ಪಬ್‌ಜೀ ಮತ್ತೆ ಭಾರತದಲ್ಲಿ ತನ್ನ ಕಾರ್ಯಾಚರಣೆ ನಡೆಸಲಿದೆ ಎಂಬ ಸುದ್ದಿಯನ್ನು ಈ ಮೊದಲು ಓದಿದ್ದೀರಿ. ಇದೀಗ ಹೊಸ ಸುದ್ದಿ ಏನೆಂದರೆ, ಅದು ಗೇಮರ್ ಮಧ್ಯೆ ಸ್ಪರ್ಧೆಗಾಗಿ 6 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಲಿದೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

@TSMentGHATAK ಟ್ವಿಟರ್ ಹ್ಯಾಂಡಲ್, ಪಬ್‌ಜೀ ಟೂರ್ನಾಮೆಂಟ್‌ಗೆ 6 ಕೋಟಿ ರೂಪಾಯಿ ಮೀಸಲು. ಆಶ್ಚರ್ಯವಾಯಿತಾ? ಪ್ರತಿ ಒಂದು ತಂಡಕ್ಕೆ ಕನಿಷ್ಠ 40 ಸಾವಿರ ರೂಪಾಯಿಂದ 2 ಲಕ್ಷ ರೂಪಾಯಿವರೆಗೂ ದೊರೆಯಲಿದೆ. ಇದೊಂದು ಪ್ರೈಜ್ ಪೂಲ್ ಆಗಲಿದ್ದು ಪ್ರತಿ ಸೀಸನ್‌ಗೂ ಹೆಚ್ಚುತ್ತಾ ಹೋಗಲಿದೆ. ಇ ಸ್ಪೋರ್ಟ್ಸ್‌ನ ಹೊಸ ಶಕೆ ಆರಂಭವಾಗಿದೆ. ಇ ಸ್ಪೋರ್ಟ್ಸ್‌ನಲ್ಲಿ ನೀವು ಒಂದು ಕೈ ನೋಡಲು ಇದು ಅತ್ಯಂತ ಸೂಕ್ತ ಕಾಲ ಎಂದು ಹೇಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಟ್ವಿಟ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

 

 

 

 

ಆದರೆ, ಈ ಬಗ್ಗೆ ಪಬ್‌ಜೀ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಮಾಹಿತಿಯಷ್ಟೇ.

PUBG is back: ಹೊಸ ಅವತಾರದ ಗೇಮ್‌ಗೆ ಒಪ್ಪಿಗೆ ಸಿಗುತ್ತಾ?

ಇನ್‌ಸೈಡ್ ಸ್ಪೋರ್ಟ್ ಪ್ರಕಾರ, Tap Tap ಗೇಮ್ ಷೇರಿಂಗ್ ಸಮುದಾಯದ ಭಾಗವಾಗಿರುವ ಆಯ್ದ ಬಳಕೆದಾರರಿಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಭಾರತ ಪ್ರಿ-ರಿಜಿಸ್ಟ್ರೇಷನ್ ಈಗ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ 300,000ಕ್ಕೂ ಹೆಚ್ಚು ಬಳಕೆದಾರರು ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಮತ್ತು ಪ್ರಸ್ತುತ ಇದಕ್ಕೆ 9.8 / 10 ಎಂದು ರೇಟಿಂಗ್ ಕೂಡ ಮಾಡಲಾಗಿದೆ. ಆದರೆ, FAU-G ಯಂತೆಯೇ, PUBG ಕಾರ್ಪೊರೇಷನ್‌ನಿಂದಲೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹಾಗಾಗಿ ಈ ಸುದ್ದಿಯು ಗೇಮರ್‌ಗಳ ಮಧ್ಯೆ ಹೆಚ್ಚು ಗೊಂದಲಕ್ಕೆ ಕಾರಣವಾಗಿದೆ. 

ಮತ್ತೆ ಭಾರತದಲ್ಲಿ ಪಬ್‌ಜೀ ಗೇಮ್
ಪಬ್‌ಜಿ ಗೇಮ್ ಪ್ರಿಯರಿಗೆ ಇದು ಸಂತಸದ ಸುದ್ದಿ. ಚೀನಾದ ಕೆಲವು ಆಪ್‌ಗಳ ಜೊತೆ ಪಬ್‍ಜಿ ಗೇಮಿಂಗ್ ಆಪನ್ನು ಕೂಡ ಭಾರತ ಸರಕಾರ ನಿಷೇಧಿಸಿತ್ತು. ಇದರಿಂದ ಭಾರತದಲ್ಲಿ ಪಬ್‌ಜಿ ಆನ್‌ಲೈನ್ ಗೇಮ್ ಆಡಲು ಸಾಧ್ಯವಿರಲಿಲ್ಲ. ಇದೀಗ ಭಾರತೀಯರ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಪಬ್‌ಜಿ ಮತ್ತೆ ಭಾರತಕ್ಕೆ ಮರಳುತ್ತಿದೆ. ಪಬ್‌ಜಿ ಕಾರ್ಪೋರೇಷನ್ ಅಧಿಕೃತವಾಗಿಯೇ ಭಾರತದಲ್ಲಿ ಪಬ್‌ಜಿ ಮೊಬೈಲ್ ಇಂಡಿಯಾ ಅಧಿಕೃತವಾಗಿ ಆರಂಭಿಸಿದೆ. ಪಬ್‌ಜಿಯ ಹೊಸ ವರ್ಷನ್ ಅನ್ನು ಪಬ್‌ಜಿ ಮೊಬೈಲ್ ಇಂಡಿಯಾ ಎಂದು ಕರೆಯಲಾಗುತ್ತಿದ್ದು, ಇಂಡಿಯಾ ಎಂಬ ಪದವು ಅನೇಕ ಸಂಗತಿಗಳನ್ನು ಒಳಗೊಂಡಿದೆ. ಈ ಹಿಂದಿನ ಆವೃತ್ತಿಯಲ್ಲಿ ತನ್ನ ಹೆಸರಿನಲ್ಲಿ ಈ ಪದ ಇರಲಿಲ್ಲ. ಇದರಿಂದಾಗಿ ಅದು ನಿಷೇಧಕ್ಕೊಳಗಾಗುವ ಪರಿಸ್ಥಿತಿ ಎದುರಾಗಿತ್ತು. ಪಬ್‌ಜಿ ಕಾರ್ಪೊರೇಷನ್ ಪ್ರಕಾರ, ಹೊಸ ಆವೃತ್ತಿಯನ್ನು ಭಾರತೀಯ ಬಳಕೆದಾರರಿಗೆ ಎಂದೇ ವಿನ್ಯಾಸ ಮಾಡಲಾಗಿದೆ. ಹೊಸ ವರ್ಷನ್‌ನಲ್ಲಿ ನೀವು ಪಾತ್ರಧಾರಿಗಳನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಬಳಕೆದಾರರಿಗೆ ಈ ಗೇಮ್ ಯಾವಾಗ ಸಿಗುತ್ತದೆ ಎಂಬದು ಗೊತ್ತಿಲ್ಲವಾದರೂ, ಶೀಘ್ರದಲ್ಲಿ ದೊರೆಯಲಿದೆ ಎಂಬುದು ಕಂಪನಿಯ ಹೇಳಿಕೆಯಾಗಿದೆ.

ಭಾರತದಲ್ಲಿ ಮತ್ತೆ ಟಿಕ್ ‌ಟಾಕ್ ಕಾರುಬಾರು ಶುರುವಾಗತ್ತಾ?

ಬಳಕೆದಾರರ ಆರೋಗ್ಯವು ಕೂಡ ಪಬ್‌ಜೀ ನಿಷೇಧಕ್ಕೆ ಮುಖ್ಯ ಕಾರಣವಾಗಿತ್ತು. ಇದೀಗ ಆ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಪಬ್‌ಜೀ ಕಾರ್ಪೊರೇಷನ್ ಮಾಡಿದೆ. ಪಬ್‌ಜೀ ಮೊಬೈಲ್ ಇಂಡಿಯಾ ಗೇಮ್‌ ಆಪ್‌ನಲ್ಲಿ ಆಟದ ಸಮಯ ನಿಗದಿಯನ್ನು ಮಾಡಲಾಗಿದೆ. ಅಂದರೆ, ಪಬ್‌ಜೀ ಗೇಮ್ ಅನ್ನು ನೀವು ಯಾವುದೇ ಟೈಮ್ ಮಿತಿ ಇಲ್ಲದೇ ಆಟುವಂತಿಲ್ಲ. ಕಿರಿಯ ಬಳಕೆದಾರಲ್ಲಿ ಆರೋಗ್ಯಕಾರಿ ಗೇಮ್ ಆಡುವುದನ್ನು ಉತ್ತೇಜಿಸಲು ಈ ನಿರ್ಬಂಧವನ್ನು ಅಳವಡಿಸಲಾಗಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ. 

ಭಾರತೀಯ ಬಳಕೆದಾರರ ಡೇಟಾವನ್ನು ಭಾರತದಲ್ಲೇ ಉಳಿಸಿಕೊಳ್ಳುವ ಮತ್ತು ಬಳಕೆದಾರರ ಆರೋಗ್ಯವನ್ನು ಕಾಪಾಡುವ ಎರಡು ನಿರ್ಬಂಧಗೊಳಗೊಂದಿಗೆ ಪಬ್‌ಜೀ ಮತ್ತೆ ಭಾರತಕ್ಕೆಕಾಲಿಡಲು ಪ್ರಯತ್ನಿಸುತ್ತಿದೆ. ಈ ಎರಡು ಸಂಗತಿಗಳನ್ನು ಒಪ್ಪಿ  ಭಾರತ ಸರ್ಕಾರ ಅನುಮತಿ ನೀಡಲಿದೆಯೇ ಅಥವಾ ನಿಷೇಧವನ್ನು ಮುಂದುವರಿಸಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಈ ಭಾರತೀಯ ಅಂಗಸಂಸ್ಥೆಯು ವ್ಯಾಪಾರ, ಇ ಸ್ಪೋರ್ಟ್ಸ್ ಮತ್ತು ಆಟದ ವಿನ್ಯಾಸ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ 100 ಜನರನ್ನು ನೇಮಿಸಿಕೊಳ್ಳಲಿದೆ. ಆ ಮೂಲಕ ಸರ್ಕಾರ ಮತ್ತು ವಿದೇಶಿ ಮಾನವಶಕ್ತಿಗೆ ಸಂಬಂಧಿಸಿದ ಬಳಕೆದಾರರ ಭಯವನ್ನು ನಿವಾರಿಸಲು ಪಬ್‌ಜಿ ಕಾರ್ಪೊರೇಶನ್ ಯೋಜಿಸಿದೆ. ಈ ಕ್ರಮವು ಪಬ್‌ಜಿ ಕಾರ್ಪೊರೇಷನ್‌ಗೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಪಬ್‌ಜಿಯ ಈ ಕ್ರಮದಿಂದಾಗಿ ದೇಶದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ. ವಿಶೇಷವಾಗಿ ಚೀನಾದ ಅಪ್ಲಿಕೇಶನ್‌ಗಳ ವಿರುದ್ಧದ ಹಿನ್ನಡೆಯ ಪರಿಣಾಮವಾಗಿ ಭಾರತದ ಅಪ್ಲಿಕೇಶನ್ ಪರಿಸರ ವ್ಯವಸ್ಥೆಯು ದೊಡ್ಡ ಬದಲಾವಣೆಗೆ ಒಳಗಾಗುತ್ತಿದೆ.  ಹಾಗಾಗಿ, ಪಬ್‌ಜಿ ತನ್ನ ಹೊಸ ಅವತಾರದೊಂದಿಗೆ ಭಾರತೀಯ ಬಳಕೆದಾರರನ್ನು ತಲುಪಲು ಪ್ರಯತ್ನ ನಡೆಸುತ್ತಿದೆ. ಆದರೆ, ಇದಕ್ಕೆ ಸರ್ಕಾರ ಯಾವ ರೀತಿಯಾಗಿ ಸ್ಪಂದಿಸಲಿದೆ ಎಂಬದನ್ನು ಕಾದು ನೋಡಬೇಕು. 

ನವೆಂಬರ್ 26ಕ್ಕೆ ರೆಡ್‌ಮೀ ನೋಟ್ 9 ಸರಣಿ ಫೋನ್‌ಗಳು ಬಿಡುಗಡೆ