ಪಬ್‌ಜಿ ಗೇಮ್ ಮತ್ತೆ ಭಾರತದಲ್ಲಿ ಕಾರ್ಯಾಚರಣೆ ನಡೆಸುವ ಪ್ರಯತ್ನದ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ಚೀನಾ ಮೂಲದ ಟಿಕ್‌ಟಾಕ್ ಕೂಡ ಅಂಥದ್ದೇ ಪ್ರಯತ್ನಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ. 

ಭಾರತೀಯ ಗ್ರಾಹಕರ ಡೇಟಾ ಸುರಕ್ಷತೆಯ ದೃಷ್ಟಿಯಿಂದಾಗಿ ಭಾರತ ಸರಕಾರ ಪಬ್‌ಜೀ ಮತ್ತು ಟಿಕ್‌ಟಾಕ್‌ ಆಪ್‌ಗಳ ಮೇಲೆ ನಿಷೇಧ ಹೇರಿತ್ತು. ಆದರೆ, ಇದೀಗ ಪಬ್‌ಜೀ ಹೊಸ ವರ್ಷನ್‌ನೊಂದಿಗೆ ಭಾರತೀಯ ಬಳಕೆದಾರರಿಗೆ ತನ್ನ ಸೇವೆ ನೀಡುವುದಾಗಿ ಹೇಳಿಕೊಂಡಿತ್ತು. ಹಾಗೆಯೇ, ಟಿಕ್‌ಟಾಕ್ ಕೂಡ ಭಾರತದಲ್ಲಿ ತನ್ನ ಕಾರ್ಯಾಚರಣೆ ನಡೆಸುವ ಬಗ್ಗೆ ಆಶಾಭಾವನೆಯನ್ನು ಇಟ್ಟುಕೊಂಡಿದೆ. ಭಾರತದಲ್ಲಿರುವ ಎಲ್ಲ ಉದ್ಯೋಗಿಗಳನ್ನು ಉಳಿಸಿಕೊಂಡಿರುವ ಟಿಕ್ ಟಾಕ್ ಸತತವಾಗಿ ಭಾರತ ಸರ್ಕಾರದ ಜೊತೆಗೆ ಮಾತುಕತೆಯಲ್ಲಿ ಇದೆ ಎನ್ನಲಾಗುತ್ತಿದೆ.

PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?

ಟಿಕ್‌ಟಾಕ್ ಇಂಡಿಯಾ ಮುಖ್ಯಸ್ಥ ನಿಖಿಲ್ ಗಾಂಧಿ ಅವರು, ತಮ್ಮ ಉದ್ಯೋಗಿಗಳಿಗೆ ಕಳುಹಿಸಿರುವ ಇ ಮೇಲ್‌ನಲ್ಲಿ ಭಾರತದಲ್ಲಿ ಮತ್ತೆ ಕಾರ್ಯಾಚರಣೆ ನಡೆಸಲು ಕಂಪನಿ ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಭಾರತದಲ್ಲಿ ಟಿಕ್‌ಟಾಕ್ ಮತ್ತು ಹೆಲೋ ಆಪ್ ನಿರ್ವಹಣೆಗೆ 2000 ಉದ್ಯೋಗಿಗಳನ್ನು ಹೊಂದಿದೆ. ಈ ಉದ್ಯೋಗಿಗಳಿಗೆ ಸ್ಯಾಲರಿ ಬೋನಸ್ ಕೂಡ ನೀಡಲಾಗಿದೆ.

ಭಾರತೀಯ ಗ್ರಾಹಕರ ಮಾಹಿತಿಯನ್ನು ಕದಿಯುತ್ತಿವೆ, ಸುರಕ್ಷತೆಗೆ ಸಂಬಂಧಿಸಿದಂತೆ ಲೋಪಗಳನ್ನು ಹೊಂದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಟಿಕ್‌ಟಾಕ್ ಜೊತೆಗೆ ಚೀನಾ ಮೂಲದ ಇತರ 58 ಆಪ್‌ಗಳನ್ನು ಪ್ರಸಕ್ತ ವರ್ಷವೇ ನಿಷೇಧ ಮಾಡಿತ್ತು. 

ಸರ್ಕಾರದೊಂದಿಗೆ ಟಿಕ್‌ಟಾಕ್‌ನ ಪ್ರಸ್ತುತ ನಿಲುವಿನ ಕುರಿತು ತಿಳಿಸಿರುವ ಗಾಂಧಿ, ಡೇಟಾ ಮಾಹಿತಿಯ ಸುರಕ್ಷತೆ ಮತ್ತು ಭದ್ರತಾ ಅಗತ್ಯಗಳನ್ನು ಒಳಗೊಂಡಂತೆ ಸ್ಥಳೀಯ ಕಾನೂನುಗಳನ್ನು ಪಾಲಿಸಲು ನಾವು ಖಂಡಿತವಾಗಿಯೂ ಬದ್ಧತೆಯನ್ನು ಪ್ರದರ್ಶಿಸಲಿದ್ದೇವೆ. ಹಾಗಾಗಿ, ಸರಕಾರ ಕೈಗೊಳ್ಳುವ  ಸಕಾರಾತ್ಮಕ ಫಲಿತಾಂಶದ ಬಗ್ಗೆ ಭರವಸೆಯನ್ನು ಹೊಂದಿದ್ದೇವೆ. ನಿಷೇಧ ತೆರವಿಗೆ ಸಂಬಂಧಿಸಿದಂತೆ ನಮ್ಮ ಸ್ಪಷ್ಟೀಕರಣಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜೊತೆಗೆ ಸರ್ಕಾರ ಹೊಂದಿರುವ ಇತರೆ ಯಾವುದೇ ಆತಂಕಗಳನ್ನು ನಿವಾರಿಸಲು ನಾವು ಸಿದ್ಧರಿದ್ದೇವೆ. ನಮ್ಮ ಉದ್ಯೋಗಿಗಳೊಂದಿಗೆ, ನಮ್ಮ ಪ್ಲಾಟ್‌ಫಾರ್ಮ್ ಮೂಲಕ ಮಾನ್ಯತೆ ಮಾತ್ರವಲ್ಲದೆ ಜೀವನೋಪಾಯದ ಹೊಸ ಮಾರ್ಗಗಳನ್ನೂ ಕಂಡುಕೊಂಡ ನಮ್ಮ ಬಳಕೆದಾರರು ಮತ್ತು ಕ್ರಿಯೇಟರ್‌ಗಳಿಗೆ ನಾವು ಬದ್ಧತೆಯನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಆನ್‌ಲೈನ್ ಕ್ಲಾಸು, ಮನೆಯಿಂದಲೇ ಕೆಲಸ: ಏಳು ವರ್ಷದಲ್ಲೇ ಕಂಪ್ಯೂಟರ್ ಮಾರಾಟ ಅತ್ಯಧಿಕ!

ಅಧಿಕೃತ ಮಾಹಿತಿ ಇಲ್ಲ
ಭಾರತದಲ್ಲಿ ಮತ್ತೆ ಟಿಕ್‌ಟಾಕ್ ಕಾರ್ಯಾಚರಣೆ ನಡೆಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ, ಕಾರ್ಯಾಚರಣೆ ನಡೆಸುವ ಫಲಿತಾಂಶದ  ಬಗ್ಗೆ ಸಕಾರಾತ್ಮಕ ಭಾವನೆಯನ್ನು ಇಟ್ಟುಕೊಂಡಿದೆ. ಹಾಗಾಗಿ, ಸರ್ಕಾರದ ಜೊತೆಗೆ ಮಾತುಕತೆಯಲ್ಲಿರುವ ಕಂಪನಿ ತನ್ನ ಕಾರ್ಯಾಚರಣೆಯನ್ನು ನಡೆಸಬಹುದು ಎನ್ನಲಾಗುತ್ತಿದೆ. ಟಿಕ್‌ಟಾಕ್ ಮೇಲೆ ನಿಷೇಧ ಹೇರುತ್ತಿದ್ದಂತೆ ಮೈಕ್ರೋಸಾಫ್ಟ್, ರಿಲಾಯನ್ಸ್ ಮತ್ತು ಏರ್‌ಟೆಲ್ ಕಂಪನಿಗಳು ಟಿಕ್‌ಟಾಕ್ ಇಂಡಿಯಾ ಸ್ವಾಧೀನ ಪಡಿಸಿಕೊಳ್ಳುವ ವರದಿಗಳಿದ್ದವು. ಆದರೆ,  ಬಗ್ಗೆಯೂ ಇದುವರೆಗೆ ಯಾವುದೇ ಅಧಿಕೃತ ಘೋಷಣೆಗಳು ಆಗಿಲ್ಲ.

ಭಾರತದಲ್ಲಿ ಜನಪ್ರಿಯವಾಗಿತ್ತು ಟಿಕ್‌ಟಾಕ್
ಟಿಕ್‌ಟಾಕ್ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಸಿಕ್ಕಿತ್ತು. ಅತಿ ಹೆಚ್ಚಿನ ಡೌನ್ಲೋಡ್‌ಗಳನ್ನು ಅದು  ಭಾರತದಲ್ಲಿ ಕಂಡಿತ್ತು. ಜಾಗತಿಕವಾಗಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಟಿಕ್‌ಟಾಕ್‌ಗೆ ಭಾರತದಲ್ಲಿ ಕ್ರೇಜ್ ಎನ್ನಿಸುವಷ್ಟು ಬೆಂಬಲ ಸಿಕ್ಕಿತು. ವೈರಲ್ ವಿಡಿಯೋ ಕ್ರಿಯೇಟರ್‌ಗಳಿಗೆ ವೇದಿಕೆ ಒದಗಿಸಿದ್ದ ಟಿಕ್‌ಗಟಾಕ್ ಫೇಸ್‌ಬುಕ್ ಮತ್ತು ಗೂಗಲ್‌ಗಿಂತ ಹೆಚ್ಚಿನ ಯಶಸ್ಸನ್ನು ಭಾರತದ್ಲಲಿ ಕಂಡಿತ್ತು. ಟಿಕ್ ಟಾಕ್ ಮೇಲೆ ನಿಷೇಧ  ಹೇರುತ್ತಿದ್ದಂತೆ ಇನ್‌ಸ್ಟಾಗ್ರಾಮ್ ಸೇರಿದಂತೆ ಅನೇಕ ಆಪ್‌ಗಳು ವಿಡಿಯೋ ಬ್ಲಾಗಿಂಗ್ ಸೇವೆ ನೀಡುವ ಪ್ರಯತ್ನ ಮಾಡುತ್ತಿವೆಯಾದರೂ ಅಷ್ಟೊಂದು ಯಶಸ್ಸು ಸಿಕ್ಕಿಲ್ಲ. 

ಭಾರತೀಯನ ಮೊಬೈಲ್ ಖರೀದಿಯ ಸರಾಸರಿ ಸಾಮರ್ಥ್ಯ ಎಷ್ಟು ಗೊತ್ತಾ ?