PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?

ಡೇಟಾ ಅಸುರಕ್ಷತೆ ಹಾಗೂ ಬಳಕೆದಾರರಲ್ಲಿ ಮಾನಸಿಕ ಆನಾರೋಗ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪಬ್‌ಜಿ ಗೇಮ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿತ್ತು. ಆದರೆ, ಅದೀಗ ಪಬ್‌ಜಿ ಮೊಬೈಲ್ ಇಂಡಿಯಾ ಎಂಬ ಹೊಸ ಅವತಾರದೊಂದಿಗೆ ಮತ್ತೆ  ಬರಲು ಸಜ್ಜಾಗಿದೆ.
 

PUBG Mobile India has been officially launched in India by PUBG Corporation

ಪಬ್‌ಜಿ ಗೇಮ್ ಪ್ರಿಯರಿಗೆ ಇದು ಸಂತಸದ ಸುದ್ದಿ. ಚೀನಾದ ಕೆಲವು ಆಪ್‌ಗಳ ಜೊತೆ ಪಬ್‍ಜಿ ಗೇಮಿಂಗ್ ಆಪ್‌ನ್ನೂ ಭಾರತ ಸರ್ಕಾರ ನಿಷೇಧಿಸಿತ್ತು. ಇದರಿಂದ ಭಾರತದಲ್ಲಿ ಪಬ್‌ಜಿ ಆನ್‌ಲೈನ್ ಗೇಮ್ ಆಡಲು ಸಾಧ್ಯವಿರಲಿಲ್ಲ. ಇದೀಗ ಭಾರತೀಯರ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಪಬ್‌ಜಿ ಮತ್ತೆ ಭಾರತಕ್ಕೆ ಮರಳುತ್ತಿದೆ.

ಹೌದು, ಇದು ನಿಜ. ಪಬ್‌ಜಿ ಕಾರ್ಪೋರೇಷನ್ ಅಧಿಕೃತವಾಗಿಯೇ ಭಾರತದಲ್ಲಿ ಪಬ್‌ಜಿ ಮೊಬೈಲ್ ಇಂಡಿಯಾ ಆರಂಭಿಸಿದೆ. ಪಬ್‌ಜಿಯ ಹೊಸ ವರ್ಷನ್ ಅನ್ನು ಪಬ್‌ಜಿ ಮೊಬೈಲ್ ಇಂಡಿಯಾ ಎಂದು ಕರೆಯಲಾಗುತ್ತಿದ್ದು, ಇಂಡಿಯಾ ಎಂಬ ಪದವು ಅನೇಕ ಸಂಗತಿಗಳನ್ನು ಒಳಗೊಂಡಿದೆ. ಈ ಹಿಂದಿನ ಆವೃತ್ತಿಯಲ್ಲಿ ತನ್ನ ಹೆಸರಿನಲ್ಲಿ ಈ ಪದ ಇರಲಿಲ್ಲ. ಇದರಿಂದಾಗಿ ನಿಷೇಧಕ್ಕೊಳಗಾಗುವ ಪರಿಸ್ಥಿತಿ ಎದುರಾಗಿತ್ತು ಎಂಬುದು ಕಂಪನಿಯ ಅಂಬೋಣ. ಪಬ್‌ಜಿ ಕಾರ್ಪೊರೇಷನ್ ಪ್ರಕಾರ, ಹೊಸ ಆವೃತ್ತಿಯನ್ನು ಭಾರತೀಯ ಬಳಕೆದಾರರಿಗೆ ಎಂದೇ ವಿನ್ಯಾಸ ಮಾಡಲಾಗಿದೆ. ಹೊಸ ವರ್ಷನ್‌ನಲ್ಲಿ ನೀವು ಪಾತ್ರಧಾರಿಗಳನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಬಳಕೆದಾರರಿಗೆ ಈ ಗೇಮ್ ಯಾವಾಗ ಸಿಗುತ್ತದೆ ಎಂಬದು ಗೊತ್ತಿಲ್ಲವಾದರೂ, ಶೀಘ್ರದಲ್ಲಿ ದೊರೆಯಲಿದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ.

Honor 10X Lite ಸ್ಮಾರ್ಟ್‌ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆ?

ಸಂಪೂರ್ಣ ಆರೋಗ್ಯಕರ ಮತ್ತು ಸುರಕ್ಷಿತ ಗೇಮ್‌ ಒದಗಿಸುವ ಭರವಸೆಯನ್ನು ದಕ್ಷಿಣ ಕೊರಿಯಾ ಮೂಲದ ಪಬ್‌ಜಿ ಕಾರ್ಪೊರೇಷನ್ ನೀಡಿದೆ. ಡೇಟಾ ಸುರಕ್ಷತೆಯ ಪ್ರಶ್ನೆಯ ಹಿನ್ನೆಲೆಯಲ್ಲಿ ಭಾರತೀಯ ಸರಕಾರ ಪಬ್‌ಜಿ ಮೇಲೆ ನಿಷೇಧ ಹೇರಿತ್ತು. ಇದೀಗ, ಸುರಕ್ಷತೆಯನ್ನು ಒದಗಿಸಲು ಮುಂದಾಗಿದೆ. ಪಬ್‌ಜೀ ಕಾರ್ಪೊರೇಷನ್ ಮೂಲ ಕಂಪನಿಯಾದ ಕ್ರಾಫ್ಟಾನ್ ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಜತೆ ಒಪ್ಪಂದ ಮಾಡಿಕೊಂಡಿದ್ದು ತನ್ನ ಬಳಕೆದಾರರ ಡೇಟಾವನ್ನು ಅಝೂರ್ ಕ್ಲೌಡ್‌ನ ಸ್ಟೋರ್ ಮಾಡಲಿದೆ. ಈ ಅಝೂರ್ ಕ್ಲೌಡ್ ಸ್ಥಳೀಯವಾಗಿ ಲಭ್ಯವಾಗಲಿದೆ. ಈ ಮೂಲಕ ಭಾರತೀಯರ ಡೇಟಾ ಭಾರತದ ಗಡಿಯೊಳಗಿನ ಡೇಟಾ ಸೆಂಟರ್‌ಗಳಲ್ಲಿ ಉಳಿಯಲಿದೆ. ಇದು ಭಾರತ ಸರ್ಕಾರದ ಮೊದಲ ಕಂಡಿಷನ್ ಆಗಿತ್ತು.

PUBG Mobile India has been officially launched in India by PUBG Corporation

ಬಳಕೆದಾರರ ಆರೋಗ್ಯವು ಕೂಡ ಪಬ್‌ಜೀ ನಿಷೇಧಕ್ಕೆ ಮುಖ್ಯ ಕಾರಣವಾಗಿತ್ತು. ಇದೀಗ ಆ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಪಬ್‌ಜೀ ಕಾರ್ಪೊರೇಷನ್ ಮಾಡಿದೆ. ಪಬ್‌ಜೀ ಮೊಬೈಲ್ ಇಂಡಿಯಾ ಗೇಮ್‌ ಆಪ್‌ನಲ್ಲಿ ಆಟದ ಸಮಯ ನಿಗದಿಯನ್ನು ಮಾಡಲಾಗಿದೆ. ಅಂದರೆ, ಪಬ್‌ಜೀ ಗೇಮ್ ಅನ್ನು ನೀವು ಯಾವುದೇ ಟೈಮ್ ಮಿತಿ ಇಲ್ಲದೇ ಆಟುವಂತಿಲ್ಲ. ಕಿರಿಯ ಬಳಕೆದಾರಲ್ಲಿ ಆರೋಗ್ಯಕಾರಿ ಗೇಮ್ ಆಡುವುದನ್ನು ಉತ್ತೇಜಿಸಲು ಈ ನಿರ್ಬಂಧವನ್ನು ಅಳವಡಿಸಲಾಗಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. 

ಆನ್‌ಲೈನ್ ಕ್ಲಾಸು, ಮನೆಯಿಂದಲೇ ಕೆಲಸ: ಏಳು ವರ್ಷದಲ್ಲೇ ಕಂಪ್ಯೂಟರ್ ಮಾರಾಟ ಅತ್ಯಧಿಕ!

ಭಾರತೀಯ ಬಳಕೆದಾರರ ಡೇಟಾವನ್ನು ಭಾರತದಲ್ಲೇ ಉಳಿಸಿಕೊಳ್ಳುವ ಮತ್ತು ಬಳಕೆದಾರರ ಆರೋಗ್ಯವನ್ನು ಕಾಪಾಡುವ ಎರಡು ನಿರ್ಬಂಧಗೊಳಗೊಂದಿಗೆ ಪಬ್‌ಜೀ ಮತ್ತೆ ಭಾರತಕ್ಕೆಕಾಲಿಡಲು ಪ್ರಯತ್ನಿಸುತ್ತಿದೆ. ಈ ಎರಡು ಸಂಗತಿಗಳನ್ನು ಒಪ್ಪಿ  ಭಾರತ ಸರ್ಕಾರ ಅನುಮತಿ ನೀಡಲಿದೆಯೇ ಅಥವಾ ನಿಷೇಧವನ್ನು ಮುಂದುವರಿಸಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಭಾರತದಲ್ಲಿ ಪಬ್‌ಜೀ ಮತ್ತೆ ಕಾರ್ಯಾಚರಣೆ ನಡೆಸುವುದು ಕಂಪನಿಗೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅದು ಮರಳಿ ಬರುವ ಪ್ರಯತ್ನ ಮಾಡುತ್ತಿದೆ. ಆಟಗಾರರೊಂದಿಗೆ ಸಂವಹನ ಮತ್ತು ಸೇವೆಗಳನ್ನು ಹೆಚ್ಚಿಸಲು ಭಾರತೀಯ ಅಂಗಸಂಸ್ಥೆಯೊಂದನ್ನು ರಚಿಸುವುದಾಗಿ ಪಬ್‌ಜಿ ಕಾರ್ಪೊರೇಷನ್ ಹೇಳಿದೆ.

ಈ ಭಾರತೀಯ ಅಂಗಸಂಸ್ಥೆಯು ವ್ಯಾಪಾರ, ಇ ಸ್ಪೋರ್ಟ್ಸ್ ಮತ್ತು ಆಟದ ವಿನ್ಯಾಸ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ 100 ಜನರನ್ನು ನೇಮಿಸಿಕೊಳ್ಳಲಿದೆ. ಆ ಮೂಲಕ ಸರ್ಕಾರ ಮತ್ತು ವಿದೇಶಿ ಮಾನವಶಕ್ತಿಗೆ ಸಂಬಂಧಿಸಿದ ಬಳಕೆದಾರರ ಭಯವನ್ನು ನಿವಾರಿಸಲು ಪಬ್‌ಜಿ ಕಾರ್ಪೊರೇಶನ್ ಯೋಜಿಸಿದೆ. ಈ ಕ್ರಮವು ಪಬ್‌ಜಿ ಕಾರ್ಪೊರೇಷನ್‌ಗೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಪಬ್‌ಜಿಯ ಈ ಕ್ರಮದಿಂದಾಗಿ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ಚೀನಾದ ಅಪ್ಲಿಕೇಶನ್‌ಗಳ ವಿರುದ್ಧದ ಹಿನ್ನಡೆಯ ಪರಿಣಾಮವಾಗಿ ಭಾರತದ ಅಪ್ಲಿಕೇಶನ್ ಪರಿಸರ ವ್ಯವಸ್ಥೆಯು ದೊಡ್ಡ ಬದಲಾವಣೆಗೆ ಒಳಗಾಗುತ್ತಿದೆ. 

ಹಾಗಾಗಿ, ಪಬ್‌ಜಿ ತನ್ನ ಹೊಸ ಅವತಾರದೊಂದಿಗೆ ಭಾರತೀಯ ಬಳಕೆದಾರರನ್ನು ತಲುಪಲು ಪ್ರಯತ್ನ ನಡೆಸುತ್ತಿದೆ. ಆದರೆ, ಇದಕ್ಕೆ ಸರ್ಕಾರ ಯಾವ ರೀತಿಯಾಗಿ ಸ್ಪಂದಿಸಲಿದೆ ಎಂಬದನ್ನು ಕಾದು ನೋಡಬೇಕು. 

ಭಾರತೀಯನ ಮೊಬೈಲ್ ಖರೀದಿಯ ಸರಾಸರಿ ಸಾಮರ್ಥ್ಯ ಎಷ್ಟು ಗೊತ್ತಾ?
 

Latest Videos
Follow Us:
Download App:
  • android
  • ios