Asianet Suvarna News Asianet Suvarna News

WhatsApp Communities: ಏಕಕಾಲದಲ್ಲಿ 512 ಜೊತೆ ಸಂಪರ್ಕ, ವಾಟ್ಸಾಪ್‌ ಹೊಸ ವೈಶಿಷ್ಟ್ಯ!

ಚಾಟಿಂಗ್ ಆಪ್‌ಗಳಲ್ಲಿ ವಿಶ್ವದಲ್ಲಿಯೇ ಅಗ್ರಪಂಕ್ತಿಯಲ್ಲಿ ನಿಂತಿರುವ ವಾಟ್ಸಾಪ್‌ ತನ್ನ ಹೊಸ ವೈಶಿಷ್ಟ್ಯವಾದ ವಾಟ್ಸಾಪ್‌ ಕಮ್ಯುನಿಟೀಸ್‌ (ವಾಟ್ಸಾಪ್‌ ಸಮುದಾಯ) ಈಗಾಗಲೇ ಪ್ರಕಟ ಮಾಡಿತ್ತು. ಈಗ ಈ ಸೇವೆ ಕೆಲ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಹೊಸ ವೈಶಿಷ್ಟ್ಯದ ವಿಶೇಷತೆ ಇಲ್ಲಿದೆ.
 

WhatsApp Communities feature now live for beta can make group of 512 participants san
Author
First Published Aug 24, 2022, 8:58 PM IST

ನವದೆಹಲಿ (ಮಾ.24): ಮಾರ್ಕ್ ಜುಕರ್‌ಬರ್ಗ್ ಈ ವರ್ಷದ ಆರಂಭದಲ್ಲಿ ವಾಟ್ಸಾಪ್‌ ಕಮ್ಯುನಿಟೀಸ್‌ ಬಗ್ಗೆ ಘೋಷಣೆ ಮಾಡಿದ್ದರು. ಬಳಕೆದಾರರಿಗೆ ಗುಂಪುಗಳಲ್ಲಿ ಸಣ್ಣ ಗುಂಪುಗಳನ್ನು ರಚಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮಾತನಾಡಿದ್ದರ. ತಿಂಗಳ ಕಾಯುವಿಕೆಯ ನಂತರ ಈ ವೈಶಿಷ್ಟ್ಯವು ಅಂತಿಮವಾಗಿ ವಾಟ್ಸಾಪ್‌ನ  ಬೀಟಾ ಬಳಕೆದಾರರಿಗೆ ಹೊರತರುತ್ತಿದೆ, ಇದರೊಂದಿಗೆ ಆಂಡಾಯ್ಡ್‌ ಹಾಗೂ ಐಒಎಸ್‌ನ ಎಲ್ಲಾ ವರ್ಷನ್‌ಗಳಿಗೆ ಶೀಘ್ರದಲ್ಲೇ ಹೊಸ ಫೀಚರ್‌ ಬರುವ ನಿರೀಕ್ಷೆಯನ್ನೂ ಇದರಿಂದ ಇಡಬಹುದಾಗುದೆ. ವಾಬೀಟಾಇನ್ಫೋನ ಹೊಸ ವರದಿಯ ಪ್ರಕಾರ, ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್‌ ಬೀಟಾ ವಿ2.22.193 ಗೆ ಅಪ್‌ಡೇಟ್ ಮಾಡಿದ ಕೆಲವು ಬಳಕೆದಾರರಿಗೆ ಕಮ್ಯುನಿಟೀಸ್‌ ಟ್ಯಾಬ್ ತೋರಿಸುತ್ತಿದೆ. ಇತ್ತೀಚಿನ ಆವೃತ್ತಿಯಲ್ಲಿ ಎಲ್ಲಾ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಈಗಿನಿಂದಲೇ ಗೋಚರಿಸದಿರಬಹುದು ಮತ್ತು ಕೆಲವರು ಅಪ್ಲಿಕೇಶನ್ ಅನ್ನು ಬಲವಂತವಾಗಿ ಕ್ಲೋಸ್‌ ಮಾಡಿ ಅದನ್ನು ಮತ್ತೆ ಓಪನ್‌ ಮಾಡಬೇಕಾಗಬಹುದು. ವೈಶಿಷ್ಟ್ಯಕ್ಕೆ ಪ್ರವೇಶ ಪಡೆಯುವವರಿಗೆ, ಮುಖ್ಯ ವಾಟ್ಸಾಪ್‌ ಪರದೆಯಲ್ಲಿ ಹೊಸ ಕಮ್ಯುನಿಟೀಸ್‌ ಟ್ಯಾಬ್ ಗೋಚರಿಸುತ್ತದೆ, ಅದು ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಾಯಿಸಿದೆ. ಹೊಸ ಕಮ್ಯುನಿಟೀಸ್‌ ಟ್ಯಾಬ್ ಅನ್ನು ನೋಡಬಹುದಾದವರು ಅದರಲ್ಲಿ 10 ಗುಂಪುಗಳನ್ನು ರಚನೆ ಮಾಡುವ ಅವಕಾಶವಿದೆ. ಪ್ರತಿ ಗುಂಪಿನಲ್ಲಿ ಕನಿಷ್ಠ 512 ಮಂದಿಯನ್ನು ಸೇರಿಸಬಹುದಾಗಿದೆ.

ಗ್ರೂಪ್‌ ಆಡ್ಮಿನ್‌ಗೆ ಕಮ್ಯುನಿಟೀಸ್‌, ಮೂಲಭೂತವಾಗಿ ಸಣ್ಣ ಉಪ-ಗುಂಪುಗಳ ಮೇಲೆ ಇರಿಸಲಾದ ದೊಡ್ಡ ಗುಂಪಾಗಿರುತ್ತದೆ. ಆಡ್ಮಿನ್‌ಗಳು ನಿರ್ದಿಷ್ಟ ಉಪ-ಗುಂಪುಗಳಿಗೆ ಅಥವಾ ಇಡೀ ಸಮುದಾಯಕ್ಕೆ ಪ್ರಕಟಣೆ ಗುಂಪಿನ ಮೂಲಕ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ, ಅದನ್ನು ಅವರು ಕಮ್ಯುನಿಟೀಸ್‌ಅನ್ನು ರಚಿಸಿದಾಗ ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ. ಅದರರ್ಥ ಒಂದೇ ಸಂದೇಶವನ್ನು ವಿವಿಧ ಗುಂಪುಗಳಿಗೆ ಪದೇ ಪದೇ ಕಳಿಸುವ ಅಗತ್ಯವಿರುವುದಿಲ್ಲ. 

WhatsApp Communities feature now live for beta can make group of 512 participants san

ಎಷ್ಟು ಜನರಿದ್ದಾರೆ ಅನ್ನೋದು ಆಡ್ಮಿನ್‌ಗೆ ಮಾತ್ರ ಗೊತ್ತಾಗುತ್ತೆ: ಇನ್ನೊಂದೆಡೆ, ಯಾವ ಸಬ್‌ ಗ್ರೂಪ್‌ಗೆ ತಾನು ಸೇರಬಹುದು ಎನ್ನುವುದನ್ನು ಅವರ ಆಯ್ಕೆಯ ಮೇಲೆ ಬಿಡಲಾಗಿದೆ. ಸಮುದಾಯಕ್ಕೆ ಆಹ್ವಾನಿಸಲಾದ ಬಳಕೆದಾರರು ತಮ್ಮ ಆಸಕ್ತಿಗಳ ಆಧಾರದ ಮೇಲೆ ಯಾವ ಉಪ-ಗುಂಪನ್ನು ಸೇರಬೇಕೆಂದು ನಿರ್ಧರಿಸಬಹುದು. ಕಮ್ಯುನಿಟೀಸ್‌, ಉಪ-ಗುಂಪಿನ ಸದಸ್ಯರಿಗೆ ಕಮ್ಯುನಿಟೀಯನ್ನು ತೊರೆಯದೆಯೇ ಸಬ್‌ ಗ್ರೂಪ್‌ಅನ್ನು ಬಿಡುವ ಅವಕಾಶ ನೀಡುತ್ತವೆ. ಗೌಪ್ಯತೆಯ ಕಾರಣಗಳಿಗಾಗಿ ಉಪ-ಗುಂಪುಗಳಲ್ಲಿನ ಸದಸ್ಯರ ಸಂಖ್ಯೆಯನ್ನು ಅಡ್ಮಿನ್‌ ಹೊರತಾಗಿ ಇತರರಿಗೆ ಕಾಣಿಸದೇ ಇರುವ ನಿಟ್ಟಿನಲ್ಲಿ ವಾಟ್ಸಾಪ್‌ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅದಿನ್ನೂ ಕಾರ್ಯಗತಗೊಂಡಿಲ್ಲ.

WhatsApp ನಲ್ಲಿ ಜಾಬ್‌ ಆಫರ್‌ ಸಿಕ್ಕಿದೆಯೇ..? ನೀವು ರಿಪ್ಲೈ ಮಾಡುವ ಮೊದಲು ಚೆನ್ನಾಗಿ ಯೋಚಿಸಿ..!

ನೀವು ಹೆಚ್ಚಿನ ಬಳಕೆದಾರರಂತೆ ವಾಟ್ಸಾಪ್‌ನ ಸ್ಥಿರ ಆವೃತ್ತಿಯನ್ನು ಬಳಸುತ್ತಿದ್ದರೆ, ನೀವು ಕಮ್ಯುನಿಟೀಸ್‌ ಆಯ್ಕೆ ಪಡೆಯಲು ಇನ್ನೂ ಕೆಲ ದಿನ ಕಾಯುವುದು ಅನಿವಾರ್ಯ. ಏಕೆಂದರೆ ಯಾವುದೇ ದೋಷಗಳನ್ನು ಕಂಡುಹಿಡಿದ ನಂತರ ಹಾಗೂ ಅದನ್ನು ಆಪ್‌ನಿಂದ ತೆಗೆದ ನಂತರ ಮಾತ್ರ ವೈಶಿಷ್ಟ್ಯವು ಸ್ಥಿರವಾದ ಅಪ್‌ಡೇಟ್‌ಅನ್ನು ಬಿಡುಗಡೆ ಮಾಡಲಾಗುತ್ತದೆ.

ವಾಟ್ಸಾಪ್‌ ಬಳಕೆದಾರರಿಗೆ ಗುಡ್‌ ನ್ಯೂಸ್:‌ ಡಿಲೀಟ್‌ ಮಾಡಿದ ಮೇಸೆಜ್‌ ಮತ್ತೆ ಪಡೆಯುವ ಫೀಚರ್‌ ಶೀಘ್ರದಲ್ಲೇ ಬಿಡುಗಡೆ

ಇತ್ತೀಚೆಗಷ್ಟೇ ಮೆಟಾ ಒಡೆತನದ ವಾಟ್ಸಾಪ್‌ ತನ್ನ ಬಳಕೆದಾರರಿಗಾಗಿ ಸಖತ್‌ ಅಪ್ಡೇಟ್‌ ಅನ್ನು ನೀಡಿತ್ತು.ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಅಳಿಸಲಾದ ಸಂದೇಶಗಳನ್ನು (Deleted Message) ಮರುಪಡೆಯಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು WABetaInfo ವರದಿ ತಿಳಿಸಿದೆ.

Follow Us:
Download App:
  • android
  • ios