ನವೆಂಬರ್ 26ಕ್ಕೆ ರೆಡ್‌ಮೀ ನೋಟ್ 9 ಸರಣಿ ಫೋನ್‌ಗಳು ಬಿಡುಗಡೆ

ಶಿಯೋಮಿಯ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮೀ, ತನ್ನ ನೋಟ್ 9 ಸರಣಿಯಲ್ಲಿ ಮೂರು ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ನವೆಂಬರ್ 26ರಂದು ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.  ಈ ಮೂರೂ ಫೋನ್‌ಗಳು 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿವೆ. ಭಾರತದಲ್ಲೂ ಬಿಡುಗಡೆ ಕಾಣಲಿವೆ. 
 

RedMi Note 9 series phones are ready to launch on November 26 in china

ಭಾರತದಲ್ಲಿ ಬಹು ಗ್ರಾಹಕರ ಮೆಚ್ಚಿನ ಬ್ರ್ಯಾಂಡ್ ಆಗಿರುವ ರೆಡ್‌ಮೀ ಮತ್ತೊಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ನೊಂದಿಗೆ ಮಾರುಕಟ್ಟೆಗೆ ಮರಳಿದೆ. ಅಂದ ಹಾಗೆ, ರೆಡ್‌ಮೀ ಹೊಸ ಫೋನ್‌ ಬಿಡುಗಡೆಯಾಗುತ್ತಿರುವುದು ಭಾರತದಲ್ಲಿ ಅಲ್ಲ. ಬದಲಿಗೆ ಚೀನಾದ ಮಾರುಕಟ್ಟೆಯಲ್ಲಿ. 

ರೆಡ್‌ಮೀ ನೋಟ್ ಸರಣಿಯ ಹೊಸ ಮಾದರಿಯ ಫೋನ್‌ಗಳನ್ನು ಚೀನಾದ ಮಾರುಕಟ್ಟೆಗೆ ನವೆಂಬರ್ 26ರಂದು  ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ಶಿಯೋಮಿ ಸಬ್ ಬ್ರ್ಯಾಂಡ್ ಆಗಿರುವ ರೆಡ್‌ಮೀ, ನೋಟ್ 9 ಸರಣಿಯಲ್ಲಿ ಮೂರು ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಈ ಮೂರು ಸ್ಮಾರ್ಟ್‌ಫೋನ್‌ಗಳು ಯಾವುದು ಎಂಬುದನ್ನು ಕಂಪನಿ ಹೇಳಿಲ್ಲ. ಹಾಗಾಗಿ, ಬೇಸಿಕ್ ರೆಡ್‌ಮೀ ನೋಟ್ 9 ಜೊತೆಗೆ ರೆಡ್‌ಮೀ ನೋಟ್ 9ಪ್ರೋ ಮ್ಯಾಕ್ಸ್ ಇರಬಹುದು ಎಂದು ಹೇಳಲಾಗುತ್ತಿದೆ. ರೆಡ್ ಮೀ ನೋಟ್ 9 ಪ್ರೋ ಸ್ಮಾರ್ಟ್‌ಫೋನ್‌ವು ಈ ಹಿಂದೆ ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾದ ಫೋನ್ ರೀತಿಯಲ್ಲಿರಬಹದು ಎಂದು ಊಹಿಸಲಾಗುತ್ತಿದೆ.

ಭಾರತದ ಮಾರುಕಟ್ಟೆ ಲಗ್ಗೆಯಿಟ್ಟ ಒನ್ ಪ್ಲಸ್ 6ಟಿ, ಕೊಳ್ಳಲು ಮುಗಿಬಿದ್ದಿ ಗ್ರಾಹಕರು

ವೇಯಿಬೋ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿರುವ ಕಂಪನಿ, ನವೆಂಬರ್ 26ರಂದು ಚೀನಾದಲ್ಲಿ ರೆಡ್‌ಮೀ ನೋಟ್ 9 ಸರಣಿ ಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು. ಈ ಸರಣಿಯಲ್ಲಿ ಒಟ್ಟು ಮೂರು ಫೋನ್‌ಗಳು ಮಾರುಕಟ್ಟೆಗೆ ಪರಿಚಯವಾಗಲಿವೆ ಎಂಬುದನ್ನು ಕಂಪನಿ ಖಚಿತಪಡಿಸಿದೆ. ಮೂರು ಫೋನ್‌ಗಳ ಹೆಸರನ್ನು ಕಂಪನಿ ಬಿಟ್ಟು ಕೊಟ್ಟಿಲ್ಲವಾದರೂ ರೆಡ್‌ಮೀ ನೋಟ್9, ರೆಡ್‌ಮೀ ನೋಟ್ 9 ಪ್ರೋ ಮತ್ತು ರೆಡ್‌ಮೀ ನೋಟ್ ಪ್ರೋ ಮ್ಯಾಕ್ಸ್ ಇರಬಹುದು ಎಂದು ಅಂದಾಜಿಸುತ್ತಿದ್ದಾರೆ ಮಾರುಕಟ್ಟೆ ವಿಶ್ಲೇಷಕರು. 

ಈಗಿನ ಟ್ರೆಂಡ್‌ ಪ್ರಕಾರ ಈ ಮೂರೂ ಫೋನ್‌ಗಳು 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಊಹಿಸಲಾಗುತ್ತಿದೆ. ಹಾಗಾಗಿ, ಪ್ರೀಮಿಯಮ್ ಫೋನ್‌ ಹಾಗೂ ತುಸು ಅಗ್ಗದ ಫೋನ್‌ಗಳಲ್ಲಿ 5ಜಿ ತಂತ್ರಜ್ಞಾನ ಬಳಕೆಯ ಅನುಭವವನ್ನು ಗ್ರಾಹಕರು ಪಡೆದುಕೊಳ್ಳಬಹುದು ಎಂಬುದು ಲೆಕ್ಕಾಚಾರವಾಗಿದೆ. ಆದರೆ, ಇದು ಯಾವುದು ಖಚಿತವಾಗಿಲ್ಲ. ಕಂಪನಿ ಫೋನ್‌ಗಳನ್ನು ಬಿಡುಗಡೆ ಮಾಡಿದಾಗಷ್ಟೇ ಒಟ್ಟು ಮಾಹಿತಿ ಗೊತ್ತಾಗಲಿದೆ.

ಮುಂದಿನ ವರ್ಷ Realme X7 ಸೀರಿಸ್ 5G ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಗೆ

ಹೊಸ ಫೋನ್‌ಗಳ ಬಿಡುಗಡೆಗೆ ಸಂಬಂಧಿಸಿದಂತೆ ಕಂಪನಿ ಈಗಾಗಲೇ ಟೀಸರ್‌ವೊಂದನ್ನು ಪೋಸ್ಟ್ ಮಾಡಿದ್ದು, ಹೆಚ್ಚಿನವರ ಗಮನ ಸೆಳೆದಿದೆ. ಭಾರತದಲ್ಲಿ ಬಿಡುಗಡೆ ಮಾಡಲಾದ ರೆಡ್‌ಮೀ ನೋಟ್ ಸೀರಿಸ್ ಫೋನ್‌ಗಳಿಗಿಂತಲೂ ಈ ಹೊಸ ಫೋನ್‌ನಲ್ಲಿ ಕ್ಯಾಮರಾ ಮಾಡೆಲ್ ತುಂಬ ಭಿನ್ನವಾಗಿರುವುದು ಗೋಚರಿಸಿದೆ.
 
ರೆಡ್‌ಮೀ ನೋಟ್ 9 ಮತ್ತು ರೆಡ್‌ಮೀ ನೋಟ್ 9 ಪ್ರೋ ಸ್ಮಾರ್ಟ್‌ಫೋನ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ರೆಡ್‌ಮೀ ನೋಟ್ 9 ಸ್ಮಾರ್ಟ್‌ಫೋನ್ ಫುಲ್ ಎಚ್‌ಡಿ ಪ್ಲಸ್ ಐಪಿಎಸ್ 6.53 ಇಚ್‌ ಸ್ಕ್ರೀನ್ ಹೊಂದಿದೆ. ಜೊತೆಗೆ ಮೀಡಿಯಾಟೆಕ್ ಡಿಮೆನ್ಸಿಟಿ 800ಯು ಎಸ್ಒಸಿ ಪ್ರೊಸೆಸರ್ ಹಾಗೂ 8ಜಿಬಿ ರ್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಆಯ್ಕೆಗಳು ಇವೆ. ಜೊತೆಗೆ ಈ ಸ್ಟೋರೇಜ್ ಸಾಮರ್ಥ್ಯವನ್ನು ಬಳಕೆದಾರರು 512 ಜಿಬಿವರೆಗೂ ವಿಸ್ತರಿಸಿಕೊಳ್ಳಹುದಾಗಿದೆ. 

ರೆಡ್‌ಮೀ ನೋಟ್‌9 ಸ್ಮಾರ್ಟ್‌ಫೋನ್‌ನಲ್ಲಿ ಮೂರು ಕ್ಯಾಮರಾಗಳಿರುವ ಸೆಟ್‌ ಅಪ್ ಇರುವ ಸಾಧ್ಯತೆ ಇದೆ. ಅದರಲ್ಲಿ ಪ್ರೈಮರಿ ಕ್ಯಾಮರಾ 48 ಮೆಗಾಪಿಕ್ಸೆಲ್ ಇದ್ದರೆ, ಫ್ರಂಟ್ ಕ್ಯಾಮರಾ 13 ಮೆಗಾಪಿಕ್ಲೆಸ್ ಇರಬಹುದು ಎನ್ನಲಾಗುತ್ತಿದೆ. 4,900 ಎಂಎಎಚ್ ಸಾಮರ್ಥ್ಯದ  ಬ್ಯಾಟರಿಯನ್ನು ನಿರೀಕ್ಷಿಸಲಾಗುತ್ತಿದೆ. 
 

ಆಕರ್ಷಕ ಬೆಲೆ: ಭಾರತದಲ್ಲಿ ಟೈಮೆಕ್ಸ್ ಫಿಟ್ನೆಸ್ ಬ್ಯಾಂಡ್ ಬಿಡುಗಡೆ

Latest Videos
Follow Us:
Download App:
  • android
  • ios