ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಗಮನದಲ್ಲಿಟ್ಟಕೊಂಡು ಹೇಳುವುದಾದರೆ, ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ ತುಂಬ ದೊಡ್ಡದಾದದ್ದು. ಹಾಗಾಗಿಯೇ ಅನೇಕ ಕಂಪನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾಡಲು ಮುಂದಾಗುತ್ತಿವೆ. ಭಾರತೀಯ ಮಾರುಕಟ್ಟೆಯಲ್ಲಿ ಒಂದು ಫೋನ್‌ನಿ ಸರಾಸರಿ ಮಾರಾಟ ಬೆಲೆ  ಇದೀಗ ಶೇ.2ರಷ್ಟು ಕುಸಿತವಾಗಿದ್ದು, 11,500 ರೂಪಾಯಿಗೆ ಬಂದು ನಿಂತಿದೆ. 

ಐಡಿಸಿ ರಿಪೋರ್ಟ್‌ ಈ ಮಾಹಿಯನ್ನು ಹೊರ ಹಾಕಿದೆ. ಜೊತೆಗೆ ಶೇ.84ರಷ್ಟು ಇದೀಗ 15,000 ರೂ. ಶ್ರೇಣಿಯಲ್ಲಿದ್ದು, ಶೇ.29ರಷ್ಟು ರೂಪಾಯಿ 7000ಗಿಂತಲೂ ಕಡಿಮೆಯಾಗಿವೆ ಎನ್ನುತ್ತದೆ ವರದಿ. ನಾವೇನು ಮಿಡ್ ರೇಂಜ್ ಅಂತಾ ಹೇಳ್ತವಿ, ಅಂದರೆ, 15000ರಿಂದ 37000 ರೂ.ವರೆಗಿನ ಫೋನ್‌ಗಳು ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಬಹುತೇಕರ ಆದಾಯಕ್ಕೆಕತ್ತರಿ ಬಿದ್ದಿದೆ. ಹಾಗಾಗಿ, ಬಹಳಷ್ಟು ಗ್ರಾಹಕರನ್ನು

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನುತ್ತಿದೆ ವರದಿ.

ಒನ್‌ಪ್ಲಸ್‌ನಿಂದ ಲಿಮಿಟೆಡ್ ಎಡಿಷನ್ ಫೋನ್, ವಿಶೇಷತೆಗಳೇನು?

ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ (37000 ಡಾಲರ್ ಮತ್ತು ಅದಕ್ಕಿಂತ ಮೇಲ್ಪಟ್ಟು) ಆಪಲ್ ಅತ್ಯುತ್ತಮ ಬೆಳವಣಿಗೆ ಕಂಡಿದೆ. ಅಂದರೆ ಶೇ. 91ರಷ್ಟು ಅದು ಬೆಳವಣಿಗೆಯನ್ನು ದಾಖಲಿಸಿದೆ ಎನ್ನುತ್ತದೆ ವರದಿ. ಇದರ ಜೊತೆಗೆ ಇದೇ ಪ್ರಮಾಣದಲ್ಲಿ  ಸ್ಯಾಮ್ಸಂಗ್, ಒನ್‌ಪ್ಲಸ್‌ನಂಥ ಬ್ರ್ಯಾಂಡುಗಳು ಕೂಡ ತಮ್ಮ ಪಾಲು ಹೊಂದಿವೆ. ಈ ವಿಭಾಗದಲ್ಲಿ ಈ ಮೂರು ಬ್ರ್ಯಾಂಡು ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿವೆ.  ಆಪಲ್ ಕೂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ತನ್ನ ಆನ್‌ಲೈನ್ ಸ್ಟೋರ್ ಆರಂಭಿಸಿದೆ. ಆ ಮೂಲಕ ಬಳಕೆದಾರರಿಗೆ ಆಪಲ್ ವಿವಿಧ ರೀತಿಯ ಸೇವೆಯನ್ನು ಒದಗಿಸುತಿದೆ.  

ಐಡಿಸಿಯು ಕನಿಷ್ಠ ಮತ್ತು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯುವುದನ್ನು ಮುಂದುವರಿಸಬಹುದು. ಮಂದಿನ ಕೆಲವು ತ್ರೈಮಾಸಿಕದಲ್ಲಿ ಬಳಕೆದಾರರ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಸ್ಮಾರ್ಟ್‌ಫೋನ್‌ಗಳ ಅಪ್‌ಗ್ರೇಡ್ ಸಾಧ್ಯವಾಗಬಹುದು. ಜೊತೆಗೆ 5ಜಿ ಆಧರಿತ ಸಾಧನಗಳು ಮಾರಾಟವು ಹೆಚ್ಚಬಹುದು. 5ಜಿ ಫೋನ್‌ಗಳ ಆಫರ್ ಮತ್ತು 200-500 ಡಾಲರ್ ಬೆಲೆ ಫೋನ್‌ಗಳ ಮಾರಾಟವು ಕೂಡ ವೃದ್ಧಿಸಬಹುದು ಎನ್ನುತ್ತಾರೆ ಐಡಿಸಿ ಇಂಡಿಯಾ ಕ್ಲೈಂಡ್ ಡಿವೈಸ್‌ನಲ್ಲಿ ಅಸೋಶಿಯೇಟ್ ರಿಸರ್ಚರ್ ಆಗಿರುವ ಉಪಸಾನಾ ಜೋಶಿ ಅವರು.

ಮೂರನೇ ತ್ರೈಮಾಸಿಕದಲ್ಲಿ  ಆನ್‌ಲೈನ್ ಚಾನೆಲ್ ಪಾಲು ಸಾರ್ವಕಾಲಿಕ ಗರಿಷ್ಠ ಶೇಕಡಾ 48 ಕ್ಕೆ ತಲುಪಲು ಇಟೈಲರ್‌ಗಳು ಕಾರಣವಾಗಿದ್ದು, ಉತ್ತಮ ರೀತಿಯಲ್ಲಿ ಶೇಕಡಾ 24 ರಷ್ಟು  ಬೆಳೆಯುತ್ತಿದೆ. ಇ-ಟೈಲರ್ ಪ್ಲಾಟ್‌ಫಾರ್ಮ್‌ಗಳಲ್ಲಿನ ಪ್ರಚಾರಗಳು ಮತ್ತು ಮಾರಾಟದ ಘಟನೆಗಳಿಂದ ಪ್ರೇರೇಪಿಸಲ್ಪಟ್ಟಿದ್ದರಿಂದ ಹಕರು ಆನ್‌ಲೈನ್ ಖರೀದಿಗೆ ಆದ್ಯತೆ ನೀಡಿದರು. ಇದರ ಪರಿಣಾಮವಾಗಿ ಇಷ್ಟೊಂದು ಬೆಳವಣಿಗೆ ಸಾಧ್ಯವಾಗುತ್ತಿದೆ ಎಂದು ಹೇಳಬಹುದು.

Micromax is Back: 6,999 ಮತ್ತು 10,999 ರೂ.ಗೆ ಫೋನ್!

ವರ್ಷದ ಮೊದಲ ಅರ್ಧ ಅವಧಿಯಲ್ಲಿ ಎದುರಾದ ಸವಾಲುಗಳ ಮಧ್ಯೆಯೂ ಆಫ್‌ಲೈನ್ ಚಾನೆಗಳು ಶೇ.11ರಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಆಫ್‌ಲೈನ್ ಚಾನೆಲ್‌ಗಳಲ್ಲಿ ಹೊಸ ಸ್ಮಾರ್ಟಫೋನ್ ಬಿಡುಗಡೆಯು ಈ ಅವಧಿಯಲ್ಲಿ ತಡೆಯೊಡ್ಡಿದ್ದರಿಂದ ಅಂದುಕೊಂಡು ಬೆಳವಣಿಗೆ ಸಾಧ್ಯವಾಗಿಲ್ಲ ಎಂದು ಐಡಿಸಿ ತನ್ನ ವರದಿಯಲ್ಲಿ ತಿಳಿಸಿದೆ.

ಒರಿಜನಲ್ ಇಕ್ವಿಪ್‌ಮೆಂಟ್ ಮ್ಯಾನುಫ್ಯಾಕ್ಚುರ್ಸ್(ಒಇಎಂಎಸ್) ಅವರು ಕಡಿಮೆ ಬೆಲೆ ಸ್ಮಾರ್ಟ್ ಫೋನ್‌ಗಳನ್ನು ಲಾಂಚ್ ಮಾಡಿದ್ದು, ಕ್ವಾಡಕಾಮ್ ಕ್ಯಾಮರಾ, ಹೈ ಮೆಗಾಪಿಕ್ಸೆಲ್ ಕ್ಯಾಮೆರಾ(48 ಮೆಗಾಪಿಕ್ಸೆಲ್ ಮತ್ತು ಅದಕ್ಕಿಂತ ಮೇಲ್ಪಟ್ಟು), ಹೆಚ್ಚು ಸ್ಟೋರೇಜ್(64 ಜಿಬಿ ಮತ್ತು ಅದಕ್ಕಿಂತ ಮೇಲ್ಪಟ್ಟು), ದೊಡ್ಡದಾರ ಬ್ಯಾಟರಿಗಳು(5000 ಎಂಎಎಚ್ ಮತ್ತು ಅದಕ್ಕಿಂತ ಮೇಲ್ಪಟ್ಟು) ಇತ್ಯಾದಿ ಫೀಚರ್‌ಗಳು ಹೆಚ್ಚು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿವೆ.

ಒಟ್ಟಾರೆ ಮೂರನೇ ತ್ರೈಮಾಸಿಕ ಅವಧಿಯಲ್ಲಿ 2.5 ಕೋಟಿ ಫೀಚರ್ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ ಶೇ.30ರಷ್ಟು ಕೊರತೆಯಾಗಿದೆ. ಇದರ ಪರಿಣಾಮವಾಗಿ ಒಟ್ಟಾರೆ ಮೊಬೈಲ್ ಮಾರುಕಟ್ಟೆ ಶೇ.4ರಷ್ಟು ಕುಸಿತವಾಗಿದೆ. ಇನ್ನು ಫೀಚರ್‌ ಫೋನ್‌ಗಳ ಪಾಲು ಶೇ.31ರಷ್ಟಿದೆ ಎಂದು ಹೇಳಬಹುದು.

ಕೊರೊನಾ ಸೋಂಕು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಲು ಹೋಗುತ್ತಿಲ್ಲ. ಇರುವ ಫೋನ್‌ಗಳಲ್ಲಿ ಸಂತೃಪ್ತಿ ಪಡುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಫೋನ್‌ಗಳು ಮಾರಾಟ ಕಂಡಿಲ್ಲ. ಮುಂದಿನ ತ್ರೈಮಾಸಿಕಗಳಲ್ಲಿ ಈ ಪರಿಸ್ಥಿತಿ ಸುಧಾರಿಸಬಹುದು. 

ಶೀಘ್ರವೇ ಭಾರತದಲ್ಲಿ ಮೋಟೋ G 5G ಬಿಡುಗಡೆ, ಬೆಲೆ 26000 ರೂ.?