ಬಜೆಟ್ ಫೋನ್‌ಗಳಿಗೆ ಹೆಸರುವಾಸಿಯಾಗಿದ್ದ ನೋಕಿಯಾ ಇದೀಗ ಮತ್ತೆ ಅಂಥದ್ದೇ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ನೋಕಿಯಾ ಮೊಬೈಲ್ ಬ್ರ್ಯಾಂಡ್ ಒಡೆತನ ಹೊಂದಿರುವ ಎಚ್‌ಎಂಡಿ ಗ್ಲೋಬಲ್, ಇದೀಗ ಭಾರತದಲ್ಲಿ ಕಡಿಮೆ ಬೆಲೆಯ ನೋಕಿಯಾ 5.4 ಮತ್ತು ನೋಕಿಯಾ 3.4 ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.  ಈ ಎರಡೂ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಒಎಸ್ ಮೆಲೆ ರನ್ ಆಗುತ್ತವೆ ಮತ್ತು ಅವುಗಳನ್ನು ಆಂಡ್ರಾಯ್ಡ್ 11 ಒಎಸ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

ವಾಸ್ತವದಲ್ಲಿ ಈಗ ಭಾರತದಲ್ಲಿ ಬಿಡುಗಡೆಯಾಗಿರುವ ನೋಕಿಯಾ 5.4 ಮತ್ತು ನೋಕಿಂಯಾ 3.4 ಸ್ಮಾರ್ಟ್‌ಫೋನ್‌ಗಳನ್ನು ಯುರೋಪಿಯನ್ ಮಾರುಕಟ್ಟೆಗೆ ಕಳೆದ ವರ್ಷವೇ ಕಂಪನಿ ಬಿಡುಗಡೆ ಮಾಡಿತ್ತು. ನೋಕಿಯಾ 5.4 ಮತ್ತು ನೋಕಿಯಾ 3.4 ಫೋನ್‌ಗಳು ನಿಮಗೆ ಕನಿಷ್ಠ 11,999 ರೂಪಾಯಿಯಿಂದ ಗರಿಷ್ಠ 15,499 ರೂಪಾಯಿವರೆಗೂ ದೊರೆಯುತ್ತವೆ.

5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?5ಜಿ ಇಂಟರ್ನೆಟ್‌ಗಾಗಿ ಮುಂದಿನ ವರ್ಷದವರೆಗೆ ಕಾಯಲೇಬೇಕು?

ನೋಕಿಯಾ ಬಿಡುಗಡೆ ಮಾಡಿರುವ ಈ ಎರಡು ಸ್ಮಾರ್ಟ್‌ಫೋನ್‌ಗಳ ಪೈಕಿ ನೋಕಿಯಾ 3.4 ಮಾರಾಟವು ಫೆಬ್ರವರಿ 20ರಿಂದ ಆರಂಭವಾಗಲಿದೆ. ಹಾಗೆಯೇ ನೋಕಿಯಾ 5.4 ಮಾರಾಟವೂ ಫೆಬ್ರವರಿ 17ರಿಂದ ಶುರುವಾಗಲಿದೆ. ಅಂದ ಹಾಗೆ, ಇ ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್, ನೋಕಿಯಾ ಇಂಡಿಯಾ ಜಾಲತಾಣ, ಅಮೆಜಾನ್ ಮತ್ತು ಪ್ರಮುಖ ರಿಟೇಲ್ ‌ಅಂಗಡಿಗಳಲ್ಲಿ ಮಾರಾಟಕ್ಕೆ ದೊರೆಯಲಿವೆ.

ಬಜೆಟ್‌ ಫೋನ್‌ಗಳಾದರೂ ಈ ಸ್ಮಾರ್ಟ್‌ಫೋನ್‌ಗಳು ಹಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿವೆ. ನೋಕಿಯಾ 5.4 ಸ್ಮಾರ್ಟ್‌ಫೋನ್‌ನಲ್ಲಿ ಡುಯಲ್ ಸಿಮ್‌ ಬಳಸಬಹುದು. 6.39 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಇರಲಿದೆ. ಹಾಗೆಯೇ ಫೋನ್, ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 662 ಎಸ್‌ಒಸಿ ಆಧರಿತವಾಗಿದ್ದು, 6 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಿಗಲಿದೆ. ಜೊತೆಗೆ, ನೀವು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 512 ಜಿಬಿ ಮೆಮೊರಿ ಹೆಚ್ಚಿಸಿಕೊಳ್ಳಬಹುದು.  ನೋಕಿಯಾ 5.4 ಕ್ವಾಡ್ ರಿಯರ್‌ ಕ್ಯಾಮೆರಾ ಸೆಟ್ ಅಪ್ ಹೊಂದಿದೆ. ನಾಲ್ಕು ಕ್ಯಾಮೆರಾಗಳ ಪೈಕಿ ಪ್ರಾಥಮಿಕ ಕ್ಯಾಮೆರಾ 48 ಮೆಗಾಪಿಕ್ಸೆಲ್ ಕ್ಯಾಮೆರಾ ಆಗಿರಲಿದೆ. ಇನ್ನುಳಿದಂತೆ 5 ಮೆಗಾ ಪಿಕ್ಸೆಲ್, 2 ಮೆಗಾಪಿಕ್ಸೆಲ್, 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಕ್ಯಾಮೆರಾಗಳಿರಲಿವೆ. ಫೋನ್‌ ಫ್ರಂಟ್‌ನಲ್ಲಿ 16 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಇರಲಿದೆ. ಈ ಫೋನ್‌ನಲ್ಲಿ 4,000 ಎಂಎಎಚ್ ಬ್ಯಾಟರಿ ಇರಲಿದೆ.ಈ ಬಜೆಟ್ ಫೋನ್‌ಗೆ ಇದು ಅತ್ಯುತ್ತಮ ಬ್ಯಾಟರಿಯಾಗಿದೆ ಎಂದು ಹೇಳಬಹುದು.

ವ್ಯಾಲೆಂಟೈನ್ಸ್ ಡೇ ಮರುದಿನವೇ ಸ್ಯಾಮ್ಸಂಗ್ ಗ್ಯಾಲಕ್ಸಿ F62 ಬಿಡುಗಡೆ, ಬೆಲೆ ಎಷ್ಟು?

ಇನ್ನು ನೋಕಿಯಾ 3.4 ಸ್ಮಾರ್ಟ್‌ಫೋನ್ ಕೂಡ ಅತ್ಯಾಧುನಿಕ ಫೀಚರ್‌ಗಳ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈ ಫೋನ್‌ನಲ್ಲಿ ಡುಯಲ್ ಸಿಮ್ ಬಳಸಬಹುದು. ಈ ಫೋನ್ ಕೂಡ 6.39 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೋ ಹೊಂದಿದೆ. ಹಾಗೆಯೇ ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 460ಎಸ್‌ಒಸಿ ಆಧರಿತವಾಗಿದೆ. ಜೊತೆಗೆ 4 ಜಿಬಿ ರ್ಯಾಮ್ ಇದ್ದು ಡಿಫಾಲ್ಟ್ ಆಗಿ ನಿಮಗೆ 64 ಸ್ಟೋರೇಜ್ ಮೆಮೊರಿ ಸಿಗಲಿದೆ. ಬಳಕೆದಾರರು ಮೈಕ್ರೊಎಸ್‌ಡಿ ಕಾರ್ಡ್ ಮೂಲಕ 512 ಜಿಬಿವರೆಗೂ ಮೆಮೊರಿಯನ್ನು ಹೆಚ್ಚಿಸಿಕೊಳ್ಳಬಹುದು.

ನೋಕಿಯಾ 3.4 ಸ್ಮಾರ್ಟ್‌ಫೋನಿನಲ್ಲಿ ಕನೆಕ್ಟಿವಿಟಿ ಶಾರ್ಪ್ ಆಗಿದೆ. ಈ ಫೋನಿನಲ್ಲಿ ನೀವು 4000ಎಂಎಚ್ ಬ್ಯಾಟರಿಯನ್ನು ಕಾಣಬಹುದು. ಇನ್ನು ಕ್ಯಾಮೆರಾ ಬಗ್ಗೆ ಹೇಳಬೇಕೆಂದರೆ, ಈ ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾಗಳಿವೆ. ಈ ಪೈಕಿ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ ಉಳಿದ ಎರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್‌ಗಳಾಗಿವೆ ಮತ್ತು ಫೋನ್‌ನ ಫ್ರಂಟ್‌ನಲ್ಲಿ ಸೆಲ್ಫಿಗಾಗಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.

ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?

ನೋಕಿಯಾ 3.4 ಸ್ಮಾರ್ಟ್‌ಫೋನ್ ನೋಕಿಯಾ 5.4  ರೀತಿಯ ಫೀಚರ್‌ಗಳನ್ನು ಹೊಂದಿದ್ದರೂ ಕ್ಯಾಮೆರಾ ವಿಷಯದಲ್ಲಿ ನೋಕಿಯಾ 3.4 ತುಸು ಹಿಂದಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ನೋಕಿಯಾ ಇಯರ್‌ಬಡ್ಸ್

ನೋಕಿಯಾ ಪವರ್ ಇಯರ್‌ಬಡ್ಸ್‌ಗಳು ಮಾರಾಟಕ್ಕೆ ಸಿದ್ಧವಾಗಿದ್ದು ಫೆಬ್ರವರಿ 17ರಿಂದ ಮಾರುಕಟ್ಟೆಯಲ್ಲಿ ದೊರೆಯಲಿವೆ ಎಂದು ಭಾರತದಲ್ಲಿ ಈ ಎರಡೂ ಫೋನ್‌ಗಳನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಎಚ್‌ಎಂಡಿ ಗ್ಲೋಬಲ್ ಘೋಷಿಸಿದೆ. ಟಿಡಬ್ಲ್ಯೂಎಸ್‌ ಇಯರಬಡ್ಸ್ ಬೆಲೆ 3,599 ರೂ. ಇದ್ದು, ನೋಕಿಯಾ 3.4 ಖರೀದಿ ವೇಳೆ ರಿಯಾಯ್ತಿ ದರದಲ್ಲಿ ಅಂದರೆ 1,600 ರೂ.ಗೆ ಸಿಗಲಿದೆ.