Asianet Suvarna News Asianet Suvarna News

249 ರೂ. Vi ಪ್ಲ್ಯಾನ್‌: ರಾತ್ರಿ 12ರಿಂದ ಬೆಳಗಿನ 6ರ ತನಕ ಹೈ ಸ್ಪೀಡ್ ಇಂಟರ್ನೆಟ್ ಬಳಸಿ

ಕೋವಿಡ್ 19 ಹಿನ್ನೆಲೆಯಲ್ಲಿ ಡೇಟಾ ಬಳಕೆದಾರರ ಪ್ಯಾಟರ್ನ್ ಬದಲಾಗಿದೆ. ಬಳಕೆದಾರರು ಹೆಚ್ಚಿನ ಸಮಯವನ್ನು ರಾತ್ರಿಯೇ ಡೇಟಾ ಬಳಸಲು ಕಳೆಯುತ್ತಿದ್ದಾರೆ. ಈ ಅವಕಾಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿಐ(ವೋಡಾಫೋನ್-ಐಡಿಯಾ) ಹೈ ಸ್ಪೀಡ್ ಡೇಟಾ ಪ್ಲ್ಯಾನ್ ಅನ್ನು ಪರಿಚಯ ಮಾಡಿದೆ. 249 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಚಾರ್ಜ್ ಮಾಡಿದರೆ ಪ್ಲ್ಯಾನ್ ಪಡೆದುಕೊಳ್ಳಬಹುದು.

Vi introduced high-speed data at night for Rs 249 and above recharged
Author
Bengaluru, First Published Feb 17, 2021, 12:07 PM IST

ರಿಲಯನ್ಸ್‌ನ ಜಿಯೋ ಮತ್ತು ಏರ್‌ಟೆಲ್‌ನಿಂದ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿ ವಿಐ(ವೋಡಾಫೋನ್-ಐಡಿಯಾ) ಹೈ ಸ್ಪೀಡ್ ಡೇಟಾ ಪ್ಲ್ಯಾನ್ ಅನ್ನು ಪ್ರಿಪೇಡ್ ಬಳಕೆದಾರರಿಗೆ ಪರಿಚಯಿಸಿದೆ.

ಯಾರು 249 ರೂ. ಮತ್ತು ಅದಕ್ಕಿಂತ ಮೇಲಿನ ಮೊತ್ತಕ್ಕೆ ಅನಿಯಂತ್ರಿತ ಡೇಲಿ ಡೇಟಾ ಚಾರ್ಜ್ ಮಾಡಿಸಿಕೊಳ್ಳುತ್ತಾರೋ ಅವರು ಮಧ್ಯರಾತ್ರಿ 12ರಿದಂ ಬೆಳಗಿನ 6 ಗಂಟವರೆಗೆ ಅನಿಯಂತ್ರಿತ ಹೈಸ್ಪೀಡ್ ಡೇಟಾವನ್ನು ಬಳಸಿಕೊಳ್ಳಬಹುದು. ಗ್ರಾಹಕರು ಅತಿ ಹೆಚ್ಚಿನ ಡೇಟಾವನ್ನು ರಾತ್ರಿಯೇ ಬಳಸುತ್ತಾರೆ. ಗ್ರಾಹಕರು ರಾತ್ರಿ ಹೊತ್ತಲ್ಲೇ ಹೆಚ್ಚು ಬ್ರೌಸ್ ಹಾಗೂ ಒಟಿಟಿ ವೇದಿಕೆಗಳನ್ನು ಬಳಸುವುದರಿಂದ ಹೆಚ್ಚು ಡೇಟಾ ವೆಚ್ಚವಾಗುತ್ತಿದೆ. ಹಾಗಾಗಿ, ಈ ಹೈಸ್ಪೀಡ್ ಡೇಟಾ ಪ್ಲ್ಯಾನ್ ಪರಿಚಯಿಸಿರುವುದರಿಂದ ವಿಐ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ ಹಲವು ನ್ಯೂಸ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಲೆನೆವೋ ಟ್ಯಾಬ್ ಪಿ11 ಪ್ರೊ ಟ್ಯಾಬ್ಲೆಟ್ ಬಿಡುಗಡೆ, ಭರಪೂರ ಫೀಚರ್‌ಗಳು

ಮಧ್ಯರಾತ್ರಿ 12 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ವಿಐ ಗ್ರಾಹಕರು ಅನಿಯಂತ್ರಿತ ಹೈ ಸ್ಪೀಡ್ ಡೇಟಾ ಪ್ಯಾಕ್‌ ಬಳಸಬಹುದು. ಈಗಾಗಲೇ ವಿಐಗೆ ಗ್ರಾಹಕರಾಗಿರುವವರು ಮತ್ತು ಹೊಸ ಗ್ರಾಹಕರು 249 ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರಿಚಾರ್ಜ್ ಮಾಡಿದರೆ ಈ ಪ್ಲ್ಯಾನ್‌ನ ಯೋಜನೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಕನಿಷ್ಠ ಚಾರ್ಜಿಂಗ್ ಬೆಲೆ ಹೊರತುಪಡಿಸಿದರೆ ಮತ್ತ್ಯಾವುದೇ ನಿರ್ಬಂಧಗಳನ್ನು ಈ ಪ್ಲ್ಯಾನ್ ಹೊಂದಿಲ್ಲ.

Vi introduced high-speed data at night for Rs 249 and above recharged

ವಿಐ ಪ್ಲ್ಯಾನ್‌ನ ಇನ್ನೊಂದು ವಿಶೇಷ ಏನೆಂದರೆ, ಸೋಮವಾರದಿಂದ ಶುಕ್ರವಾರದವರೆಗೆ ಸಂಗ್ರಹವಾಗಿರುವ ಡೇಟಾವನ್ನು ಶನಿವಾರ ಮತ್ತು  ಭಾನುವಾರ(ವೀಕೆಂಡ್ ರೋಲ್‌ಓವರ್) ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ.

ಕೋವಿಡ್ ಸೋಂಕಿನಿಂದಾಗಿ ಬಹುತೇಕರು ಮನೆಯಲ್ಲೇ ಉಳಿಯುತ್ತಿದ್ದಾರೆ. ಅಥವಾ ಮನೆಯಿಂದಲೇ ಕಚೇರಿ ಕೆಲಸವನ್ನು ಮಾಡುತ್ತಿದ್ದಾರೆ. ಹೀಗಾಗಿ, ಬಹುತೇಕರು ತಮ್ಮ ಹೆಚ್ಚಿನ ಸಮಯವನ್ನು ಬ್ರೌಸಿಂಗ್‌ನಲ್ಲಿ ಕಳೆಯುತ್ತಿದ್ದಾರೆ. ಇದಕ್ಕೆ ಸಹಜವಾಗಿಯೇ ಹೆಚ್ಚಿನ ಡೇಟಾ ವ್ಯಯಾಗುತ್ತಿದೆ. ಹಾಗೆಯೇ, ಒಟಿಟಿ ವೇದಿಕೆಗಳಲ್ಲಿ ಕಂಟೆಂಟ್ ವೀಕ್ಷಣೆಯಲ್ಲೂ ಹೆಚ್ಚಿನ ಕಾಲವನ್ನು ಕಳೆಯುತ್ತಿದ್ದಾರೆ. ಇಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಬೇಕಾಗುತ್ತದೆ. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ಡೇಟಾ ಬಳಕೆ ಹೆಚ್ಚಾಗಿದೆ.

ಬಾಯಿಗೆ ಬಂದು ಬಿದ್ದ ಲಡ್ಡು!, Koo ಆಪ್ ಸೇರಲು ಜನರು Queue

ಕಂಪನಿಯ ಪ್ರಕಾರ, ಗ್ರಾಹಕರಲ್ಲಿ ವಿಶೇಷವಾಗಿ ಯುವಕರಲ್ಲಿ ಡೇಟಾ ಬಳಕೆಯ ಪ್ಯಾಟರ್ನ್ ಬದಲಾಗಿದೆ. ಬಹುತೇಕರು ರಾತ್ರಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಬಳಕೆ ಮಾಡುತ್ತಾರೆ. ವಾಸ್ತವ ಹೀಗಿರುವಾಗ ಈ ಹಂತದಲ್ಲಿ ಹೈ ಸ್ಪೀಡ್ ಡೇಟಾ ಸೇವೆಯ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ನೆಟ್ವರ್ಕ್‌ಗೆ ಮಾರುಹೋಗುವಂತೆ ಮತ್ತು ಹೊಸ ಬಳಕೆದಾರರನ್ನು ನಮ್ಮ ನೆಟ್ವರ್ಕ್‌ಗೆ ಸೆಳೆಯಲು ಹಲವು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ವಿಐ ತಿಳಿಸಿದೆ ಎನ್ನಲಾಗಿದೆ.

ಜಿಯೋ ಪ್ಲ್ಯಾನ್ ಹೇಗಿದೆ?
ರಿಲಯನ್ಸ್ ಕಂಪನಿಯ ಜಿಯೋ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯು 149 ರೂ. ಹೊಸ ಪ್ಲ್ಯಾನ್ ಪರಿಚಯ ಮಾಡಿದ್ದು, ಇದರಡಿ ಗ್ರಾಹಕರು ಅನಿಯಂತ್ರಿತವಾಗಿ ವಾಯ್ಸ್ ಕಾಲಿಂಗ್ ಮತ್ತು 24 ದಿನಗಳವರೆಗೆ 24 ಜಿಬಿ ಡೇಟಾ ಪಡೆದುಕೊಳ್ಳಬಹುದು. ಪ್ರತಿ ದಿನಕ್ಕೆ 1 ಜಿಬಿ ಹೈ ಸ್ಪೀಡ್ ಡೇಟಾ ಕೂಡ ಈ ಯೋಜನೆಯಡಿ ಸಿಗುತ್ತದೆ.
ಇಷ್ಟು ಮಾತ್ರವಲ್ಲದೇ ದಿನಕ್ಕೆ 100 ಎಸ್ಸೆಮ್ಮೆಸ್, ಕಾಂಪ್ಲಿಮೆಂಟರಿಯಾಗಿ ಜಿಯೋ ಆಪ್ಸ್‌ಗೆ ಚಂದಾದಾರಿಕೆ ಸಿಗಲಿದೆ. ದಿನದಲ್ಲಿ ಹೈಸ್ಪೀಡ್ 1 ಜಿಬಿ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ಸ್ಪೀಡ್ ಪ್ರತಿ ಸೆಕೆಂಡ್ 64 ಕೆಬಿ ಸಿಗಲಿದೆ.

199 ರೂ. ಪ್ರೀಪೇಡ್ ಪ್ಲ್ಯಾನ್ ಕೂಡಾ ಇದ್ದು, ದಿನಕ್ಕ 1.5 ಜಿಬಿ ಡೇಟಾದಂತೆ ಒಟ್ಟು 28 ದಿನಕ್ಕೆ 48 ಜಿಬಿ ಡೇಟಾ ಸಿಗಲಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್, ದಿನಕ್ಕೆ 100 ಎಸ್ಸೆಮ್ಮೆಸ್ ಕೂಡ ಸಿಗಲಿವೆ. ಈ ಪ್ಲ್ಯಾನ್‌ನಲ್ಲೂ ಜಿಯೋ ನಿಮಗೆ ಜಿಯೋ ಆಪ್ಸ್‌ಗೆ ಚಂದಾದಾರಿಕೆಯನ್ನು ನೀಡುತ್ತದೆ.

ನೋಕಿಯಾ 5.4 ಮತ್ತು 3.4 ಬಜೆಟ್ ಫೋನ್ ಲಾಂಚ್; ಇದು ಪಾಕೆಟ್ ಫ್ರೆಂಡ್ಲೀ

Follow Us:
Download App:
  • android
  • ios