WhatsApp ನಲ್ಲಿ ಜಾಬ್‌ ಆಫರ್‌ ಸಿಕ್ಕಿದೆಯೇ..? ನೀವು ರಿಪ್ಲೈ ಮಾಡುವ ಮೊದಲು ಚೆನ್ನಾಗಿ ಯೋಚಿಸಿ..!

ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದ್ದು, ಈ ಹಿನ್ನೆಲೆ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಕರ ಜಾಲ ತೆರೆದುಕೊಂಡಿದೆ. ಈ ವಂಚನೆ ಹೇಗೆ ನಡೆಯುತ್ತದೆ ಎಂಬ ಬಗ್ಗೆ ವಿವರ ಇಲ್ಲಿದೆ..

scammers are using whats app to send fake job offers be aware of fraud ash

ಅಮಾಯಕರನ್ನು ವಂಚಿಸಲು ಸ್ಕ್ಯಾಮರ್‌ಗಳು ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಇತ್ತೀಚೆಗೆ, ಕೆಲವು ವಂಚಕರು ವಿದ್ಯುತ್ ಬಿಲ್ ವಂಚನೆಗಳ ಮೂಲಕ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಲು ಬಳಕೆದಾರರನ್ನು ಮನವೊಲಿಸುತ್ತಿದ್ದಾರೆ. ಈ ಮೂಲಕ ನಿರುದ್ಯೋಗಿ ಯುವಕರು ಹಾಗೂ ಉದ್ಯೋಗ ಬದಲಿಸಲು ಯತ್ನಿಸುತ್ತಿರುವ ಯುವಕ - ಉವತಿಯರನ್ನು ಸೆಳೆಯಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಯುವ ಜನಸಂಖ್ಯೆ ಸಕ್ರಿಯವಾಗಿ ಗುಣಮಟ್ಟದ ಉದ್ಯೋಗಗಳನ್ನು ಹುಡುಕುತ್ತಿದೆ. 2 ವರ್ಷಗಳ ಕಾಲ ಕೊರೊನಾ, ಲಾಕ್‌ಡೌನ್‌ ಮುಂತಾದ ಕಾರಣಗಳಿಂದ ಆರ್ಥಿಕತೆಯು ಈಗ ತೆರೆದುಕೊಳ್ಳುತ್ತಿರುವಂತೆ, ಅನೇಕ ಯುವ ವಯಸ್ಕರು ಅವಕಾಶಗಳಿಗಾಗಿ ವಿವಿಧ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳತ್ತ ನೋಡುತ್ತಿದ್ದಾರೆ. 

WhatsApp ಉದ್ಯೋಗ ಹಗರಣ
ವಂಚಕರು ಈಗ ಜನರನ್ನು ವಂಚಿಸಲು ಸಾಕಷ್ಟು ಹೊಸ ತಂತ್ರವನ್ನು ಅವಲಂಬಿಸಿದ್ದಾರೆ. ಇದು ಟೆಕ್ಸ್ಟ್‌ SMS ಅಥವಾ WhatsApp ನಲ್ಲಿ ಸಂದೇಶ ಕಳುಹಿಸುವುದನ್ನು ಒಳಗೊಂಡಿರುತ್ತದೆ. ಈ ಮೂಲಕ ಉದ್ಯೋಗಾವಕಾಶ ನೀಡುವ ಭರವಸೆಯನ್ನೂ ನೀಡುತ್ತದೆ. ಕೊಡುಗೆಯನ್ನು ಹೆಚ್ಚು ಆಕರ್ಷಕವಾಗಿಸಲು, ಸಂದೇಶವು ದೈನಂದಿನ ವೇತನದ ವಿವರಗಳನ್ನು ಒಳಗೊಂಡಿದೆ. "ಡಿಯರ್‌, ನೀವು ನಮ್ಮ ಸಂದರ್ಶನದಲ್ಲಿ ಉತ್ತೀರ್ಣರಾಗಿದ್ದೀರಿ, ವೇತನವು ರೂ 8000/ ದಿನ. ದಯವಿಟ್ಟು ಚರ್ಚೆಯ ವಿವರವನ್ನು ಸಂಪರ್ಕಿಸಿ: wa.me/919165146378 SSBO." - ಇಂತಹ ಮೆಸೇಜ್‌ ನಿಮಗೂ ಬಂದಿದ್ಯಾ..? ಹಾಗಾದ್ರೆ ಎಚ್ಚರ ವಹಿಸಿ. 

ಮೈಸೂರು: ಕೆಲಸ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ: ಆನ್‌ಲೈನ್ ದೋಖಾ ಮಾಡುತ್ತಿದ್ದ ಮೂವರು ಅರೆಸ್ಟ್‌

ಕೆಲವು ಸಂದೇಶಗಳು ಬೇರೆ ಸಂಖ್ಯೆಯನ್ನು ಹೊಂದಿರಬಹುದು. ಆದರೂ, ಅವರ ಕಾರ್ಯಾಚರಣೆಯ ವಿಧಾನ ಒಂದೇ ಆಗಿರುತ್ತದೆ. ಲಿಂಕ್ ಕೆಲವೊಮ್ಮೆ ನಿಮ್ಮ ಡೇಟಾವನ್ನು ಕದಿಯುವ ವಂಚಕ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಥವಾ, ನಿಮ್ಮ ಜತೆ ವ್ಯಕ್ತಿಯೊಬ್ಬರು ಚಾಟ್‌ ಮಾಡಿದರೂ, ಅವರು ನಿಮ್ಮನ್ನು ವೈಯಕ್ತಿಕ ವಿವರಗಳಿಗಾಗಿ ಕೇಳುತ್ತಾರೆ ಅಥವಾ UPI ಮೂಲಕ ನೋಂದಣಿ ಶುಲ್ಕವನ್ನು ಕೇಳುತ್ತಾರೆ. ಈ ಪ್ರಕರಣದಲ್ಲಿ, ನಿಮ್ಮ ವೆಬ್ ಬ್ರೌಸರ್‌ನಲ್ಲಿ ಫೋನ್ ಸಂಖ್ಯೆಯ ಮೊದಲು 'wa.me' ಅನ್ನು ಸೇರಿಸುವುದರಿಂದ ನಿಮ್ಮನ್ನು WhatsApp ಚಾಟ್‌ಗೆ ನಿರ್ದೇಶಿಸುತ್ತದೆ. ಮೊದಲೇ ಹೇಳಿದಂತೆ, ಇನ್ನೊಂದು ತುದಿಯಲ್ಲಿರುವ ವಂಚಕರು ನಿಮ್ಮ ಹೆಚ್ಚಿನ ವಿವರಗಳನ್ನು ಕೇಳಬಹುದು, ಆದರೆ ಅವರಿಗೆ ನೀವು ನಿಮ್ಮ ವೈಯಕ್ತಿಕ ವಿವರ ನೀಡುವುದನ್ನು ತಪ್ಪಿಸಬೇಕು.

ನೀವು ಅಂತಹ ಸಂದೇಶಗಳನ್ನು ಸ್ವೀಕರಿಸಿದರೆ ನೀವು ಏನು ಮಾಡಬೇಕು..?
ಆನ್‌ಲೈನ್ ವಂಚನೆ(ಗಳ) ವಿರುದ್ಧ ನಮ್ಮನ್ನು ರಕ್ಷಿಸಲು ದೆಹಲಿ ಪೊಲೀಸರ ಸೈಬರ್ ಕ್ರೈಮ್ ಘಟಕವು ಕೆಲವು ಕ್ರಮಗಳನ್ನು ನೀಡಿದೆ. ಸೈಬರ್ ಅಪರಾಧಿಗಳು ಉದ್ಯೋಗದ ಕೊಡುಗೆಗಳ ಹೆಸರಿನಲ್ಲಿ ಯುವ, ವಿದ್ಯಾವಂತ ನಾಗರಿಕರನ್ನು ಗುರಿಯಾಗಿಸುತ್ತಾರೆ. ಅವರು naukri.com. shine.com ನಂತಹ ಉದ್ಯೋಗ ಸೈಟ್‌ಗಳಿಂದ ಉದ್ಯೋಗಗಳನ್ನು ಹುಡುಕುತ್ತಿರುವ ವ್ಯಕ್ತಿಗಳ ಬಯೋ-ಡೇಟಾ/CV ಅನ್ನು ಪಡೆಯುತ್ತಾರೆ,. ಮತ್ತು CVಯಲ್ಲಿರುವ ಫೋನ್ ನಂಬರ್‌, ಇಮೇಲ್, ಶೈಕ್ಷಣಿಕ ಅರ್ಹತೆ, ಹಿಂದಿನ ಉದ್ಯೋಗ, ಇತ್ಯಾದಿಗಳಲ್ಲಿ ನೀಡಲಾದ ವಿವರಗಳನ್ನು ಬಳಸಿ, ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶಗಳ ಭರವಸೆ ನೀಡುವ ವಂಚನೆ ಇಮೇಲ್‌ಗಳನ್ನು ಕಳಿಸುತ್ತಾರೆ ಎಂದು ಎಚ್ಚರಿಸಿದೆ. ಈ ಹಗರಣಗಳ ವಿರುದ್ಧ ರಕ್ಷಣೆ ಪಡೆಯಲು ಕೆಲವು ಕ್ರಮಗಳನ್ನು ಸಹ ಪಟ್ಟಿಮಾಡಿದೆ. 

ಇದನ್ನೂ ಓದಿ: ಆನ್​ಲೈನ್​ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾದ್ರೆ ಹುಷಾರ್!

1) ನೋಂದಣಿ, ದಾಖಲೆ ಪರಿಶೀಲನೆ, ಸಂದರ್ಶನದ ವೇಳಾಪಟ್ಟಿ ಇತ್ಯಾದಿ ವಿವರಗಳಿಗೆ ಯಾವುದೇ ನಿಜವಾದ ನೇಮಕಾತಿದಾರರು ದೊಡ್ಡ ಮೊತ್ತವನ್ನು ಕೇಳುವುದಿಲ್ಲ.

2) ವಂಚಕರು ಒಂದೇ ರೀತಿಯ ಇಮೇಲ್ ಖಾತೆಗಳು, ಲೋಗೋಗಳು ಇತ್ಯಾದಿಗಳನ್ನು ಬಳಸಿಕೊಂಡು ನಿಜವಾದ ಉದ್ಯೋಗ ಸಲಹಾ ಸಂಸ್ಥೆಗಳಂತೆ ವಂಚಿಸುತ್ತಾರೆ. ಈ ಹಿನ್ನೆಲೆ ಉದ್ಯೋಗ ಸಹಾಯಕ್ಕಾಗಿ ಯಾವುದೇ ಪಾವತಿಯನ್ನು ಮಾಡುವ ಮೊದಲು ದಯವಿಟ್ಟು ಸಂಸ್ಥೆಯ ವಿವರಗಳನ್ನು ಪರಿಶೀಲಿಸಿ.

3) ಆನ್‌ಲೈನ್ ಫೋರಮ್‌ಗಳಲ್ಲಿ ಹೇಳಿದ ಸಂಸ್ಥೆಯ ಬಗ್ಗೆ ದೂರುಗಳು ಮತ್ತು ವಿಮರ್ಶೆಗಳಿಗಾಗಿ ನೋಡಿ. ಗಮನಾರ್ಹ ಸಂಖ್ಯೆಯ ಜನರು ತಮ್ಮ ಮೋಸದ ಚಟುವಟಿಕೆಗಳ ಬಗ್ಗೆ ವಿಮರ್ಶೆಗಳನ್ನು ಹಂಚಿಕೊಂಡಿದ್ದರೆ, ಅವರು ಬಹುಶಃ ಮೋಸ ಮಾಡುತ್ತಿದ್ದಾರೆ.

4) ವಂಚನೆಯ ಇಮೇಲ್ ಐಡಿಗಳು, ಗ್ರಾಹಕ ಸೇವಾ ಸಂಖ್ಯೆಗಳು ಇತ್ಯಾದಿಗಳಿಂದ ಮೋಸಹೋಗಬೇಡಿ. ಆ ಉದ್ಯೋಗ ಸಲಹೆಗಾರರೊಂದಿಗೆ ತೊಡಗಿಸಿಕೊಳ್ಳುವ ಮೊದಲು ಪರ್ಯಾಯ ಚಾನಲ್‌ಗಳೊಂದಿಗೆ ಅವರು ನೀಡುವ ಪ್ರತಿ ಹೇಳಿಕೆಯನ್ನು ಕ್ರಾಸ್‌ ಚೆಕ್‌ ಮಾಡಿ ಎಂದು ದೆಹಲಿ ಪೊಲೀಸ್‌ ಸೈಬರ್‌ ಘಟಕ ಎಚ್ಚರಿಕೆ ನೀಡಿದೆ.  

Latest Videos
Follow Us:
Download App:
  • android
  • ios