸವಿದೆ ಎಂದು ಕೆಂಡಕಾರಿದ್ದಾರೆ. ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸುವ ಘಟನೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. 2019ರಿಂದ 2021ರ ಅವಧಿಯಲ್ಲಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಮಹಿಳೆಯರು ಮತ್ತು ಮಕ್ಕಳು ನಾಪತ್ತೆಯಾದ ಪ್ರಕರಣಗಳಿವೆ.
ದೇಶದಲ್ಲಿ ಮಹಿಳೆಯರ ಮೇಲೆ ಅತಿಹೆಚ್ಚು ಅತ್ಯಾಚಾರ ನಡೆಯುವ ರಾಜ್ಯ ಮಧ್ಯಪ್ರದೇಶ ಎಂಬ ಕಳಂಕ ಹೊತ್ತಿದೆ. 2016 ರಲ್ಲಿ ಮಧ್ಯ ಪ್ರದೇಶದಲ್ಲಿ 6,462 ರೇಪ್ ಕೇಸ್ ದಾಖಲಾಗಿದೆ ಎನ್ನುತ್ತದೆ ರಾಷ್ಟ್ರೀಯ ಅಪರಾಧ ದಳದ ವರದಿ. ಅದರಲ್ಲೂ ಶೇ.50ರಷ್ಟು ಅಪ್ರಾಪ್ತರ ಮೇಲೆ ನಾನಾ ರೀತಿಯ ದೌರ್ಜನ್ಯ ಕೇಸ್ ದಾಖಲಾಗುತ್ತಿದೆ. ಅಂದರೆ, ದಿನಕ್ಕೆ 18 ಅಪ್ರಾಪ್ತರು ರೇಪ್ಗೊಳಗಾಗುತ್ತಿದ್ದಾರೆಂಬ ಆಘಾತಕಾರಿ ಅಂಶ, ಜನರ ನಿದ್ದೆಗೆಡಿಸುತ್ತಿದೆ..