ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಡಿಲೀಟ್ ಮಾಡಿದ ಮೇಸೆಜ್ ಮತ್ತೆ ಪಡೆಯುವ ಫೀಚರ್ ಶೀಘ್ರದಲ್ಲೇ ಬಿಡುಗಡೆ
Recover WhatsApp Deleted Messages: ಡಿಲೀಟ್ ಮಾಡಲಾದ ಸಂದೇಶಗಳನ್ನು ಮರುಪಡೆಯಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ
ಬೆಂಗಳೂರು (ಆ. 16): ಮೆಟಾ ಓಡೆತನದ ವಾಟ್ಸಾಪ್ ಬಳಕೆದಾರರಿಗಾಗಿ ಮತ್ತೊಂದು ಸಖತ್ ಅಪ್ಡೇಟ್ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಕಳೆದ ಕೆಲ ಸಮಯದಿಂದ ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸುತ್ತಿದೆ. ಮೆಟಾ-ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಅಳಿಸಲಾದ ಸಂದೇಶಗಳನ್ನು (Deleted Message) ಮರುಪಡೆಯಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು WABetaInfo ವರದಿ ತಿಳಿಸಿದೆ.
ಸೂಕ್ಷ್ಮ ಮಾಹಿತಿಯನ್ನು ಅಳಿಸುವಾಗ, ನಾವು ಸಾಮಾನ್ಯವಾಗಿ "Delete for everyone" ಬದಲಿಗೆ "Delete for me" ಕ್ಲಿಕ್ ಮಾಡಿದಾಗ ಮತ್ತೆ ಆ ಮೇಸೆಜ್ ಪಡೆಯಲು ನಮಗೆ ಸಾಧ್ಯವಾಗುವುದಿಲ್ಲ. "Delete for everyone" ಬದಲಿಗೆ "Delete for me" ಕ್ಲಿಕ್ ಮಾಡುವ ಮೂಲಕ ಸಂದೇಶವನ್ನು ಅಳಿಸಿದ ಬಳಕೆದಾರರಿಗಾಗಿ ಸಹಾಯವಾಗುವಂತೆ ಈ ವೈಶಿಷ್ಟ್ಯವನ್ನು ಹೊರತರಲಾಗುತ್ತಿದೆ ಎನ್ನಲಾಗಿದೆ.
ವೈಶಿಷ್ಟ್ಯವನ್ನು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರರೊಂದಿಗೆ ಪರೀಕ್ಷಿಸಲಾಗುತ್ತಿದೆ. ನೀವು ಈ ವೈಶಿಷ್ಟ್ಯವನ್ನು ಪರೀಕ್ಷಿಸಿಬಹುದೇ ಎಂದು ಪರಿಶೀಲಿಸಲು ಪ್ಲೇಸ್ಟೋರ್‌ನಿಂದ ವಾಟ್ಸಾಪ್ ಅಪ್‌ಡೇಟ್ ಮಾಡಿ.
WABetaInfo "undo" ಬಟನ್‌ನೊಂದಿಗೆ ಅಪ್ಲಿಕೇಶನ್‌ನ ಕೆಳಗೆ ಸಣ್ಣ ಪಾಪ್‌ಅಪ್ (Pop Up) ತೋರಿಸುವ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದೆ. Android 2.22.18.13 ವಾಟ್ಸಾಪ್ ಬೀಟಾದಲ್ಲಿ ಈ ವೈಶಿಷ್ಟ್ಯವನ್ನು ನೀಡಲಾಗಿದೆ ಎಂದು WABetaInfo ವರದಿ ಹೇಳಿದೆ.
ವಾಟ್ಸಾಪ್‌ನ ಇತರ ಅಪ್ಡೇಟ್ಸ್: ಇನ್ನು ಕೆಲವು ಬ್ಯುಸಿನೆಸ್ ಖಾತೆಗಳೊಂದಿಗೆ ಚಾಟ್ ಮಾಡುವಾಗ ಪ್ರೊಫೈಲ್ ಚಿತ್ರಗಳು ಮತ್ತು ಫೋನ್ ಸಂಖ್ಯೆಗಳಿಗಾಗಿ ಅವತಾರ್‌ಗಳಲ್ಲಿ (Avatars) ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಅಲ್ಲದೇ ಗುಂಪು ಚಾಟ್‌ಗೆ ಸಂಬಂಧಿಸಿದ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸಹ ವಾಟ್ಸಾಪ್ ಪರೀಕ್ಷಿಸುತ್ತಿದೆ.
WhatsApp Update: ಈಗ 2 ದಿನ ಆದ್ಮೇಲೂ ಕಳಿಸಿದ ಮೆಸೇಜ್ ಡಿಲೀಟ್ ಮಾಡಬಹುದು
ವಾಟ್ಸಾಪ್ ಶೀಘ್ರದಲ್ಲೇ ಮೂರು ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತದೆ ಅದು ಅವರ ಸಂಭಾಷಣೆಗಳ ಮೇಲೆ ಉತ್ತಮ ನಿಯಂತ್ರಣವನ್ನು ನೀಡುತ್ತದೆ ಮತ್ತು ಭದ್ರತೆಯ ಹೆಚ್ಚುವರಿ ಪದರವನ್ನು ನೀಡಲಿದೆ. ಫೇಸ್‌ಬುಕ್ ಸಿಇಒ ಮತ್ತು ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ವೈಶಿಷ್ಟ್ಯಗಳನ್ನು ಪ್ರಕಟಿಸಿದ್ದಾರೆ.
"ವಾಟ್ಸಾಪ್‌ಗೆ ಬರುವ ಹೊಸ ಗೌಪ್ಯತೆ ವೈಶಿಷ್ಟ್ಯಗಳು: ಎಲ್ಲರಿಗೂ ತಿಳಿಸದೆ ಗುಂಪು ಚಾಟ್‌ಗಳಿಂದ ನಿರ್ಗಮಿಸಿ, ನೀವು ಆನ್‌ಲೈನ್‌ನಲ್ಲಿರುವಾಗ ಯಾರು ನೋಡಬಹುದು ಎಂಬುದನ್ನು ನಿಯಂತ್ರಿಸಿ ಮತ್ತು ವೀವ್ ಒನ್ಸ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ತಡೆಯಿರಿ." ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಈ ವೈಶಿಷ್ಟ್ಯಗಳನ್ನು ಸದ್ಯ ಪರೀಕ್ಷಿಸಲಾಗುತ್ತಿದ್ದು ಹಲವಾರು ಬೀಟಾ ನವೀಕರಣಗಳಲ್ಲಿ ಗುರುತಿಸಲಾಗಿದೆ.