ಚೀನಾದ ಮಲ್ಟಿನ್ಯಾಷನಲ್ ಕಂಪನಿ ಹಾಗೂ ಲ್ಯಾಪ್‌ಟ್ಯಾಪ್ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಲೆನೆವೋ, ಹಲವು ವಿಶಿಷ್ಟ ಫೀಚರ್‌ಗಳನ್ನು ಒಳಗೊಂಡಿರುವ ಟ್ಯಾಬ್ ಪಿ11 ಪ್ರೋ ಎಂಬ ಹೊಸ ಟ್ಯಾಬ್ಲೆಟ್  ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಲೆನೆವೋ ಕಂಪನಿಯ ಈ  ಹೊಸ ಟ್ಯಾಬ್ ಪಿ11 ಟ್ಯಾಬ್ಲೆಟ್,  ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ ಸಪೋರ್ಟ್‌ನೊಂದಿಗೆ ಒಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ತಕ್ಷಣದ ಅನ್ಲಾಕಿಂಗ್‌ ಸೌಲಭ್ಯ ಒದಗಿಸುವ ಇನ್‌ಬಿಲ್ಟ್ ಆಗಿ ಟೈಮ್ ಆಫ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿದೆ.

ಬಾಯಿಗೆ ಬಂದು ಬಿದ್ದ ಲಡ್ಡು!, Koo ಆಪ್ ಸೇರಲು ಜನರು Queue

ಭಾರತದಲ್ಲಿ ಈ ಲೆನೆವೋ ಟ್ಯಾಬ್ ಪಿ11 ಪ್ರೋ ಟ್ಯಾಬ್‌ಗೆ 44,999 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ. ಅಂದರೆ, ಇದು ಖಂಡಿತವಾಗಿಯೂ ಪ್ರೀಮಿಯಂ ಟ್ಯಾಪ್ ಆಗಿದೆ. ನಿಮಗೆ ಹಲವು ವಿಶಿಷ್ಟ ಫೀಚರ್‌ಗಳು ಮಾತ್ರವಲ್ಲದೇ ಅತ್ಯಾಧುನಿಕ ತಂತ್ರಜ್ಞಾನದ ಅನುಭವವನ್ನು ಈ ಟ್ಯಾಬ್ ಒದಗಿಸುತ್ತದೆ. ವ್ಯಾಲೆಂಟೈನ್ಸ್ ಡೇ ಅಂದರೆ ಫೆಬ್ರವರಿ 14ರ ಮಧ್ಯರಾತ್ರಿಯಿಂದಲೇ ಅಮೆಜಾನ್, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣಗಳು ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್ ಲೆನೆವೋ ಡಾಟ್ ಕಾಮ್‌ನಲ್ಲಿ ಮಾರಾಟಕ್ಕೂ ಲಭ್ಯವಾಗಿದೆ. ಟ್ಯಾಬ್ ಆರಂಭಿದ ಪರಿಚಯಾತ್ಮಕ ಉಡುಗೊರೆಯಾಗಿ ಕಂಪನಿ 10 ಸಾವಿರ ರೂ. ಮೌಲ್ಯದ ಕೀಬೋರ್ಡ್ ಕವರ್ ಕೂಡ ನೀಡುತ್ತಿದೆ. ವಾಸ್ತವದಲ್ಲಿ ಕಂಪನಿ ಜಾಗತಿಕವಾಗಿ ಟ್ಯಾಬ್ ಅನ್ನು ಕಳೆದ ವರ್ಷವೇ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಭಾರತೀಯ ಮಾರುಕಟ್ಟೆಗೆ ಈಗ ಬಿಡುಗಡೆ ಮಾಡಿದೆಯಷ್ಟೇ.

ಈ ಟ್ಯಾಬ್ ಪಿ11 ಪ್ರೋ ಟ್ಯಾಬ್ಲೆಟ್ ಆಂಡ್ರಾಯ್ಡ್ 10 ಒಎಸ್ ಮೇಲೆ ರನ್ ಆಗುತ್ತದೆ. ಡಾಲ್ಬೀ ವಿಷನ್ ಮತ್ತು ಎಚ್‌ಡಿಆರ್ ಸಪೋರ್ಟ್‌ನೊಂದಿಗೆ 11.5 ಇಂಚ್ ಡಿಸ್‌ಪ್ಲೇ ಇದೆ. ಆಕ್ಟಾ ಕೋರ್ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 730ಜಿ ಪ್ರೊಸೆಸರ್ ಮತ್ತು ಆಡ್ರೆನೊ 618 ಜಿಪಿಯು, 6 ಜಿಬಿ ರ್ಯಾಮ್ ಮತ್ತು 128 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಈ ಟ್ಯಾಬ್‌ನಲ್ಲಿ 8 ಮೆಗಾ ಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಫ್ರಂಟ್‌ನಲ್ಲಿ 8 ಮೆಗಾಪಿಕ್ಸೆಲ್ ಇನ್ಫ್ರಾರೆಡ್ ಕ್ಯಾಮೆರಾ ಕೂಡ ಇದೆ. ಇಷ್ಟು ಮಾತ್ರವಲ್ಲದೇ ಟ್ಯಾಬ್‌ ಬ್ಯಾಕ್‌ನಲ್ಲಿ ಎರಡು ಕ್ಯಾಮೆರಾಗಳ ಸೆಟ್ಅಪ್ ಇದೆ. ಈ ಪೈಕಿ ಮೊದಲನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಲೆನ್ಸ್ ಒಳಗೊಂಡಿದೆ. ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ನ ಎರಡನೇ ಕ್ಯಾಮೆರಾ ಆಗಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ನೋಕಿಯಾ 5.4 ಮತ್ತು 3.4 ಬಜೆಟ್ ಫೋನ್ ಲಾಂಚ್; ಇದು ಪಾಕೆಟ್ ಫ್ರೆಂಡ್ಲೀ

4ಜಿ ಎಲ್‌ಟಿಇ ತಂತ್ರಜ್ಞಾನಕ್ಕೆ ಇದು ಸಪೋರ್ಟ್ ಮಾಡುತ್ತದೆ. ಸಿಮ್ ಕಾರ್ಡ್ ಬಳಸಬಹುದು. ವೈಫೈ, ಬ್ಲೂಟೂಥ್ 5.0, ಯುಎಸ್‌ಬಿ ಟೈ ಸಿ ಪೋರ್ಟ್ ಇತರೆ ಕನೆಕ್ಟಿವಿಟಿ ಆಪ್ಷನ್‌ಗಳಾಗಿವೆ.

ಸೈಟಲಸ್ ಆಪ್ಷನ್ ಮಾತ್ರವಲ್ಲದೇ, 18 ಎಂಎಂ ಪಿಚ್ ಮತ್ತು 1.3 ಎಂಎಂ ಕೀ ಟ್ರಾವೆಲ್ ಕೀಬೋರ್ಡ್ ಕವರ್ ಆಪ್ಷನಲ್ ಆಗಿ ದೊರೆಯತ್ತದೆ. ಕವರ್ ಫ್ರೀ-ಸ್ಟಾಪ್ ಹಿಂಜ್‌ನೊಂದಿಗೆ ಬರುತ್ತದೆ, ಅದು ಟ್ಯಾಬ್ಲೆಟ್ ಅನ್ನು ಶೂನ್ಯ ಮತ್ತು 165 ಡಿಗ್ರಿಗಳ ನಡುವಿನ ಕೋನದಲ್ಲಿ ಇಡಬಹುದು. ಉತ್ತಮ ಉತ್ಪಾದಕತೆಯನ್ನು ಒದಗಿಸಲು ಟ್ಯಾಬ್ಲೆಟ್ ಮೈಕ್ರೋಸಾಫ್ಟ್ ಆಫೀಸ್ ಅಪ್ಲಿಕೇಶನ್‌ಗಳೊಂದಿಗೆ ಪೂರ್ವ ಲೋಡ್ ಆಗಿದೆ.

ಲೆನೆವೋ ಟ್ಯಾಬ್ ಪಿ11 ಮೂರು ವಿಭಿನ್ನ ಮಾಡೆಲ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಟೈಪಿಂಗ್‌ಗಾಗಿ ಕೀ ಬೋರ್ಡ್, ಮಲ್ಟಿಮೀಡಿಯಾ ವೀಕ್ಷಿಸಲು ಅನುಕೂಲವಾಗುವ ಸ್ಟ್ಯಾಂಡ್ ಮೋಡ್ ಮತ್ತು ವೆಬ್‌ ಬ್ರೌಸಿಂಗ್‌ಗೆ ಸಹಾಯವಾಗುವಂಥ ಹ್ಯಾಂಡ್‌ಹೆಲ್ಡ್ ಮೋಡ್‌. ಈ ಮೂರು ಮಾದರಿಯಲ್ಲಿ ಲೆನೆವೋ ಟ್ಯಾಬ್ ಪಿ11 ಟ್ಯಾಬ್ಲೆಟ್ ಮಾರಾಟಕ್ಕೆ ಲಭ್ಯವಿದೆ. ಈ ಟ್ಯಾಬ್‌ ರಿವರ್ಸ್ ಚಾರ್ಜಿಂಗ್‌ ಕೂಡ ಸಪೋರ್ಟ್ ಮಾಡುತ್ತದೆ.

5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?