ಆನ್‌ಲೈನ್ ಕ್ಲಾಸು, ಮನೆಯಿಂದಲೇ ಕೆಲಸ: ಏಳು ವರ್ಷದಲ್ಲೇ ಕಂಪ್ಯೂಟರ್ ಮಾರಾಟ ಅತ್ಯಧಿಕ!
ಐಡಿಸಿ ವರದಿಯ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ ಪಿಸಿ ಮಾರ್ಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಸಂಚಲನ ಸೃಷ್ಟಿಯಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್ ಮಾರಾಟವು ಶೇ.9.7ಕ್ಕಿಂತಲೂ ಹೆಚ್ಚಾಗಿದೆ ಎನ್ನುತ್ತಿದೆ ವರದಿ.
ಕೊರೋನಾ ಸೋಂಕು ನಿಯಂತ್ರಣಕ್ಕೆ ಹೇರಲಾದ ಲಾಕ್‌ಡೌನ್‌ನಿಂದಾಗಿ ಅನೇಕ ಉದ್ಯಮಗಳ ಮೇಲೆ ಹೊಡೆತ ಬಿದ್ದಿದೆ, ಸಣ್ಣ ಸಣ್ಣ ವ್ಯಾಪಾರೋದ್ಯಮಗಳು ತೀವ್ರ ತೊಂದರೆ ಅನುಭವಿಸಿವೆ. ಬಹಳಷ್ಟು ಪ್ರತಿಕೂಲ ಪರಿಣಾಮಗಳನ್ನು ಜನರು ಎದುರಿಸಿದ್ದಾರೆ. ಅದರ ಮಧ್ಯೆಯೇ ಕೆಲವೊಂದು ಕಂಪನಿಗಳು, ವಲಯಗಳು ಹೆಚ್ಚಿನ ಪ್ರಗತಿಯನ್ನು ಸಾಧಿಸಿವೆ. ಈ ಸಾಲಿನಲ್ಲಿ ಕಂಪ್ಯೂಟರ್‌ಗಳ ಮಾರಾಟವೂ ಸೇರುತ್ತದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಮುಚ್ಚಿದ್ದರಿಂದ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಯಿತು. ಹಾಗೆಯೇ ವರ್ಕ್ ಫ್ರಂ ಹೋಮ್ ಪ್ರವೃತ್ತಿಯೂ ಅನಿವಾರ್ಯವಾಯಿತು. ಇದರ ಒಟ್ಟು ಪರಿಣಾಮ ಏನಾಯ್ತು ಎಂದರೆ, ವೈಯಕ್ತಿಕ ಕಂಪ್ಯೂಟರ್‌ಗಳ ಮಾರಾಟದಲ್ಲಿ ತೀವ್ರ ಏರುಗತಿ ಸಾಧ್ಯವಾಯಿತು.
ಶೀಘ್ರವೇ ಭಾರತದಲ್ಲಿ ಮೋಟೋ G 5G ಬಿಡುಗಡೆ, ಬೆಲೆ 26000 ರೂ.?
ಇ ಲರ್ನಿಂಗ್ ಮತ್ತು ಮನೆಯಿಂದ ಕೆಲಸ ಮಾಡುವ ಅನಿವಾರ್ಯ ಕ್ರಮವು ಭಾರತೀಯ ಪಿಸಿ ಮಾರ್ಕೆಟ್ ಅಂದರೆ ಕಂಪ್ಯೂಟರ್ ಮಾರಾಟದಲ್ಲಿ ಹೆಚ್ಚಾಯಿತು. ಕಳೆದ ಏಳು ವರ್ಷಗಳಲ್ಲೇ ಅತಿ ಹೆಚ್ಚು ಎಂದರೆ, ಈ ತ್ರೈಮಾಸಿಕದಲ್ಲಿ ಶೇ.9.2ರಷ್ಟು ಮಾರಾಟ ಕಂಡಿವೆ. ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ 34 ಲಕ್ಷ ಪಿಸಿಗಳು ಮಾರಾಟವಾಗಿವೆ ಎಂದು ಐಡಿಸಿ ವರದಿ ತಿಳಿಸಿದೆ.
ಇದೇ ವೇಳೆ, 2020ರ ತ್ರೈಮಾಸಿಕದಲ್ಲಿ ಡೆಸ್ಕ್‌ಟಾಪ್, ಲ್ಯಾಪ್‌ಟ್ಯಾಪ್ ವರ್ಕ್‌ಸ್ಟೇಷನ್ಸ್‌ಗಳ ಮಾರಾಟವು 3.1 ದಶಲಕ್ಷದಷ್ಟಟಿದೆ.
ಈ ತ್ರೈಮಾಸಿಕದಲ್ಲಿ 34 ಲಕ್ಷದಷ್ಟು ಕಂಪ್ಯೂಟರ್‌ಗಳನ್ನು ರವಾನಿಸಲಾಗಿದ್ದು, ಆನ್‌ಲೈನ್ ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದು ಅನಿವಾರ್ಯವಾದ್ದರಿಂದಲೇ 2020ರ ಮೂರನೇ ತ್ರೈಮಾಸಿಕವು ಕಳೆದ ಏಳು ವರ್ಷಗಳಲ್ಲಿ ಕಂಪ್ಯೂಟರ್ ಮಾರಾಟಕ್ಕೆ ಸಂಬಂಧಿಸಿದಂತೆ ಅತಿ ತೊಡ್ಡ ತ್ರೈಮಾಸಿಕವಾಗಿದೆ.
ಲ್ಯಾಪ್‌ಟಾಪ್‌ಗೂ ಬೇಡಿಕೆ
ಲ್ಯಾಪ್‌ಟಾಪ್‌ಗೂ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಈಗಿನ ಪೂರೈಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆ ಇದ್ದು, ಅಕ್ಟೋಬರ್-ಡಿಸೆಂಬರ್‌ಗೆ ನಡುವಿನ ತ್ರೈಮಾಸಿಕದಲ್ಲಿ ಲ್ಯಾಪ್‌ಟಾಪ್ ಮಾರಾಟದಲ್ಲಿನ ಹೆಚ್ಚಳವನ್ನು ಗುರುತಿಸಬಹುದಾಗಿದೆ.
ಭಾರತೀಯನ ಮೊಬೈಲ್ ಖರೀದಿಯ ಸರಾಸರಿ ಸಾಮರ್ಥ್ಯ ಎಷ್ಟು ಗೊತ್ತಾ?
ಕಂಪ್ಯೂಟರ್ ಮಾರಾಟದಲ್ಲಿ ಎಚ್‌ಪಿ ಕಂಪನಿಯು ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 2020 ಸೆಪ್ಟೆಂಬರ್‌ಕ್ಕೆ ಮುಕ್ತಯವಾದ ತ್ರೈಮಾಸಿಕದಲ್ಲಿ ಶೇ.28.2ರಷ್ಟು ತನ್ನ ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದೆ. ನಂತರದಲ್ಲಿ ಲೆನೆವೋ ಶೇ.21.7, ಡೆಲ್ ಟೆಕ್ನಾಲಜಿಸ್ ಶೇ.21.3, ಎಸರ್ ಗ್ರೂಪ್ ಶೇ.9.5 ಹಾಗೂ ಆಸುಸ್ ಶೇ.7.5ರಷ್ಟು ಮಾರುಕಟ್ಟೆಯಲ್ಲಿ ಪಾಲು ಹೊಂದಿವೆ.
ಶಾಲೆಗಳು ಮತ್ತು ಕಾಲೇಜ್‌ಗಳು ನಿರಂತರವಾಗಿ ಆನ್‌ಲೈನ್ ಮೂಲಕವೇ ಕ್ಲಾಸುಗಳನ್ನು ನಡೆಸುತ್ತಿರುವುದರಿಂದ ಗ್ರಾಹಕ ಉಪಯೋಗಿ ಲ್ಯಾಪ್‌ಟಾಪ್ ಮಾರಾಟದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ಈ ಟ್ರೆಂಡ್ ಅನ್ನು ನಾವು ದೊಡ್ಡ ದೊಡ್ಡ ನಗರಗಳಲ್ಲಿ ಕಾಣಬಹುದು. ಪೂರೈಕೆಯ ಕೊರತೆಯ ಮಧ್ಯೆಯೂ ಮಾರಾಟಗಾರರು ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸಿದ್ದಾರೆ.
ವಿಶೇಷ ಎಂದರೆ, ಕಂಪ್ಯೂಟರ್ ವಲಯದಲ್ಲಿ ಹೊಸದಾಗಿ ಎಂಟ್ರಿ ಕೊಟ್ಟಿರುವ ಶಿಯೋಮಿ ಮತ್ತು ಅವಿತಾದಂಥ ಕಂಪನಿಗಳು ಕೂಡ ಉತ್ತಮ ಪ್ರದರ್ಶನ ಕಂಡಿವೆ. ಆದರೆ, ಟಾಪ್ 5 ಕಂಪನಿಗಳ ಲಿಸ್ಟ್‌ನಲ್ಲಿ ಸೇರ್ಪಡೆಗೊಳ್ಳಲು ಅವುಗಳಿಗೆ ಸಾಧ್ಯವಾಗಿಲ್ಲ. ಹಾಗೆ ನೋಡಿದರೆ, ಆಪಲ್ ಕೂಡ ಉತ್ತಮ ಪ್ರದರ್ಶನವನ್ನುತೋರಿದೆ. ಅದು ಕೂಡ ಈ ತ್ರೈಮಾಸಿಕದಲ್ಲಿ ಶೇ.19.4ರಷ್ಟು ಕಂಪ್ಯೂಟರ್‌ಗಳನ್ನು ಮಾರಾಟ ಮಾಡಿದೆ ಎನ್ನುತ್ತದೆ ವರದಿ.
QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?