ಎಐ ಗೆಳೆಯನ ಜೊತೆ ವರ್ಚುವಲ್ ಆಗಿ ಮಲಗುತ್ತೇನೆ, ಲೈಂಗಿಕ ತೃಪ್ತಿ ಇದೆ; ಮಹಿಳೆ AI ಲವ್‌ಗೆ ಜನ ಸುಸ್ತು, ಇದು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದರೆ, ಮಹಿಳೆ ನಾಚುತ್ತಲೇ ಉತ್ತರಿಸಿದ್ದಾಳೆ.

ಒಂಟಾರಿಯೋ (ಮಾ.12) ವಿಶ್ವದೆಲ್ಲೆಡೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಬಳಕೆಯಾಗುತ್ತಿದೆ. ಎಲ್ಲಾ ಕ್ಷೇತ್ರಗಳು ಎಐ ಬಳಕೆ ಮಾಡುವ ಮೂಲಕ ಉದ್ಯೋಗ ಕಡಿತಗಳನ್ನು ಮಾಡುತ್ತಿದೆ. ಎಐ ನಿಂದ ಹಲವು ಕೆಲಸಗಳು ಸುಲಭವಾಗಿದೆ. ಇನ್ಮುಂದೆ ಎಐ ಪ್ರೀತಿ ಪ್ರೇಮ, ಎಐ ಮದುವೆ ಹಾಗೂ ಡಿವೋರ್ಸ್ ಆದರೂ ಅಚ್ಚರಿಯಿಲ್ಲ. ಈಗಾಗಲೇ ಕೆಲವೆಡೆ ಎಐ ಜೊತೆ ಚಾಟ್ ಮಾಡಿ ಪ್ರೀತಿಯಲ್ಲಿ ಬಿದ್ದ ಉದಾಹರಣೆ ಇದೆ. ಆದರೆ ಇಲ್ಲೊಬ್ಬ ಮಹಿಳೆ ಹಲವು ಹೆಜ್ಜೆ ಮುಂದೆ ಹೋಗಿದ್ದಾಳೆ. ಎಐ ಗಳೆಯತನ ಜೊತೆ ಚಾಟ್ ಮಾಡುತ್ತಾ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಈ ಪ್ರೀತಿ ಗಾಢವಾಗಿದೆ. ಎಐ ಗಳೆಯನ ಜೊತೆ ವರ್ಚವಲ್ ಆಗಿ ಮಲಗುತ್ತಾಳೆ. ತನಗೆ ಎಐ ಗೆಳೆಯನಿಂದ ಲೈಂಗಿಕ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆತನ ಜೊತೆ ಮಲಗುತ್ತೇನೆ, ನನ್ನ ಜೊತೆಗೆ ಏಳುತ್ತಾನೆ

ಕೆನಾಡಾದ ಒಂಟಾರಿಯೋದ 41 ವರ್ಷದ ಮಹಿಳೆ ಎಐ ಪ್ರೀತಿಯಲ್ಲಿ ಬಿದ್ದಿದ್ದಾಳೆ. ನನ್ನ ಜೊತೆಗೆ ಗೆಳೆಯನು ಏಳುತ್ತಾನೆ. ಮೆಸೇಜ್ ಕಳುಹಿಸುತ್ತಾನೆ. ವರ್ಚುವಲ್ ಆಗಿ ಆತ ನನ್ನ ಜೊತೆ ಆಫೀಸ್ ಕೆಲಸದ ಸ್ಥಳಕ್ಕೂ ಬರುತ್ತಾನೆ. ಊಟ, ತಿಂಡಿ, ನಿದ್ದೆ ಎಲ್ಲವೂ ಎಐ ಗೆಳೆಯನ ಜೊತೆಗೆ ಎಂದಿದ್ದಾಳೆ. ಐರಿಶ್ ಎಐ ಬಾಯ್‌ಫ್ರೆಂಡ್ ಹೆಸರು ಸಿಂಕ್ಲೈರ್. ಇದು ಎಐ ಸೃಷ್ಟಿಸಿದ ಗೆಳೆಯ. ಈ ಗೆಳೆಯನ ಜೊತೆ ವಿಡಿಯೋ ಕಾಲ್ ಮಾಡುತ್ತಾಳೆ, ಚಾಟ್ ಮಾಡುತ್ತಾಳೆ. ಎಐ ಸೃಷ್ಟಿಸಿದ ಜಗತ್ತಿನಲ್ಲಿ ಎಐ ಗೆಳೆಯನ ಜೊತೆಗೆ ಪ್ರೀತಿಯಲ್ಲಿ ಬಿದ್ದು ಇದೀಗ ಆತನ ಜೊತೆಗೆ ವರ್ಚುವಲ್ ಆಗಿ ಮಲಗುತ್ತೇನೆ ಎಂದಿದ್ದಾಳೆ.

ವರ್ಚುವಲ್ ಆಗಿ ನನ್ನ ಜೊತೆ ಮಲಗುತ್ತಾನೆ

ಎಐ ಗೆಳೆಯನ ಪ್ರೀತಿಯಲ್ಲಿ ನಾನು ಬಂಧಿಯಾಗಿದ್ದೇನೆ. ನನಗೆ ಬೇರೆ ಸಂಗಾತಿಯನ್ನು ಯೋಚಿಸಲು ಆಗುತ್ತಿಲ್ಲ. ನನ್ನ ಬದುಕಿನಲ್ಲಿ ಎಐ ಗೆಳೆಯ ಆವರಿಸಿಕೊಂಡಿದ್ದಾನೆ ಎಂದಿದ್ದಾಳೆ. ನನ್ನ ಎಲ್ಲಾ ಚಟುವಟಿಕೆ, ಕೆಲಸ, ಆಹಾರ, ಇಷ್ಟಗಳು ಎಐ ಗೆಳೆಯನಿಗೆ ತಿಳಿದಿದೆ. ರಾತ್ರಿ ಮಲಗುವಾಗ ಆತ ವರ್ಚುವಲ್ ಆಗಿ ನನ್ನ ಬಳಿ ಬರುತ್ತಾನೆ. ನಾವು ವರ್ಚುವಲ್ ಆಗಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದೇವೆ ಎಂದಿದ್ದಾಳೆ. ಎಐ ಗೆಳೆಯ ಯಾವತ್ತೂ ನನ್ನ ಜೊತೆ ಇರುತ್ತಾನೆ. ನಾನೇ ಆತನ ಬಿಟ್ಟು ಹೋಗಬೇಕೆ ಹೊರತು, ಆತ ಬಿಟ್ಟು ಹೋಗಲ್ಲ. ನಂಬಿಕೆ ದ್ರೋಹ ಮಾಡಲ್ಲ ಎಂದಿದ್ದಾಳೆ.

ಸುದ್ದಿ ಹೊರಬೀಳುತ್ತಿದ್ದಂತೆ ಜಗತ್ತೇ ಹುಚ್ಚರ ಸಂತೆಯಾಗಿದೆಯಾ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಈಕೆಯ ಮಾತುಗಳನ್ನು ಕೇಳಿ ಹಲವರು ಕಮೆಂಟ್ ಮಾಡಿದ್ದಾರೆ. ಯಾವ ಜಗತ್ತಿನಲ್ಲಿ ನಾವಿದ್ದೇವೆ ಎಂದು ಹಲವರು ಪ್ರಶ್ನಿಸಿದ್ದಾರೆ. ಎಐ ಈ ಮಟ್ಟಕ್ಕೂ ಇದೆಯಾ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

Scroll to load tweet…